ಫೇಸ್‌ಬುಕ್ ಕುರಿತು ವಿಶ್ವ ಕಂಡ ಅದ್ಭುತಗಳೇನು?

By Shwetha

  ವಿಶ್ವವಿದ್ಯಾಯದಿಂದ ನಪಾಸಾದರೂ ಫೇಸ್‌ಬುಕ್‌ನಂತಹ ದೈತ್ಯ ಕಂಪೆನಿಯ ಸ್ಥಾಪಕರು ಎಂಬ ಕೀರ್ತಿಗೆ ಒಳಗಾದವರು ಮಾರ್ಕ್ ಜುಕರ್ ಬರ್ಗ್ ಆಗಿದ್ದಾರೆ. ಸ್ವತಃ ಮಾರ್ಕ್ ಅವರೇ ಈ ತಾಣದಲ್ಲಿ ತಮ್ಮ ಖಾತೆಯನ್ನು ಹೊಂದಿದ್ದು ಅವರ ಪ್ರೊಫೈಲ್‌ನಲ್ಲಿ ಈ ಬದಲಾವಣೆಗಳನ್ನು ಮಾಡಿಕೊಂಡು ನಂತರವೇ ಅದನ್ನು ಕಾರ್ಯರೂಪಕ್ಕೆ ತಂದರು.

  ಫೇಸ್‌ಬುಕ್ ಮತ್ತು ಅದರ ಇತರ ಎಲ್ಲಾ ಫೀಚರ್‌ಗಳು ಹಂತ ಹಂತವಾಗಿ ಬದಲಾವಣೆಗಳನ್ನು ಪಡೆದುಕೊಂಡೇ ಇಂದು ಬಳಕೆದಾರರ ಕೈಯಲ್ಲಿದೆ. ಹಾಗಿದ್ದರೆ ಆ ಬದಲಾವಣೆಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  2005 ರಲ್ಲಿ ಮಾರ್ಕ್ ಮತ್ತು ಅವರ ತಂಡದವರು ವಿಶ್ವವನ್ನೇ ಬದಲಾಯಿಸುವ ಮಹತ್ತರ ಯೋಜನೆಯ ಆರಂಭದಲ್ಲಿದ್ದರು. ಸ್ವತಃ ಜುಕರ್‌ಬರ್ಗ್ ಅವರೇ ಫೇಸ್‌ಬುಕ್‌ನ ಪ್ರೊಫೈಲ್ ವಿನ್ಯಾಸದ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

  #2

  ಎರಡು ವರ್ಷಗಳಲ್ಲಿ ಫೇಸ್‌ಬುಕ್ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಪ್ರೊಫೈಲ್ ಮಂಕಾಗಿರದೇ ಹೊಸತನದ ಕಳೆಯನ್ನು ಪಡೆದುಕೊಂಡಿದೆ. ವ್ಯಕ್ತಿಯ ಫೋಟೋ ಮಾತ್ರವಲ್ಲದೆ ಆತನ ಸಂಪೂರ್ಣ ವಿವರಗಳನ್ನು ಇಂದು ಪ್ರೊಫೈಲ್ ನೀಡುತ್ತಿದೆ.

  #3

  2007 ರಲ್ಲಿ ಫೇಸ್‌ಬುಕ್ ಸಾಕಷ್ಟು ಬದಲಾವಣೆಗಳನ್ನು ಕಂಡಿತು. ಸುಧಾರಿತ ಗ್ರಾಫಿಕ್ಸ್‌ಗಳೊಂದಿಗೆ ಪ್ರೊಫೈಲ್ ಇನ್ನಷ್ಟು ಬದಲಾಯಿತು.

  #4

  ಮೂರು ವರ್ಷಗಳಲ್ಲಿ ಫೇಸ್‌ಬುಕ್ ಹೊಸ ರಂಗನ್ನು ಕಂಡಿತು. ಮಾರ್ಕ್ ಜುಕರ್ ಬರ್ಗ್ ಪ್ರೊಫೈಲ್‌ ಈ ಮೂರು ವರ್ಷಗಳ ಬದಲಾವಣೆಗೆ ಸಾಕ್ಷಿಯಾಗಿದೆ. ಅವರನ್ನು ನಿಮಗೆ ಪೋಕ್ ಮಾಡಬಹುದು ಅಂತೆಯೇ ಕುಟುಂಬ ಸದಸ್ಯರ ವಿವರಗಳನ್ನು ತಿಳಿದುಕೊಳ್ಳಬಹುದು.

  #5

  ಟೈಮ್‌ಲೈನ್! ನಿಜಕ್ಕೂ ಫೇಸ್‌ಬುಕ್ ನಮ್ಮ ಸಾಮಾಜಿಕ ನೋಟವನ್ನೇ ಬದಲಾಯಿಸಿತು. ಟೈಮ್‌ಲೈನ್ ಫೀಚರ್‌ನ ಪ್ರಸ್ತುತಿ ಫೇಸ್‌ಬುಕ್‌ನಲ್ಲಿ ಕಂಡುಬಂದಿತು. ನಮ್ಮ ಪ್ರೊಫೈಲ್ ಚಿತ್ರದ ಬದಲಾವಣೆಯನ್ನು ಇದು ಮಾಡಿತು. ಮಾರ್ಕ್ ತಮ್ಮ ಕವರ್ ಫೋಟೋದಲ್ಲಿ ತಮ್ಮ ನೆಚ್ಚಿನ ನಾಯಿ ಬೀಸ್ಟ್ ಫೋಟೋವನ್ನು ಅಪ್‌ಲೋಡ್ ಮಾಡಿದರು. ಇದಲ್ಲದೆ ಇದೀಗ ನೀವು ಅವರ ಪುಟವನ್ನು ಸಬ್‌ಸ್ಕ್ರೈಬ್ ಮಾಡಬಬಹುದು ಮತ್ತು ವೀಡಿಯೊ ಕರೆಗಳನ್ನು ಕೂಡ ಮಾಡಬಹುದಾಗಿದೆ

  #6

  ನಮ್ಮ ಜೀವನದಲ್ಲಿ ನಡೆಯುವ ಅವಿಸ್ಮರಣೀಯ ಸಂದರ್ಭಗಳನ್ನು ಸ್ನೇಹಿತರಿಗೆ ತಿಳಿಸುವ ಸುಸಂದರ್ಭ ನಮ್ಮದಾದ ವರ್ಷ. ಬಿಲಿಯಗಟ್ಟಲೆ ದಾಖಲೆಗಳನ್ನು ಮುರಿದ ಅದ್ಭುತ ಫೀಚರ್ ಅನ್ನು ಮಾರ್ಕ್ ಫೇಸ್‌ಬುಕ್‌ಗೆ ಸೇರಿಸಿದ್ದರು. ತಮ್ಮ ದೀರ್ಘಕಾಲದ ಗೆಳತಿ ಪ್ರಿಸಿಲ್ಲಾ ಚಾನ್ ಅನ್ನು ಇದೇ ವರ್ಷ ಅವರು ವಿವಾಹವಾಗಿ ತಮ್ಮ ಸ್ನೇಹಿತರೊಂದಿಗೆ ಮತ್ತು ವಿಶ್ವದ ತಮ್ಮ ಫೇಸ್‌ಬುಕ್ ಅಭಿಮಾನಿಗಳೊಂದಿಗೆ ಹಂಚಿಕೊಂಡರು.

  #7

  ಸಬ್‌ಸ್ಕ್ರೈಬ್ ಅನ್ನು ಫಾಲೋ ಬಟನ್ ಬದಲಾಯಿಸಿದೆ. ಮಾರ್ಕ್ ಫಾಲೋವರ್‌ಗಳತ್ತ ನಿಮಗೆ ದೃಷ್ಟಿಹಾಯಿಸಬಹುದಾಗಿದೆ. ಆದರೆ ಕಾಲಿ ಎಂಬ ಹ್ಯಾಕರ್ ಮಾರ್ಕ್ ಸಾಮಾಜಿಕ ಪ್ರೊಫೈಲ್ ಅನ್ನು ಹ್ಯಾಕ್ ಮಾಡಿ ಅವರ ವಾಲ್‌ನಲ್ಲಿ ಸ್ಟೇಟಸ್ ಒಂದನ್ನು ಪೋಸ್ಟ್ ಮಾಡಿದರು. ಫೇಸ್‌ಬುಕ್‌ನಲ್ಲಿರುವ ಬಗ್ ಹೀಗೆ ಮಾಡಲು ಅವರನ್ನು ಪ್ರೇರೇಪಿಸಿತು ಎಂಬುದಾಗಿ ಕಾಲಿ ಬರೆದುಕೊಂಡಿದ್ದಾರೆ.

  #8

  ನಾಯಿಯ ಬದಲಿಗೆ ತಮ್ಮ ಕವರ್ ಫೋಟೋದಲ್ಲಿ ನಕ್ಷೆಯನ್ನು ಜುಕರ್ ಬರ್ಗ್ ಲಗತ್ತಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ಫೇಸ್‌ಬುಕ್‌ನಲ್ಲಿ ಸ್ನೇಹ ರಚನೆಯಾಗಿದೆ ಎಂಬುದು ಇದರ ಹಿಂದಿರುವ ಸಂದೇಶವಾಗಿದೆ.

  #9

  ತಮ್ಮ ಪ್ರಸ್ತುತಿಯಲ್ಲಿ ಮಾರ್ಕ್ ಬರೆದ ಒಕ್ಕಣೆಯನ್ನು ನಿಮಗೆ ಗಮನಿಸಿಕೊಳ್ಳಬಹುದಾಗಿದೆ. ಹೆಚ್ಚು ಮುಕ್ತ ಮತ್ತು ಸಂಪರ್ಕಕೊಂಡಂತೆ ವಿಶ್ವವನ್ನು ಬದಲಾಯಿಸುವುದು ಎಂಬುದಾಗಿದೆ.

  ಗಿಜ್‌ಬಾಟ್ ಲೇಖನಗಳು

  ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್‌ಬುಕ್ ಗಿಫ್ಟ್
  ಫೇಸ್‌ಬುಕ್‌ ಮೆಸೇಂಜರ್‌ನಲ್ಲಿಯೂ ಬರಲಿದೆ ಜಾಹೀರಾತು
  ಫೇಸ್‌ಬುಕ್‌ನಿಂದ ವೀಡಿಯೊ ಡೌನ್‌ಲೋಡ್ ಹೇಗೆ?
  ಬಫರಿಂಗ್‌ ಆಗದೆ ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವುದು ಹೇಗೆ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  From the induction of Facebook Beta which was significant redesign of the user interface back in 2008 including the consolidation of Mini-Feed and Wall to addition of Timeline feature in 2011, lots have changed.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more