ಯೂಟ್ಯೂಬ್‌ ವೈರಲ್‌ ಆಯ್ತು ಗೂಗಲ್‌ ಜಾಹೀರಾತು

By Ashwath
|

ಪ್ರಸ್ತುತ ವಿದ್ಯಮಾನದಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಂದು ಮಾಡಲು ಸಾಧ್ಯವೆ? ಈ ಪ್ರಶ್ನೆಯನ್ನು ಯಾರಲ್ಲಿ ಕೇಳಿದರೂ ಸಾಧ್ಯವಿಲ್ಲ ಎಂದೇ ಹೇಳಬಹುದು. ಆದರೆ ಈಗ ಗೂಗಲ್‌‌ ಎರಡು ದೇಶದ ಜನರಿಗೆ ಭಾವನಾತ್ಮಕ ವಿಡಿಯೋ ತಯಾರಿಸುವ ಮೂಲಕ ಒಂದು ಮಾಡಲು ಹೊರಟಿದೆ.ಈಗಾಗಲೇ ಇಂಟರ್‌ನೆಟ್‌‌ನಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು ಅಪ್‌ಲೋಡ್‌ ಆದ ಮೂರೇ ದಿನದಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಿಸಿದ್ದಾರೆ.

ಗೂಗಲ್‌ ತನ್ನ ಸರ್ಚ್‌ ಜಾಹೀರಾತಿಗಾಗಿ ಪುನರ್ಮಿಲನ(Reunion) ಹೆಸರಿನ ಹೊಸ ಜಾಹೀರಾತನ್ನು ತಯಾರಿಸಿದೆ. ಎರಡು ದೇಶಗಳು ವಿಭಜನೆಯಾದರೂ ಜನರಲ್ಲಿ ಇಂದಿಗೂ ಉತ್ತಮ ಬಾಂಧವ್ಯವಿದೆ ಎಂದು ತೋರಿಸುವ 3 ನಿಮಿಷದ ವಿಡಿಯೋ ಗೂಗಲ್‌ನ ಜಾಹೀರಾತಾಗಿದ್ದರೂ ಎರಡು ದೇಶಗಳ ಜನರಿಗೆ ಇಷ್ಟವಾಗಿದೆ.ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಜನರು ಶೇರ್‌ ಮಾಡಲು ಆರಂಭಿಸಿದ್ದುಈ ಹೊಸ ಕಲ್ಪನೆಯ ಜಾಹೀರಾತಿನ ಮೂಲಕ ಗೂಗಲ್‌ ಮತ್ತೆ ಎರಡು ದೇಶಗಳ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಜಾಹೀರಾತಿನಲ್ಲಿ ಏನಿದೆ?
ಭಾರತದಲ್ಲಿ ನೆಲೆಸಿರುವ ಅಜ್ಜ ತನ್ನ ಮೊಮ್ಮಗಳಿಗೆ ತನ್ನ ಬಾಲ್ಯದ ಕಥೆಯನ್ನು ಹೇಳುತ್ತಾನೆ. ವಿಭಜನೆಯಾಗುದಕ್ಕಿಂತ ಮೊದಲು ನಾನು ಲಾಹೋರ್‌ನಲ್ಲಿದ್ದೆ. ಲಾಹೋರ್‌ನಲ್ಲಿ ನನ್ನ ಆತ್ಮೀಯ ಬಾಲ್ಯದ ಗೆಳೆಯನಿದ್ದ.ನಾನು ಮತ್ತು ಅವನು ಉತ್ತಮ ಸ್ನೇಹಿತರಾಗಿದ್ದೆವು.ಆದರೆ 1947ರಲ್ಲಿ ದೇಶ ವಿಭಜನೆಯಾದ ಬಳಿಕ ನಾನು ದೆಹಲಿಗೆ ಬಂದೆ. ದೆಹಲಿಗೆ ಬಂದ ಮೇಲೆ ಕಡಿತ ಗೊಂಡ ಸಂಪರ್ಕ‌ ಸಂಪರ್ಕ‌ವನ್ನು ಮತ್ತೆ ಒಂದು ಮಾಡಲು ಸಾಧ್ಯವಾಗಿಲ್ಲ ಎಂದು ವಿಷಾದಿಂದ ಹೇಳುತ್ತಾನೆ.ತನ್ನ ಅಜ್ಜನ ಬೇಸರವನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಮೊಮ್ಮಗಳು ಅಜ್ಜ ನೀಡಿದ ಮಾಹಿತಿಯನ್ನು ಗೂಗಲ್‌ನಲ್ಲಿ ಸರ್ಚ್‌ ಮಾಡುವ ಮೂಲಕ ಕೊನೆಗೆ ಅಜ್ಜ ಮತ್ತು ಅಜ್ಜನ ಸ್ನೇಹಿತನನ್ನು ಒಂದು ಮಾಡುವಲ್ಲಿ ಯಶಸ್ವಿಯಾಗುತ್ತಾಳೆ.

ಹೀಗಾಗಿ ಇಲ್ಲಿ ಗೂಗಲ್‌ನ ಪುನರ್ಮಿಲನ ವಿಡಿಯೋ ಜೊತೆಗೆ ಪುನರ್‌ ಮಿಲನದ ಬಳಿಕ ಬಾಲ್ಯದ ಸ್ನೇಹಿತರಿಬ್ಬರರ ಸಂತೋಷ ದಲ್ಲಿ ಗೂಗಲ್‌ ಸರ್ಚ್‌ ಹೇಗೆ ಸಹಕಾರಿಯಾಯಿತು ಎಂದು ತೋರಿಸುವ ಇತರ ನಾಲ್ಕು ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ವಿಡಿಯೋ ನೋಡಿಕೊಂಡು ಹೋಗಿ.

ಯೂಟ್ಯೂಬ್‌ ವೈರಲ್‌ ಆಯ್ತು ಗೂಗಲ್‌ ಜಾಹೀರಾತು


ವಿಡಿಯೋ ವೀಕ್ಷಿಸಿ

ಯೂಟ್ಯೂಬ್‌ ವೈರಲ್‌ ಆಯ್ತು ಗೂಗಲ್‌ ಜಾಹೀರಾತು

ವಿಡಿಯೋ ವೀಕ್ಷಿಸಿ

ಯೂಟ್ಯೂಬ್‌ ವೈರಲ್‌ ಆಯ್ತು ಗೂಗಲ್‌ ಜಾಹೀರಾತು


ವಿಡಿಯೋ ವೀಕ್ಷಿಸಿ

ಯೂಟ್ಯೂಬ್‌ ವೈರಲ್‌ ಆಯ್ತು ಗೂಗಲ್‌ ಜಾಹೀರಾತು


ವಿಡಿಯೋ ವೀಕ್ಷಿಸಿ

ಯೂಟ್ಯೂಬ್‌ ವೈರಲ್‌ ಆಯ್ತು ಗೂಗಲ್‌ ಜಾಹೀರಾತು


ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X