Home
ಸುದ್ದಿಜಾಲ

ಲಾಲಿಪಪ್‌ಗಿಂತಲೂ ಬಲು ಫಾಸ್ಟ್ ಈ ಓಎಸ್

By Shwetha

ಆಂಡ್ರಾಯ್ಡ್ ಲಾಲಿಪಪ್ ಎಂಬ ಪ್ರಸ್ತುತ ಆವೃತ್ತಿಯನ್ನು ಮಾರುಕಟ್ಟೆಗೆ ತಂದು ಒಂದು ವರ್ಷ ಆಗುತ್ತಾ ಬಂದಿದ್ದು ಇನ್ನು ಮುಂದಿನ ಆವೃತ್ತಿ ಯಾವುದಾಗಿರಬಹುದು ಎಂಬುದನ್ನು ಎದುರು ನೋಡುವ ಸಮಯ ಒದಗಿಬಂದಿದೆ. ಮುಂದಿನ ವಾರ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್ ಅನ್ನು ಗೂಗಲ್ ಆಯೋಜಿಸುತ್ತಿದ್ದು, ಆಂಡ್ರಾಯ್ಡ್‌ನ ಮುಂದಿನ ಆವೃತ್ತಿಯನ್ನು ಕುರಿತು ಮಾಹಿತಿಗಳು ನಮಗಿಲ್ಲಿ ದೊರೆಯಬಹುದು.

ಓದಿರಿ: ನಿಮ್ಮ ಆಂಡ್ರಾಯ್ಡ್ ಫೋನ್‌ನ ಬಲಾಢ್ಯ ಅಂಗರಕ್ಷಕರು

ಇಂದಿನ ಲೇಖನದಲ್ಲಿ ಈ ಆವೃತ್ತಿ ಯಾವುದಾಗಿರಬಹುದು ಎಂಬುದನ್ನು ಕುರಿತು ನಾವು ಕೆಲವೊಂದು ಅಂಶಗಳನ್ನು ನಿಮ್ಮ ಮುಂದೆ ಇರಿಸಲಿದ್ದೇವೆ.

ಆಂಡ್ರಾಯ್ಡ್ ಎಮ್ ಆಗಿರಬಹುದು

ಆಂಡ್ರಾಯ್ಡ್ ಎಮ್ ಆಗಿರಬಹುದು

ಗೂಗಲ್ ತನ್ನ ಓಎಸ್‌ಗಳಿಗೆ ಆಲ್ಫಾಬೆಟ್ ಟ್ರೆಂಡ್‌ನಂತೆ ಹೆಸರನ್ನೀಯುವುದು ನಡೆದುಕೊಂಡು ಬಂದಿರುವ ಸಂಪ್ರದಾಯ ಉದಾಹರಣೆಗೆ ಆಂಡ್ರಾಯ್ಡ್ 4.0 ಅನ್ನು ಐಸ್ ಕ್ರೀಮ್ ಸ್ಯಾಂಡ್ ವಿಚ್ ಎಂದು ಕರೆದರೆ, 4.2 ಮತ್ತು 4.3 ಅನ್ನು ಜೆಲ್ಲಿಬೀನ್ ಎಂಬ ಹೆಸರಿನಿಂದ ಕರೆದಿದೆ. ಇದನ್ನು ಆಧರಿಸಿಕೊಂಡೇ ಮುಂದಿನ ಆವೃತ್ತಿಯನ್ನು ಎಮ್‌ನಿಂದ ಆರಂಭವಾಗುವ ಹೆಸರಿನಿಂದ ಕೂಗಬಹುದು ಎಂಬುದು ನಮ್ಮ ಲೆಕ್ಕಾಚಾರವಾಗಿದೆ.

 ಅಪ್ಲಿಕೇಶನ್ ಪ್ರವೇಶಿಸಲು ಪಾಸ್‌ವರ್ಡ್ ಬೇಕಾಗಿಲ್ಲ

ಅಪ್ಲಿಕೇಶನ್ ಪ್ರವೇಶಿಸಲು ಪಾಸ್‌ವರ್ಡ್ ಬೇಕಾಗಿಲ್ಲ

ನಿಮ್ಮ ಬೆರಳಚ್ಚಿನ ಸಹಾಯದಿಂದ ಪಾಸ್‌ವರ್ಡ್ ಬೇಡದೆಯೇ ಕೆಲವೊಂದು ಅಪ್ಲಿಕೇಶನ್‌ಗಳನ್ನು ನಿಮಗೆ ಪ್ರವೇಶಿಸಿಬಹುದಾಗಿದೆ. ತನ್ನ ಈವೆಂಟ್‌ನಲ್ಲಿ ಗೂಗಲ್ ಈ ಹೊಸ ಫೀಚರ್ ಅನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿದೆ.

 ಸ್ಮಾರ್ಟ್ ಹೋಮ್ ಫೀಚರ್ಸ್

ಸ್ಮಾರ್ಟ್ ಹೋಮ್ ಫೀಚರ್ಸ್

ಇನ್ನು ಸ್ಮಾರ್ಟ್ ಹೋಮ್ ತಂತ್ರಜ್ಞಾನವನ್ನು ಗೂಗಲ್ ಪ್ರಾಯೋಜಿಸುವ ನಿಟ್ಟಿನಲ್ಲಿದ್ದು, ನಿಮ್ಮ ಮನೆಯ ಪ್ರತಿಯೊಂದನ್ನು ನೀವು ಕುಳಿತಲ್ಲೇ ನಿರ್ವಹಿಸುವ ತಂತ್ರಜ್ಞಾನ ಇದರಲ್ಲಡಗಿದೆ. ಫೋನ್‌ನ ಸಹಾಯದಿಂದ ಮನೆಯ ಲೈಟ್ಸ್ ಆನ್ ಮಾಡುವುದು ಡೋರ್ ತೆರೆಯುವುದು ಮುಚ್ಚುವುದು ಹೀಗೆ ನಿಮಗೆ ಕೆಲಸಗಳನ್ನು ಇನ್ನಷ್ಟು ಆಧುನೀಕರಣಗೊಳಿಸಬಹುದಾಗಿದೆ.

ಆಂಡ್ರಾಯ್ಡ್ ಆಟೋ

ಆಂಡ್ರಾಯ್ಡ್ ಆಟೋ

ಗೂಗಲ್ ಕಳೆದ ವರ್ಷ ಘೋಷಿಸಿದ ಆಂಡ್ರಾಯ್ಡ್ ಆಟೋದೊಂದಿಗೆ ಅಪ್ಟಿಮೈಸ್ ಮಾಡಬಹುದಾದ ಫೀಚರ್ ಅನ್ನು ಆಂಡ್ರಾಯ್ಡ್ ಎಮ್‌ನೊಂದಿಗೆ ಗೂಗಲ್ ಜಾರಿಗೆ ತರಬಹುದು. ಪ್ರಸ್ತುತ ಆಂಡ್ರಾಯ್ಡ್ ಆಟೋ ನಿಮ್ಮ ಫೋನ್ ಮೂಲಕ ಚಾಲನೆಯಾಗುತ್ತಿದ್ದು ಈ ವ್ಯವಸ್ಥೆ ಬದಲಾಗಬಹುದು ಎಂಬ ನಮ್ಮ ಊಹೆಯಾಗಿದೆ.

ಅಧಿಸೂಚನೆಗಳು ಹೆಚ್ಚು ವಿಚಾರಬದ್ಧವಾಗಿರುತ್ತವೆ

ಅಧಿಸೂಚನೆಗಳು ಹೆಚ್ಚು ವಿಚಾರಬದ್ಧವಾಗಿರುತ್ತವೆ

ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಚನೆಗಳನ್ನು ಒದಗಿಸುವ ಹೊಸ ಅಧಿಸೂಚನೆ ವ್ಯವಸ್ಥೆಯೊಂದಿಗೆ ಗೂಗಲ್ ಕಾರ್ಯನಿರ್ವಹಿಸುತ್ತಿದೆ ನಿಮ್ಮ ಲ್ಯಾಪ್‌ಟಾಪ್. ಡೆಸ್ಕ್‌ಟಾಪ್‌ನಲ್ಲಿ ಈ ಅಧಿಸೂಚನೆಗಳನ್ನು ನಿಮಗೆ ಕಾಣಬಹುದಾಗಿದೆ.

 ಹೆಚ್ಚು ಆಧುನಿಕ

ಹೆಚ್ಚು ಆಧುನಿಕ

ಇನ್ನು ಗೂಗಲ್ ತನ್ನ ಹೊಸ ಓಎಸ್‌ನಲ್ಲಿ ಹೆಚ್ಚು ಆಧುನಿಕ ವಿಚಾರಗಳನ್ನು ತರುವ ಪ್ರಯತ್ನವನ್ನು ಮಾಡಲಿದ್ದು ಬಳಕೆದಾರ ಸ್ನೇಹಿಯಾಗಿ ಈ ಫೀಚರ್‌ಗಳು ಬರಲಿವೆ ಎಂಬುದು ಅಕ್ಷರಶಃ ನಿಜವಾಗಿದೆ.

ಮಾರುಕಟ್ಟೆ ಪೈಪೋಟಿ

ಮಾರುಕಟ್ಟೆ ಪೈಪೋಟಿ

ತನ್ನ ಪ್ರತಿಸ್ಪರ್ಧಿಗಳಿಗೆ ಹೊಸ ಹೊಸ ಯೋಜನೆಗಳಿಂದಲೇ ಉತ್ತರವನ್ನೀಯುವ ಗೂಗಲ್ ಆಂಡ್ರಾಯ್ಡ್ ಎಮ್ ಮೂಲಕ ಕಮಾಲನ್ನು ಮಾಡಹೊರಟಿರುವುದು ನಿಶ್ಚಯವಾಗಿದೆ. ಬಳಕೆದಾರರಿಗೆ ಇನ್ನಷ್ಟು ನಿಕಟತೆಯನ್ನು ಇದರ ಮೂಲಕ ನೀಡಹೊರಟಿರುವ ಗೂಗಲ್ ತನ್ನ ಕಾರ್ಯದಲ್ಲಿ ಯಶಸ್ಸನ್ನು ಪಡೆಯಲಿ.

Best Mobiles in India

English summary
It's been almost one year since Google officially unveiled its current version of Android, called Lollipop, which means it's just about time to see what the next major update will bring.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+