Subscribe to Gizbot

ಪ್ಯಾನಸೋನಿಕ್‌ನಿಂದ ಅತ್ಯದ್ಭುತ 11 ಡಿವೈಸ್‌ಗಳು ಲಾಂಚ್

Posted By: Shwetha PS

ಸ್ಮಾರ್ಟ್‌ಫೋನ್ ಮಾರುಕಟ್ಟೆ ಕ್ಷೇತ್ರದಲ್ಲಿ ತನ್ನ ವಹಿವಾಟನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಜಪಾನ್‌ನ ತಂತ್ರಜ್ಞಾನ ಕಂಪೆನಿ ಪ್ಯಾನಸೋನಿಕ್ ಭಾರತದಲ್ಲಿ ಎರಡು ತಿಂಗಳ ಒಳಗಾಗಿ 12 ಡಿವೈಸ್‌ಗಳನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದೆ.

ಪ್ಯಾನಸೋನಿಕ್‌ನಿಂದ ಅತ್ಯದ್ಭುತ 11 ಡಿವೈಸ್‌ಗಳು ಲಾಂಚ್

ಆಗಸ್ಟ್ ತಿಂಗಳಲ್ಲಿ 5 ಮತ್ತು ಸಪ್ಟೆಂಬರ್ ತಿಂಗಳಿನಲ್ಲಿ ಆರು ಫೋನ್‌ಗಳನ್ನು ಲಾಂಚ್ ಮಾಡುವ ನಿರೀಕ್ಷೆಯನ್ನು ಕಂಪೆನಿ ಹೊಂದಿದೆ ಅಂತೆಯೇ ಪ್ಯಾನಸೋನಿಕ್ ಈ ಹಿಂದೆ ಎಂದೂ ಮಾಡಿರದ ಸಾಧನೆಯನ್ನು ಮಾಡುತ್ತಿದೆ ಎಂಬುದಾಗಿ ಬ್ಯುಸಿನೆಸ್ ಹೆಡ್ ಪಂಕಜ್ ರಾಣಾ ತಿಳಿಸಿದ್ದಾರೆ. ದೀಪಾವಳಿಗೂ ಮುನ್ನ ರೂ 20,000 ಬೆಲೆಯ ಎರಡು ಹ್ಯಾಂಡ್‌ಸೆಟ್‌ಗಳನ್ನು ಕಂಪೆನಿ ಹೊರತರುವ ನಿರ್ಧಾರದಲ್ಲಿದೆ ನಮ್ಮ ವಿತರಣೆಯನ್ನು ನಾವು ಹೆಚ್ಚು ಪ್ರಮುಖ ನಗರಳಿಗೆ ವಿಸ್ತರಿಸುತ್ತಿದ್ದೇವೆ ಎಂಬುದು ರಾಣಾ ಅಭಿಮತವಾಗಿದೆ.

ಕಂಪೆನಿ ಸದ್ಯಕ್ಕೆ 2,000 ಕೋಟಿ ಆದಾಯವನ್ನು ತನ್ನ ಡಿವೈಸ್‌ಗಳ ಮಾರಾಟದಲ್ಲಿ ಅಂದಾಜುಪಡಿಸಿದ್ದು ಹೊಸ ಲಾಂಚ್‌ಗಾಗಿ 150 ಕೋಟಿ ಹೂಡಿಕೆಯನ್ನು ಮಾಡುವ ನಿರ್ಧಾರದಲ್ಲಿದೆ.

ಇತ್ತೀಚೆಗೆ ತಾನೇ ಕಂಪೆನಿಯು ಉತ್ತಮ ಹ್ಯಾಂಡ್‌ಸೆಟ್ ಅನ್ನು ಬಿಡುಗಡೆ ಮಾಡಿದ್ದು ಪಿ55 ಮ್ಯಾಕ್ಸ್ ಎಂಬುದಾಗಿ ಇದರ ಹೆಸರಾಗಿದೆ. ಡಿವೈಸ್‌ನಲ್ಲಿ 5000 mAh ಬ್ಯಾಟರಿ ಇದ್ದು ವೇಗದ ಚಾರ್ಜಿಂಗ್, ಮೆಟಲ್ ವಿನ್ಯಾಸ, ಆಂಡ್ರಾಯ್ಡ್ 7.0 ನಾಗಟ್, 13 ಎಮ್‌ಪಿ ಕ್ಯಾಮೆರಾ ಜೊತೆಗೆ ಎಲ್‌ಇಡಿ ಕ್ವಾಡ್ ಫ್ಲ್ಯಾಶ್ ಮೊದಲಾದ ವಿಶೇಷತೆಗಳನ್ನು ಡಿವೈಸ್ ಒಳಗೊಂಡಿದೆ.

ಡಿಎಸ್ಎಲ್ಆರ್ ಕ್ಯಾಮರಾ ಬಳಸುವ ಮುನ್ನ ಇದನ್ನು ಓದಲೇಬೇಕು!!

ಫೋನ್ ಡಿಸ್‌ಪ್ಲೇ 5.5 ಎಚ್‌ಡಿ ಐಪಿಎಸ್ ಆಗಿದ್ದು ವಿಶಾಲವಾದ ವೀಕ್ಷಣಾ ಆಯಾಮಗಳನ್ನು ಇದು ಪಡೆದುಕೊಂಡಿದೆ. 1.25 ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 3 ಜಿಬಿ RAM ಅನ್ನು ಫೋನ್ ಪಡೆದಿದೆ. 16 ಜಿಬಿ ಆಂತರಿಕ ಸಂಗ್ರಹಣೆ ಡಿವೈಸ್‌ನಲ್ಲಿದೆ. ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 128 ಜಿಬಿಗೆ ವಿಸ್ತರಿಸಬಹುದು.

ಫೋನ್ ಜಿಗ್‌ಪ್ಲೇಯನ್ನು ಹೊಂದಿದ್ದು ಇದು ಅದ್ಭುತವಾಗಿರುವ ಫೀಚರ್ ಎಂದೆನಿಸಿದ್ದು, ನಿಮ್ಮ ಆದ್ಯತೆಗಳನ್ನು ಇದು ಬಹಳಷ್ಟು ಸರಾಗಗೊಳಿಸಲಿದೆ. ನಿಮ್ಮ ಮನೆ, ಕಚೇರಿ, ಕಾರು, ಹೀಗೆ ನೀವು ಪ್ರಯಾಣಿಸುವಲ್ಲೆಲ್ಲಾ ಇದು ಸಂಪರ್ಕವನ್ನು ಪಡೆದುಕೊಳ್ಳುತ್ತದೆ. ಪಿ55 ಮ್ಯಾಕ್ಸ್‌ನಲ್ಲಿ ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾ ಇದೆ. ಡ್ಯುಯಲ್ ಸಿಮ್ 3ಜಿ/4ಜಿ ಎಲ್‌ಟಿಇ ಕಾನ್ಫಿಗರೇಶನ್, ಡೈರೆಕ್ಟ್ ವೈ-ಫೈ ಮತ್ತು ಬ್ಲೂಟೂತ್ ಅನ್ನು ಹೊಂದಿದೆ.

Read more about:
English summary
Japanese technology firm Panasonic is planning to launch 11 smartphones in next two months here in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot