ಗ್ರಾಹಕರೇ ಎಚ್ಚರ! ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣ ಕದಿಯಲಿದೆ ಈ ಮಾಲ್‌ವೇರ್‌!

|

ಪ್ರಸ್ತುತ ದಿನಗಳಲ್ಲಿ ಹ್ಯಾಕರ್ಸ್‌ಗಳ ದಾಳಿಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಟೆಕ್ನಾಲಜಿ ಅಪ್ಡೇಟ್‌ ಆದಂತೆ ಸೈಬರ್‌ ಹ್ಯಾಕರ್ಸ್‌ ಕೂಡ ಅಪ್ಡೇಟ್‌ ಆಗುತ್ತಿರೋದು ದೊಡ್ಡ ತಲೆನೋವಾಗಿದೆ. ಅದರಲ್ಲೂ ಹೊಸ ಟ್ರೋಜನ್‌ಗಳಿಗೆ ಸಂಬಂಧಿಸಿದ ಮಾಲ್‌ವೇರ್ ದಾಳಿಗಳು ಸಾಕಷ್ಟು ನಡೆಯುತ್ತಲೇ ಇವೆ. ಸದ್ಯ ಇದೀಗ 'ಎಸ್ಕೋಬಾರ್' ಎಂಬ ಹೆಸರಿನೊಂದಿಗೆ ಹೊಸ ಮಾಲ್‌ವೇರ್‌ ದಾಳಿಯಿಟ್ಟಿದೆ. ಈ 'ಎಸ್ಕೋಬಾರ್' ಮಾಲ್‌ವೇರ್ ಇದುವರೆಗೆ 18 ವಿವಿಧ ದೇಶಗಳಲ್ಲಿ 190 ಹಣಕಾಸು ಸಂಸ್ಥೆಗಳ ಗ್ರಾಹಕರಿಗೆ ವಂಚಿಸಿದೆ ಎನ್ನಲಾಗಿದೆ.

ಮಾಲ್‌ವೇರ್‌

ಹೌದು, ಮಾಲ್‌ವೇರ್‌ ದಾಳಿಗ ಬಗ್ಗೆ ಎಷ್ಟೆ ಎಚ್ಚರಿಕೆಯಿಂದ ಇದ್ದರೂ ಹೊಸ ಮಾಲ್‌ವೇರ್‌ಗಳ ದಾಳಿ ನಡೆಯುತ್ತಲೇ ಇದೆ. ಇದೀಗ ಎಸ್ಕೋಬಾರ್‌ ಮಾಲ್‌ವೇರ್‌ ಇಡೀ ಬ್ಯಾಂಕಿಂಗ್‌ ವಲಯವನ್ನು ನಡುಗುವಂತೆ ಮಾಡಿದೆ. ಇಲ್ಲಿಯ ತನಕ ಹದಿನೆಂಟಕ್ಕೂ ಹೆಚ್ಚು ದೇಶಗಳಲ್ಲಿ ಅನೇಕ ಬ್ಯಾಂಕ್‌ಗಳಿಗೆ ಈ ಮಾಲ್‌ವೇರ್‌ ಕನ್ನಹಾಕಿದೆ ಎನ್ನಲಾಗಿದೆ. ಈ ಮಾಲ್‌ವೇರ್‌ ಕನ್ನ ಹಾಕಿರುವ ದೇಶ ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಹಾಗಾದ್ರೆ ಎಸ್ಕೋಬಾರ್‌ ಮಾಲ್‌ವೇರ್‌ ಹೇಗೆ ನಿಮ್ಮ ಖಾತೆಗಳಿಗೆ ಕನ್ನ ಹಾಕಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಸ್ಕೋಬಾರ್‌

ಎಸ್ಕೋಬಾರ್‌ ಮಾಲ್‌ವೇರ್‌ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಮಾಲ್‌ವೇರ್ ಮೂಲಕ ಗೂಗಲ್‌ ಅಥೆಂಟಿಕೇಟರ್‌ ಮಲ್ಟಿ-ಫ್ಯಾಕ್ಟರ್ ದೃಢೀಕರಣ ಕೋಡ್‌ಗಳನ್ನು ಕದಿಯಬಹುದು. ಇದರಿಂದ ಯಾರಾದರೂ ಇಮೇಲ್ ಅಥವಾ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಿಗೆ ಲಾಗಿನ್ ಮಾಡಲು ಪ್ರಯತ್ನಿಸಿದಾಗ ಡಿವೈಸ್‌ಗಳಲ್ಲಿ ಕಳುಹಿಸಲಾಗುತ್ತದೆ. ಗೂಗಲ್‌ ಅಥೆಂಟಿಕೇಟರ್‌ ಮಲ್ಟಿ-ಫ್ಯಾಕ್ಟರ್‌ ದೃಢೀಕರಣ ಕೋಡ್‌ಗಳಿಗೆ ಪ್ರವೇಶವನ್ನು ಪಡೆದುಕೊಂಡರೆ ಬಳಕೆದಾರರ ವೈಯಕ್ತಿಕ ಮತ್ತು ಹಣಕಾಸಿನ ವಿವರಗಳಿಗೆ ಸುಲಭವಾಗಿ ಪ್ರವೇಶವನ್ನು ಪಡೆಯಲು ಹ್ಯಾಕರ್‌ಗಳಿಗೆ ಅವಕಾಶ ಸಿಗಲಿದೆ.

ಎಸ್ಕೋಬಾರ್‌

ಇನ್ನು ಎಸ್ಕೋಬಾರ್‌ ಮಾಲ್‌ವೇರ್‌ ದಾಳಿಯಿಟ್ಟರೆ ಎಸ್‌ಎಂಎಸ್ ಕಾಲ್‌ ಲಾಗ್ಸ್‌, ಕೀ ಲಾಗ್ಸ್‌, ನೋಟಿಫಿಕೇಶನ್‌ ಮತ್ತು ಗೂಗಲ್ ಅಥೆಂಟಿಕೇಟರ್ ಕೋಡ್‌ಗಳು ಸೇರಿದಂತೆ ಮಾಲ್‌ವೇರ್ ಸಂಗ್ರಹಿಸುವ ಎಲ್ಲವನ್ನೂ C2 ಸರ್ವರ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ನಿಮ್ಮ ಬ್ಯಾಂಕಿಂಗ್‌ ವಿವರಗಳು ಸೇರಿದಂತೆ ನಿಮ್ಮ ವೈಯುಕ್ತಿಕ ಖಾತೆಗಳ ಮಾಹಿತಿ ಹ್ಯಾಕರ್‌ಗಳ ಪಾಲಾಗಲಿದೆ ಎಂದು ವರದಿಯಲ್ಲಿ ಹೈಲೈಟ್ ಮಾಡಲಾಗಿದೆ.

ಮಾಲ್‌ವೇರ್‌

ಬ್ಯಾಂಕಿಂಗ್ ವಲಯದ ಮೇಳೆ ಮಾಲ್‌ವೇರ್‌ ದಾಳಿ ಇದೇ ಮೊದಲೇನಲ್ಲ. 2021 ರಲ್ಲಿಯೂ ಕೂಡ ಇದೇ ರೀತಿಯ ಸಾಮರ್ಥ್ಯಗಳನ್ನು ಹೊಂದಿರುವ ಅಬೆರೆಬಾಟ್ ಆಂಡ್ರಾಯ್ಡ್ ದೋಷವು ನೂರಾರು ಆಂಡ್ರಾಯ್ಡ್ ಬಳಕೆದಾರರನ್ನು ಗುರಿಯಾಗಿಸಿ ಕೊಂಡಿತ್ತು. 'ಎಸ್ಕೋಬಾರ್' ಕೂಡ ಹೆಚ್ಚು ಕಡಿಮೆ ಅಬೆರೆಬಾಟ್ ಅನ್ನು ಹೋಲುತ್ತದೆ ಆದರೆ ಹೆಚ್ಚು ಸುಧಾರಿತ ಸಾಮರ್ಥ್ಯಗಳೊಂದಿಗೆ ಬರುತ್ತದೆ. ಸದ್ಯ 'ಎಸ್ಕೋಬಾರ್' ಟ್ರೋಜನ್ ಸೋಂಕಿತ ಡಿವೈಸ್‌ ಕಂಪ್ಲೀಟ್‌ ಕಂಟ್ರೋಲ್‌ ನಿಯಂತ್ರಣವನ್ನು ತೆಗೆದುಕೊಳ್ಳುತ್ತದೆ, ಅಲ್ಲದೆ ಫೋಟೋಗಳನ್ನು ಕೂಡ ಕ್ಲಿಕ್ ಮಾಡುತ್ತದೆ ಹಾಗೆಯೇ ಆಡಿಯೊವನ್ನು ರೆಕಾರ್ಡ್ ಮಾಡುತ್ತದೆ.

ಎಸ್ಕೋಬಾರ್‌

ಇದಲ್ಲದೆ ಇತರ Android ಮಾಲ್‌ವೇರ್‌ಗಳಿಗಿಂತ ಇದು ಭಿನ್ನವಾಗಿದ್ದು, 'ಎಸ್ಕೋಬಾರ್‌' ವೆಬ್‌ನಲ್ಲಿ ಸ್ಥಾಪಿಸಲಾದ APK ಫೈಲ್‌ಗಳ ಮೂಲಕ ಬಳಕೆದಾರರನ್ನು ಗುರಿಯಾಗಿಸುತ್ತದೆ. ಇತರ ಮಾಲ್‌ವೇರ್‌ಗಳು ಸಾಮಾನ್ಯವಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಎಸ್ಕೋಬಾರ್‌ ಆನ್‌ಲೈನ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳೊಂದಿಗೆ ಬಳಕೆದಾರರ ಸಂವಹನಗಳನ್ನು ಹೈಜಾಕ್ ಮಾಡಲು ಇದು ಲಾಗಿನ್ ಫಾರ್ಮ್‌ಗಳನ್ನು ಅತಿಕ್ರಮಿಸುತ್ತದೆ ಎನ್ನಲಾಗಿದೆ.

ಆಂಡ್ರಾಯ್ಡ್‌ ಮಾಲ್‌ವೇರ್‌ನಿಂದ ರಕ್ಷಣೆ ಪಡೆಯುವುದು ಹೇಗೆ?

ಆಂಡ್ರಾಯ್ಡ್‌ ಮಾಲ್‌ವೇರ್‌ನಿಂದ ರಕ್ಷಣೆ ಪಡೆಯುವುದು ಹೇಗೆ?

* ಆಂಡ್ರಾಯ್ಡ್ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ ಬಿಟ್ಟು ಹೊರಗಡೆ ಯಾವುದೇ APK ಫೈಲ್‌ಗಳನ್ನು ಇನ್‌ಸ್ಟಾಲ್‌ ಮಾಡುವುದಕ್ಕೆ ಹೋಗಬಾರದು.
* ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಪ್ರೊಟೆಕ್ಟ್ ಆಯ್ಕೆಯನ್ನು ಸಕ್ರಿಯಗೊಳಿಸಬೇಕು.
* ಬಳಕೆದಾರರು ಯಾವಾಗಲೂ ನಿರ್ದಿಷ್ಟ ಅಪ್ಲಿಕೇಶನ್ ಕೇಳುವ ಸಾಮಾನ್ಯ ಅನುಮತಿಗಳನ್ನು ಪರಿಶೀಲಿಸಬೇಕು.
* ಸಾಧನದಲ್ಲಿ ಅವುಗಳನ್ನು ಸ್ಥಾಪಿಸುವ ಮೊದಲು ಹೆಸರು, ವಿವರಣೆ ಮತ್ತು ಹೆಚ್ಚಿನ ಫೈಲ್‌ಗಳು/ಅಪ್ಲಿಕೇಶನ್‌ಗಳಂತಹ ವಿವರಗಳನ್ನು ಯಾವಾಗಲೂ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.

Best Mobiles in India

Read more about:
English summary
Escobar Android Malware Trojan Apk Can Steal Your Personal Information From Your Android Smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X