ಬೇರೆಯವರ ಮೊಬೈಲ್ ನಂಬರ್‌ ಬಳಸಿ ನಿಮ್ಮ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಆಧಾರ್‌ ಕಾರ್ಡ್‌ ಭಾರತದ ನಾಗರಿಕರಿಗೆ ಸರ್ಕಾರಿ ಸೌಲಭ್ಯವನ್ನು ಪಡೆಯಲು ಅಗತ್ಯ ಎನಿಸಿದೆ. ಸರ್ಕಾರ ಸೌಲಭ್ಯ ಮಾತ್ರವಲ್ಲದೆ ಯಾವುದೇ ರೀತಿಯ ಸೇವೆಗಳನ್ನು ಪಡೆಯುವುದಕ್ಕೂ ಆಧಾರ್‌ ಕಾರ್ಡ್‌ ಅತಿ ಅಗತ್ಯವಾಗಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಆಧಾರ್‌ ಕಾರ್ಡ್‌ ಹೊಂದುವುದು ಅತ್ಯಗತ್ಯ. ಕೆಲವು ಸಮಯದಲ್ಲಿ ನೀವು ಆಧಾರ್‌ ಕಾರ್ಡ್‌ ಅನ್ನು ಕಳೆದುಕೊಂಡಿದ್ದರೆ, ಇಲ್ಲವೇ ಮರೆತು ಬಂದಿದ್ದರೆ ಆಧಾರ್‌ ಕಾರ್ಡ್‌ ಅನ್ನು ಆಧಾರ್‌ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವಿದೆ.

ಆಧಾರ್‌ ಕಾರ್ಡ್‌

ಹೌದು, ಆಧಾರ್‌ ಕಾರ್ಡ್‌ ಅನ್ನು ಆಧಾರ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವಿದೆ. ಇದಕ್ಕಾಗಿ ಈ ಮೊದಲು ನೀವು ಈಗಾಗಲೇ ನೋಂದಾಯಿಸಿರುವ ಮೊಬೈಲ್‌ ಸಂಖ್ಯೆ ಎಂಟ್ರಿ ಮಾಡುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಭಾರತದ ನಾಗರಿಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸದೆ UIDAI ನ ಅಧಿಕೃತ ವೆಬ್‌ಸೈಟ್‌ನಿಂದ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಹಾಗಾದ್ರೆ ಮೊಬೈಲ್‌ ಸಂಖ್ಯೆ ಬಳಸದೆ ನಿಮ್ಮ ಆಧಾರ್‌ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್

ಆಧಾರ್ ನೀಡುವ ಪ್ರಾಧಿಕಾರವಾದ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ತಮ್ಮ ಸಂಖ್ಯೆಯನ್ನು ನೋಂದಾಯಿಸದವರಿಗೆ ಸಹಾಯ ಮಾಡಲು ಮೊಬೈಲ್‌ ನಂಬರ್‌ ಬಳಸದೆ ಆಧಾರ್‌ ಕಾರ್ಡ್‌ ಡೌನ್‌ಲೋಡ್‌ ಮಾಡುವ ಅವಕಾಶವನ್ನು ಘೋಷಿಸಿದೆ. ಈ ಹಿಂದೆ, ಬಳಕೆದಾರರು ಅದನ್ನು ಡೌನ್ಲೋಡ್ ಮಾಡಲು ಆಧಾರ್‌ಗೆ ಲಿಂಕ್ ಮಾಡಲಾದ ನೋಂದಾಯಿತ ಫೋನ್ ಸಂಖ್ಯೆಗಳನ್ನು ಹೊಂದಿರಬೇಕು. ಇದೀಗ ನೀವು ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಅಧಿಕೃತ ಮೊಬೈಲ್‌ ನಂಬರ್‌ ಇಲ್ಲದೆ ಹೇಗೆ ಡೌನ್‌ಲೋಡ್ ಮಾಡಬಹುದು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ನೋಂದಾಯಿಸಿದ ಮೊಬೈಲ್ ಸಂಖ್ಯೆ ಇಲ್ಲದೆ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಹೀಗೆ ಮಾಡಿ?

ನೋಂದಾಯಿಸಿದ ಮೊಬೈಲ್ ಸಂಖ್ಯೆ ಇಲ್ಲದೆ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಹೀಗೆ ಮಾಡಿ?

ಹಂತ 1: ಮೊದಲನೆಯದಾಗಿ, ಆಧಾರ್‌ನ ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು "ಮೈ ಆಧಾರ್" ಅನ್ನು ಟ್ಯಾಪ್ ಮಾಡಿ.

ಹಂತ 2: ನಂತರ ನೀವು 'ಆಧಾರ್ ರಿಪ್ರಿಂಟ್ ಆದೇಶ' ಆಯ್ಕೆಯನ್ನು ಕ್ಲಿಕ್ ಮಾಡಿ

ಹಂತ 3: ಇದಾದ ನಂತರ, ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೇಳಲಿದೆ. ಹಾಗೆಯೇ ಆಧಾರ್ ಕಾರ್ಡ್ ಸಂಖ್ಯೆಯ ಬದಲಾಗಿ 16-ಅಂಕಿಯ ವರ್ಚುವಲ್ ಐಡೆಂಟಿಫಿಕೇಶನ್ ನಂಬರ್ (ವಿಐಡಿ) ನಮೂದಿಸುವ ಆಯ್ಕೆ ಕೂಡ ಲಭ್ಯವಿರಲಿದೆ.

ಹಂತ 4: ನೀವು ನಿಮ್ಮ ಆಯ್ಕೆಯ ಅಂಕಿಯನ್ನು ಎಂಟ್ರಿ ಮಾಡಿದ ನಂತರ, ನೀವು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು.

ಹಂತ 5: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆ ಕಾರ್ಡ್ ಡೌನ್‌ಲೋಡ್ ಮಾಡಲು, ಇದೀಗ ನೀವು 'ನನ್ನ ಮೊಬೈಲ್ ಸಂಖ್ಯೆ ನೋಂದಾಯಿಸಲಾಗಿಲ್ಲ' ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಮೊಬೈಲ್

ಹಂತ 6: ಒಮ್ಮೆ ಕ್ಲಿಕ್‌ ಮಾಡಿದ ನಂತರ, ನೀವು ನಿಮ್ಮ ಪರ್ಯಾಯ ಸಂಖ್ಯೆ ಅಥವಾ ನೋಂದಾಯಿಸದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ಹಂತ 7: ಇದೀಗ ನೀವು ಎಂಟ್ರಿ ಮಾಡಿದ ನಂಬರ್‌ಗೆ OTP ಕಳುಹಿಸಲು 'OTP ಸೆಂಡ್‌' ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಹಂತ 8: ಈಗ ನಮೂದಿಸಿದ ಪರ್ಯಾಯ ಸಂಖ್ಯೆಯಲ್ಲಿ ಒನ್ ಟೈಮ್ ಪಾಸ್‌ವರ್ಡ್ (OTP) ಸಿಗುತ್ತದೆ.

ಹಂತ 9: ಬಳಕೆದಾರರು 'ನಿಯಮಗಳು ಮತ್ತು ಷರತ್ತು' ಚೆಕ್‌ಬಾಕ್ಸ್ ಮೇಲೆ ಕ್ಲಿಕ್ ಮಾಡಲು ಕೇಳಲಾಗುತ್ತದೆ, ನಂತರ ಅವರು 'ಸಬ್‌ಮಿಟ್‌' ಬಟನ್ ಮೇಲೆ ಕ್ಲಿಕ್ ಮಾಡಬಹುದು.

ಹಂತ 10: ಈಗ ನಿಮ್ಮನ್ನು ಹೊಸ ಪೇಜ್‌ಗೆ ಡೈರೆಕ್ಟ್‌ ಮಾಡಲಾಗುತ್ತದೆ. ರಿ ಪ್ರೀಂಟ್‌ಗಾಗಿ ಹೆಚ್ಚಿನ ಪರಿಶೀಲನೆಗಾಗಿ 'ಪೂರ್ವವೀಕ್ಷಣೆ ಆಧಾರ್ ಪತ್ರ' ತೋರಿಸುತ್ತದೆ. ಇದರ ನಂತರ, ನೀವು 'ಮೇಕ್‌ ಪೇಮೆಂಟ್‌ ' ಆಯ್ಕೆಯನ್ನು ಆರಿಸಬೇಕಾಗುತ್ತದೆ. ನಂತರ ರಿ ಪ್ರೀಂಟ್‌ ತೆಗೆದುಕೊಳ್ಳಬಹುದಾಗಿದೆ.

ಆಧಾರ್‌

ಇದರಲ್ಲಿ ನೀವು ಮುಖ್ಯವಾಗಿ ಗಮನಿಸಬೇಕಾದ ಒಂದು ವಿಚಾರವಿದೆ. ಅದೇನೆಂದರೆ ಆಧಾರ್‌ ಕಾರ್ಡ್‌ ಪಿಡಿಎಫ್ ಡೌನ್‌ಲೋಡ್ ಮಾಡಲು ನೀವು ನಿಮ್ಮ ಡಿಜಿಟಲ್ ಸಹಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಕೊನೆಯಲ್ಲಿ, ಸೇವಾ ವಿನಂತಿಯ ಸಂಖ್ಯೆಯನ್ನು ಸಹ ಎಸ್‌ಎಂಎಸ್ ಮೂಲಕ ಕ್ರಿಯೆಟ್‌ ಮಾಡಲಾಗಿರುತ್ತದೆ. ಆಧಾರ್ ಕಾರ್ಡ್‌ ನಿಮಗೆ ಲಬ್ಯವಾಗುವ ತನಕ ನಿಮ್ಮ ಅರ್ಜಿಯ ಸ್ಟೇಟಸ್‌ ಅನ್ನು ಟ್ರ್ಯಾಕ್ ಮಾಡಲು ನೀವು ಆ ಸಂಖ್ಯೆಯನ್ನು ಬಳಸಬಹುದಾಗಿದೆ.

Most Read Articles
Best Mobiles in India

English summary
Users can now download Aadhaar card from the UIDAI’s official website without using their registered mobile number.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X