Subscribe to Gizbot

ಕರ್ನಾಟಕಕ್ಕೆ ಏರ್‌ಟೆಲ್‌ನಿಂದ ಇತಿಹಾಸದ ಆಫರ್!..ಊಹಿಸಲು ಸಾಧ್ಯವಿಲ್ಲಾ!!

Written By:

ಈಗಾಗಲೇ ಟೆಲಿಕಾಂನಲ್ಲಿ ಭಾರಿ 4G ಗ್ರಾಹಕರನ್ನು ಕಳೆದುಕೊಂಡಿರುವ ಏರ್‌ಟೆಲ್ ಜಿಯೋ ಬ್ರಾಡ್‌ಬ್ಯಾಂಡ್ ಬಿಡುಗಡೆಗೂ ಮುನ್ನವೇ ಭಾರೀ ಆಫರ್‌ಗಳನ್ನು ನೀಡಿದೆ.!ಇದೇ ಮೊದಲ ಸಾರಿ ಏರ್‌ಟೆಲ್ ಇತಿಹಾಸದ ಒಂದು ಆಫರ್ ಬಿಡುಗಡೆ ಮಾಡಿದ್ದು, ಟೆಲಿಕಾಂ ಹುಬ್ಬೇರಿಸುವಂತಾಗಿದೆ.!!

ಏರ್‌ಟೆಲ್ ಕಂಪೆನಿಗೆ ಇದೀಗ ತನ್ನ ಬ್ರಾಡ್‌ಬ್ಯಾಂಡ್ ಭವಿಷ್ಯದ ಬಗ್ಗೆ ಚಿಂತೆ ಮೂಡಿದ್ದು, ಒಂದು ವರ್ಷದ ಕಾಲ ವ್ಯಾಲಿಡಿಟಿ ಇರುವ ಆಫರ್‌ಗಳನ್ನು ನೀಡುತ್ತಿದೆ.! ಜಿಯೋ ಬ್ರಾಡ್‌ಬ್ಯಾಂಡ್ ಸೇವೆಗೆ ಎಂಟ್ರಿ ನೀಡಿದರೂ ಸಹ ಜಿಯೋವಿಗೆ ಜನರು ಮರುಳಾಗಬಾರದು ಎಂದು ಏರ್‌ಟೆಲ್ ಪ್ರೀಪ್ಲಾನ್ ಮಾಡಿದೆ.!!

ಹಾಗಾಗಿಯೇ ಹಲವು ಅತ್ಯುತ್ತಮ ಆಫರ್ ಬಿಡುಗಡೆ ಮಾಡಿದ್ದು, ಏರ್‌ಟೆಲ್ ಬಿಡುಗಡೆ ಮಾಡಿರುವ ನೂತನ ಬ್ರಾಂಡ್‌ಬ್ಯಾಂಡ್ ಆಫರ್ಗಳು ಯಾವುವು? ಕರ್ನಾಟಕಕ್ಕೆಏರ್‌ಟೆಲ್ ನೀಡಿರುವ ಆಫರ್ ಏನೆನೆಲ್ಲಾ ಒಳಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕರ್ನಾಟಕಕ್ಕೆ ಲಭ್ಯ ಈ ಆಫರ್ಸ್!!

ಕರ್ನಾಟಕಕ್ಕೆ ಲಭ್ಯ ಈ ಆಫರ್ಸ್!!

ಏರ್‌ಟೆಲ್ ಹಲವು ಸರ್ಕಲ್‌ಗಳಲ್ಲಿ ಬ್ರಾಡ್‌ಬ್ಯಾಂಡ್ ಪ್ಲಾನ್ ಅನ್ನು ಬೇರೆ ಬೇರೆ ಬಿಡುಗಡೆ ಮಾಡಿದ್ದು, ಈ ಲೇಖನದಲ್ಲಿ ಕರ್ನಾಟಕ್ಕೆ ಲಭ್ಯವಿರುವ ಆಫರ್‌ಗಳನ್ನು ಮಾತ್ರ ತೆಗೆದುಕೊಳ್ಳಲಾಗಿದೆ. ಇನ್ನು ಎಲ್ಲಾ ಸರ್ಕಲ್ ಆಫರ್‌ಗಳಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಆಫರ್ ಲಭ್ಯವಿದೆ.!!

ಪ್ರತಿ ಆಫರ್ ಮೇಲೆ 15 ಪಟ್ಟು ಹೆಚ್ಚು ಡೇಟಾ!!

ಪ್ರತಿ ಆಫರ್ ಮೇಲೆ 15 ಪಟ್ಟು ಹೆಚ್ಚು ಡೇಟಾ!!

ಏರ್‌ಟೆಲ್ ಬಿಡುಗಡೆ ಮಾಡಿರುವ ನೂತನ ಬ್ರಾಂಡ್‌ಬ್ಯಾಂಡ್ ಆಫರ್‌ಗಳೆಲ್ಲವೂ ಭಾರಿ ಆಫರ್ ಹೊಂದಿದ್ದು. ಪ್ರತಿ ಆಫರ್ ಮೇಲೆ 15 ಪಟ್ಟು ಹೆಚ್ಚು ಡೇಟಾ ನೀಡಿ ಜನರನ್ನು ಸೆಳೆಯಲು ಪ್ರಯತ್ನಿಸಿದೆ. ಹಾಗಾಗಿ, ಇದು ಇತಿಹಾಸದ ಡೇಟಾ ಎಂದು ಹೇಳಬಹುದು.!! ಅವುಗಳು ಕೆಳಕಂಡತಿವೆ.

ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '999ರೂ. ಪ್ಲಾನ್'

ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '999ರೂ. ಪ್ಲಾನ್'

ಅನ್‌ಲಿಮಿಟೆಡ್ ಎಸ್‌ಟಿಡಿ ಮತ್ತು ಲೋಕಲ್ ಕಾಲ್ ಮತ್ತು 65GB ಡೇಟಾ ಜೊತೆಗೆ 750GB ಡೇಟಾ ಆಫರ್ ಅನ್ನು ಕೇವಲ 999ರೂಪಾಯಿಗಳಿಗೆ ಏರ್‌ಟೆಲ್ ಪ್ರಕಟಿಸಿದೆ.!! 40MBPS ವೇಗದಲ್ಲಿ ಏರ್‌ಟೆಲ್ ಡೇಟಾ ಲಭ್ಯವಿದ್ದು, ಒಂದು ರೂಪಾಯಿಗೆ ಒಂದು GB ಡೇಟಾ ನೀಡಿದೆ ಎನ್ನಬಹುದು.!!

ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '749ರೂ. ಪ್ಲಾನ್'!!

ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '749ರೂ. ಪ್ಲಾನ್'!!

40GB ಡೇಟಾ ಜೊತೆಗೆ 500GB ಡೇಟಾ ಅನ್ನು ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '749ರೂ. ಪ್ಲಾನ್' ಮೂಲಕ ಪಡೆಯಬಹುದು. ಅನ್‌ಲಿಮಿಟೆಡ್ ಎಸ್‌ಟಿಡಿ ಮತ್ತು ಲೋಕಲ್ ಕಾಲ್ ನೊಂದಿಗೆ 16MBPS ವೇಗದಲ್ಲಿ ಏರ್‌ಟೆಲ್ ಡೇಟಾ ಲಭ್ಯವಿದೆ!!

ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '1149ರೂ. ಪ್ಲಾನ್'!!

ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '1149ರೂ. ಪ್ಲಾನ್'!!

ಅನ್‌ಲಿಮಿಟೆಡ್ ಎಸ್‌ಟಿಡಿ ಮತ್ತು ಲೋಕಲ್ ಕಾಲ್ ಮತ್ತು 100GB ಡೇಟಾ ಜೊತೆಗೆ 750GB ಡೇಟಾ ಆಫರ್ ಅನ್ನು ಕೇವಲ 1149ರೂಪಾಯಿಗಳಿಗೆ ಏರ್‌ಟೆಲ್ ಪ್ರಕಟಿಸಿದೆ.!! 40MBPS ವೇಗದ ವರೆಗೂ ಏರ್‌ಟೆಲ್ ಡೇಟಾ ಲಭ್ಯವಿದೆ.!!

ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '1299ರೂ. ಪ್ಲಾನ್'

ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '1299ರೂ. ಪ್ಲಾನ್'

140GB ಡೇಟಾ ಜೊತೆಗೆ 1000GB ಡೇಟಾ ಅನ್ನು ಏರ್‌ಟೆಲ್ ಬ್ರಾಂಡ್‌ಬ್ಯಾಂಡ್ '1299ರೂ. ಪ್ಲಾನ್' ಮೂಲಕ ಪಡೆಯಬಹುದು. ಅನ್‌ಲಿಮಿಟೆಡ್ ಎಸ್‌ಟಿಡಿ ಮತ್ತು ಲೋಕಲ್ ಕಾಲ್ ನೊಂದಿಗೆ 16MBPS ವೇಗದಲ್ಲಿ ಏರ್‌ಟೆಲ್ ಡೇಟಾ ಲಭ್ಯವಿದೆ!!

ಜಿಯೋಗೆ ಟಾಂಗ್

ಜಿಯೋಗೆ ಟಾಂಗ್

ಜಿಯೋ ಬ್ರಾಡ್‌ಬ್ಯಾಂಡ್ ಸೇವೆಗೆ ಅಡ್ಡಗಾಲುಹಾಕಲೆಂದೇ ಏರ್‌ಟೆಲ್ ಇಂತಹ ಆಫರ್ ನೀಡುತ್ತಿರುವುದು ಸತ್ಯ.!! ಏನೇ ಆದರೂ ಏರ್‌ಟೆಲ್ ಬಿಡುಗಡೆ ಮಾಡಿರುವ ಈ ಆಫರ್ ಅಂತೂ ನೆಟ್ ಪ್ರಿಯರಿಗಂತೂ ಖುಷಿಕೊಟ್ಟಿದೆ.!!

ಓದಿರಿ:ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಿಗೆ ಉಚಿತ ಇಂಟರ್‌ನೆಟ್! ಎಷ್ಟು? ಯಾವಾಗಿನಿಂದ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel also refreshed its broadband plans and offered 100 per cent additional data to Airtel home broadband users under the new plans.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot