ಮೊಬೈಲ್ ರೀಚಾರ್ಜ್ ಮಾಡಿಸಲೂ ಸಹ ಆಧಾರ್ ಬೇಕಿದೆ!!

Written By:

ಮೊಬೈಲ್‌ ಸಿಮ್‌ ಕಾರ್ಡ್‌ಗಳು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆ ಆಗುವುದನ್ನು ತಡೆಯಲು ಮುಂದಾಗಿರುವ ಸರ್ವೋಚ್ಚ ನ್ಯಾಯಾಲಯ ದೇಶದಲ್ಲಿರುವ 100 ಕೋಟಿ ಮೊಬೈಲ್‌ ಚಂದಾದಾರರು ಮತ್ತು ಹೊಸದಾಗಿ ಮೊಬೈಲ್‌ ಸಿಮ್‌ ಕೊಳ್ಳುವವರ ದಾಖಲಾತಿಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಸಿಮ್‌ಗೆ ರೀಚಾರ್ಜ್ ಮಾಡಸಲು ಗುರುತಿನ ಪತ್ರವನ್ನು ಹೊಂದಿರುವಂತೆ ಆಧೇಶ ತರಬಹುದೇ ಎಂದು ಕೇಳಿದೆ.

ಹೊಸ ಸಿಮ್‌ಗೆ ಆಧಾರ್‌ ಆಧರಿತ ಇ-ಕೆವೈಸಿ ವ್ಯವಸ್ಥೆ ತರುವುದಾಗಿ ಹೇಳಿರುವ ಕೇಂದ್ರ ಸರ್ಕಾರ, 100 ಕೋಟಿ ಮೊಬೈಲ್‌ ಚಂದಾದಾರರ ಮಾಹಿತಿ ಪರಿಶೀಲನೆಗೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಇದರ ಬೆನ್ನಲ್ಲೇ ಮೊಬೈಲ್ ರೀಚಾರ್ಜ್‌ಗೆ ಸಂಭಂದಿಸಿದಂತೆ ಸುಪ್ರೀಂಕೋರ್ಟ್ ಸಹ ಹೊಸ ವ್ಯವಸ್ಥೆ ರೂಪಿಸುವಂತೆ ಆದೇಶಿಸಿದೆ.

ಮೊಬೈಲ್ ರೀಚಾರ್ಜ್ ಮಾಡಿಸಲೂ ಸಹ ಆಧಾರ್ ಬೇಕಿದೆ!!

ಜಿಯೋ ಬಗ್ಗೆ ಏರ್‌ಟೆಲ್ ಹೇಳಿದ್ದು ಕೇಳಿದರೆ ನಿಮಗೆ ಶಾಕ್ ಆಗುತ್ತದೆ.!!?

ಸಿಮ್‌ ಕಾರ್ಡ್‌ಗಳನ್ನು ಕಾನೂನುಬಾಹಿರ ಚಟುವಟಿ­ಕೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ . ಮೊಬೈಲ್‌ ಬಳಕೆದಾರರ ಪರಿಶೀಲನೆಯನ್ನು ಒಂದು ವರ್ಷದೊಳಗೆ ನಡೆಸ​ಬೇಕು. ಇದಕ್ಕಾಗಿ ಸೂಕ್ತ ವ್ಯವಸ್ಥೆಯೊಂದನ್ನು ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೇಳಿತು.

ಮೊಬೈಲ್ ರೀಚಾರ್ಜ್ ಮಾಡಿಸಲೂ ಸಹ ಆಧಾರ್ ಬೇಕಿದೆ!!

ಈಗಾಗಲೇ ಹೊಸ ಮೊಬೈಲ್‌ ಚಂದಾದಾರರ ಆಧಾರ್‌ ಸಂಖ್ಯೆಯನ್ನು ಪಡೆದುಕೊಂಡೇ ಸಿಮ್‌ಕಾರ್ಡ್‌ ಸಂಪರ್ಕ ಕಲ್ಪಿಸಲಾಗುತ್ತಿದೆ. ಆದರೆ ಈಗಾಗಲೇ ಇರುವ ಕೋಟ್ಯಂತರ ಮೊಬೈಲ್‌ ಬಳಕೆದಾರರ ನೋಂದಣಿ ಸ್ವಲ್ಪ ಕಷ್ಟವಾಗಲಿದೆ. ಆದರೂ ಇ-ಕೆವೈಸಿ ವ್ಯವಸ್ಥೆ ತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

English summary
Subscribers could be provided with freebies or sops in form of free talktime or data in order to encourage them to undergo the eKYC process. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot