ಏರ್‌ಟೆಲ್, ವಿ, ಜಿಯೋಗೆ ಸರ್ಕಾರದ ಆದೇಶ; ಈ ಸೇವೆಯನ್ನು 15 ದಿನದೊಳಗೆ ನಿಲ್ಲಿಸಲು ಸೂಚನೆ

|

ಸೈಬರ್‌ ಸಂಬಂಧಿತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಗಳಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು (DoT) ಪ್ರಮುಖ ಆದೇಶ ನೀಡಿದೆ. ಅದರಂತೆ ಸಿಮ್‌ ಸ್ಟಾಪ್‌ ಪ್ರಕ್ರಿಯೆ ವೇಳೆ ಎಸ್‌ಎಂಎಸ್‌ ಸೇವೆಯನ್ನು 24 ಗಂಟೆಗಳ ಕಾಲ ನಿರ್ಬಂಧಿಸಬೇಕಿದೆ. ಜೊತೆಗೆ ಈ ಕ್ರಮವನ್ನು ಜಾರಿ ಮಾಡಲು ಟೆಲಿಕಾಂ ಸಂಸ್ಥೆಗಳಿಗೆ ಸರ್ಕಾರ 15 ದಿನಗಳ ಕಾಲಾವಕಾಶ ನೀಡಿದೆ.

ಭಾರತ ಸರ್ಕಾರ

ಹೌದು, ಭಾರತದ ಸರ್ಕಾರದ ದೂರಸಂಪರ್ಕ ಇಲಾಖೆ ಮುಂದಿನ 15 ದಿನಗಳಲ್ಲಿ ಈ ಹೊಸ ಕಾನೂನನ್ನು ಜಾರಿಗೆ ತರಬೇಕು ಎಂದು ಹೇಳಿದ್ದು, ಸಚಿವಾಲಯವು ಘೋಷಿಸಿದ ಈ ಹೊಸ ಕಾನೂನು ಎಲ್ಲಾ ಮೂರು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಅನ್ವಯಿಸುತ್ತದೆ. ಹಾಗಿದ್ರೆ, ಯಾಕಾಗಿ ಈ ಕಾನೂನು? ಸಿಮ್ ಕಾರ್ಡ್ ಸಂಬಂಧಿತ ಸ್ಟಾಪ್‌ ಸೇವೆ ಎಂದರೇನು? ಅದನ್ನು ಏಕೆ ನಿಲ್ಲಿಸಬೇಕು? ಎಂಬ ವಿಷಯವನ್ನು ಇಲ್ಲಿ ಸವಿವರವಾಗಿ ನೀಡಲಾಗಿದೆ ಓದಿರಿ.

ಸಿಮ್‌ ಸ್ಟಾಪ್‌!

ಸಿಮ್‌ ಸ್ಟಾಪ್‌!

ಸಿಮ್‌ ಬದಲಾವಣೆ ಮಾಡಬೇಕು ಎಂದುಕೊಂಡರೆ ಅಥವಾ ಸಿಮ್‌ ಅನ್ನು ಅಪ್‌ಗ್ರೇಡ್‌ ಮಾಡಬೇಕು ಎಂದುಕೊಂಡರೆ ಆ ವೇಳೆ ಗ್ರಾಹಕರ ಸಂಖ್ಯೆಗೆ ಬರುವ ಎಸ್‌ಎಂಎಸ್‌ ಗಳನ್ನು ನಿಲ್ಲಿಸಬೇಕು ಎಂದು ಟೆಲಿಕಾಂ ಸಂಸ್ಥೆಗಳಿಗೆ ಸಚಿವಾಲಯ ತಿಳಿಸಿದೆ. ಅದರಂತೆ ಈ ಹೊಸ ಆದೇಶದ ಪ್ರಕಾರ ಹೊಸ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ, ಆ ಹೊಸ ಸಿಮ್ ಕಾರ್ಡ್‌ಗಳಿಗೆ ಕಳುಹಿಸಲಾಗುವ ಎಸ್‌ಎಂಎಸ್‌ ಸೇವೆಯನ್ನು 24 ಗಂಟೆಗಳ ಕಾಲ ನಿರ್ಬಂಧಿಸಬೇಕಿದೆ. ಹಾಗೆಯೇ ಈ ಕ್ರಮಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಈ ಹಠಾತ್ ನಿರ್ಧಾರ ಯಾಕೆ ಗೊತ್ತಾ?

ಈ ಹಠಾತ್ ನಿರ್ಧಾರ ಯಾಕೆ ಗೊತ್ತಾ?

ಸಚಿವಾಲಯವು ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಈ ಆದೇಶ ಹೊರಡಿಸಿದೆ. ಇನ್ನು ಸುಲಭವಾಗಿ ಹೇಳಬೇಕೆಂದರೆ ಸಿಮ್‌ಸ್ಟಾಪ್‌ ಸಂದರ್ಭದಲ್ಲಿ ವಂಚನೆಗಳ ಅಪಾಯವನ್ನು ತಗ್ಗಿಸುವ ಕ್ರಮವಾಗಿದೆ. ಯಾಕೆಂದರೆ ದೇಶದಲ್ಲಿ ಸಾಮಾನ್ಯವಾಗಿರುವ ಸೈಬರ್‌ ಅಪರಾದಗಳಲ್ಲಿ ಒಂದಾಗಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಸಿಮ್ ಸ್ವಾಪ್ ವಂಚನೆ ಎಂದರೇನು?

ಸಿಮ್ ಸ್ವಾಪ್ ವಂಚನೆ ಎಂದರೇನು?

ಸಿಮ್‌ ಸ್ವಾಪ್ ವಂಚನೆ ಎನ್ನುವುದು ಸಿಮ್‌ ಕಾರ್ಡ್‌ಗೆ ಸಂಬಂಧಿಸಿದ ಹಗರಣವಾಗಿದೆ. ಗ್ರಾಹಕರು ಬ್ಯಾಂಕಿಂಗ್ ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಮೊಬೈಲ್ ಸಂಖ್ಯೆ ಪ್ರಮುಖವಾಗಿದೆ. ನೀವು ಸೆಕ್ಯುರಿಟಿ ಪಾಸ್‌ಕೋಡ್‌ಗಳು, ಬ್ಯಾಂಕಿಗ್‌ನ ವಹಿವಾಟು ಸಂದೇಶಗಳು, ಒನ್ ಟೈಮ್ ಪಾಸ್‌ವರ್ಡ್‌ಗಳು, ನೆಟ್‌ಸೆಕ್ಯೂರ್ ಕೋಡ್ ಎಲ್ಲವೂ ಮೊಬೈಲ್ ಸಂಖ್ಯೆಗೆ ಬರುತ್ತವೆ. ಹಾಗೆಯೇ ಈ ನಂಬರ್‌ನಿಂದ ನೀವು ನಿಮ್ಮ ಬ್ಯಾಂಕ್ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಮತ್ತು ವಹಿವಾಟು ಸೇವೆಗಳನ್ನು ಪಡೆದುಕೊಳ್ಳಲು ಎರಡು ಅಂಶಗಳ ದೃಢೀಕರಣದ ಆಯ್ಕೆಯನ್ನೂ ಪಡೆಯಬಹುದು.

 ಸಿಮ್‌

ಸಿಮ್‌

ನಿಮ್ಮ ಸಿಮ್‌ ಸಂಖ್ಯೆಗೆ ಬರುವ ಓಟಿಪಿ ಸಂಖ್ಯೆಗಳನ್ನು ಪಡೆಯಲು ಸ್ಕ್ಯಾಮರ್‌ಗಳು ಅದೇ ಮೊಬೈಲ್ ಸಂಖ್ಯೆಯೊಂದಿಗೆ ನಕಲಿ ಸಿಮ್ ಕಾರ್ಡ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಕಳೆದುಹೋದ ಸಿಮ್ ಅಥವಾ ಅನುಕೂಲತೆಯ ನೆಪದಲ್ಲಿ ಅವರು ಮೊಬೈಲ್ ಆಪರೇಟರ್‌ಗಳನ್ನು ಸಂಪರ್ಕಿಸುತ್ತಾರೆ. ಅಕಸ್ಮಾತ್‌ ಅವರೇನಾದರೂ ಆ ವೇಳೆ ಹೊಸ ಸಿಮ್‌ ಪಡೆದುಕೊಂಡರೆ ನಿಮ್ಮ ಎಲ್ಲಾ ಡಾಟಾ ಅವರ ಕೈ ಸೇರಿದಂತೆ.

ಹೊಸ ಸಿಮ್ ಕಾರ್ಡ್‌

ಈ ಎಲ್ಲಾ ವಿಷಯದ ಹಿನ್ನೆಲೆ 2016 ಮತ್ತು 2018 ರಲ್ಲಿ ಸಚಿವಾಲಯವು ಹೊಸ ಸಿಮ್ ಕಾರ್ಡ್‌ಗಳನ್ನು ವಿತರಿಸಲು ಸುರಕ್ಷಿತ ಮತ್ತು ಸಮಗ್ರ ಕಾರ್ಯವಿಧಾನಗಳನ್ನು ಬಿಡುಗಡೆ ಮಾಡಿದೆ. ಅದರ ಭಾಗವಾಗಿ, ಈಗ ಹೊಸ ಸಿಮ್ ಕಾರ್ಡ್‌ಗಳಿಗೆ ಎಸ್‌ಎಂಎಸ್‌ ಸೇವೆಗೆ 24 ಗಂಟೆಗಳ ನಿಷೇಧವನ್ನು ಹೇರಲಾಗಿದೆ.

ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಿ

ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಿ

ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಟೆಲಿಕಾಂ ಕಂಪನಿಯು ಅಸ್ತಿತ್ವದಲ್ಲಿರುವ ಸಂಖ್ಯೆಗೆ ಹೊಸ ಸಿಮ್ ಕಾರ್ಡ್‌ಗಾಗಿ ವಿನಂತಿಯನ್ನು ಸ್ವೀಕರಿಸಿದಾಗ, ಅಂತಹ ವಿನಂತಿಯ ಸ್ವೀಕೃತಿಯನ್ನು ಅಂಗೀಕರಿಸುವ ಮೂಲಕ ಗ್ರಾಹಕರಿಗೆ ಎಸ್‌ಎಂಎಸ್‌ ಕಳುಹಿಸಬೇಕು. ಹಾಗೆಯೇ IVRS ಕರೆ ಮೂಲಕ ಹೊಸ ಸಿಮ್ ಕಾರ್ಡ್‌ನ ರಸೀದಿ ಬಗ್ಗೆ ಪರಿಶೀಲಿಸಬೇಕು. ಈ ಸಂದರ್ಭಗಳಲ್ಲಿ ಗ್ರಾಹಕರು ವಿನಂತಿಯನ್ನು ದೃಢೀಕರಿಸದಿದ್ದರೆ ಟೆಲಕಾಂ ಸಂಸ್ಥೆಗಳು ತಕ್ಷಣವೇ ಸಿಮ್ ಕಾರ್ಡ್ ಅಪ್‌ಗ್ರೇಡ್ ಪ್ರಕ್ರಿಯೆಯನ್ನು ನಿಲ್ಲಿಸಬೇಕಿದೆ.

Best Mobiles in India

English summary
Major telecom firms like Reliance Jio, Bharti Airtel and Vodafone Idea have gained more customers through different options. However, the Department of Telecom Government of India has issued an order for SIM card SMS related services.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X