ಬಿಗ್ ಶಾಕ್ ಕೊಟ್ಟ ಎಲೋನ್ ಮಸ್ಕ್!..ಟ್ವಿಟರ್ ಬಳಕೆಗೆ ಇನ್ನು ಕಾಸು ನೀಡಬೇಕು?

|

ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಅವರು ಒಂದಿಲ್ಲೊಂದು ವಿಷಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಎಲೋನ್ ಮಸ್ಕ್ ಇತ್ತೀಚಿಗೆ ಮೈಕ್ರೋಬ್ಲಾಗ್ ತಾಣ ಟ್ವಿಟರ್ ಖರೀದಿಸಿದ ಸುದ್ದಿಯಲ್ಲಿದ್ರು, ಇದೀಗ ಎಲೋನ್ ಮಸ್ಕ್ ಅವರ ಟ್ವಿಟ್ ವೊಂದು ಬಳಕೆದಾರರಿಗೆ ಬಿಗ್ ಶಾಕ್ ಮೂಡಿಸಿದೆ. ಎಲೋನ್ ಮಸ್ಕ್ ಅವರ ಟ್ವಿಟ್ ನಲ್ಲಿ ಮುಂದಿನ ದಿನಗಳಲ್ಲಿ ಟ್ವಿಟರ್ ಅನ್ನು ಉಚಿತವಾಗಿ ಬಳಸುವುದಿಲ್ಲ. ಕೆಲವು ಬಳಕೆದಾರರು ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಿಗ್ ಶಾಕ್ ಕೊಟ್ಟ ಎಲೋನ್ ಮಸ್ಕ್!..ಟ್ವಿಟರ್ ಬಳಕೆಗೆ ಇನ್ನು ಕಾಸು ನೀಡಬೇಕು?

ಹೌದು, ಎಲೋನ್ ಮಸ್ಕ್ ಟ್ವಿಟರ್ ಇನ್ನು ಉಚಿತ ಆಗಿರುವುದಿಲ್ಲ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಬಳಕೆದಾರರಿಗೆ ಶುಲ್ಕ ವಿಧಿಸುವ ಮುನ್ಸೂಚನೆ ನೀಡಿದ್ದಾರೆ. 'ಸಾಮಾನ್ಯ ಬಳಕೆದಾರರಿಗೆ ಎಂದಿನಂತೆ ಉಚಿತವಾಗಿ ಟ್ವಿಟ್ಟರ್ ಬಳಕೆ ಮಾಡಲು ಅವಕಾಶ ಇದ್ದು, ಸರ್ಕಾರಿ ಹಾಗೂ ಉದ್ಯಮಗಳ ಖಾತೆಗೆ ಅಲ್ಪ ಪ್ರಮಾಣದ ಶುಲ್ಕ ವಿಧಿಸುವ ಪ್ರಸ್ತಾಪ ಮಾಡಿದ್ದಾರೆ.

ಶಾಕ್‌ ಕೊಟ್ಟ ಎಲೋನ್ ಮಸ್ಕ್ ಟ್ವಿಟ್
ಎಲೋನ್ ಮಸ್ಕ್ ಟ್ವೀಟ್‌ನಲ್ಲಿ, 'ಟ್ವಿಟರ್ ಯಾವಾಗಲೂ ಸಾಂದರ್ಭಿಕ ಬಳಕೆದಾರರಿಗೆ ಉಚಿತವಾಗಿರುತ್ತದೆ, ಆದರೆ ಇದು ವಾಣಿಜ್ಯ/ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ದುಬಾರಿಯಾಗಬಹುದು.' ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ಟ್ವಿಟರ್ ಇಂಕ್ ನಾಮಮಾತ್ರ ಶುಲ್ಕವನ್ನು ವಿಧಿಸಬಹುದು ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮಂಗಳವಾರ ಹೇಳಿದ್ದಾರೆ.

ಬಿಗ್ ಶಾಕ್ ಕೊಟ್ಟ ಎಲೋನ್ ಮಸ್ಕ್!..ಟ್ವಿಟರ್ ಬಳಕೆಗೆ ಇನ್ನು ಕಾಸು ನೀಡಬೇಕು?

ವರದಿಗಳ ಪ್ರಕಾರ, ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು 44 ಶತಕೋಟಿಗೆ ಖರೀದಿಸಿದ ನಂತರ, ಇದೀಗ ಮಹತ್ತರ ಬದಲಾವಣೆಗಳನ್ನು ಮಾಡುವ ಮನಸ್ಥಿತಿಯಲ್ಲಿದ್ದಾರೆ. ಸಿಇಒ ಪರಾಗ್ ಅಗರ್ವಾಲ್ ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ಕಂಪನಿಯಿಂದ ತೆಗೆದುಹಾಕಬಹುದು ಎಂದು ಹೇಳಲಾಗುತ್ತಿದೆ.

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಪ್ರತಿ ಷೇರಿಗೆ 54.20 ಡಾಲರ್​ನಂತೆ 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಖರೀದಿ ಮಾಡಿದ್ದಾರೆ. ಎಲಾನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಪಾಲು ಹೊಂದಿದ್ದರು. ನಂತರದಲ್ಲಿ ಪ್ರತಿ ಷೇರಿಗೆ 54.20 ಡಾಲರ್‌ (₹4149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದ್ದರು.

Best Mobiles in India

English summary
End of Free Twitter? Elon Musk Drops Major Hints For Commercial, Govt Users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X