ಅಮೆಜಾನ್‌ನಿಂದ ಮಹತ್ವದ ಘೋಷಣೆ; 'ಅಮೆಜಾನ್‌ ಶಿಪ್ಪಿಂಗ್' ಸೇವೆ ಪ್ರಾರಂಭ!

|

ಅಮೆಜಾನ್‌ ಇ-ಕಾಮರ್ಸ್‌ ತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ಟಿವಿ ಸೇರಿದಂತೆ ಇನ್ನಿತರೆ ಯಾವುದೇ ವಸ್ತುಗಳನ್ನು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಗ್ರಾಹಕರು ಇತರೆ ಇ-ಕಾಮರ್ಸ್‌ ತಾಣಗಳ ಕಡೆಗೂ ಮುಖ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಅಮೆಜಾನ್‌ ಪ್ರಮುಖ ಸುದ್ದಿಯೊಂದನ್ನು ನೀಡಿದ್ದು, ಈ ಮೂಲಕ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಈಗ 'ಅಮೆಜಾನ್ ಶಿಪ್ಪಿಂಗ್' (Amazon Shipping) ಆರಂಭಿಸಲು ಮುಂದಾಗಿದ್ದು, ಈ ಮೂಲಕ ಎಕ್ಸ್‌ಪ್ರೆಸ್‌ಬೀಸ್, ಇಕಾಮ್ ಎಕ್ಸ್‌ಪ್ರೆಸ್ ಹಾಗೂ ಫ್ಲಿಪ್‌ಕಾರ್ಟ್‌ನ ಇ-ಕಾರ್ಟ್‌ಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ. ಇ-ಕಾಮರ್ಸ್ ದೈತ್ಯ ಅಮೆಜಾನ್‌ ತನ್ನ ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ನೆಟ್‌ವರ್ಕ್ ಅನ್ನು ಭಾರತದಲ್ಲಿ ಥರ್ಡ್ ಪಾರ್ಟಿ ಮರ್ಚೆಂಟ್‌ಗಳಿಗೂ, ವ್ಯವಹಾರಗಳು ಮತ್ತು ನೇರ ಗ್ರಾಹಕ ಬ್ರ್ಯಾಂಡ್‌ಗಳಿಗೆ ವಿಸ್ತರಿಸಲು ಮುಂದಾಗಿದೆ.

ಅಮೆಜಾನ್‌ ಹೇಳಿದ್ದೇನು?

ಅಮೆಜಾನ್‌ ಹೇಳಿದ್ದೇನು?

ಅಮೆಜಾನ್ ಶಿಪ್ಪಿಂಗ್ ಸೇವೆಯು ವ್ಯಾಪಕವಾದ ವ್ಯಾಪ್ತಿಯನ್ನು ಹೊಂದಿರಲಿದ್ದು, ಹೆಚ್ಚಿನ ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಹಾಗೆಯೇ ಕಡಿಮೆ ಒಟ್ಟು ಲಾಜಿಸ್ಟಿಕ್ಸ್ ವೆಚ್ಚದಲ್ಲಿ ನಾವು ವಾರದಲ್ಲಿ 7 ದಿನಗಳಲ್ಲೂ ನಿಮ್ಮ ಪಾರ್ಸೆಲ್‌ಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಅವುಗಳನ್ನು ನಿಮ್ಮ ಗ್ರಾಹಕರಿಗೆ ತಲುಪಿಸುತ್ತೇವೆ ಎಂದು ಅಮೆಜಾನ್‌ ಹೇಳಿಕೊಂಡಿದೆ. ಇದರ ಜೊತೆಗೆ ಕೆಲವು ಟ್ಯಾಗ್‌ಲೈನ್‌ ಅನ್ನು ಸಹ ಘೋಷಣೆ ಮಾಡಿದೆ. ಇದರಲ್ಲಿ ಸ್ಪರ್ಧಾತ್ಮಕ ದರಗಳು, ವಾರಾಂತ್ಯದಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ, ನಂಬಿಕೆಯ ಡೆಲಿವರಿ ಸೇವೆ, ಮೀಸಲಾದ ಸಾಗಣೆದಾರರ ಬೆಂಬಲ ಸೇರಿದಂತೆ ಇನ್ನಿತರೆ ಟ್ಯಾಗ್‌ಲೈನ್‌ ಮೂಲಕ ಗಮನ ಸೆಳೆದಿದೆ.

ಥರ್ಡ್ ಪಾರ್ಟಿ ಮರ್ಚೆಂಟ್‌ಗೂ ಮುಕ್ತ

ಥರ್ಡ್ ಪಾರ್ಟಿ ಮರ್ಚೆಂಟ್‌ಗೂ ಮುಕ್ತ

ನಾವು ನಿಮ್ಮ ಸ್ವಂತ ವೆಬ್‌ಸೈಟ್ ಮತ್ತು ಇತರ ಇ-ಕಾಮರ್ಸ್ ತಾಣಗಳಿಂದ ಪಾರ್ಸೆಲ್‌ಗಳನ್ನು ತಲುಪಿಸುತ್ತೇವೆ. ಹಾಗೆಯೇ ಈ ಸೇವೆ ಥರ್ಡ್ ಪಾರ್ಟಿ ಮರ್ಚೆಂಟ್‌ಗಳಿಗೂ ಮುಕ್ತವಾಗಿದೆ. ಜೊತೆಗೆ ಸ್ಥಳೀಯ ಕಂಪೆನಿಗಳಾದ ಶಿಪ್ ರಾಕೆಟ್‌, ಯೂನಿಕಾಮರ್ಸ್‌(Unicommerce) , ಈಸಿಕಾಮ್(Easyecom), ಕ್ಲಿಕ್‌ಪೋಸ್ಟ್‌ ಹಾಗೂ ವಿನ್ಕುಲಮ್ (Vinculum) ಜೊತೆಗೆ ಆರ್ಡರ್ ಮತ್ತು ಡೆಲಿವರಿ ಮ್ಯಾನೇಜ್‌ಮೆಂಟ್ ಸಿಸ್ಟಮ್‌ ಸಂಬಂಧ ಪಾಲುದಾರಿಕೆ ಪಡೆಯಲಾಗಿದೆ ಎಂದು ಅಮೆಜಾನ್‌ ಮಾಹಿತಿ ನೀಡಿದೆ.

ಹಾನಿಕಾರಕ, ಅಪಾಯಕಾರಿ ಸರಕುಗಳಿಗೆ ಅವಕಾಶ ಇಲ್ಲ

ಹಾನಿಕಾರಕ, ಅಪಾಯಕಾರಿ ಸರಕುಗಳಿಗೆ ಅವಕಾಶ ಇಲ್ಲ

ಈ ಅಮೆಜಾನ್ ಶಿಪ್ಪಿಂಗ್‌ನಲ್ಲಿ ಹಾನಿಕಾರಕ ಮತ್ತು ಅಪಾಯಕಾರಿ ಸರಕುಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಇದರ ಜೊತೆಗೆ ಅಮೆಜಾನ್ ಶಿಪ್ಪಿಂಗ್ ಪ್ರಸ್ತುತ ಡೆಲಿವರಿಗಳ ಗ್ರೌಂಡ್ ಮೋಡ್ ಬಗ್ಗೆ ಮಾಹಿತಿ ನೀಡಿದ್ದು, ಪ್ರತಿ ಇ-ಕಾಮರ್ಸ್‌ ತಾಣ ಅಥವಾ ಕಂಪೆನಿಗಳು ತಮ್ಮ ಪ್ರತಿ ಆರ್ಡರ್‌ನಲ್ಲಿ 99 ಸರಕುಗಳನ್ನು ಪಾರ್ಸಲ್‌ ಮಾಡಬಹುದಾಗಿದೆ. ಹಾಗೆಯೇ ಪ್ರತಿ ವಸ್ತುವಿಗೆ ಗರಿಷ್ಠ 18 ಕೆಜಿ ನಿಗದಿ ಪಡಿಸಲಾಗಿದ್ದು, ಗರಿಷ್ಠ ಗಾತ್ರ 70cmX70cmX45cm ಗೆ ನಿರ್ಬಂಧಿಸಲಾಗಿದೆ.

14,000 ಕ್ಕೂ ಹೆಚ್ಚು ಪಿನ್‌ಕೋಡ್‌ ಏರಿಯಾಗೆ ಸೇವೆ

14,000 ಕ್ಕೂ ಹೆಚ್ಚು ಪಿನ್‌ಕೋಡ್‌ ಏರಿಯಾಗೆ ಸೇವೆ

ಇದೆಲ್ಲವನ್ನೂ ಒಳಗೊಂಡಂತೆ ಅಮೆಜಾನ್ ಭಾರತದಲ್ಲಿ 14,000 ಕ್ಕೂ ಹೆಚ್ಚು ಪಿನ್ ಕೋಡ್‌ ಏರಿಯಾಗಳನ್ನು ಈಗಾಗಲೇ ಕವರ್ ಮಾಡುತ್ತಿದೆ. ಈ ಮೂಲಕ ಅತ್ಯುತ್ತಮ ಸೇವೆ ನೀಡುವುದಾಗಿಯೂ ಅಮೆಜಾನ್‌ ತಿಳಿಸಿದೆ. ಇನ್ನು ಈ ಹೊಸ ಸೇವೆಯಿಂದ ಒಟ್ಟಾರೆ ಲಾಜಿಸ್ಟಿಕ್ ವೆಚ್ಚ ಕಡಿಮೆ ಮಾಡುವುದರ ಜೊತೆಗೆ ಗ್ರಾಹಕ ಅನುಭವ ಮಟ್ಟವನ್ನು ಹೆಚ್ಚಿಗೆ ಮಾಡಬಹುದು ಎಂದು ನಂಬಿದೆ.

ಜಾಗತಿಕವಾಗಿ

ಇನ್ನು ಜಾಗತಿಕವಾಗಿ ಅಮೆಜಾನ್ ಯುಕೆನಲ್ಲಿ ಈ ಸೇವೆಯನ್ನು ಪ್ರಾರಂಭಿಸಿದೆ. ಇದರ ಜೊತೆಗೆ ವಾಲ್‌ಮಾರ್ಟ್ ಬೆಂಬಲಿತ ಪ್ರತಿಸ್ಪರ್ಧಿ ಫ್ಲಿಪ್‌ಕಾರ್ಟ್ ಕೂಡ ಈ ವರ್ಷದ ಆರಂಭದಲ್ಲಿ ತನ್ನ ಲಾಜಿಸ್ಟಿಕ್ಸ್ ನೆಟ್‌ವರ್ಕ್ ಅನ್ನು ಥರ್ಡ್ ಪಾರ್ಟಿ ಮರ್ಚೆಂಟ್‌ಗೆ ವಿಸ್ತರಿಸಲು ಮುಂದಾಗಿದ್ದು, ಈ ಬೆಳವಣಿಗೆ ನಂತರ ಅಮೆಜಾನ್‌ ಸಹ ಈ ಯೋಜನೆಗೆ ಕಾಲಿಟ್ಟಿದೆ.

Best Mobiles in India

English summary
Amazon has taken the lead among e-commerce sites. Meanwhile, Amazon has now launched a service called Amazon Shipping.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X