ಫೋನ್‌ಗೆ ಈ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ ನೆಮ್ಮದಿಯಾಗಿರಿ

Written By:

ಜಂಕ್ ಫೈಲ್‌ಗಳನ್ನು ನಿವಾರಿಸಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ನಿರ್ವಹಿಸುವುದು ನೀವು ಆಗಾಗ್ಗೆ ಮಾಡಬೇಕಾದ ಕೆಲಸವಾಗಿದೆ. ಇನ್ನು ಕೆಲವು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿದ್ದೀರಿ ಎಂದಾದಲ್ಲಿ, ಸ್ವಲ್ಪ ಹೊತ್ತಿನ ನಂತರ ನಿಮ್ಮ ಫೋನ್ ನಿಧಾನವಾಗುತ್ತದೆ. ಕ್ಯಾಶ್‌ಗಳು ಮತ್ತು ಜಂಕ್ ಫೈಲ್‌ಗಳು ಇದರಲ್ಲಿ ತುಂಬಿರುತ್ತದೆ.

ನಿಮ್ಮಷ್ಟಕ್ಕೇ ಜಂಕ್ ಫೈಲ್‌ಗಳನ್ನು ನಿವಾರಿಸುವುದು ಎಂದರೆ ಅದು ಸ್ವಲ್ಪ ಕಷ್ಟದ ಕೆಲಸವೇ ಸರಿ. ಇನ್ನು ಆಂಡ್ರಾಯ್ಡ್ ಫೋನ್ ಅನ್ನು ಆಗಾಗ್ಗೆ ಸ್ವಚ್ಛ ಮಾಡುವುದು ಸ್ಮಾರ್ಟ್‌ಫೋನ್ ಅನ್ನು ಬೂಸ್ಟ್ ಮಾಡುತ್ತದೆ ಮತ್ತು ಕಾರ್ಯಕ್ಷಮತೆಯನ್ನು ಅತ್ಯುತ್ತಮಗೊಳಿಸಿ ಉಚಿತ ಸ್ಥಳಾವಕಾಶವನ್ನು ಒದಗಿಸುತ್ತದೆ.

ಇದಕ್ಕಾಗಿಯೇ ನಿಮ್ಮ ಫೋನ್‌ನಲ್ಲಿ ಯುಸಿ ಕ್ಲೀನರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದು ನಿಮ್ಮ ಫೋನ್‌ನ ವೇಗವನ್ನು ಸುಧಾರಿಸಿ ಫೋನ್‌ ಇನ್ನಷ್ಟು ಕೆಲಸ ಮಾಡುವಂತೆ ಮಾಡುತ್ತದೆ. ಯುಸಿ ವೆಬ್ ನಿರ್ಮಿಸಿರುವ ಯುಸಿ ಕ್ಲೀನರ್ ಜನಪ್ರಿಯ ವೆಬ್ ಬ್ರೌಸರ್ ಅಪ್ಲಿಕೇಶನ್ ಆಗಿದೆ. ಇಂದಿನ ಲೇಖನದಲ್ಲಿ ಯುಸಿ ಕ್ಲೀನರ್ ಕುರಿತ ಇನ್ನಷ್ಟು ಆಸಕ್ತಿಕರ ಅಂಶಗಳನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಳ ಬಳಕೆದಾರ ಇಂಟರ್ಫೇಸ್‌

ಸರಳ ಬಳಕೆದಾರ ಇಂಟರ್ಫೇಸ್‌

ಸರಳ ಯುಐ

ನಿಜಕ್ಕೂ ಸರಳವಾದ ಬಳಕೆದಾರ ಇಂಟರ್ಫೇಸ್‌ನೊಂದಿಗೆ ಯುಸಿ ಕ್ಲೀನರ್ ಬಂದಿದ್ದು ಆಂಡ್ರಾಯ್ಡ್ 4.1 ಮತ್ತು ನಂತರದ ಓಎಸ್‌ಗೆ ಬೆಂಬಲವನ್ನು ಒದಗಿಸುತ್ತದೆ.

ಜಾಹೀರಾತು ಮುಕ್ತ

ಜಾಹೀರಾತು ಮುಕ್ತ

ಉಚಿತ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ 9apps.com ಮತ್ತು ಗೂಗಲ್ ಪ್ಲೇನಲ್ಲಿ ಇದನ್ನು ಇದು ಉಚಿತವಾಗಿ ಲಭ್ಯವಾಗುತ್ತಿದೆ. ಕೆಲವೊಂದು ಅಪ್ಲಿಕೇಶನ್‌ಗಳು ಜಾಹೀರಾತು ಬೆಂಬಲ, ಸಾಕಷ್ಟು ಪಾಪ್‌ಅಪ್‌ಗಳೊಂದಿಗೆ ಬಂದು ನಿಮಗೆ ತೊಂದರೆಯನ್ನುಂಟು ಮಾಡುತ್ತವೆ. ಆದರೆ ಯೂಸಿ ಕ್ಲೀನರ್ ಜಾಹೀರಾತು ಮುಕ್ತ ಬಳಕೆದಾರ ಇಂಟರ್ಫೇಸ್‌ನೊಂದಿಗೆ ಬಂದಿದ್ದು ಯಾವುದೇ ಜಾಹೀರಾತುಗಳ ಕಿರಿಕಿರಿಯಿಲ್ಲದೆ ಬಳಕೆದಾರರನ್ನು ಅಪ್ಲಿಕೇಶನ್ ಬಳಸಲು ಅನುಮತಿಸುತ್ತದೆ.

ಗಾತ್ರ

ಗಾತ್ರ

ಅಪ್ಲಿಕೇಶನ್ ಗಾತ್ರ

ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಷ್ಟು ಬಳಸಿಕೊಳ್ಳುತ್ತದೆ ಎಂಬುದು ಕೂಡ ಹೆಚ್ಚು ಪ್ರಧಾನವಾದುದು. ಆದರೆ ಯೂಸಿ ಕ್ಲೀನರ್ 1.5ಎಮ್‌ಬಿಗಿಂತಲೂ ಕಡಿಮೆಯಲ್ಲಿ ಗಾತ್ರವನ್ನು ಇರಿಸಿಕೊಳ್ಳುತ್ತದೆ.

ಮೆಮೊರಿ ಮುಕ್ತ

ಮೆಮೊರಿ ಮುಕ್ತ

ಮೆಮೊರಿ ಮುಕ್ತಗೊಳಿಸುತ್ತದೆ

ಸಿಸ್ಟಮ್ ಮೆಮೊರಿಯನ್ನು ಬಳಸಿಕೊಂಡು ಹೆಚ್ಚಿನ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತವೆ. ಯೂಸಿ ಕ್ಲೀನರ್ RAM ಸ್ಥಳವನ್ನು ನಿವಾರಿಸಿ ಡಿವೈಸ್‌ ಅನ್ನು ನಿಧಾನಗೊಳಿಸುವ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕುತ್ತದೆ.

ಸೂಪರ್ ಬೂಸ್ಟರ್ ಫೀಚರ್‌

ಸೂಪರ್ ಬೂಸ್ಟರ್ ಫೀಚರ್‌

ಬೂಸ್ಟರ್

ಇನ್ನು ಅಪ್ಲಿಕೇಶನ್ ಸೂಪರ್ ಬೂಸ್ಟರ್ ಫೀಚರ್‌ಗಳೊಂದಿಗೆ ಬಂದಿದ್ದು ಇದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೊ ಸ್ಟಾರ್ಟ್ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಇನ್ನು ಈ ಅಪ್ಲಿಕೇಶನ್ ಬ್ಯಾಟರಿ, ಡೇಟಾ ಮತ್ತು ಸಂಗ್ರಹಣೆ ಬಳಕೆಯನ್ನು ವಿಶ್ಲೇಷಿಸುತ್ತದೆ. ಅದೇ ರೀತಿ ಅಪರೂಕ್ಕೆ ಬಳಸುವ ಅಪ್ಲಿಕೇಶನ್‌ಗಳನ್ನು ಗುರುತಿಸಿ ಅದನ್ನು ಅಳಿಸುತ್ತದೆ. ಮತ್ತು ಜಂಕ್ ಫೈಲ್‌ಗಳನ್ನು ನಿವಾರಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Cleaning junk files and maintaining the Android smartphone is one of the primary task that you need to do frequently. However, there is an app to reduce burden for cleaning the junk files and optimize your smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot