ಅಮೆಜಾನ್‌ನಲ್ಲಿ ಈ ರೀತಿಯೂ ಆಗುತ್ತಾ!?... ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿದ್ರೆ ಮತ್ತೇನೋ ಕಳುಹಿಸಿದ ಕಂಪೆನಿ!

|

ಯಾವುದೇ ಗ್ಯಾಜೆಟ್‌ ಬೇಕು ಎಂದರೆ ಮೊದಲು ಇಣುಕಿ ನೋಡುವುದು ಇ-ಕಾಮರ್ಸ್‌ ತಾಣಗಳಿಗೆ. ಈ ಸೈಟ್‌ಗಳಲ್ಲಿ ಬಹುಪಾಲು ಎಲ್ಲಾ ಡಿವೈಸ್‌ಗಳು ಅಗ್ಗದ ದರದಲ್ಲಿ ಅಥವಾ ಆಫರ್‌ ಬೆಲೆಯಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತದೆ. ಆದರೆ, ಕೆಲವೊಂದು ಬಾರಿ ಯಾರೂ ಊಹಿಸದ ಘಟನೆಗಳು ಇದರಲ್ಲಿ ಜರುಗುತ್ತವೆ. ಇದರಿಂದಾಗಿ ಸಾಕಪ್ಪ ಈ ಇ-ಕಾಮರ್ಸ್‌ ಸೈಟ್‌ಗಳ ಸಹವಾಸ ಅನ್ನುವಷ್ಟು ಬೇಸರ ಗ್ರಾಹಕರಿಗೆ ಉಂಟಾಗಿರುತ್ತದೆ.

ಕಾಮರ್ಸ್‌

ಹೌದು, ಇ-ಕಾಮರ್ಸ್‌ ತಾಣಗಳಲ್ಲಿ ಪ್ರಮುಖವಾಗಿರುವ ಅಮೆಜಾನ್‌ ಮೂಲಕ ವ್ಯಕ್ತಿಯೋರ್ವರು ಯಾವುದೋ ದುಬಾರಿ ಬೆಲೆಯ ವಸ್ತುವನ್ನು ಆರ್ಡರ್‌ ಮಾಡಿದರೆ ಮತ್ಯಾವುದೋ ವಸ್ತು ಡೆಲಿವರಿಯಾಗಿದ್ದು, ಟೆಕ್‌ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಈ ರೀತಿಯ ಪ್ರಕರಣಗಳು ಭಾರತದಲ್ಲೂ ಆಗಾಗ್ಗೆ ಜಗುತ್ತಿದ್ದು, ಹಲವಾರು ಗ್ರಾಹಕರು ಇದರಿಂದ ಮೋಸ ಹೋಗಿದ್ದಾರೆ. ಹಾಗಿದ್ರೆ, ಯಾರಿಗೆ ಏನು ಮೋಸವಾಗಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಆರ್ಡರ್‌ ಮಾಡಿದ್ದು ಲ್ಯಾಪ್‌ಟಾಪ್‌... ಬಂದಿದ್ದು?

ಆರ್ಡರ್‌ ಮಾಡಿದ್ದು ಲ್ಯಾಪ್‌ಟಾಪ್‌... ಬಂದಿದ್ದು?

ಯುಕೆಯ 61 ವರ್ಷ ವಯಸ್ಸಿನ ಅಲನ್ ವುಡ್ ಎಂಬುವರು ತಮ್ಮ ಮಗಳಿಗಾಗಿ ಬರೋಬ್ಬರಿ 1.2 ಲಕ್ಷ ಮೌಲ್ಯದ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್ ಅನ್ನು ಅಮೆಜಾನ್‌ನಲ್ಲಿ ಆರ್ಡರ್‌ ಮಾಡಿದ್ದರು. ಆದರೆ, ಮ್ಯಾಕ್‌ ಬುಕ್‌ ಬದಲಿಗೆ ನಾಯಿ ಆಹಾರ ಅವರ ಮನೆಗೆ ತಲುಪಿದೆ.

ಮೋಸ ಹೋದ ವ್ಯಕ್ತಿ ಹೇಳಿದ್ದೇನು?

ಮೋಸ ಹೋದ ವ್ಯಕ್ತಿ ಹೇಳಿದ್ದೇನು?

ಮಾಜಿ IT ಮ್ಯಾನೇಜರ್ ಆಗಿರುವ ಈ ವ್ಯಕ್ತಿ ನವೆಂಬರ್ 29 ರಂದು ಆರ್ಡರ್‌ ಮ್ಯಾಕ್‌ಬುಕ್‌ ಮಾಡಿದ್ದರು. ಮರುದಿನವೇ ಆ ಆರ್ಡರ್‌ ಮನೆ ತಲುಪಿದ್ದು, ಬಾಕ್ಸ್‌ ಅನ್ನು ಓಪನ್‌ ಮಾಡಿ ನೋಡಿದಾಗ ನಾಯಿ ಆಹಾರದ ಪೊಟ್ಟಣಗಳು ಕಂಡುಬಂದಿವೆ. ಈ ಸಂಬಂಧ ಅಮೆಜಾನ್ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ಮಾಹಿತಿ ನೀಡಿದರಾದರೂ ಅವರು ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ದೂರಲಾಗಿದೆ.

ನಾವು ಏನು ಮಾಡಲು ಸಾಧ್ಯವಿಲ್ಲ ಎಂದಿದ್ದ ಅಮೆಜಾನ್‌

ನಾವು ಏನು ಮಾಡಲು ಸಾಧ್ಯವಿಲ್ಲ ಎಂದಿದ್ದ ಅಮೆಜಾನ್‌

ಮೊದಲಿಗೆ ನಾನು ಈ ಗೊಂದಲ ಪರಿಹಾರ ಆಗುತ್ತದೆ ಎಂದು ಆಶಿಸಿದ್ದೆ. ಆನ್‌ಲೈನ್ ಪೋರ್ಟಲ್‌ನ ಗ್ರಾಹಕ ಕೇಂದ್ರದೊಂದಿಗೆ ಮಾತನಾಡಿದ ನಂತರ, ಅವರು ನನಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ತಿಳಿಯಿತು. ಆದರೆ, ನನ್ನ ಮ್ಯಾಕ್‌ಬುಕ್ ಆರ್ಡರ್ ಬದಲಿಗೆ ಅವರು ನನಗೆ ನಾಯಿ ಆಹಾರವನ್ನು ಕಳುಹಿಸಿರುವುದು ಬೇಸರ ಹಾಗೂ ಕೋಪ ಬರುವ ಕೆಲಸವಾಗಿದೆ ಎಂದಿದ್ದಾರೆ.

ದೂರು ಸಲ್ಲಿಸಲು  15 ಗಂಟೆಗಳಿಗೂ ಹೆಚ್ಚು ಸಮಯ ಕಳೆದ ವ್ಯಕ್ತಿ

ದೂರು ಸಲ್ಲಿಸಲು 15 ಗಂಟೆಗಳಿಗೂ ಹೆಚ್ಚು ಸಮಯ ಕಳೆದ ವ್ಯಕ್ತಿ

ಈ ಸಂಬಂಧ ದೂರು ದಾಖಲಿಸಲು ಇವರು ಆನ್‌ಲೈನ್ ಪೋರ್ಟಲ್‌ನಲ್ಲಿ 15 ಗಂಟೆಗಳಿಗೂ ಹೆಚ್ಚು ಸಮಯವನ್ನು ಕಳೆದಿದ್ದಾರಂತೆ. ದೂರು ನೀಡಲು ಮುಂದಾದಾಗ ಒಂದಾದ ಮೇಲೊಂದರಂತೆ ಬೇರೆ ಬೇರೆಯವರಿಗೆ ಕರೆ ಕನೆಕ್ಟ್‌ ಮಾಡಲಾಗುತ್ತಿತ್ತಂತೆ. ಆದರೂ ಬೇಕಾದ ಪರಿಹಾರ ಎಲ್ಲಿಂದಲೂ ತನಗೆ ಲಭ್ಯವಾಗಲಿಲ್ಲ ಎಂದು ಹರಿಹಾಯ್ದಿದ್ದಾರೆ. ತಾನು ಹಲವು ವರ್ಷಗಳಿಂದ ಈ ಆನ್‌ಲೈನ್ ಪೋರ್ಟಲ್‌ನ ಗ್ರಾಹಕನಾಗಿದ್ದೇನೆ. ಅವರಿಂದ ಇದುವರೆಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಈಗ ಈ ರೀತಿ ಘಟನೆ ಜರುಗಿದೆ ಎಂದಿದ್ದಾರೆ.

ಅಮೆಜಾನ್‌ ಹೇಳಿದ್ದೇನು?

ಅಮೆಜಾನ್‌ ಹೇಳಿದ್ದೇನು?

ಇಷ್ಟೆಲ್ಲಾ ಬೆಳವಣಿಗೆ ನಂತರ ಅಮೆಜಾನ್‌ ಸಮಸ್ಯೆ ಅರಿತುಕೊಂಡಿದ್ದು, ಮೋಸಕ್ಕೆ ಒಳಗಾದ ವ್ಯಕ್ತಿಗೆ ಹಣ ಮರುಪಾವತಿ ಮಾಡುವ ಬಗ್ಗೆ ಭರವಸೆ ನೀಡಿದೆಯಂತೆ. ಹೀಗಾಗಿ ಆ ವ್ಯಕ್ತಿಯ ಆತಂಕ ದೂರ ಆದಂತೆ ಆಗಿದೆ.

ಭಾರತದಲ್ಲಿ ಇಂತಹ ಪ್ರಕರಣ ಅನೇಕ

ಭಾರತದಲ್ಲಿ ಇಂತಹ ಪ್ರಕರಣ ಅನೇಕ

ಭಾರತದಲ್ಲಿ ಇಂತಹ ಅನೇಕ ಘಟನೆಗಳು ಇಂದಿಗೂ ನಡೆಯುತ್ತಿವೆ. ಒಮ್ಮೆ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಒಬ್ಬ ವ್ಯಕ್ತಿಯು ತನ್ನ ತಂದೆಗೆ ಲ್ಯಾಪ್‌ಟಾಪ್ ಅನ್ನು ಆರ್ಡರ್ ಮಾಡಿದಾಗ ಲ್ಯಾಪ್‌ಟಾಪ್‌ ಬದಲಿಗೆ ಆ ವ್ಯಕ್ತಿಗೆ ಪಾರ್ಸೆಲ್‌ನಲ್ಲಿ ಡಿಟರ್ಜೆಂಟ್ ಬಾರ್‌ ನೀಡಲಾಗಿತ್ತು. ಇದನ್ನು ಕಂಡು ಆ ವ್ಯಕ್ತಿಗೆ ತುಂಬಾ ಅಸಮಾಧಾನವಾಗಿತ್ತು. ಇದಾದ ನಂತರ ಫ್ಲಿಪ್‌ಕಾರ್ಟ್‌ ಅವರಿಗೆ ಪರಿಹಾರವನ್ನೂ ನೀಡಿರುವುದು ಹಲವರಿಗೆ ತಿಳಿದ ವಿಷಯ.

Best Mobiles in India

English summary
Dog food sent from amazon instead of a Rs 1.2 lakh worth laptop.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X