ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಆಕರ್ಷಕ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳು!

|

ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಪ್ರೀಪೇಯ್ಡ್‌ ಸಿಮ್ ವ್ಯವಸ್ಥೆಯನ್ನು ಹೊಂದಲು ಬಯಸುತ್ತಾರೆ. ಆದರೆ ಇನ್ನು ಕೆಲವರು ತಡೆರಹಿತ ಸಂಪರ್ಕಕ್ಕಾಗಿ ಪೋಸ್ಟ್‌ಪೇಯ್ಡ್‌ ಮಾದರಿಯನ್ನು ಹೊಂದಲು ಇಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ಪೋಸ್ಟ್‌ಪೇಯ್ಡ್‌ ನಲ್ಲಿಯೂ ಪ್ರಸ್ತುತ ಹಲವು ಆಕರ್ಷಕ ಯೋಜನೆಗಳನ್ನು ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಟೆಲಿಕಾಂಗಳು ಪರಿಚಯಿಸಿವೆ.

ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್

ಹೌದು. ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಸಂಸ್ಥೆಗಳು ಭಿನ್ನ ಶ್ರೇಣಿ ಹಾಗೂ ಭಿನ್ನ ಪ್ರಯೋಜನೆಗಳ ಪೋಸ್ಟ್‌ಪೇಯ್ಡ್‌ ಯೋಜನೆ ಹೊಂದಿವೆ. ಗ್ರಾಹಕರನ್ನು ಉಳಿಸಿಕೊಳ್ಳುವ ಹಾಗೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿಯೂ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ನೀಡಿವೆ. ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿರುವ ಪೋಸ್ಟ್‌ಪೇಯ್ಡ್‌ ಯೋಜನೆಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತವೆ. ಜಿಯೋ, ಏರ್‌ಟೆಲ್‌ ಹಾಗೂ ವೊಡಾಫೋನ್ ಟೆಲಿಕಾಂಗಳ ಅಗ್ಗದ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಏರ್‌ಟೆಲ್‌ ಪೋಸ್ಟ್‌ಪೇಯ್ಡ್‌

ಏರ್‌ಟೆಲ್‌ ಪೋಸ್ಟ್‌ಪೇಯ್ಡ್‌

ಏರ್‌ಟೆಲ್‌ ತನ್ನ ಕಡಿಮೆ-ವೆಚ್ಚದ ಪೋಸ್ಟ್ ಪೇಯ್ಡ್ ಯೋಜನೆಯನ್ನು ಮಾಸಿಕ 499 ರೂಗಳಿಗೆ ನೀಡುತ್ತದೆ ಮತ್ತು ಇದು 75 ಜಿಬಿ ಡೇಟಾ ಹೊಂದಿದೆ. ಆರಂಭಿಕ 75 ಜಿಬಿ ಡೇಟಾ ಖಾಲಿಯಾದ ನಂತರ ಡೇಟಾ ರೋಲ್‌ಓವರ್‌ಗೆ ಒಂದು ಆಯ್ಕೆ ಇದೆ. ಯಾವುದೇ ನೆಟ್‌ವರ್ಕ್‌ಗೆ ನೀವು ಅನಿಯಮಿತ ಕರೆ ಪ್ರಯೋಜನವನ್ನು ಪಡೆಯುತ್ತೀರಿ. ಅದರೊಂದಿಗೆ, ಅಮೆಜಾನ್ ಪ್ರೈಮ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಒಂದು ವರ್ಷದ ಉಚಿತ ಚಂದಾದಾರಿಕೆ ಇದೆ. ಯೋಜನೆಯಲ್ಲಿ ಹ್ಯಾಂಡ್‌ಸೆಟ್ ರಕ್ಷಣೆಯೂ ಇದೆ. ಏರ್ಟೆಲ್ ತನ್ನ ZEE5 ಪ್ರೀಮಿಯಂ ಕೊಡುಗೆಯನ್ನು ಯೋಜನೆಯೊಂದಿಗೆ ತೆಗೆದುಹಾಕಿದೆ. ಹಾಗೆಯೇ ಈ ಯೋಜನೆಯೊಂದಿಗೆ ಏರ್‌ಟೆಲ್ ಧನ್ಯವಾದಗಳು ಕಾರ್ಯಕ್ರಮದ ಪ್ಲಾಟಿನಂ ಸದಸ್ಯತ್ವ ಸಹ ಲಭ್ಯ.

ಜಿಯೋ ಪೋಸ್ಟ್‌ಪೇಯ್ಡ್‌

ಜಿಯೋ ಪೋಸ್ಟ್‌ಪೇಯ್ಡ್‌

ಜಿಯೋ ತನ್ನ ಪೋಸ್ಟ್‌ಪೇಯ್ಡ್ ಯೋಜನೆಗಳ ವಿಭಾಗದಲ್ಲಿ ಕೇವಲ ಒಂದು ಯೋಜನೆಯನ್ನು ಮಾತ್ರ ನೀಡುತ್ತಿದೆ. ಇದು 199 ರೂ.ಗಳ ಬೆಲೆಯಲ್ಲಿದೆ. ಈ ಯೋಜನೆಯಲ್ಲಿ ಒಟ್ಟು 25 ಜಿಬಿ ಡೇಟಾವನ್ನು ಮಾತ್ರ ಪಡೆಯುತ್ತೀರಿ. ಆರಂಭಿಕ 25 ಜಿಬಿ ಡೇಟಾವನ್ನು ಖಾಲಿಯಾದ ನಂತರ, ಪ್ರತಿ ಹೆಚ್ಚುವರಿ ಜಿಬಿ ಡೇಟಾಗೆ, ನಿಮಗೆ 20 ರೂ. ವಿಧಿಸಲಾಗುತ್ತದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆ ಸೌಲಭ್ಯಇದೆ. ಅದರೊಂದಿಗೆ, ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನವಿದೆ. ಜಿಯೋದ ಎಲ್ಲಾ ಅಪ್ಲಿಕೇಶನ್‌ ಚಂದಾದಾರಿಕೆ ಲಭ್ಯ.

ವೊಡಾಫೋನ್ ಪೋಸ್ಟ್‌ಪೇಯ್ಡ್‌

ವೊಡಾಫೋನ್ ಪೋಸ್ಟ್‌ಪೇಯ್ಡ್‌

ವೊಡಾಫೋನ್ ಟೆಲಿಕಾಂ ಪೋಸ್ಟ್ ಪೇಯ್ಡ್ ಯೋಜನೆ 399ರೂ. ಆಗಿದೆ. ಈ ಯೋಜನೆಯೊಂದಿಗೆ, ಬಳಕೆದಾರರು ಆರಂಭದಲ್ಲಿ 200 ಜಿಬಿ ವರೆಗೆ ಡೇಟಾ ರೋಲ್‌ಓವರ್ ಸೌಲಭ್ಯದೊಂದಿಗೆ 40 ಜಿಬಿ ಡೇಟಾವನ್ನು ಪಡೆಯುತ್ತಾರೆ. ದಿನಕ್ಕೆ 100 ಎಸ್‌ಎಂಎಸ್ ಒಳಗೊಂಡಿರುವ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಇದೆ. ಯೋಜನೆಯ ಒಟಿಟಿ ಪ್ರಯೋಜನಗಳಿಗೆ ಬಂದರೆ, ನೀವು ಒಂದು ವರ್ಷಕ್ಕೆ 499 ರೂ ಮೌಲ್ಯದ ಉಚಿತ ವೊಡಾಫೋನ್ ಪ್ಲೇ ಚಂದಾದಾರಿಕೆಯನ್ನು ಪಡೆಯುತ್ತೀರಿ ಮತ್ತು ಅದರೊಂದಿಗೆ, 999 ರೂ.ಗಳ ಮೌಲ್ಯದ ಜೀ5 ಪ್ರೀಮಿಯಂ ಸಹ ಸಂಪೂರ್ಣವಾಗಿ ಉಚಿತವಾಗಿದೆ.

Best Mobiles in India

English summary
Low-cost postpaid plans from some of the jio, airtel and vodafone telcos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X