ಫೇಸ್‌ಬುಕ್ ಮೂಲಕ ಪೋಲೀಸರ ಅತಿಥಿಯಾದ ಖದೀಮರು

  By Shwetha
  |

  ಇಂದಿನ ಆಧುನಿಕ ಯುಗದಲ್ಲಿ ಫೇಸ್‌ಬುಕ್ ಎಂಬ ಪ್ರಸಿದ್ಧ ಜಾಲತಾಣವನ್ನು ಬಳಸಿಕೊಳ್ಳದವರು ಯಾರಿದ್ದಾರೆ ಹೇಳಿ? ನಿಮ್ಮನ್ನು ಭಾವನಾತ್ಮಕವಾಗಿ ಅಂತೆಯೇ ಮನೋರಂಜನಾತ್ಮಕವಾಗಿ ಇಡಿಯ ವಿಶ್ವದೊಂದಿಗೆ ಸಂಪರ್ಕವೇರ್ಪಡಿಸಲು ಈ ತಾಣ ಅತ್ಯುತ್ತಮ ಎಂದೆನಿಸಿದೆ. ಅಪರಿಚಿತರೂ ಇಲ್ಲಿ ಸ್ನೇಹಿತರಾಗುತ್ತಾರೆ. ಕಳೆದು ಹೋದ ಸ್ನೇಹ ಸಂಬಂಧ ಫೇಸ್‌ಬುಕ್ ಮೂಲಕ ಮತ್ತೊಮ್ಮೆ ಮರುಜನ್ಮ ಪಡೆಯುತ್ತದೆ.

  ಓದಿರಿ: ಎಚ್ಚರ: ನಿಮ್ಮ ಫೇಸ್‌ಬುಕ್ ಖಾತೆಯಿಂದ ನಿಮಗೇ ಹಾನಿ

  ಆದರೆ ಇದೇ ತಾಣವನ್ನು ತಮ್ಮ ಅಪರಾಧಿ ಅಂತೆಯೇ ಮೋಜಿಗಾಗಿ ಬಳಸುವ ಹಲವರಿದ್ದಾರೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಇವರುಗಳು ಫೇಸ್‌ಬುಕ್ ಬಳಕೆಯನ್ನು ಅರಿಯದೇಯೇ ಮೋಜಿನ ಸಂದೇಶ, ಪೋಸ್ಟ್‌ಗಳನ್ನು ಈ ತಾಣದಲ್ಲಿ ಹರಿಯಬಿಡುತ್ತಿದ್ದಾರೆ ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಪರಿಶೀಲಿಸಿಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ತನ್ನದೇ ವಾಂಟೆಡ್ ಫೋಸ್ಟ್‌ಗೆ ಪ್ರತ್ಯುತ್ತರಿಸಿದ

  ಈ ವ್ಯಕ್ತಿ ತನ್ನದೇ ವಾಂಟೆಡ್ ಪೋಸ್ಟ್‌ಗೆ ಉತ್ತರಿಸಿ ಪೋಲೀಸರ ಕೆಲಸವನ್ನು ಹಗುರಗೊಳಿಸಿದ್ದಾನೆ.

  ಫೇಸ್‌ಬುಕ್‌ನಲ್ಲೇ ಕಂದಮ್ಮಗಳನ್ನು ಮಾರಹೊರಟಳು

  ಓಕಲಾಮಾ ಎರಡು ಮಕ್ಕಳ ತಾಯಿ ಜೈಲಿನಲ್ಲಿರುವ ತನ್ನ ಗೆಳೆಯನನ್ನು ಕಾಪಾಡಲು ದುಡ್ಡಿಗಾಗಿ ಮಕ್ಕಳನ್ನು ಫೇಸ್‌ಬುಕ್‌ನಲ್ಲೇ ಮಾರಹೊರಟಿದ್ದಳು.

  ಅರೆಸ್ಟ್ ವಾರೆಂಟ್ ಫೋಸ್ಟ್ ಮಾಡಿದ

  ಈತ ತನ್ನೆಲ್ಲಾ ಅರೆಸ್ಟ್ ವಾರೆಂಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಜನಪ್ರಿಯಗೊಳ್ಳಲು ಹೊರಟಿದ್ದ.

  ಕಾರಿನಿಂದ ಗ್ಯಾಸ್ ಕದ್ದು ಅಪ್‌ಡೇಟ್ ಮಾಡಿದ

  ಪೋಲೀಸ್ ಕಾರಿನಿಂದ ಗ್ಯಾಸ್ ಕದ್ದು ಅದನ್ನು ತನ್ನ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿದ್ದಾನೆ ಈ ಧೀರ.

  ದರೋಡೆ ಮಾಡಿ ಪೋಲೀಸ್ ಅತಿಥಿಯಾದ

  ಈ ವ್ಯಕ್ತಿ ಮನೆಯಲ್ಲಿ ವಜ್ರದುಂಗರವನ್ನು ದರೋಡೆ ಮಾಡಿ ತದನಂತರ ಆ ಮನೆಯ ಯಜಮಾನನ ಕಂಪ್ಯೂಟರ್ ಅನ್ನು ಬಳಸಿ ಈತ ಫೇಸ್‌ಬುಕ್‌ಗೆ ಲಾಗಿನ್ ಮಾಡಿದ್ದಾನೆ ಆದರೆ ಲಾಗ್‌ಔಟ್ ಮಾಡಲು ಮರೆತುಬಿಟ್ಟಿದ್ದಾನೆ.

  ಸೆಲ್ಫಿ ಪೋಸ್ಟ್ ಮಾಡಿ ಸಿಕ್ಕಿಬಿದ್ದ

  ಈತ ಕಳ್ಳತನ ಏನೋ ಮಾಡಿದ ಆದರೆ ಮನೆಯಜಾಮನನ ಫೇಸ್‌ಬುಕ್ ಖಾತೆಗೆ ಲಾಗಿನ್ ಆಗಿ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾನೆ.

  ಕಳ್ಳಿ ಫೇಸ್‌ಬುಕ್‌ನಲ್ಲಿ ಮಾಲುಸಮೇತ

  ಈಕೆ ಕೂಡ ಫೇಸ್‌ಬುಕ್‌ನಲ್ಲಿ ತಾನು ಕದ್ದ ಮಾಲಿನೊಂದಿಗೆ ಫೋಟೋ ತೆಗೆಸಿಕೊಂಡಿದ್ದಾಳೆ.

  ಖೈದಿಯ ಪೋಸ್ಟ್

  ಈ ಖೈದಿ ತನ್ನ ವಿವರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವುದು

  ಬೇರೆ ಪ್ರೊಫೈಲ್ ಬೇಕೆಂದು ಮನವಿ ಮಾಡಿದ

  ಪೋಲೀಸರ ವಾಂಟೆಡ್ ಲಿಸ್ಟ್‌ನಲ್ಲಿರುವ ಸ್ಯಾಮುವೆಲ್ ತನ್ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸಬೇಕೆಂದು ಪೋಲೀಸರಲ್ಲಿ ಕೋರಿದ್ದಾನೆ. ಮತ್ತು ಇದರಿಂದ ಅವರು ಸುಲಭವಾಗಿ ಈತನನ್ನು ಪತ್ತೆಹಚ್ಚಿದ್ದಾರೆ.

  ವ್ಯಕ್ತಿಯ ಪೋಸ್ಟ್‌ನಿಂದ ಪೋಲೀಸರ ಬಲೆಗೆ

  ಈ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಸಂವಹನ ಮಾಡುವ ಮೂಲಕ ಬಲೆಬೀಸುತ್ತಿದ್ದ ಪೋಲೀಸರ ಅತಿಥಿಯಾಗಿದ್ದಾನೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  We present Dumb Criminals Who Really Shouldn't Be Using Facebook... Here these criminals are posting their crimes without any guilty.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more