2018ನೇ ವರ್ಷದ ಅತಿ ಕೆಟ್ಟ ಪಾಸ್‌ವರ್ಡ್‌ಗಳ ಶಾಕಿಂಗ್ ಲೀಸ್ಟ್ ಬಿಡುಗಡೆ!

|

ಸುಲಭವಾದ ಪಾಸ್ವರ್ಡ್ ನೀಡಿದ ಹಲವು ಇಂಟರ್ ನೆಟ್ ಬಳಕೆದಾರರು ಹ್ಯಾಕರ್ ಗಳ ತುತ್ತಾಗುವುದು ಸಾಮಾನ್ಯ ಸಂಗತಿ. ಸರಳ, ಸುಸೂತ್ರವಾದ ಪಾಸ್ ವರ್ಡ್ ಬಳಸಿದರೆ ಅದು ನೆನಪಿನಲ್ಲಿ ಉಳಿಯುವುದು ಸುಲಭ ಎಂಬ ತರ್ಕಕ್ಕೆ ಜೋತುಬಿದ್ದ ಬಳಕೆದಾರರು ಅನಗತ್ಯವಾಗಿ ತೊಂದರೆ ಸಿಲುಕಿಕೊಳ್ಳುತ್ತಿದ್ದಾರೆ. ನಾವು ಎಷ್ಟು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯ ಎಂದು ನೀವೇನಾದರೂ ಸುಲಭ ಪಾಸ್‌ವರ್ಡ್‌ಗಳನ್ನು ನೀಡಿದರೆ ಆಗುವ ಅನಾಹುತ ಕೂಡ ಹೆಚ್ಚಿರುತ್ತದೆ.

ಆನ್‌ಲೈನ್ ಪ್ರಪಂಚದಲ್ಲಿ ಪಾಸ್‌ವರ್ಡ್‌ಗಳೇ ಕೀಲಿಕೈಗಳಾಗಿರುವುದರಿಂದ ನೂರಾರು ಆನ್‌ಲೈನ್ ಸೇವೆಗಳಿಗೂ ಕೂಡ ವಿಭಿನ್ನ ಪಾಸ್‌ವರ್ಡ್‌ಗಳನ್ನು ನೆನಪಿಟ್ಟಿಕೊಳ್ಳುವುದೇ ಡಿಜಿಟಲ್ ಪ್ರಪಂಚದಲ್ಲಿ ಅತ್ಯಂತ ಸೇಫ್ ಬದುಕು ಎನ್ನಬಹುದು. ಆದರೆ, ಜನರು ಹಲವು ಪಾಸ್‌ವರ್ಡ್‌ಗಳನ್ನು ನೆನಪಿಡಲು ಸಾಧ್ಯವಾಗದೇ ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಿರುವಂತಹ ಪಾಸ್‌ವರ್ಡ್‌ಗಳನ್ನೇ ಹೆಚ್ಚಾಗಿ ಬಳಸುತ್ತಿದದ್ದಾರೆ ಎಂಬುದು ಈ ವರ್ಷವೂ ನಿಜವಾಗಿದೆ.

2018ನೇ ವರ್ಷದ ಅತಿ ಕೆಟ್ಟ ಪಾಸ್‌ವರ್ಡ್‌ಗಳ ಶಾಕಿಂಗ್ ಲೀಸ್ಟ್ ಬಿಡುಗಡೆ!

ಪ್ರತಿ ವರ್ಷದಂತೆ 2018ನೇ ಸಾಲಿನ ಅತಿಕೆಟ್ಟ ಪಾಸ್‌ವರ್ಡ್‌ಗಳನ್ನು ಪಟ್ಟಿಯನ್ನು ಸ್ಪಾಶ್ ಡೇಟಾ ಪ್ರಕಟಿಸಿದ್ದು, ಕಳೆದ ಕೆಲವು ವರ್ಷಗಳಂತೆಯೇ ಈ ವರ್ಷವೂ ಸಹ ಜನರ ತಪ್ಪುಗಳು ಮತ್ತೆ ಮತ್ತೆ ಪುನರಾವರ್ತನೆಯಾಗಿರುವುದು ಕಂಡುಬಂದಿದೆ. ಹಾಗಾದರೆ, ಇಂದಿನ ಲೇಖನದಲ್ಲಿ ವಿಶ್ವದಲ್ಲೇ ಈ ವರ್ಷದಲ್ಲಿ ಅತಿಹೆಚ್ಚು ಬಳಸಲ್ಪಟ್ಟಿರುವ ಅತ್ಯಂತ ಕೆಟ್ಟ ಪಾಸ್‌ವರ್ಡ್‌ಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

50 ಲಕ್ಷಕ್ಕೂ ಅಧಿಕ ಪಾಸ್‌ವರ್ಡ್‌ಗಳ ಪರಿಶೀಲನೆ!

50 ಲಕ್ಷಕ್ಕೂ ಅಧಿಕ ಪಾಸ್‌ವರ್ಡ್‌ಗಳ ಪರಿಶೀಲನೆ!

ಸೆಕ್ಯುರಿಟಿ ಆಪ್‌ಗಳಲ್ಲಿ ಪರಿಣತಿ ಹೊಂದಿರುವ ಸ್ಪ್ಲಾಷ್ ಡಾಟಾ (Splash Data) ಸಂಸ್ಥೆ ಅಂತರ್ಜಾಲದಲ್ಲಿ ಸೋರಿಕೆಯಾಗಿರುವ 50 ಲಕ್ಷಕ್ಕೂ ಅಧಿಕ ಪಾಸ್‌ವರ್ಡ್‌ಗಳನ್ನು ಪರಿಶೀಲನೆ ನಡೆಸಿ ವರದಿಯೊಂದನ್ನು ತಯಾರಿಸಿದೆ. ಈ ವರದಿಯಲ್ಲಿ ಈ ವರ್ಷ ಅತಿ ಹೆಚ್ಚು ಬಳಕೆ ಮಾಡಿದ ಪಾಸ್‌ವರ್ಡ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಂತೆ, ಈ ಪಟ್ಟಿಯನ್ನು ನೀಡಲಾಗಿದೆ.

ಅತ್ಯಂತ 2 ಕೆಟ್ಟ ಪಾಸ್‌ವರ್ಡ್‌ಗಳು!

ಅತ್ಯಂತ 2 ಕೆಟ್ಟ ಪಾಸ್‌ವರ್ಡ್‌ಗಳು!

ಎಷ್ಟೇ ಎಚ್ಚರಿಕೆಗಳನ್ನು ನೀಡಿದರೂ ಜನರು ಸುಲಭವಾಗಿ ಅಂದಾಜು ಮಾಡಿಬಿಡಬಹುದಾದಂತಹ ‘12345' ಮತ್ತು "password' ಪಾಸ್‌ವರ್ಡ್‌ಗಳನ್ನೇ ಹೆಚ್ಚು ಇಟ್ಟುಕೊಂಡಿದ್ದಾರೆ ಎಂದು ಸ್ಪಾಶ್ ಡೇಟಾ ಹೇಳಿದೆ. ಈ ವರ್ಷವೂ ಅತ್ಯಂತ ಕೆಟ್ಟ ಪಾಸ್‌ವರ್ಡ್‌ಗಳ ಪಟ್ಟಿಯಲ್ಲಿ ಇವೆರಡೂ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ ಎಂದು ವರದಿಯಲ್ಲಿ ಹೇಳಿದೆ.

ಟಾಪ್ 25 ಕೆಟ್ಟ ಪಾಸ್‌ವರ್ಡ್‌ಗಳು ಇವಾಗಿವೆ!

ಟಾಪ್ 25 ಕೆಟ್ಟ ಪಾಸ್‌ವರ್ಡ್‌ಗಳು ಇವಾಗಿವೆ!

1. 123456 2. password 3. 123456789 4. 12345678 5. 12345 6. 111111 7. 1234567 8. sunshine 9. qwerty 10. iloveyou 11. princess 12. admin 13. welcome 14. 666666 15. abc123 16. football 17. 123123 18. monkey 19. 654321 20. !@#$%^&* 21. charlie 22. aa123456 23. donald 24. password1 25. qwerty123

ಅಮೆರಿಕಾ ಅಧ್ಯಕ್ಷನ ಹೆಸರು!

ಅಮೆರಿಕಾ ಅಧ್ಯಕ್ಷನ ಹೆಸರು!

ವಿಶೇಷವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬಳಸಿರುವ donald" ಎನ್ನುವ ಪಾಸ್‌ವರ್ಡ್‌ ಕೆಟ್ಟ ಪಾಸ್‌ವರ್ಡ್‌ಗಳ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದೆ. ಸ್ಪಾಶ್ ಡೇಟಾ ಸಿಇಒ ಮಾರ್ಗನ್ ಅವರು ,'ಅಧ್ಯಕ್ಷರೆ ಕ್ಷಮಿಸಿ ಇದು ಸುಳ್ಳು ಸುದ್ದಿಯಲ್ಲ, ನಿಮ್ಮ ಹೆಸರು ಕೂಡಾ ಅತಿ ಹೆಚ್ಚು ಬಾರಿ ಪಾಸ್ವರ್ಡ್ ಆಗಿ ಬಳಕೆಯಾಗಿದೆ. ಆದರೆ, ಅದು ಕೂಡಾ ಸುರಕ್ಷಿತ ಪಟ್ಟಿಯಲ್ಲಿಲ್ಲ' ಎಂದಿದ್ದಾರೆ.

ವರ್ಷದವರೆಗೆ ಬದಲಾಯಿಸುತ್ತಿಲ್ಲ!

ವರ್ಷದವರೆಗೆ ಬದಲಾಯಿಸುತ್ತಿಲ್ಲ!

ಕೆಲವರಂತೂ ಒಂದು ವರ್ಷದವರೆಗೆ ತಮ್ಮ ಪಾಸ್‌ವರ್ಡ್‌ ಬದಲಾಯಿಸೇ ಇಲ್ಲ ಎಂದು ವರದಿಯಲ್ಲಿ ಹೇಳಿದೆ. ಅಮೆರಿಕದ ಜನರು ಅತ್ಯಂತ ಸುಲಭವಾಗಿ ಹ್ಯಾಕರ್‌ಗಳ ದಾಳಿಗೆ ತುತ್ತಾಗುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ. 123456 ಇದು 2013, 2014, 2015, 2016 ಹಾಗೂ 2017ರಲ್ಲಿ ಅತಿ ಕೆಟ್ಟ ಪಾಸ್ವರ್ಡ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ

ಸ್ಪ್ಲಾಷ್ ಡಾಟಾ ಕಂಪನಿ ಹೇಳಿದ್ದೇನು?

ಸ್ಪ್ಲಾಷ್ ಡಾಟಾ ಕಂಪನಿ ಹೇಳಿದ್ದೇನು?

ಜನರು ಸುರಕ್ಷಿತವಾಗಿ ಆನ್‌ಲೈನ್‌ ಚುಟವಟಿಕೆಗಳನ್ನು ನಡೆಸಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿ ವರ್ಷವೂ ಈ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ ಎಂದು ಸ್ಪ್ಲಾಷ್ ಡಾಟಾ ಕಂಪನಿಯ ಸಿಇಒ ಮಾರ್ಗನ್‌ ಸ್ಲೈನ್ ಹೇಳಿದ್ದಾರೆ. ಹ್ಯಾಕರ್ ಗಳಿಂದ ಮುಕ್ತರಾಗಲು ಸ್ವಲ್ಪವಾದರೂ ಕ್ಲಿಷ್ಟವಾದ ಪಾಸ್ ವರ್ಡ್ ಬಳಸುವಂತೆ ಕೋರಲಾಗಿದೆ.

Most Read Articles
Best Mobiles in India

English summary
interwebs used at least one of the 25 worst passwords on SplashData's annuallist, ... The eighth annual list of worst passwords of the year is based on. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more