2023 ರಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು ಮಾಡಲೇಬೇಕಾದ ಕೆಲಸಗಳಿವು; ಯಾಕೆ ಗೊತ್ತಾ!?

|

ಹೊಸ ವರ್ಷಕ್ಕೆ ದಿನಗಣನೆ ಆರಂಭ ಆಗಿದೆ. ಅದರಂತೆ ಎಲ್ಲರೂ ಹೊಸತನಕ್ಕೆ ಮುಂದಾಗುತ್ತಾರೆ, ಇದರ ಭಾಗವಾಗಿಯೇ ಹಲವಾರು ಜನರು ಹೊಸ ಸ್ಮಾರ್ಟ್‌ಫೋನ್‌ ಅಥವಾ ಸ್ಮಾರ್ಟ್‌ಡಿವೈಸ್‌ ಖರೀದಿ ಮಾಡಿದರೆ ಇನ್ನುಳಿದವರು ಇರುವುದರಲ್ಲೇ ತೃಪ್ತಿ ಪಟ್ಟುಕೊಂಡು ಸುಮ್ಮನಿರುತ್ತಾರೆ. ಆದರೆ, ಸ್ಮಾರ್ಟ್‌ಫೋನ್‌ನಲ್ಲಿ ಆನ್‌ಲೈನ್ ಬ್ಯಾಂಕಿಂಗ್, ಕ್ಯಾಬ್‌ಗಳನ್ನು ಕಾಯ್ದಿರಿಸುವುದು, ಚಲನಚಿತ್ರಗಳನ್ನು ನೋಡುವುದು ಮತ್ತು ಸಂಗೀತವನ್ನು ಆಲಿಸುವುದು ಸೇರಿದಂತೆ ಇತರೆ ಎಲ್ಲಾ ಪ್ರಕ್ರಿಯೆ ಜರುಗುವುದರಿಂದ ಹೊಸ ವರ್ಷಕ್ಕಾದರೂ ಈ ರೀತಿಯಾಗಿ ಎಚ್ಚರಿಕೆ ವಹಿಸಿ.

ತಂತ್ರಜ್ಞಾನ

ಹೌದು, ತಂತ್ರಜ್ಞಾನ ಹೆಚ್ಚಾದಂತೆ ಸ್ಮಾರ್ಟ್‌ಡಿವೈಸ್‌ಗಳ ಬಳಕೆ ಸಹ ಹೆಚ್ಚಾಗಿದೆ. ಇದರ ಜೊತೆಗೆ ಹ್ಯಾಕರ್‌ಗಳ ಸಂಖ್ಯೆಯೂ ಸಹ ಹೆಚ್ಚಿದೆ. ಹೀಗಾಗಿ ಮುಂದಿನ ವರ್ಷದಿಂದಲಾದರೂ ಈ ರೀತಿಯ ಕೆಟ್ಟ ಬೆಳವಣಿಗೆಯಿಂದ ಪಾರಾಗಲು ನೀವು ಕೆಲವೊಂದಿಷ್ಟು ನೀತಿ ನಿಯಮಗಳನ್ನು ನಿಮ್ಮ ಸ್ಮಾರ್ಟ್‌ ಡಿವೈಸ್‌ ಸಂಬಂಧ ಪಾಲನೆ ಮಾಡಬೇಕಾಗುತ್ತದೆ. ಇಲ್ಲವಾದರೆ ನಿಮ್ಮ ಸ್ಮಾರ್ಟ್‌‌ ಡಿವೈಸ್‌ಗಳು ಬೇಗನೆ ಹಾಳಾಗಬಹುದು ಅಥವಾ ಹ್ಯಾಕರ್‌ ಬಲೆಗೆ ಬೀಳಬಹುದು. ಹಾಗಿದ್ರೆ ನೀವು ಏನೆಲ್ಲಾ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಇ-ಕಾಮರ್ಸ್ ಶಾಪಿಂಗ್ ಸೈಟ್‌ಗಳಿಂದ ಲಾಗ್ ಔಟ್ ಆಗಿ

ಇ-ಕಾಮರ್ಸ್ ಶಾಪಿಂಗ್ ಸೈಟ್‌ಗಳಿಂದ ಲಾಗ್ ಔಟ್ ಆಗಿ

ನಮಗೆ ಏನೇ ಬೇಕಾದರೂ ಇ-ಕಾಮರ್ಸ್‌ ಸೈಟ್‌ಗಳತ್ತ ಮುಖ ಮಾಡುತ್ತೇವೆ. ಅದರಲ್ಲೂ ಬಹುಪಾಲು ಮಂದಿ ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಈ ಸೈಟ್‌ಗಳಿಗೆ ಭೇಟಿ ನೀಡುತ್ತಾರೆ. ಈ ಕಾರಣಕ್ಕೆ ಒಮ್ಮೆ ಲಾಗಿನ್‌ ಆದರೆ ಮತ್ತೆ ಲಾಗ್‌ಔಟ್‌ ಆಗಲು ಬಯಸುವುದಿಲ್ಲ. ಆದರೆ, ಈ ರೀತಿ ಮಾಡುವುದರಿಂದ ಅದರಲ್ಲೂ ವೈ-ಫೈ ನೆಟ್‌ವರ್ಕ್‌ ಮೂಲಕ ಈ ಪ್ರಕ್ರಿಯೆ ನಡೆಸುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಕರ್‌ಗಳಿಗೆ ತುತ್ತಾಗಬಹುದು ಅಥವಾ ನಿಮ್ಮ ಮೊಬೈಲ್‌ನಲ್ಲಿ ಭದ್ರತಾ ಸಮಸ್ಯೆ ಎದುರಾಗಬಹುದು.

ಚಾರ್ಜಿಂಗ್‌ ಸ್ಟೇಷನ್‌ ನಲ್ಲಿ ಎಚ್ಚರಿಕೆ ವಹಿಸಿ

ಚಾರ್ಜಿಂಗ್‌ ಸ್ಟೇಷನ್‌ ನಲ್ಲಿ ಎಚ್ಚರಿಕೆ ವಹಿಸಿ

ಜ್ಯೂಸ್ ಜಾಕಿಂಗ್ ಎಂಬುದು ಹ್ಯಾಕರ್‌ಗಳು ಬಳಸುವ ಸಾಮಾನ್ಯ ಮಾರ್ಗವಾಗಿದೆ. ಈ ಮೂಲಕ ನೀವು ಎಲ್ಲಾದರೂ ಚಾರ್ಜಿಂಗ್‌ ಸ್ಟೇಷನ್‌ ನಲ್ಲಿ ನಿಮ್ಮ ಮೊಬೈಲ್‌ ಅನ್ನು ಪ್ಲಗ್‌ ಮಾಡುವ ಮುನ್ನ ಎಚ್ಚರಿಕೆ ವಹಿಸಿ, ಇಲ್ಲವಾದರೆ ಅವರು ನಿಮ್ಮ ಎಲ್ಲಾ ಡೇಟಾವನ್ನು ಸುಲಭವಾಗಿ ಕದಿಯುತ್ತಾರೆ. ಹಾಗೆಯೇ ನಿಮ್ಮ ನಿಮ್ಮ ಮೊಬೈಲ್‌ಗೆ ಮಾಲ್‌ವೇರ್‌ ಇನ್‌ಸ್ಟಾಲ್‌ ಮಾಡುತ್ತಾರೆ. ಇದರಿಂದ ನಿಮ್ಮ ಎಲ್ಲಾ ಚಟುವಟಿಕೆ ಅವರಿಗೆ ತಿಳಿದು, ನೀವು ಸಮಸ್ಯೆಗೆ ಸಿಲುಕಬಹುದು.

ಆಗಾಗ್ಗೆ ಆಡಿಟ್ ಮಾಡಿ

ಆಗಾಗ್ಗೆ ಆಡಿಟ್ ಮಾಡಿ

ಈ ಪ್ರಕ್ರಿಯೆಯನ್ನು ನೀವು ನಿರಂತರವಾಗಿ ಮಾಡಿಕೊಂಡು ಬಂದರೆ ಖಂಡಿತಾ ನಿಮ್ಮ ಸ್ಮಾರ್ಟ್‌ಫೋನ್‌ ಸೇಫ್‌ ಆಗಿ ಇರಲಿದೆ. ಅದರಲ್ಲೂ ಪ್ರತಿ ಆಪ್‌ ಇನ್‌ಸ್ಟಾಲ್‌ ಮಾಡುವ ವೇಳೆ ಅನವಶ್ಯಕವಾಗಿ ಎಲ್ಲಾ ಅನುಮತಿಗಳನ್ನು ನೀಡಬೇಡಿ. ಅಥವಾ ನೀವು ಇನ್‌ಸ್ಟಾಲ್ ಮಾಡಿದ ಆಪ್‌ ಎಲ್ಲಾ ರೀತಿಯ ಅನುಮತಿ ಕೇಳುತ್ತದೆ ಎಂದರೆ ಮೊದಲು ಅದನ್ನು ನಿಮ್ಮ ಫೋನ್‌ನಿಂದ ಹೊರದಬ್ಬಿ.

ರಿಮೋಟ್ ಕಂಟ್ರೋಲ್‌ ಮೂಲಕ ಡಿಲೀಟ್ ಮಾಡುವ ಆಯ್ಕೆ ಆನ್‌ ಮಾಡಿ

ರಿಮೋಟ್ ಕಂಟ್ರೋಲ್‌ ಮೂಲಕ ಡಿಲೀಟ್ ಮಾಡುವ ಆಯ್ಕೆ ಆನ್‌ ಮಾಡಿ

ಸ್ಮಾರ್ಟ್‌ಫೋನ್‌ ಹೊಂದಿದ್ದೀರ ಎಂದರೆ ಖಂಡಿತಾ ಅದು ಯಾವಾಗಲು ನಿಮ್ಮ ಬಳಿಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಅದು ಕಳ್ಳತನ ಆಗಬಹುದು ಅಥವಾ ನೀವೇ ಎಲ್ಲಾದರು ಕಳೆದುಕೊಳ್ಳಬಹುದು. ಹೀಗಾಗಿ ನೀವು ಫೋನ್‌ ಅನ್ನು ಕಳೆದುಕೊಂಡಾದ ನಿಮ್ಮ ಯಾವುದೇ ಡೇಟಾ ಅವರಿಗೆ ಸಿಗಬಾರದು ಎಂದಾದರೆ ಮೊದಲು ರಿಮೋಟ್ ವೈಪಿಂಗ್‌ ಆಯ್ಕೆಯನ್ನು ಸಕ್ರಿಯಗೊಳಿಸಿ. ಇದರಿಂದ ನೀವು ನಿಮ್ಮ ಡೇಟಾವನ್ನು ಎಲ್ಲಿಂದಲಾದರೂ ಡಿಲೀಟ್‌ ಮಾಡಬಹುದು.

ಸ್ಮಾರ್ಟ್‌ಫೋನ್ ಅಪ್‌ಡೇಟ್‌ ಮಾಡಿ

ಸ್ಮಾರ್ಟ್‌ಫೋನ್ ಅಪ್‌ಡೇಟ್‌ ಮಾಡಿ

ಇದನ್ನಂತೂ ನೀವು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇದರಿಂದ ಫೋನ್‌ನಲ್ಲಿ ಈ ಹಿಂದೆ ಇರುವ ಅನಾನುಕೂಲಗಳು ಹಾಗೂ ಭದ್ರತಾ ಸಂಬಂಧದ ವಿಷಯಗಳು ಸರಿಯಾಗುತ್ತವೆ. ಅದರಲ್ಲೂ ಓಎಸ್‌ ನವೀಕರಣದಿಂದ ಭದ್ರತಾ ಸಮಸ್ಯೆ ಹೆಚ್ಚು ಹೆಚ್ಚಾಗಿ ಪರಿಹಾರವಾಗುತ್ತವೆ. ಇದರಿಂದ ನಿಮ್ಮ ಫೋನ್‌ ಅನ್ನು ಸೇಫ್‌ ಆಗಿ ಇರಿಸಿಕೊಳ್ಳಬಹುದು ಹಾಗೂ ದೀರ್ಘಕಾಲ ಬಾಳಿಕೆ ಬರುವಂತೆ ಮಾಡಬಹುದು.

ದುರ್ಬಲ ಪಾಸ್‌ವರ್ಡ್‌ ಬೇಡ

ದುರ್ಬಲ ಪಾಸ್‌ವರ್ಡ್‌ ಬೇಡ

ಫೋನ್‌ನಲ್ಲಿ ಬ್ಯಾಂಕಿಗ್‌ ಹಾಗೂ ಇನ್ನಿತರೆ ಚಟುವಟಿಕೆ ನಡೆಸುವುದರಿಂದ ಯಾರಿಗೂ ಸುಲಭವಾಗಿ ಅರ್ಥವಾಗದ ಪಾಸ್‌ವರ್ಡ್‌ಗಳನ್ನು ಬಳಕೆ ಮಾಡಿ. ಅದರಲ್ಲೂ 123456 ನಂತಹ ಸುಲಭವಾದ ಪಾಸ್‌ವರ್ಡ್‌ಗಳನ್ನು ಎಂದಿಗೂ ಬಳಕೆ ಮಾಡಬೇಡಿ. ಹಾಗೆಯೇ ಎಲ್ಲಾ ಖಾತೆಗೂ ಒಂದೇ ರೀತಿಯ ಪಾಸ್‌ವರ್ಡ್‌ಗಳನ್ನಂತೂ ಕಡ್ಡಾಯವಾಗಿ ಬಳಸಲೇ ಬೇಡಿ.

ಅನಗತ್ಯ ಎಂದಾಗ ಬ್ಲೂಟೂತ್, ವೈ-ಫೈ ಆಫ್ ಮಾಡಿ

ಅನಗತ್ಯ ಎಂದಾಗ ಬ್ಲೂಟೂತ್, ವೈ-ಫೈ ಆಫ್ ಮಾಡಿ

ಹ್ಯಾಕರ್‌ಗಳು ಈಗ ಎಷ್ಟು ಮುಂದುವರೆದಿದ್ದಾರೆ ಎಂದ್ರೆ ಬ್ಲೂಟೂತ್‌ ಮೂಲಕವೂ ಸಹ ನಿಮ್ಮ ಫೋನ್‌ ಅನ್ನು ಹ್ಯಾಕ್‌ ಮಾಡಿಕೊಳ್ಳುವ ಕಲೆ ಕಲಿತುಕೊಂಡಿದ್ದಾರೆ. ಅದರಲ್ಲೂ ಈ ಮೂಲಕ ನಿಮ್ಮ ಫೋನ್‌ಗೆ ಅವರು ಮಾಲ್‌ವೇರ್‌ ರವಾನಿಸುತ್ತಾರೆ. ಇದರಿಂದ ನಿಮ್ಮ ಡೇಟಾ ಹಾಗೂ ಇತರೆ ಮಾಹಿತಿಗಳು ಅವರ ವಶವಾಗುತ್ತವೆ. ಅದಕ್ಕೂ ಮಿಗಿಲಾಗಿ ಇವರೆಡೂ ಯಾವಾಗಲೂ ಆನ್‌ ಆಗಿದ್ದರೆ ನಿಮ್ಮ ಡಿವೈಸ್‌ ಚಾರ್ಜ್‌ ಬೇಗನೇ ಖಾಲಿಯಾಗುತ್ತದೆ.

Best Mobiles in India

English summary
Easy things smartphone users must do in 2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X