ಡಿಟಿಎಚ್‌ ಸೇವೆ ಚಂದಾದಾರರ ಸಂಖ್ಯೆಯಲ್ಲಿ ಭಾರಿ ಕುಸಿತ!..ಟ್ರಾಯ್‌ ವರದಿ!

|

ಒಟಿಟಿ ಪ್ಲಾಟ್‌ಫಾರ್ಮ್‌ಗಳ ಅಬ್ಬರದ ನಡುವೆ ಡಿಟಿಎಚ್‌ ಸೇವೆ ಮರೆಯಾಗುತಿದೆಯಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿದೆ ಟ್ರಾಯ್‌ ನೀಡಿರುವ ಇತ್ತೀಚಿನ ವರದಿ. ಟ್ರಾಯ್‌ ವರದಿಯ ಪ್ರಕಾರ 2022ರ ಮೊದಲ ತ್ರೈಮಾಸಿಕದಲ್ಲಿ ಖಾಸಗಿ ಡಿಟಿಎಚ್‌ ಚಂದಾದಾರರ ಸಂಖ್ಯೆ ಸಾಕಷ್ಟು ಗಣನೀಯವಾಗಿ ಕುಸಿತವನ್ನು ಕಂಡಿದೆ. ಅದರಂತೆ DTH ಪ್ಲೇಯರ್‌ಗಳು CY2022 ರ ತ್ರೈಮಾಸಿಕದಲ್ಲಿ CY2021ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ 1.6 ಮಿಲಿಯನ್ ಪಾವತಿಸಿದ ಸಕ್ರಿಯ ಚಂದಾದಾರರನ್ನು ಕಳೆದುಕೊಂಡಿದ್ದಾರೆ.

ಡೈರೆಕ್ಟ್‌

ಹೌದು, ಡೈರೆಕ್ಟ್‌ ಟು ಹೋಮ್‌ ಉದ್ಯಮ ಸಾಕಷ್ಟು ಚಂದಾದಾರರನ್ನು ಕಳೆದುಕೊಳ್ಳುತ್ತಿದೆ ಎಂದು ಟ್ರಾಯ್‌ ವರದಿ ಮಾಡಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳ ಅಬ್ಬರ ಶುರುವಾಗುವ ಮೊದಲು ಡಿಟಿಎಚ್‌ ಪ್ಲೇಯರ್‌ಗಳು ಸಾಕಷ್ಟು ಚಂದಾದಾರನ್ನು ಹೊಂದಿದ್ದವು, ಆದರೆ ಪ್ರಸ್ತುತ ದಿನಗಳಲ್ಲಿ ಡಿಟಿಎಚ್‌ ಸೇವೆ ಬಳಕೆದಾರರ ಸಂಖ್ಯೆ ಕುಸಿತವನ್ನು ಕಾಣುತ್ತಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾದ್ಯತೆ ಕೂಡ ಇದೆ ಎನ್ನಲಾಗಿದೆ. ಇದರಲ್ಲಿ ಎಲ್ಲಾ ಡಿಟಿಎಚ್‌ ಪ್ಲೇಯರ್‌ಗಳು ಕೂಡ ಕುಸಿತವನ್ನು ಅನುಭವಿಸಿರುವುದು ವರದಿಯಾಗಿದೆ.

ತ್ರೈಮಾಸಿಕದಲ್ಲಿ

ಇನ್ನು ಪೇ DTH ವಲಯದ ಒಟ್ಟು ಸಕ್ರಿಯ ಚಂದಾದಾರರ ಮೂಲವು OND ತ್ರೈಮಾಸಿಕದಲ್ಲಿ 68.52 ಮಿಲಿಯನ್‌ಗೆ ಹೋಲಿಸಿದರೆ JFM ತ್ರೈಮಾಸಿಕದಲ್ಲಿ 66.92 ಮಿಲಿಯನ್‌ಗೆ ಕುಸಿತವನ್ನು ಕಂಡಿದೆ. ಅಲ್ಲದೆ 2021ರ ಮೊದಲನೇ ತ್ರೈಮಾಸಿಕದಲ್ಲಿ, ನಾಲ್ಕು ಖಾಸಗಿ DTH ಆಪರೇಟರ್‌ಗಳು ಒಟ್ಟು 69.57 ಮಿಲಿಯನ್ ಸಕ್ರಿಯ ಚಂದಾದಾರರನ್ನು ಹೊಂದಿದ್ದವು. ಆದರೆ ಇದೀಗ ಹೆಚ್ಚಿನ ಕುಸಿತವನ್ನು ಅನುಭವಿಸುತ್ತಿವೆ. ಹಾಗಾದ್ರೆ ಯಾವೆಲ್ಲಾ ಡಿಟಿಎಚ್‌ ಪ್ಲೇಯರ್‌ಗಳು ಕುಸಿತವನ್ನು ಅನುಭವಿಸಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಟಿಎಚ್‌

ಡಿಟಿಎಚ್‌ ಸೇವೆಯ ಚಂದಾದಾರರ ಕುಸಿತವನ್ನು ಟಾಟಾ ಪ್ಲೇ ಕೂಡ ಅನುಭವಿಸಿದೆ. ಟಾಟಾ ಪ್ಲೇ ಪ್ರಸ್ತುತ ತ್ರೈಮಾಸಿಕದಲ್ಲಿ 33.23% ಚಂದಾದಾರರನ್ನು ಹೊಂದಿದೆ. ಆದರೆ ಹಿಂದಿನ ತ್ರೈ ಮಾಸಿಕದಲ್ಲಿ 33.48% ಹೊಂದಿತ್ತು. ಇದನ್ನು ಗಮನಿಸಿದರೆ ಕುಸಿತವನ್ನು ಅನುಭವಿಸಿರುವುದು ಗಮನಕ್ಕೆ ಬರಲಿದೆ. ಇನ್ನು ಏರ್‌ಟೆಲ್ ಡಿಟಿಎಚ್ ಮಾರುಕಟ್ಟೆ ಪಾಲು 26.37% ರಿಂದ 26.24% ಕ್ಕೆ ಇಳಿದಿದೆ. ಆದರೆ ಇದೆಲ್ಲದರ ನಡುವೆ ಡಿಶ್ ಟಿವಿ ತನ್ನ ಮಾರುಕಟ್ಟೆ ಪಾಲನ್ನು 22.04% ರಿಂದ 22.10% ಕ್ಕೆ ಹೆಚ್ಚಳವನ್ನು ಮಾಡಿಕೊಂಡಿದೆ. ಜೊತೆಗೆ ಸನ್ ಡೈರೆಕ್ಟ್ ತನ್ನ ಮಾರುಕಟ್ಟೆ ಪಾಲನ್ನು 18.11% ರಿಂದ 18.43% ಕ್ಕೆ ಹೆಚ್ಚಿಸಿದೆ. ಈ ಮೂಲಕ ತಮ್ಮ ಚಂದಾದಾರಿಕೆ ಸಂಖ್ಯೆ ಕುಸಿತವನ್ನು ತಡೆಯುವಲ್ಲಿ ಯಶಸ್ವಿಯಾಗಿವೆ.

ಕೇಬಲ್ ಟಿವಿ ವಲಯ

ಕೇಬಲ್ ಟಿವಿ ವಲಯ

ಇನ್ನು ಟಾಪ್ 13 ಕೇಬಲ್ ಮತ್ತು HITS ಪ್ಲಾಟ್‌ಫಾರ್ಮ್‌ಗಳ ಚಂದಾದಾರರ ಸಂಖ್ಯೆಯು ಹಿಂದುಳಿದ ತ್ರೈಮಾಸಿಕದಲ್ಲಿ 4.58 ಕೋಟಿಯಿಂದ 4.59 ಕೋಟಿಗೆ ಏರಿದೆ. ಜಿಟಿಪಿಎಲ್ ಹಾಥ್‌ವೇ, ಕೆಸಿಸಿಎಲ್, ಮತ್ತು ಎನ್‌ಎಕ್ಸ್‌ಟಿ ಡಿಜಿಟಲ್ ಹೊರತುಪಡಿಸಿ, ಇತರ ಪ್ಲ್ಯಾಟ್‌ಫಾರ್ಮ್‌ಗಳ ಚಂದಾದಾರರ ಸಂಖ್ಯೆ ಕುಸಿತ ಕಂಡಿದೆ. ಇನ್ನು ಮಾರ್ಚ್ 31, 2022 ರಂತೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ 1764 MSO ಗಳು ನೋಂದಾಯಿಸಲ್ಪಟ್ಟಿವೆ. ಇದರಲ್ಲಿ MSO ಗಳು ಮತ್ತು HITS ಆಪರೇಟರ್‌ಗಳು ವರದಿ ಮಾಡಿದ ಮಾಹಿತಿಯ ಪ್ರಕಾರ, 12 MSO ಗಳು ಮತ್ತು 1 HITS ಆಪರೇಟರ್‌ಗಳು ಒಂದು ಮಿಲಿಯನ್‌ಗಿಂತಲೂ ಹೆಚ್ಚಿನ ಚಂದಾದಾರರ ಮೂಲವನ್ನು ಹೊಂದಿದ್ದಾರೆ.

ನಡುವೆ

ಇದೆಲ್ಲದರ ನಡುವೆ GTPL Hathway 3.25 ಲಕ್ಷ ಗ್ರಾಹಕರನ್ನು ಪಡೆದುಕೊಂಡಿದೆ. ಇದೇ ಅವಧಿಯಲ್ಲಿ NXT ಡಿಜಿಟಲ್ (HITS) 2.1 ಲಕ್ಷ ಚಂದಾದಾರರನ್ನು ಪಡೆದುಕೊಂಡಿದೆ. NXT ಡಿಜಿಟಲ್ (ಕೇಬಲ್) 1.4 ಲಕ್ಷ ಚಂದಾದಾರರನ್ನು ಸೇರಿಸಿದರೆ ಕೇರಳ ಕಮ್ಯುನಿಕೇಟರ್ಸ್ ಕೇಬಲ್ ಲಿಮಿಟೆಡ್ (KCCL) 0.32 ಲಕ್ಷ ಚಂದಾದಾರರನ್ನು ಪಡೆದುಕೊಂಡಿದೆ. ಈ ಮೂಲಕ ತಮ್ಮ ಚಂದಾದಾರರ ಸಂಖ್ಯೆಯನ್ನು ಕುಸಿಯದಂತೆ ನೋಡಿಕೊಂಡಿವೆ.

IPTV

IPTV

ಇನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಒದಗಿಸಿದ ಮಾಹಿತಿಯ ಪ್ರಕಾರ, ದೇಶದಲ್ಲಿ 31.03.2022ರ ವರದಿಯಂತೆ 20 IPTV ಆಪರೇಟರ್‌ಗಳಿವೆ. ಅಲ್ಲದೆ ಪ್ರಸ್ತುತ ಆಂಧ್ರಪ್ರದೇಶ ಸ್ಟೇಟ್ ಫೈಬರ್ನೆಟ್ ಲಿಮಿಟೆಡ್ ಮಾರ್ಚ್ 2022 ರ ಅಂತ್ಯದ ವೇಳೆಗೆ 7,50,306 ಚಂದಾದಾರರ ನೆಲೆಯನ್ನು ಹೊಂದಿರುವುದಾಗಿ ವರದಿ ಮಾಡಿದೆ.

ಸ್ಯಾಟ್‌ಲೈಟ್‌ ಟಿವಿ ಚಾನೆಲ್‌ಗಳು

ಸ್ಯಾಟ್‌ಲೈಟ್‌ ಟಿವಿ ಚಾನೆಲ್‌ಗಳು

ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಅನುಮತಿ ಪಡೆದುಕೊಂಡಿರುವ ಒಟ್ಟು ಖಾಸಗಿ ಸ್ಯಾಟ್‌ಲೈಟ್‌ ಟಿವಿ ಚಾನಲ್‌ಗಳ ಸಂಖ್ಯೆಯು ಕೂಡ ಕುಸಿತವನ್ನು ಕಂಡಿವೆ. 2021ರ ನಾಲ್ಕನೇ ತ್ರೈಮಾಸಿಕದಲ್ಲಿ 893 ರಿಂದ 2022ರ ಮೊದಲನೇ ತ್ರೈಮಾಸಿಕದಲ್ಲಿ 885ಕ್ಕೆ ಇಳಿದಿದೆ. ಇದರಲ್ಲಿ ಒಟ್ಟು ಪಾವತಿ ಚಾನಲ್‌ಗಳ ಸಂಖ್ಯೆಯು 543 ರಿಂದ 540 ಕ್ಕೆ ಇಳಿದಿದೆ. ಹಾಗೆಯೇ ಫ್ರೀ-ಟು-ಏರ್ (FTA) ಚಾನಲ್ ಎಣಿಕೆ 350 ರಿಂದ 345 ಕ್ಕೆ ಇಳಿದಿದೆ. ಇದರಿಂದ ಸ್ಯಾಟ್‌ಲೈಟ್‌ ಟಿವಿ ಚಾನಲ್‌ಗಳ ಸಂಖ್ಯೆ ಕೂಡ ಕುಸಿತವನ್ನು ಕಂಡಿರುವುದನ್ನು ಗಮನಿಸಬಹುದು. ಇದಲ್ಲದೆ ಪೇ ಎಸ್‌ಡಿ ಚಾನೆಲ್‌ಗಳ ಸಂಖ್ಯೆಯಲ್ಲಿ ಕೂಡ ಇಳಿಕೆಯಾಗಿದೆ. ಅದರಂತೆ 2022ರ ಮೊದಲನೇ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 253 ರಿಂದ ಒಟ್ಟು ಪಾವತಿ SD ಚಾನಲ್‌ಗಳ ಸಂಖ್ಯೆ 248ಕ್ಕೆ ಇಳಿಕೆಯಾಗಿದೆ.

FM ರೇಡಿಯೋ ಸೇವೆಗಳು

FM ರೇಡಿಯೋ ಸೇವೆಗಳು

ಟ್ರಾಯ್‌ ನೀಡಿದ ವರದಿಯ ಪ್ರಕಾರ ಪಬ್‌ಕಾಸ್ಟರ್ ಆಲ್ ಇಂಡಿಯಾ ರೇಡಿಯೊ (AIR) ನಿರ್ವಹಿಸುವ ರೇಡಿಯೊ ಚಾನೆಲ್‌ಗಳ ಹೊರತಾಗಿ, FM ರೇಡಿಯೊ ಆಪರೇಟರ್‌ಗಳು ದೇಶದಲ್ಲಿ 36 ಖಾಸಗಿ FM ರೇಡಿಯೋ ಆಪರೇಟರ್‌ಗಳು ನಿರ್ವಹಿಸುತ್ತಿವೆ. ತಾವು ನಿರ್ವಹಿಸುತ್ತಿರುವ 113 ನಗರಗಳಲ್ಲಿ 386 ಕಾರ್ಯಾಚರಣೆಯ ಖಾಸಗಿ FM ರೇಡಿಯೋ ಚಾನೆಲ್‌ಗಳಿವೆ ಎಂದು ಹೇಳಲಾಗಿದೆ. ಇದರಲ್ಲಿ 386 ಖಾಸಗಿ FM ರೇಡಿಯೋ ಚಾನೆಲ್‌ಗಳು ವರದಿ ಮಾಡಿರುವ ಜಾಹೀರಾತು ಆದಾಯವು 2022ರ ಮೊದಲನೇ ತ್ರೈಮಾಸಿಕದಲ್ಲಿ 362.63 ಕೋಟಿ ರೂ. ಆಗಿದೆ. ಆದರೆ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಇದೇ ಎಫ್‌ಎಂ ರೇಡಿಯೋ ಸೇವೆಗಳಿಂದ ಒಟ್ಟು 421.74 ಕೋಟಿ ರೂ.ಆದಾಯ ಬಂದಿದೆ. ಇದೆಲ್ಲವನ್ನು ಗಮನಿಸಿದರೆ ಎಫ್‌ಎಂ ರೇಡಿಯೋ ಸೇವಗಳ ಆದಾಯ ಕೂಡ ಕುಸಿತವನ್ನು ಅನುಭವಿಸಿದೆ.

Best Mobiles in India

Read more about:
English summary
DTH players are loosing subcribers in India: what could be the reason?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X