ಎಬೋಲಾ ಪತ್ತೆಹಚ್ಚುವ ಟ್ಯಾಬ್ಲೆಟ್ ಗೂಗಲ್‌ ಅನ್ವೇಷಣೆ

By Shwetha
|

ಎಬೋಲಾ ಪ್ರೂಫ್ ಟ್ಯಾಬ್ಲೆಟ್ ಅನ್ನು ಗೂಗಲ್ ಹೊಸದಾಗಿ ನಿರ್ಮಿಸಿದ್ದು ಇದು ಆಂಡ್ರಾಯ್ಡ್ ಡಿವೈಸ್ ಆಗಿದೆ ಮತ್ತು ಕ್ಲೋರಿನ್ ಅದ್ದುವುದು, ಹೆಚ್ಚಿನ ಆರ್ದ್ರತೆ, ಚಂಡಮಾರುತಗಳ ವಿರುದ್ಧ ನಿಲ್ಲುವ ತಾಕತ್ತನ್ನು ಪಡೆದುಕೊಂಡಿದೆ. ಇನ್ನು ವೈದ್ಯರುಗಳು ರೋಗಿಯ ಆರೋಗ್ಯ ಮಾಹಿತಿಯನ್ನು ಪಡೆದುಕೊಳ್ಳಲು ಕೈಚೀಲಗಳನ್ನು ಬಳಸುವುದು ಅನಿವಾರ್ಯವಾಗಿದೆ.

ಎಬೋಲಾ ಪತ್ತೆಹಚ್ಚುವ ಟ್ಯಾಬ್ಲೆಟ್ ಗೂಗಲ್‌ ಅನ್ವೇಷಣೆ

ಇದನ್ನೂ ಓದಿ: ಯುಗಾದಿ ಹಬ್ಬದ ಶುಭಾಷಯ ವಿನಿಮಯ ಅಪ್ಲಿಕೇಶನ್‌ಗಳು

ನೇರ ಕ್ಲೋರೀನ್ ಸಂಪರ್ಕದಲ್ಲಿರುವ ಕಡೆಗಳಲ್ಲಿ ಎಬೋಲಾ ಟ್ಯಾಬ್ಲೆಟ್ ಅನ್ನು ಬಳಸಬಹುದಾಗಿದ್ದು, ಇದು ಡಿವೈಸ್‌ಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಇದನ್ನು ಆಪರೇಟ್ ಮಾಡಲು ಗ್ಲೌಸ್ ಧರಿಸಬೇಕು. ಸೋನಿಯ ಎಕ್ಸ್‌ಪೀರಿಯಾ ವಾಟರ್ ಪ್ರೂಫ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ಆಂಡ್ರಾಯ್ಡ್ ಡಿವೈಸ್ ಅನ್ನು ವಿನ್ಯಾಸಪಡಿಸಿದ್ದು ಇದು ರೋಗಿಯ ತಾಪಮಾನವನ್ನು ದಾಖಲಿಸಲು ವೈದ್ಯರಿಗೆ ಅನುಮತಿ ನೀಡುತ್ತದೆ ಮತ್ತು ರೋಗದ ಲಕ್ಷಣಗಳನ್ನು ವಾರಗಳಲ್ಲಿ ಗುರುತಿಸುತ್ತದೆ.

ಎಬೋಲಾ ಪತ್ತೆಹಚ್ಚುವ ಟ್ಯಾಬ್ಲೆಟ್ ಗೂಗಲ್‌ ಅನ್ವೇಷಣೆ

ಇನ್ನು ಪಶ್ಚಿಮ ಆಫ್ರಿಕಾದಲ್ಲಿ ಚಂಡಮಾರುಗಳು ಮತ್ತು ಹೆಚ್ಚಿನ ಆರ್ದ್ರತೆ ಸಾಮಾನ್ಯವಾಗಿರುವುದರಿಂದ ಇವುಗಳನ್ನು ಮೆಟ್ಟಿ ನಿಲ್ಲುವ ತಾಕತ್ತು ಈ ಟ್ಯಾಬ್ಲೆಟ್‌ಗಿದೆ. ಮತ್ತು ವೈರ್‌ಲೆಸ್ ಚಾರ್ಜಿಂಗ್ ಇದರಲ್ಲಿ ಸಕ್ರಿಯಗೊಂಡಿರುವುದರಿಂದ ಡಿವೈಸ್ ಶೀಘ್ರದಲ್ಲಿ ಚಾರ್ಜ್ ಆಗುತ್ತದೆ.

Best Mobiles in India

English summary
Ebola-Proof Tablet Launched By Google In Sierra Leone Disease Center..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X