ಎಪ್ಸನ್‌ನಿಂದ ಆಂಡ್ರಾಯ್ಡ್‌ ಆಧಾರಿತ ಕನ್ನಡಕ ಬಿಡುಗಡೆ

Posted By: Staff
ಎಪ್ಸನ್‌ನಿಂದ ಆಂಡ್ರಾಯ್ಡ್‌ ಆಧಾರಿತ ಕನ್ನಡಕ ಬಿಡುಗಡೆ

 

ಮೊವಿರಿಯೋ ಬಿ.ಟಿ-100 ಹೆಸರಿನ ಆಂಡ್ರಾಯ್ಡ್‌ ಆಧಾರಿತ ಕನ್ನಡಕವನ್ನು ಎಪ್ಸನ್‌ ಸಂಸ್ಥೆ 42,000 ರೂ, ಬೆಲೆಗೆ ಬಿಡುಗಡೆ ಮಾಡಿದೆ. ಇದೊಂದು ಸಂಪೋರ್ಣ ವಿಭಿನ್ನ ರೀತಿಯ ಆಂಡ್ರಾಯ್ಡ್‌ ಆಧಾರಿತವಾದ ಉಪಕರಣವಾಗಿದೆ. ಈ ಕನ್ನಡಕ ಮಾನವನ ಕಣ್ಣುಗಳಿಗೆ 5 ಮೀಟರ್‌ ದೂರದಲ್ಲಿ 80 ಇಂಚಿನ ದರ್ಶಕ ಇರುವಂತೆ ತೋರಿಸುತ್ತದೆ. ಎಪ್ಸನ್‌ನ ಹೇಳುವಂತೆ ಈ ಕನ್ನಡಕವು ಚಿತ್ರಗಳನ್ನು ತೇಲಿತ್ತಿರುವ ರೀತಿಯಲ್ಲಿ ಭ್ರಮೆ ಸೃಷ್ಟಿಸುತ್ತದೆ.

ಎಪ್ಸನ್‌ ಸಿದ್ಧಪಡಿಸಿರುವ ಮೊವಿರಿಯೋ ಕನ್ನಡಕವು ಆಂಡ್ರಾಯ್ಡ್‌ 2.2 ಜೊತೆಗೆ LCD ತಂತ್ರಜ್ಞಾನ ಹೊಂದಿದೆ. ಇದೂ ಕೂಡ ಗೂಗಲ್‌ ಗ್ಲಾಸ್‌ನಂತೆಯೆ ಎಂದು ತಪ್ಪಾಗಿ ಭಾವಿಸ ಬೇಡಿ ಮೊವಿರಿಯೋ ಬಿ.ಟಿ-100 ಒಂದು ಉತ್ತಮ ಹಾಗೂ ವಿಶೇಷ ದರ್ಶಕವನ್ನು ಒಳಗೊಂಡಿರುವ ಆಕರ್ಷಕ ಸಾಧನವಾಗಿದೆ.

ಎಪ್ಸನ್‌ನ ಪ್ರಕಾರ ಈ ಕನ್ನಡಕವು ಆರು ಗಂಟೆಗಳ ಕಾಲ ಬ್ಯಾಟರಿ ಲೈಫ್‌ ನೀಡಬಲ್ಲದು, ಹಾಗೂ ಬಳಕೆದಾರರು ನೇರವಾಗಿ ಯೂಟ್ಯೂಬ್‌ ನಿಂದ ಕಂಟೆಂಟ್‌ಗಳನ್ನು ಪಡೆದುಕೊಳ್ಳಬಹುದು. ಅಲ್ಲದೆ ಮೈಕ್ರೋ SDHC ಕಾರ್ಡ್‌ನ ಸಹಾಯದಿಂದಾಗಿ 32GB ವರೆಗೂ ಮೆಮೊರಿ ವಿಸ್ತರಣೆ ಮಾಡಬಹುದಾಗಿದೆ. ಇದರೊಂದಿಗೆ ಡ್ಯುಬ್ಲಿ ಸರ್ರೋಂಡ್‌ ಸೌಂಡ್‌ ಹಾಗೂ ಟಚ್‌ ಹೊಂದಿರುವ ಟ್ರಾಕ್‌ ಪ್ಯಾಡ್‌ ಸೇರಿದಂತೆ 3D ಚಿತ್ರಗಳನ್ನು ಕೂಡ ವೀಕ್ಷಿಸ ಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot