ವಿಂಡೋಸ್ 10 ಗೆ ನೀವು ಅಪ್‌ಗ್ರೇಡ್ ಮಾಡಿಕೊಳ್ಳಲೇಬೇಕು ಏಕೆ?

By Shwetha
|

ಮೈಕ್ರೋಸಾಫ್ಟ್‌ನ ಇತ್ತೀಚಿನ ಡೆಸ್ಕ್‌ಟಾಪ್ ಆಪರೇಟಿಂಗ್ ಸಿಸ್ಟಮ್ ಅಪ್‌ಗ್ರೇಡ್/ಖರೀದಿಗಾಗಿ ಜುಲೈ 29 ರಿಂದ ಲಭ್ಯವಾಗುತ್ತಿದೆ. ವಿಂಡೋಸ್ 10 ಹೆಚ್ಚು ವೇಗವಾಗಿದ್ದು ಅತ್ಯುನ್ನತ ಫೀಚರ್‌ಗಳನ್ನು ನಿಮ್ಮ ಮುಂದೆ ತರುತ್ತಿದೆ. ನಿಮ್ಮ ಹಳೆಯ ಆವೃತ್ತಿಯಿಂದ ಈ ಹೊಸ ಅಪ್‌ಗ್ರೇಡ್‌ಗೆ ಏಕೆ ಬದಲಾಗಬೇಕು ಎಂಬುದರ ಕಾರಣವನ್ನೇ ಇಂದಿನ ಲೇಖನದಲ್ಲಿ ನಾವು ನೀಡಲಿರುವೆವು.

ಓದಿರಿ: ಐಫೋನ್ 7: ಫೋನ್ ಮಾರುಕಟ್ಟೆಯ ಬಾದ್‌ಷಾ

ವಿಂಡೋಸ್ 8 ನಲ್ಲಿ ನೀವು ನಿರ್ವಹಿಸಲು ಸಾಧ್ಯವಾಗದೇ ಇರುವ ಹೆಚ್ಚಿನ ಕೆಲಸಗಳನ್ನು ವಿಂಡೋಸ್ 10 ಮುಖಾಂತರ ಮಾಡಬಹುದಾಗಿದೆ. ಹೆಚ್ಚುವರಿ ಭದ್ರತಾ ಅಂಶಗಳು ಮತ್ತು ಆಕರ್ಷಕ ಫೀಚರ್‌ಗಳನ್ನೊಳಗೊಂಡು ಬಂದಿರುವ ವಿಂಡೋಸ್ 10 ನಿಮ್ಮಲ್ಲಿ ಕಾತರಮಯ ಕ್ಷಣಗಳನ್ನು ಉಂಟುಮಾಡುವುದು ಖಂಡಿತ.

ಧ್ವನಿ ಆಧಾರಿತ ಕೋರ್ಟಾನಾ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ನಲ್ಲಿ

ಧ್ವನಿ ಆಧಾರಿತ ಕೋರ್ಟಾನಾ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ನಲ್ಲಿ

ವಿಂಡೋಸ್ ಫೋನ್‌ನಲ್ಲಿ ಕೋರ್ಟಾನಾ ಧ್ವನಿ ಆಧಾರಿತ ವರ್ಚುವಲ್ ಅಸಿಸ್ಟೆಂಟ್ ಎಂದೆನಿಸಿದೆ. ಫೋನ್‌ನಲ್ಲಿ ಕಾರ್ಯನಿರ್ವಹಿಸುವಂತೆಯೇ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಕೂಡ ನಿಮ್ಮ ದೈನಂದಿನ ಕೆಲಸಗಳಿಗೆ ಇದು ನೆರವನ್ನು ನೀಡಲಿದೆ. ನಿಮಗೆ ಹವಾಮಾನದ ಕುರಿತು ಅರಿಯಬೇಕು ಎಂದಾದಲ್ಲಿ ಕೋರ್ಟಾನಾದ ಸಹಾಯವನ್ನು ಪಡೆದುಕೊಂಡರೆ ಆಯಿತು ನಿಮ್ಮ ಕೆಲಸ ನಿಮಿಷಗಳಲ್ಲಿ ಸಿದ್ಧ.

ಸ್ಟಾರ್ಟ್ ಮೆನು

ಸ್ಟಾರ್ಟ್ ಮೆನು

ಹೊಸ ಸ್ಮಾರ್ಟ್‌ಮೆನು ಇನ್ನಷ್ಟು ಬೆಂಬಲವನ್ನು ನಿಮಗೆ ಒದಗಿಸಲಿದೆ. ಕಸ್ಟಮೈಸೇಶನ್‌ಗೂ ಇದು ಸಹಾಯವನ್ನೀಯಲಿದೆ. ಹವಾಮಾನ ಅಪ್ಲಿಕೇಶನ್ ಐಕಾನ್ ಕ್ಲಿಕ್ ಮಾಡದೆಯೇ ನಿಮಗೆ ಹವಾಮಾನ ಮಾಹಿತಿಯನ್ನು ಒದಗಿಸಲಿದೆ.

ಹೆಚ್ಚುವರಿ ಭದ್ರತೆ

ಹೆಚ್ಚುವರಿ ಭದ್ರತೆ

ವಿಂಡೋಸ್ 10, ತನ್ನ ಪ್ರಿಡ್ರೆಸಸರ್‌ಗಳಂತೆಯೇ ಹೊಸ ಭದ್ರತಾ ಸುಧಾರಣೆಗಳನ್ನು ತರಲಿದೆ. ಮೈಕ್ರೋಸಾಫ್ಟ್ ಹಲೋ ಎಂದು ಕರೆಯಲಾದ ಮುಖ ಗುರುತಿಸುವಿಕೆಯಿಂದ ಪಾಸ್‌ವರ್ಡ್ ನಮೂದಿಸದೆಯೇ ಕಂಪ್ಯೂಟರ್‌ಗೆ ಲಾಗಿನ್ ಮಾಡಬಹುದಾಗಿದೆ. ಮೈಕ್ರೋಸಾಫ್ಟ್ ಹಲೋ ನಿಮ್ಮ ಕಂಪ್ಯೂಟರ್‌ನ ಡಿಜಿಟಲ್ ಕ್ಯಾಮೆರಾವನ್ನು ಬಳಸಿಕೊಂಡು ನಿಮ್ಮನ್ನು ಗುರುತಿಸುತ್ತದೆ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುತ್ತದೆ.

ಎಕ್ಸ್ ಬಾಕ್ಸ್

ಎಕ್ಸ್ ಬಾಕ್ಸ್

ಎಕ್ಸ್ ಬಾಕ್ಸ್ ಗೇಮ್ಸ್‌ಗಳನ್ನು ತನ್ನ ಕಂಪ್ಯೂಟರ್‌ಗಳಲ್ಲಿಯೇ ಆಡುವ ಸೌಕರ್ಯವನ್ನು ವಿಂಡೋಸ್ 10 ಮಾಡಿಕೊಡುತ್ತಿದೆ. ಇನ್ನೊಂದು ಎಕ್ಸ್‌ಬಾಕ್ಸ್‌ನಲ್ಲಿರುವ ಇನ್ನೊಂದು ಪ್ಲೇಯರ್‌ಗಳ ವಿರುದ್ಧ ಪಿಸಿಯಿಂದ ಮಲ್ಟಿಪ್ಲೇಯರ್ ಗೇಮ್ಸ್‌ಗಳನ್ನು ಕೂಡ ಹೊಂದಿಸಬಹುದಾಗಿದೆ.

ಮೈಕ್ರೋಸಾಫ್ಟ್ ಎಡ್ಜ್

ಮೈಕ್ರೋಸಾಫ್ಟ್ ಎಡ್ಜ್

ಮೈಕ್ರೋಸಾಫ್ಟ್‌ನ ಹೊಸ ಡೆಸ್ಕ್‌ಟಾಪ್ ಬ್ರೌಸರ್ ಆದ ಎಡ್ಜ್ ಅನ್ನು ಮೈಕ್ರೋಸಾಫ್ಟ್ ತಂದಿದೆ. ಕ್ರೋಮ್‌ಗಿಂತಲೂ ಎಡ್ಜ್ ಹೆಚ್ಚು ವೇಗವಾಗಿದೆ.

ಟ್ಯಾಬ್ಲೆಟ್ ಮತ್ತು ಡೆಸ್ಕ್‌ಟಾಪ್ ಮೋಡ್ ನಡುವೆ ಪರಿವರ್ತನೆ

ಟ್ಯಾಬ್ಲೆಟ್ ಮತ್ತು ಡೆಸ್ಕ್‌ಟಾಪ್ ಮೋಡ್ ನಡುವೆ ಪರಿವರ್ತನೆ

ಕೋಂಟಿನಮ್ ಎಂಬ ಫೀಚರ್ ಅನ್ನು ಮೈಕ್ರೋಸಾಫ್ಟ್ ಒದಗಿಸುತ್ತಿದ್ದು ಎರಡು ವಿಭಿನ್ನ ಮೋಡ್‌ಗಳ ನಡುವೆ ಸುಲಭವಾಗಿ ಪರಿವರ್ತನೆಯನ್ನು ನಡೆಸಬಹುದಾಗಿದೆ.

ಹೆಚ್ಚಿನ ಉತ್ಪಾದಕತೆ

ಹೆಚ್ಚಿನ ಉತ್ಪಾದಕತೆ

ಟಾಸ್ಕ್‌ಬಾರ್‌ನ ಬಲಮೂಲೆಯಲ್ಲಿ ಲಭ್ಯವಿರುವ ಆಕ್ಶನ್ ಸೆಂಟರ್ ಬಳಕೆದಾರಿಗೆ ಮೆಚ್ಚುಗೆಯಾಗುವುದರಲ್ಲಿ ಸಂದೇಹವೇ ಇಲ್ಲ. ಪ್ರತೀ ಅಪ್ಲಿಕೇಶನ್‌ನಿಂದ ಇದು ಅಧಿಸೂಚನೆಗಳನ್ನು ಪಡೆದುಕೊಂಡು ಒಂದೇ ಸ್ಥಳದಲ್ಲಿ ಎಲ್ಲವನ್ನೂ ಇದು ತೋರಿಸುತ್ತದೆ.

ಇದು ಉಚಿತ

ಇದು ಉಚಿತ

ಕಾರ್ಯಕ್ಷಮತೆ ವೇಗವನ್ನು ಇನ್ನಷ್ಟು ವೃದ್ಧಿಸುವುದರ ಮೂಲಕ ಇನ್ನಷ್ಟು ಸುಭದ್ರ ಭದ್ರತಾ ಫೀಚರ್‌ಗಳನ್ನು ಹೊಸ ಆಪರೇಟಿಂಗ್ ಸಿಸ್ಟಮ್ ತಂದಿದೆ. ವಿಂಡೋಸ್ 7 ಮತ್ತು ವಿಂಡೋಸ್ 8.1 ಬಳಕೆದಾರರು ವಿಂಡೋಸ್ 10 ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Unless you've been living under a rock for last few months, you're likely aware of the imminent release of Windows 10. Microsoft's latest desktop operating system will become available for upgrade/ purchase starting July 29.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more