ಗೂಗಲ್‌, ಆಪಲ್‌ಗೆ ಸೆಡ್ಡು ಹೊಡೆದ ಮಸ್ಕ್‌; ಹೊಸ ಸ್ಮಾರ್ಟ್‌ಫೋನ್‌ ತಯಾರಿಸುತ್ತಾರಾ?

|

ಟ್ವಿಟ್ಟರ್‌ನಲ್ಲಿ ಆದ ಸಾಕಷ್ಟು ಬದಲಾವಣೆಗಳು ಜಗತ್ತಿನ ಗಮನ ಸೆಳೆದಿವೆ. ಅದರಂತೆ ಟ್ವಿಟ್ಟರ್‌ ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಹಾಗೆಯೇ ಕೆಲವು ಹೊಸ ಹೊಸ ಫೀಚರ್ಸ್‌ ಮೂಲಕ ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಳ್ಳುತ್ತಿದೆ. ಈ ಎಲ್ಲಾ ವಿಷಯಗಳ ನಡುವೆ ಈಗ ಟ್ವಿಟ್ಟರ್‌ ಮಾಲೀಕ ಎಲಾನ್‌ ಮಸ್ಕ್‌ ತನ್ನದೇ ಆದ ಸ್ಮಾರ್ಟ್‌ಫೋನ್ ತಯಾರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಆಪಲ್

ಹೌದು, ಆಪಲ್ ಹಾಗೂ ಗೂಗಲ್ ಟ್ವಿಟರ್ ಆಪ್‌ ಅನ್ನು ಏನಾದರೂ ನಿಷೇಧ ಮಾಡಿದರೆ ನಾನು ತನ್ನದೇ ಆದ ಸ್ಮಾರ್ಟ್‌ಫೋನ್ ತಯಾರಿಸುತ್ತೇನೆ ಎಂದು ಚಾಲೆಂಜ್‌ ಹಾಕಿದ್ದಾರೆ. ಈ ಮೂಲಕ ಎಲಾನ್‌ ಮಸ್ಕ್‌ ಟ್ವಿಟ್ಟರ್‌ನಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದ್ದಾರೆ. ಹಾಗಿದ್ರೆ ಯಾವ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಗೂಗಲ್‌ ಹಾಗೂ ಆಪಲ್‌ ಯಾವ ರೀತಿಯ ಕಾರಣಿಗರು ಎಂಬ ಮಾಹಿತಿಯನ್ನು ಇಲ್ಲಿ ವಿವರಿಸಿದ್ದೇವೆ.

ಐಫೋನ್‌ಗೆ ಪ್ರತಿಸ್ಪರ್ಧಿಯಾಗಲಿದ್ದಾರಾ?

ಐಫೋನ್‌ಗೆ ಪ್ರತಿಸ್ಪರ್ಧಿಯಾಗಲಿದ್ದಾರಾ?

ಟ್ವಿಟರ್‌ನ ಮಾಲೀಕ ಎಲಾನ್‌ ಮಸ್ಕ್ ಗೆ ಕೆಲವು ವಿಷಯಗಳು ರಸ್ಕ್‌ ತಿಂದಷ್ಟೇ ಸಲೀಸು. ಯಾಕೆಂದರೆ ಟೆಸ್ಲಾ ಮಾಲೀಕರಾಗಿದ್ದ ಇವರು ದಿಢೀರನೇ ಟ್ವಿಟ್ಟರ್‌ ಖರೀದಿ ಮಾಡಿದ್ದರು. ಇದೀಗ ಮತ್ತೇ ಸ್ಮಾರ್ಟ್‌ಫೋನ್‌ ತಯಾರಿಕಾ ವಿಷಯದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಅದೂ ಸ ಆಪಲ್ ಅಥವಾ ಗೂಗಲ್ ಟ್ವಿಟರ್ ಅನ್ನು ಆಪ್ ಸ್ಟೋರ್‌ಗಳಿಂದ ನಿಷೇಧಿಸಿದರೆ ಮಾತ್ರ ಎಂದು ತಿಳಿಸಿದ್ದಾರೆ.

ಮಸ್ಕ್‌ ಹೇಳಿದ್ದೇನು?

ಮಸ್ಕ್‌ ಹೇಳಿದ್ದೇನು?

ಗೂಗಲ್ ಅಥವಾ ಆಪಲ್ ಆಪ್ ಸ್ಟೋರ್‌ಗಳಿಂದ ಟ್ವಿಟರ್ ಅನ್ನು ತೆಗೆದುಹಾಕಿದರೆ ಮಸ್ಕ್ ಮಾರುಕಟ್ಟೆಯಲ್ಲಿ ಹೊಸ ಫೋನ್ ಅನ್ನು ತಯಾರು ಮಾಡುತ್ತಾರೆಯೇ ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮಸ್ಕ್‌ ಉತ್ತರಿಸಿ, ಹೊಸ ಫೋನ್‌ನೊಂದಿಗೆ ಎಂಟ್ರಿ ಕೊಡುತ್ತೇವೆ ಹೇಳಿದ್ದಾರೆ. ಇನ್ನು ಕಂಟೆಂಟ್ ಮಾಡರೇಶನ್ ಸಮಸ್ಯೆಗಳ ಮೇಲೆ ಗೂಗಲ್‌ ಹಾಗೂ ಆಪಲ್‌ ಆಪ್‌ ಸ್ಟೋರ್‌ಗಳಿಂದ ಟ್ವಿಟ್ಟರ್‌ ಅನ್ನು ನಿಷೇಧಿಸಬಹುದು ಎಂದು ಹೇಳಲಾಗುತ್ತಿರುವ ವಿಷಯದ ಮೇಲೆ ಈ ಎಲ್ಲಾ ಬೆಳವಣಿಗೆಗಳು ಕಂಡುಬರುತ್ತಿವೆ.

ಪರ್ಯಾಯ ಫೋನ್ ತಯಾರು ಮಾಡುತ್ತೇನೆ...

ಪರ್ಯಾಯ ಫೋನ್ ತಯಾರು ಮಾಡುತ್ತೇನೆ...

ಇನ್ನು ಈ ಟ್ವಿಟ್ಟರ್‌ ಬ್ಯಾನ್‌ ಪ್ರಕ್ರಿಯೆ ಖಂಡಿತವಾಗಿಯೂ ಸಂಭವಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಅದು ಏನಾದರೂ ಸಂಭವಿಸಿದರೆ ಹಾಗೂ ಬೇರೆ ಆಯ್ಕೆ ಇಲ್ಲದಿದ್ದರೆ, ನಾನು ಪರ್ಯಾಯ ಫೋನ್ ರಚಿಸುತ್ತೇನೆ ಎಂದಿದ್ದಾರೆ. ಈ ಪ್ರತ್ಯುತ್ತರಕ್ಕೆ ಉತ್ತರಿಸಿರುವ ನಥಿಂಗ್‌ನ ಸಂಸ್ಥಾಪಕ ಕಾರ್ಲ್ ಪೀ, ಮಸ್ಕ್‌ ಮುಂದೆ ಏನು ಮಾಡುತ್ತಾನೆ ಎಂದು ನೋಡಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಹಾಗಿದ್ರೆ, ಟ್ವಿಟರ್ ನಿಷೇಧವಾಗುತ್ತದೆಯೇ?

ಹಾಗಿದ್ರೆ, ಟ್ವಿಟರ್ ನಿಷೇಧವಾಗುತ್ತದೆಯೇ?

ಎಲಾನ್‌ ಮಸ್ಕ್ ತಮ್ಮ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಆಪ್ ಸ್ಟೋರ್‌ಗಳಿಂದ ಟ್ವಿಟ್ಟರ್‌ ಅನ್ನು ಬೂಟ್ ಮಾಡಲು ಆಪಲ್‌ ಹಾಗೂ ಗೂಗಲ್‌ ಮುಂದಾಗಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಈ ಕೆಲಸ ಈ ಎರಡೂ ಟೆಕ್‌ ದೈತ್ಯರಿಗೆ ಕಷ್ಟವೇನಲ್ಲ ಎಂಬುದೂ ಸಹ ಎಲ್ಲರಿಗೂ ತಿಳಿದ ವಿಷಯ.

ಈ ವಿಷಯ ಮುನ್ನಲೆಗೆ ಬಂದಿದ್ದು ಯಾಕೆ?

ಈ ವಿಷಯ ಮುನ್ನಲೆಗೆ ಬಂದಿದ್ದು ಯಾಕೆ?

ಎಲಾನ್‌ ಮಸ್ಕ್ ಇತ್ತೀಚೆಗೆ ಒಂದು ಹೊಸ ಪ್ಲ್ಯಾನ್‌ ಘೋಷಣೆ ಮಾಡಿದ್ದರು. ಅದು ಚಂದಾದಾರಿಕೆ ಮೂಲಕ ಬ್ಲೂಟಿಕ್ ಪಡೆದುಕೊಳ್ಳುವುದು. ಈ ಫೀಚರ್ಸ್‌ ಮೂಲಕ ತಮ್ಮ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಆಸಕ್ತಿಯನ್ನು ಮಸ್ಕ್‌ ಹೊಂದಿದ್ದರು. ಆದರೆ, ಇದಕ್ಕೆ ಮೊದಲು ಅಡ್ಡಗಾಲು ಹಾಕಿದ್ದು, ಗೂಗಲ್‌ ಹಾಗೂ ಆಪಲ್‌.

ನಮಗೂ ಕಮಿಷನ್‌ ಕೊಡಿ ಎಂದಿದ್ದ ಆಪಲ್‌, ಗೂಗಲ್

ನಮಗೂ ಕಮಿಷನ್‌ ಕೊಡಿ ಎಂದಿದ್ದ ಆಪಲ್‌, ಗೂಗಲ್

ಆಪಲ್‌ ಮತ್ತು ಗೂಗಲ್‌ ಚಂದಾದಾರಿಕೆ ಆಧಾರಿತ ಈ ಪ್ಲ್ಯಾನ್‌ ಗಾಗಿ ಡೆವಲಪರ್‌ಗಳಿಂದ ಶೇಕಡಾ 15 ರಷ್ಟು ಶುಲ್ಕ ವಿಧಿಸಲು ಮುಂದಾಗಿದ್ದವು. ಆದರೆ, ಡೆವಲಪರ್‌ಗಳಿಗೆ ಕಮಿಷನ್ ಪಾವತಿಸುವ ಆಯ್ಕೆಯಿಲ್ಲದಿದ್ದರೂ, ಗೂಗಲ್‌ ಹಾಗೂ ಆಪಲ್‌ನ ಈ ರೀತಿಯ ನಿರ್ಧಾರದಿಂದ ಬೇಸತ್ತ ಮಸ್ಕ್‌ ಟೀಕೆ ಮಾಡಲು ಮುಂದಾಗಿದ್ದರು. ಹಾಗೆಯೇ ಇದನ್ನು ಇಂಟರ್ನೆಟ್ ಮೇಲಿನ ತೆರಿಗೆ ಎಂದು ಕರೆದಿದ್ದರು. ಜೊತೆಗೆ ಪಡೆಯುವ ತೆರಿಗೆಗಿಂತ 10 ಪಟ್ಟು ಹೆಚ್ಚು ಪಡೆಯಲು ಮುಂದಾಗಿದ್ದಾರೆ ಎನ್ನುವ ಆರೋಪವನ್ನೂ ಅವರು ಮಾಡಿದ್ದರು.

 ಆಪಲ್ ಮತ್ತು ಗೂಗಲ್‌

ಇನ್ನು ಆಪಲ್ ಮತ್ತು ಗೂಗಲ್‌ನ ಶುಂಕದ ವಿಷಯವನ್ನು ಏನಾದರೂ ಮಸ್ಕ್ ಅವರು ಬೈಪಾಸ್ ಮಾಡಲು ಮುಂದಾದರೆ ಇವರಿಬ್ಬರ ಟ್ವಿಟ್ಟರ್‌ ಅನ್ನು ಹೊರಗೆಸೆಯುವ ಪ್ಲ್ಯಾನ್‌ ಯಶಸ್ವಿಯಾಗುತ್ತದೆ ಎನ್ನಲಾಗಿದೆ ಎಂದು ಪ್ರಸಿದ್ಧ ಟೆಕ್ ವಿಶ್ಲೇಷಕ ಮಾರ್ಕ್ ಗುರ್ಮನ್ ವಿವರಿಸಿದ್ದಾರೆ. ಆದರೆ, ಇದನ್ನು ಕಂಟೆಂಟ್‌ ಮಾಡರೇಶನ್ ವಿಷಯದಲ್ಲಿ ಎಳೆದುಕೊಂಡು ಬರಲಾಗುತ್ತಿದೆ ಎನ್ನುವುದು ಸಹ ಪ್ರಮುಖವಾದ ಒಂದು ವಿಷಯವಾಗಿದೆ.

Best Mobiles in India

English summary
Elon Musk says if Apple and Google ban Twitter, i make own smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X