Subscribe to Gizbot

ಕುತೂಹಲಕಾರಿಯಾಗಿರುವ ಇಂಟರ್ನೆಟ್ ಶಾರ್ಟ್ ಫಾರ್ಮ್ಸ್

Posted By: Shwetha PS

ಆಧುನಿಕ ತಂತ್ರಜ್ಞಾನವು ನಾವು ತಿಳಿಯದೇ ಇರುವ ಎಷ್ಟೋ ಸಂಗತಿಗಳನ್ನು ಒಳಗೊಂಡಿದ್ದು ನಮ್ಮ ಜೀವನದಲ್ಲಿ ನಾವು ಅವುಗಳ ಮಹತ್ವವನ್ನು ಅರಿತುಕೊಳ್ಳದೆಯೇ ಅವುಗಳನ್ನು ಬಳಸುತ್ತಿದ್ದೇವೆ.

ಕುತೂಹಲಕಾರಿಯಾಗಿರುವ ಇಂಟರ್ನೆಟ್ ಶಾರ್ಟ್ ಫಾರ್ಮ್ಸ್

ಕೆಲವೊಂದು ಕೋಡ್‌ಗಳು, ವಿಸ್ತರಣೆಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಅವುಗಳ ವಿಶೇಷತೆಯನ್ನು ಇಂದಿಲ್ಲಿ ತಿಳಿದುಕೊಳ್ಳಲಿದ್ದೇವೆ. ಇಂಟರ್ನೆಟ್‌ನಲ್ಲಿ ಕಂಡುಬರುವ ಅತಿ ವಿಶೇಷ ಅಂಶಗಳು ಇವುಗಳಾಗಿದ್ದು ಅವುಗಳ ಮಹತ್ವ ಹೀಗಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಎಸ್‌ಪಿ:

ಐಎಸ್‌ಪಿ:

ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ ಎಂಬುದು ಇದರ ವಿಸ್ತರಣಾ ರೂಪವಾಗಿದೆ. ಇಂಟರ್ನೆಟ್ ಸೌಲಭ್ಯಕ್ಕಾಗಿ ಇದು ಬೇಕು. ಇದೊಂದು ಸಂಸ್ಥೆಯಾಗಿದ್ದು ತಿಂಗಳ ಕಾಲ ಉಚಿತವಾಗಿ ಇಂಟರ್ನೆಟ್ ಅನ್ನು ನಿಮಗೆ ಒದಗಿಸುತ್ತದೆ.

ಲ್ಯಾನ್:

ಲ್ಯಾನ್:

ಎಲ್‌ಎಎನ್ ಅಥವಾ ಲೋಕಲ್ ಏರಿಯಾ ನೆಟ್‌ವರ್ಕ್ ಇದು ಕಂಪ್ಯೂಟರ್‌ಗೆ ಸೀಮಿತ ಪ್ರದೇಶಗಳಿಗೆ ಅಂದರೆ ಶಾಲೆ, ಕಚೇರಿ ಮನೆಗಳಿಗೆ ಇಂಟರ್ನೆಟ್ ವ್ಯವಸ್ಥೆಯನ್ನು ಒದಗಿಸುತ್ತದೆ.

ವ್ಯಾನ್:

ವ್ಯಾನ್:

ಡಬ್ಲ್ಯೂಎಎನ್ ಅಥವಾ ವೈಡ್ ಏರಿಯಾ ನೆಟ್‌ವರ್ಕ್ ಕಂಪ್ಯೂಟರ್ ನೆಟ್‌ವರ್ಕ್ ಆಗಿದ್ದು ದೊಡ್ಡ ಪ್ರದೇಶಗಳಾದ ನಗರ, ದೇಶಗಳು ಮತ್ತು ರಾಜ್ಯಗಳಿಗೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ.

ಐಪಿ ವಿಳಾಸ:

ಐಪಿ ವಿಳಾಸ:

ಪ್ರತಿ ಡಿವೈಸ್‌ಗಳಾದ ಮೊಬೈಲ್, ಕಂಪ್ಯೂಟರ್ ಇಂಟರ್ನೆಟ್‌ಗೆ ಸಂಪರ್ಕಿಸುವಾಗ ಇಂಟರ್ನೆಟ್ ಪ್ರೊಟೊಕಾಲ್ ವಿಳಾಸವನ್ನು ಬಳಸುತ್ತದೆ. ಟ್ರಾಕಿಂಗ್ ಉದ್ದೇಶಕ್ಕಾಗಿ ಈ ವಿಳಾಸ ಬಳಕೆಯಾಗುತ್ತದೆ.

21 ವರ್ಷದ ಈ ಹುಡುಗನಿಗಾಗಿ ಕಿತ್ತಾಡುತ್ತಿರುವ ಗೂಗಲ್ -ಫೇಸ್‌ಬುಕ್..!

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಐಪಿವಿ4 ಮತ್ತು ಐಪಿವಿ6:

ಐಪಿವಿ4 ಮತ್ತು ಐಪಿವಿ6:

ಐಪಿವಿ4 ಇಂಟರ್ನೆಟ್ ಪ್ರೊಟೊಕಾಲ್ ಆವೃತ್ತಿ 4 ಆಗಿದ್ದು, ಐಪಿವಿ6 ಆರನೇಯ ಆವೃತ್ತಿಯಾಗಿದೆ. ಮತ್ತು 4 ರ ನಂತರದ ಆವೃತ್ತಿಯಾಗಿದೆ. ಐಪಿವಿ4 ಗಾತ್ರ 32 ಬಿಟ್ಸ್ ಆಗಿದ್ದು, ಐಪಿವಿ6 128 ಬಿಟ್ಸ್ ಆಗಿದೆ.

ಯುಆರ್‌ಎಲ್:

ಯುಆರ್‌ಎಲ್:

ಯೂನಿಫಾರ್ಮ್ ರಿಸೋರ್ಸ್ ಲೊಕೇಟ್ ಅಥವಾ ಯುಆರ್‌ಎಲ್ ಇಂಟರ್ನೆಟ್ ಪೇಜ್ ಮತ್ತು ಫೈಲ್‌ಗಳ ವಿಳಾಸವಾಗಿದೆ.

ರೂಟರ್:

ರೂಟರ್:

ಇದೊಂದು ಡಿವೈಸ್ ಆಗಿದ್ದು ಇದು ಟ್ರಾಫಿಕ್ ಪೊಲೀಸ್‌ನಂತೆ ನಿಮ್ಮ ಐಸ್‌ಪಿಯಿಂದ ನಿಮ್ಮ ಮನೆಗೆ ಸಿಗ್ನಲ್‌ಗಳ ಆಗಮನವನ್ನು ನಿಯಂತ್ರಿಸುತ್ತದೆ. ನಮ್ಮ ಸಿಸ್ಟಮ್ ಅನ್ನು ಹ್ಯಾಕರ್ ಮತ್ತು ಡೈರಕ್ಟರ್‌ಗಳಿಂದ ರೂಟರ್ ಕಾಪಾಡುತ್ತದೆ.

ಎಚ್‌ಟಿಟಿಪಿ ಮತ್ತು ಎಚ್‌ಟಿಟಿಪಿಎಸ್:

ಎಚ್‌ಟಿಟಿಪಿ ಮತ್ತು ಎಚ್‌ಟಿಟಿಪಿಎಸ್:

ಎಚ್‌ಟಿಟಿಪಿ 'ಹೈಪರ್ ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೊಟೊಕಾಲ್' ಎಂದಾಗಿದೆ. ವೆಬ್ ಪುಟಗಳ ಡೇಟಾ ಸಂವಹನ ಪ್ರಮಾಣಿತವಾಗಿದೆ. ಎಚ್‌ಟಿಟಿಪಿಎಸ್ ಎಂಬುದು 'ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೊಟೊಕಾಲ್ ಸೆಕ್ಯೂರ್ ಎಂದಾಗಿದೆ'. ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಪಾಸ್‌ವರ್ಡ್‌ಗಳಿಗೆ ಇದು ಸಂರಕ್ಷಣೆಯನ್ನು ನೀಡುವ ಕವಚವಾಗಿದೆ.

ಎನ್‌ಎಟಿ:

ಎನ್‌ಎಟಿ:

ನೆಟ್‌ವರ್ಕ್ ಅಡ್ರೆಸ್ ಟ್ರಾನ್ಸ್‌ಲೇಶನ್ ಎಂಬುದು ಇವರ ವಿಸ್ತ್ರತ ರೂಪವಾಗಿದೆ. ರೂಟಿಂಗ್ ಸರ್ವರ್‌ನಿಂದ ಸಂಬಂಧಿತ ಡಿವೈಸ್‌ಗಳಿಗೆ ಬರುವ ಟ್ರಾನ್ಸಲೇಟ್ ರಿಕ್ವೆಸ್ಟ್‌ಗಳು ಇದಾಗಿದೆ.

ವಿಪಿಎನ್:

ವಿಪಿಎನ್:

ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಪ್ರತ್ಯೇಕ ಲ್ಯಾನ್‌ ಅನ್ನು ಇಂಟರ್ನೆಟ್ ನಿರ್ವಹಣೆ ಗೌಪ್ಯತೆಯಿಂದ ಸಂಪರ್ಕಪಡಿಸಲು ಸಹಾಯ ಮಾಡುತ್ತದೆ. ಭದ್ರತಾ ಅಂಶಗಳಿಗಾಗಿ ಸ್ಥಳೀಯ ನೆಟ್‌ವರ್ಕ್‌ನಲ್ಲಿದ್ದಾಗ ರಿಮೋಟ್ ಸಿಸ್ಟಮ್‌ಗಳನ್ನು ಸಂಪರ್ಕಿಸಲು ಇದು ನೆರವನ್ನೀಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Are you new to the Internet and feels like sometimes you can’t understand what other people are talking about? Check out the important Internet jargons you should know before jumping into the vast Internet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot