ಆಂಡ್ರಾಯ್ಡ್ ಬಳಕೆದಾರರೇ ಜಾಕ್ ಪ್ಯಾಟ್ ಹೊಡೆಯುವವರು!

By Shwetha
|

ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಬಳಸಿಕೊಂಡು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಬಹುದಾಗಿದೆ. ಕಸ್ಟಮ್ ರೋಮ್‌ನಿಂದ ಹಿಡಿದು ಲಾಂಚರ್ಸ್, ಅಪ್ಲಿಕೇಶನ್, ಎಲ್‌ಇಡಿ ನೋಟಿಫಿಕೇಶನ್, ಗೆಸ್ಚರ್ ಕಂಟ್ರೋಲ್ಸ್, ಐಕಾನ್ ಪ್ಯಾಕ್ಸ್ ಮತ್ತು ಟ್ವೀಕ್ಸ್ ಹೀಗೆ ಆಂಡ್ರಾಯ್ಡ್ ಬಳಸುವವರು ನೀವಾಗಿದ್ದೀರಿ ಎಂದಾದಲ್ಲಿ ಸಂತಸವೇ ನಿಮ್ಮ ಬಾಳಿನಲ್ಲಿ ಕೂಡಿರುತ್ತದೆ. ಹಾಗಿದ್ದರೆ ಆಂಡ್ರಾಯ್ಡ್ ಬಳಕೆದಾರರು ಪ್ರಯತ್ನಿಸಬಹುದಾದ ಸಂಗತಿಗಳನ್ನು ಇಂದಿಲ್ಲಿ ನಾವು ನೀಡುತ್ತಿದ್ದೇವೆ.

#1

#1

ಕ್ರೋಮ್‌ > ಸೆಟ್ಟಿಂಗ್ಸ್ > ಡೇಟಾ ಸೇವರ್ ಮತ್ತು ಅದನ್ನು ಆನ್ ಮಾಡುವ ಮೂಲಕ ಕ್ರೋಮ್‌ಗೆ ನಿಮ್ಮ ಇಂಟರ್ನೆಟ್ ಹಣ ಉಳಿಸಲು ಹೇಳಬಹುದು.

#2

#2

ಆಂಡ್ರಾಯ್ಡ್ 6.0 ಮಾರ್ಶ್‌ಮಲ್ಲೊನಲ್ಲಿ ಗೂಗಲ್ ನೌ ಆನ್ ಟ್ಯಾಪ್ ಅನ್ನು ಪ್ರಸ್ತುತಪಡಿಸಲಾಗಿದೆ. ಇದರಿಂದಾಗಿ ನಿಮಗೆ ಬೇಕಾಗುವ ವಿಷಯಕ್ಕಾಗಿ ಹಸ್ತಚಾಲಿತವಾಗಿ ನೀವು ಹುಡುಕಾಡಬೇಕೆಂದೇನಿಲ್ಲ. ಇದನ್ನು ಚಾಲನೆ ಮಾಡಲು ಆಂಡ್ರಾಯ್ಡ್ ಮಾರ್ಶ್‌ಮಲ್ಲೊ ಇದ್ದರೆ ಸಾಕು. ಸೆಟ್ಟಿಂಗ್ಸ್ > ಗೂಗಲ್ > ಸರ್ಚ್ ಏಂಡ್ ನೌ > ವಾಯ್ಸ್ ಮತ್ತು ಇದನ್ನು ಆಫ್ ಅಥವಾ ಆನ್ ಮಾಡಬಹುದು.

#3

#3

ನೀವು ಯಾವುದೇ ಆಂಡ್ರಾಯ್ಡ್ ಫೋನ್ ಅನ್ನು ಹೊಂದಿರಿ ನಿಮಗಿಲ್ಲಿ ಬ್ಯಾಟರಿ ಜೀವಿತವನ್ನು ಸುಧಾರಿಬಹುದಾಗಿದೆ. ನೀವು ಇದಕ್ಕಾಗಿ 'ಅಮಬಿಯೆಂಟ್ ಡಿಸ್‌ಪ್ಲೇ' ಅಥವಾ ಅಡಾಪ್ಟೀವ್ ಬ್ರೈಟ್‌ನೆಸ್' ಅನ್ನು ಆಫ್ ಮಾಡಬೇಕು. ಪ್ರಸ್ತುತ ಲೈಟಿಂಗ್ ಕಂಡೀಶನ್ ಅನ್ನು ಆಧರಿಸಿ ಈ ಸೆಟ್ಟಿಂಗ್ ಬದಲಾವಣೆಗಳು ಮತ್ತು ಡಿಸ್‌ಪ್ಲೇ ಬ್ರೈಟ್‌ನೆಸ್ ಇರುತ್ತದೆ.

#4

#4

ಆಂಡ್ರಾಯ್ಡ್ ಮಾರ್ಶ್ ಮಲ್ಲೊನಲ್ಲಿ ಅಪ್ಲಿಕೇಶನ್ ಅನುಮತಿಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಮೈಕ್ರೋಫೋನ್ ಪ್ರವೇಶಿಸಲು ಅಪ್ಲಿಕೇಶನ್ ಪ್ರವೇಶವನ್ನು ವಿನಂತಿಸುತ್ತಿದೆ ಎಂದಾದಲ್ಲಿ ಹೀಗೆ ಮಾಡಲು ನಿಮ್ಮನ್ನು ಅದು ಕೇಳುತ್ತದೆ, ನೀವು ಅಪ್ಲಿಕೇಶನ್ ಲಾಂಚ್ ಮಾಡಿದಾಗ ಮಾತ್ರವೇ ಇದರ ಪ್ರವೇಶ ನಿಮಗೆ ದೊರೆಯುತ್ತದೆ.

#5

#5

ವರ್ಚುವಲ್ ಪರ್ಸನಲ್ ಅಸಿಸ್ಟೆಂಟ್‌ನಂತೆ ಗೂಗಲ್ ನೌ ವರ್ತಿಸುತ್ತದೆ, ಇದರಿಂದ ಮಾಹಿತಿಯನ್ನು ನಿಮಗೆ ಹೆಚ್ಚು ಸುಲಭವಾಗಿ ತ್ವರಿತವಾಗಿ ಬಳಸಬಹುದು. ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ನೋಡಿದಾಗ ಗೂಗಲ್ ನೌ ನಿಮ್ಮ ಅಪ್ಲಿಕೇಶನ್‌ನೊಂದಿಗೆ ಇಂಟರಾಕ್ಟ್ ಮಾಡುತ್ತದೆ, ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತದೆ, ರಿಮೈಂಡರ್ ಹೊಂದಿಸುತ್ತದೆ ಅಂತೆಯೇ ಇನ್ನಷ್ಟು ಬುದ್ಧಿವಂತ ಉಪಾಯಗಳನ್ನು ಇದು ಮಾಡುತ್ತದೆ.

#6

#6

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಪ್ರತೀ ಏಕೈಕ ಆಂಡ್ರಾಯ್ಡ್ ಫೋನ್‌ಗೆ ಪೂರ್ವ ಸಕ್ರಿಯವಾಗಿರುವುದಿಲ್ಲ. ಈ ಟೂಲ್ ನಿಜಕ್ಕೂ ಅತ್ಯದ್ಭುತವಾಗಿದ್ದು ನಿಮ್ಮ ಕಳೆದು ಹೋದ ಫೋನ್ ಅನ್ನು ಇದು ಹುಡುಕಿ ಕೊಡುತ್ತದೆ, ರಿಮೋಟ್ಲಿ ಅದನ್ನು ಲಾಕ್ ಮಾಡುತ್ತದೆ.

#7

#7

ಪುಶ್ ಬುಲ್ಲೆಟ್ ಹೆಚ್ಚು ವಿಭಿನ್ನವಾಗಿದ್ದು ಇದನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬಹುದಾಗಿದೆ. ನಿಮ್ಮ ಫೋನ್‌ನಿಂದ ನಿಮ್ಮ ಟ್ಯಾಬ್ಲೆಟ್‌ಗೆ, ಪಿಸಿಯಿಂದ ಫೋನ್‌ಗೆ ಲಿಂಕ್‌ಗಳನ್ನು ಪುಶ್ ಮಾಡಲು ಇದು ಸಹಕಾರಿಯಾಗಿದೆ.

#8

#8

ಎನ್‌ಎಫ್‌ಸಿ ಎಂದರೇನು ಎಂಬುದೇ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಒಂದೇ ಸ್ಪರ್ಶದಿಂದ ನಿಮ್ಮ ಫೋನ್‌ಗೆ ನಿಮ್ಮ ಬ್ಲ್ಯೂಟೂತ್ ಹೆಡ್‌ಫೋನ್‌ಗಳನ್ನು ಜೋಡಿಸಬಹುದಾಗಿದೆ. ನಿಮ್ಮೆಲ್ಲಾ ಹಳೆಯ ಫೋನ್‌ನಲ್ಲಿರುವ ಮಾಹಿತಿಗಳನ್ನು ಹೊಸ ಫೋನ್‌ಗೆ ವರ್ಗಾಯಿಸಬಹುದಾಗಿದೆ.

#9

#9

ಲಾಕ್ ಸ್ಕ್ರೀನ್ ಸೆಕ್ಯುರಿಟಿಯಿಂದ ನಿಮ್ಮ ಫೋಣ್‌ಗೆ ರಕ್ಷಾ ಕವಚವನ್ನು ಒದಗಿಸಬಹುದು. ಇದರಿಂದ ಫೋನ್ ಕಳೆದು ಹೋದ ಸಂದರ್ಭದಲ್ಲಿ ಕೂಡ ಯಾರಿಗೂ ಇದನ್ನು ಪ್ರವೇಶಿಸಲಾಗುವುದಿಲ್ಲ. ಸೆಟ್ಟಿಂಗ್ಸ್ > ಸೆಕ್ಯುರಿಟಿ > ಸ್ಕ್ರೀನ್ ಲಾಕ್ ಹೀಗೆ ವಿಧಾನಗಳನ್ನು ಅನುಸರಿಸಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಂಡ್ರಾಯ್ಡ್‌ ಮೊಬೈಲ್‌ಗೆ 'ರೀಸೈಕಲ್‌ ಬಿನ್' ಫೀಚರ್‌ ಪಡೆಯುವುದು ಹೇಗೆ? </a><br /><a href=ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?
ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ? " title="ಆಂಡ್ರಾಯ್ಡ್‌ ಮೊಬೈಲ್‌ಗೆ 'ರೀಸೈಕಲ್‌ ಬಿನ್' ಫೀಚರ್‌ ಪಡೆಯುವುದು ಹೇಗೆ?
ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?
ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ? " />ಆಂಡ್ರಾಯ್ಡ್‌ ಮೊಬೈಲ್‌ಗೆ 'ರೀಸೈಕಲ್‌ ಬಿನ್' ಫೀಚರ್‌ ಪಡೆಯುವುದು ಹೇಗೆ?
ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?
ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
There is plenty to keep you happy for a while. Here are nine things every Android owner should try.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X