'ಗೂಗಲ್ ಹಿಸ್ಟರಿ' ಸ್ವಯಂಚಾಲಿತವಾಗಿ ಡಿಲೀಟ್ ಆಗುವಂತೆ ಮಾಡುವುದು ಹೇಗೆ?

|

ಗೂಗಲ್‌ನಲ್ಲಿ ಏನೆಲ್ಲಾ ಹುಡುಕುತ್ತೀರಿ, ಗೂಗಲ್‌ ಮ್ಯಾಪ್‌ ಮೂಲಕ ಯಾವ ಮಾಹಿತಿ ಕಲೆ ಹಾಕಿದ್ದೀರಿ ಎಂಬೆಲ್ಲಾ ಮಾಹಿತಿಗಳನ್ನು ಸಂಗ್ರಹಿಸುವ ಗೂಗಲ್ ಕಂಪೆನಿ, ಇತ್ತೀಚಿಗಷ್ಟೇ ದತ್ತಾಂಶಗಳನ್ನು ಸ್ವಯಂಚಾಲಿತವಾಗಿ ಡಿಲೀಟ್‌ ಆಗುವಂತೆ ಮಾಡಬಹುದಾದ ಆಯ್ಕೆಯೊಂದನ್ನು ಪ್ರಕಟಿಸಿತ್ತು. ಈ ಆಯ್ಕೆಯಲ್ಲಿ ಗೂಗಲ್‌ ಖಾತೆಯ ಮೂಲಕ ತಮ್ಮ ಲೊಕೇಷನ್ ಮತ್ತು ಆಕ್ಟಿವಿಟಿಗಳನ್ನು ಸ್ವಯಂಚಾಲಿತವಾಗಿ ಡಿಲೀಟ್ ಮಾಡುವಂತೆ ಮಾಡಬಹುದಾಗಿದ್ದು, ಇದೀಗ ನೀವು ಕೂಡ ಈ ಕೆಲಸ ಮಾಡಬಹುದಾಗಿದೆ.

ಹೌದು, ಇನ್ಮುಂದೆ ಗೂಗಲ್ ಬಳಕೆದಾರರು ಲೊಕೇಷನ್ ಹಿಸ್ಟರಿಯನ್ನು ಬೇಕಾದಲ್ಲಿ, ಇಲ್ಲವೇ ಬೇಡವೆಂದಾದಲ್ಲಿ ಅಥವಾ ಸೀಮಿತ ಅವಧಿಗೆ ಉಳಿಸಿಕೊಳ್ಳಲು ಬಯಸಿದಲ್ಲಿ ಮತ್ತು ನಂತರ ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಆಯ್ಕೆಯನ್ನು ಶೀಘ್ರದಲ್ಲೇ ನೀಡುವುದಾಗಿ ಕಳೆದ ತಿಂಗಳು ಗೂಗಲ್ ಹೇಳಿತ್ತು. ಅದರಂತೆ ಈ ಹೊಸ ಅಪ್‌ಡೇಟ್ ಇದೀಗ ಲಭ್ಯವಿದ್ದು, ಬಳಕೆದಾರರು ತಮ್ಮ ಲೊಕೇಷನ್ ಮತ್ತು ಆಕ್ಟಿವಿಟಿಗಳನ್ನು ಸ್ವಯಂಚಾಲಿತವಾಗಿ ಡಿಲೀಟ್ ಮಾಡಬಹುದಾದ ಫೀಚರ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

'ಗೂಗಲ್ ಹಿಸ್ಟರಿ' ಸ್ವಯಂಚಾಲಿತವಾಗಿ ಡಿಲೀಟ್ ಆಗುವಂತೆ ಮಾಡುವುದು ಹೇಗೆ?

ಬಳಕೆದಾರರು ಹಿಸ್ಟರಿಯನ್ನು ಬೇಕಾದಲ್ಲಿ, ಇಲ್ಲವೇ ಬೇಡವೆಂದಾದಲ್ಲಿ ಅಥವಾ ಸೀಮಿತ ಅವಧಿಗೆ ಉಳಿಸಿಕೊಳ್ಳಲು ಬಯಸಿದಲ್ಲಿ ಮತ್ತು ನಂತರ ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಆಯ್ಕೆ ಇದಾಗಿದ್ದು, ಡೇಟಾದ ಎಲ್ಲಾ ಅಥವಾ ಅದರ ಭಾಗವನ್ನು ಕೈಯಾರೆ ಅಳಿಸಲು ನಿಯಂತ್ರಣ ಪಡೆದಿದ್ದಾರೆ. ಹಾಗಾದರೆ, ಗೂಗಲ್ ಬಳಕೆದಾರರು ತಮ್ಮ ಲೊಕೇಷನ್ ಮತ್ತು ಆಕ್ಟಿವಿಟಿಗಳನ್ನು ಸ್ವಯಂಚಾಲಿತವಾಗಿ ಡಿಲೀಟ್ ಆಗುವಂತೆ ಸೆಟ್ಟಿಂಗ್ ಬದಲಾವಣೆ ಹೇಗೆ ಮಾಡುವುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಆಟೊ ಡಿಲೀಟ್ ಪ್ರೈವೆಸಿ ಫೀಚರ್!

ಆಟೊ ಡಿಲೀಟ್ ಪ್ರೈವೆಸಿ ಫೀಚರ್!

ಮಾಹಿತಿ ಕಲೆಹಾಕುತ್ತಿದ್ದ ಗೂಗಲ್‌ ಮೇಲೆ ಈ ಬಗ್ಗೆ ಗ್ರಾಹಕರಿಂದ ಆಕ್ಷೇಪ, ಅಸಮಾಧಾನ ವ್ಯಕ್ತವಾದ ನಂತರ ಸ್ವತಃ ಗೂಗಲ್‌ ಸಂಸ್ಥೆಯೇ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾರಂಭಿಸಿದೆ. ಹೀಗೆ ಇತ್ತೀಚೆಗೆ ನೀಡಿರುವ ಸುರಕ್ಷತಾ ವೈಶಿಷ್ಟ್ಯವೇ ಆಟೊ ಡಿಲೀಟ್ ಪ್ರೈವೆಸಿ ಫೀಚರ್ (auto delete privacy feature). ಈ ಆಯ್ಕೆಯನ್ನು ಸಕ್ರಿಯಗೊಳಿಸಿದರೆ, ಗೂಗಲ್ ನಿಮ್ಮಿಂದ ಸಂಗ್ರಹಿಸಿದ ಕೆಲವು ದತ್ತಾಂಶಗಳನ್ನು ಸ್ವಯಂಚಾಲಿತವಾಗಿ ಡಿಲೀಟ್‌ ಮಾಡಲಿದೆ.

ಏನಿದು ಆಟೊ ಡಿಲೀಟ್ ಪ್ರೈವೆಸಿ?

ಏನಿದು ಆಟೊ ಡಿಲೀಟ್ ಪ್ರೈವೆಸಿ?

ಗೂಗಲ್ ನಿಮ್ಮಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಮೂರು ತಿಂಗಳಿಗೊಮ್ಮೆ ಅಥವಾ 18 ತಿಂಗಳಿಗೊಮ್ಮೆ ಡಿಲಿಟ್ ಮಾಡುವ ಆಯ್ಕೆ ಇದಾಗಿದೆ. ಇದರಲ್ಲಿ ಲೊಕೇಷನ್‌ ಮತ್ತು ಆಕ್ಟಿವಿಟಿಗಳನ್ನು ಸ್ವಯಂಚಾಲಿತವಾಗಿ ಅಳಿಸಿಹೋಗುವಂತೆ ಮಾಡಬಹುದಾಗಿದೆ. ಬಳಕೆದಾರರ ಖಾಸಗಿನತದ ರಕ್ಷಣೆಯೇ ನಮ್ಮ ಆದ್ಯತೆ. ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸುರಕ್ಷತಾ ಆಯ್ಕೆಗಳನ್ನು ನೀಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

ಆಟೊ ಡಿಲೀಟ್ ಪ್ರೈವೆಸಿ ಬಳಕೆ!

ಆಟೊ ಡಿಲೀಟ್ ಪ್ರೈವೆಸಿ ಬಳಕೆ!

ನೀವು ಈ ಆಟೊ ಡಿಲೀಟ್ ಪ್ರೈವೆಸಿ ಆಯ್ಕೆ ಬಳಸುವುದು ಬಹಳ ಸುಲಭವಾಗಿದೆ. Web & App activity-choose delete automatically ಆಯ್ಕೆಯಲ್ಲಿ ಒಂದನ್ನು ಕ್ಲಿಕ್‌ ಮಾಡಿ Next ಕೊಟ್ಟು confirm ಆಯ್ಕೆ ಒತ್ತಿದರೆ ಮೂರು ತಿಂಗಳಿಗಿಂತ ಹಿಂದಿನ ಚಟುವಟಿಕೆಗಳೆಲ್ಲವೂ ಡಿಲೀಟ್ ಆಗುತ್ತವೆ. kee for 3 months/18 months ಆಯ್ಕೆಗಳು ಮೂರು ತಿಂಗಳಿಗೊಮ್ಮೆ ಅಥವಾ 18 ತಿಂಗಳಿಗೊಮ್ಮೆ ಲೊಕೇಷನ್ ಮತ್ತು ಆಕ್ಟಿವಿಟಿಗಳನ್ನು ಸ್ವಯಂಚಾಲಿತವಾಗಿ ಡೇಟಾ ಡಿಲೀಟ್ ಆಗುವಂತೆ ಮಾಡುತ್ತವೆ.

ಲೋಕೇಷನ್ ಆಕ್ಟಿವಿಟಿ ಕಂಟ್ರೋಲ್!

ಲೋಕೇಷನ್ ಆಕ್ಟಿವಿಟಿ ಕಂಟ್ರೋಲ್!

ಸಾಮಾನ್ಯವಾಗಿ ಮೊಬೈಲ್‌ಗೆ ನಮ್ಮ ಖಾಸಗಿ ಜಿ-ಮೇಲ್‌ ಅನ್ನೇ ನೀಡುತ್ತೇವೆ. ಇಂತಹ ಸಂದರ್ಭದಲ್ಲಿ ಲೊಕೇಷನ್ ಹಿಸ್ಟರಿ ಆಯ್ಕೆ ಮೇಲೆ ಕ್ಲಿಕ್‌ ಮಾಡಿದಾಗ ಆ ಖಾತೆಯ ಸೆಟ್ಟಿಂಗ್ಸ್ ತೆರೆದುಕೊಳ್ಳುತ್ತದೆ. ಆಗ ಯಾವ ಖಾತೆಯಲ್ಲಿ ಬದಲಾವಣೆ ಮಾಡಬೇಕು ಎನ್ನುವುದನ್ನು ಸೂಚಿಸಬೇಕು.Settings-Location-Google Location History ಮೇಲೆ ಕ್ಲಿಕ್ ಮಾಡಿ. ನೀವು ಯಾವ ಖಾತೆ ಬಳಸಿ ಲಾಗಿನ್‌ ಆಗಿದ್ದೀರಿ ಎನ್ನುವುದು ಆಯ್ಕೆ ಮಾಡಿದ ಮೇಲೆ ಅಲ್ಲಿ Location History pause ಮಾಡಬಹುದು

ಐಫೋನ್‌ನಲ್ಲಿ ಹೀಗೆ ಮಾಡಿ

ಐಫೋನ್‌ನಲ್ಲಿ ಹೀಗೆ ಮಾಡಿ

ಐಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆದು ಪ್ರೈವೆಸಿಯನ್ನು ಆಯ್ಕೆ ಮಾಡಿಕೊಳ್ಳಿ. - Location Services-Never, Always, and While Using the App ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಆಪ್‌ಗಳನ್ನು ಬಳಸುವಾಗ ಮಾತ್ರ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ಏಕೆಂದರೆ, ಟ್ಯಾಕ್ಸಿ ಆಪ್‌ಗಳನ್ನು ಬಳಸುವಾಗ ಲೊಕೇಷನ್ ಅತ್ಯಗತ್ಯವಿರುತ್ತದೆ. ಒಂದು ವೇಳೆ ಲೊಕೇಷನ್ ಆಪ್‌ಗಳಿಗೆ ಅನುಮತಿ ನೀಡದಿದ್ದರೆ ನೀವು ಈ ಸೇವೆಗಳನ್ನು ಬಳಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿರಿ.

Best Mobiles in India

English summary
You can now auto-delete your location and web history on Google. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X