ಸಾವಿರಾರು ಕೋಟಿ ಮೌಲ್ಯದ ಐಫೋನ್‌ ರಫ್ತು ಮಾಡಿದ ಭಾರತ; ಸ್ಯಾಮ್‌ಸಂಗ್‌ಗೆ ಹಿನ್ನಡೆ!

|

ಟೆಕ್‌ ವಲಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕಂಡು ಭಾರತವನ್ನು ಇತರೆ ರಾಷ್ಟ್ರಗಳು ಹುಬ್ಬೇರಿಸಿ ನೋಡುತ್ತಿವೆ. ಅದರಂತೆ ಭಾರತವೂ ಸಹ ಎಲ್ಲಾ ರಾಷ್ಟ್ರಗಳಿಗೂ ಪೈಪೋಟಿ ನೀಡುವ ರೀತಿಯಲ್ಲಿ ವಿವಿಧ ರೀತಿಯ ಹೊಸ ಸ್ಮಾರ್ಟ್‌ ಡಿವೈಸ್‌ ಹಾಗೂ ತಂತ್ರಜ್ಞಾನ ಸೇವೆಯನ್ನು ನೀಡುತ್ತಾ ಬರುತ್ತಿರುವುದು ಗಮನಾರ್ಹ ಸಂಗತಿ. ಇದರ ಭಾಗವಾಗಿಯೇ ಈಗ ಹೊಸ ವರದಿಯೊಂದು ಹೊರಬಿದ್ದಿದ್ದು, ಸಾವಿರಾರು ಕೋಟಿ ಮೌಲ್ಯದ ಫೋನ್‌ಗಳನ್ನು ಭಾರತ ರಪ್ತು ಮಾಡಿದೆ.

ಸಾವಿರಾರು ಕೋಟಿ ಮೌಲ್ಯದ ಐಫೋನ್‌ ರಫ್ತು ಮಾಡಿದ ಭಾರತ; ಸ್ಯಾಮ್‌ಸಂಗ್‌ಗೆ ಹಿನ್ನಡೆ!

ಹೌದು, ಭಾರತ ಕೇವಲ ಒಂದೇ ತಿಂಗಳಲ್ಲಿ 8,100 ಕೋಟಿ ರೂಪಾಯಿ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದ್ದು, ಈ ಮೂಲಕ ಇಷ್ಟೊಂದು ಡಿವೈಸ್‌ಗಳನ್ನು ಈ ಮಟ್ಟದಲ್ಲಿ ರಪ್ತು ಮಾಡಿದ ಮೊದಲ ಕಂಪೆನಿ ಎನಿಸಿಕೊಂಡಿದೆ. ಹಾಗಿದ್ರೆ, ಭಾರತ ಯಾವೆಲ್ಲಾ ಬ್ರ್ಯಾಂಡ್‌ಗಳನ್ನು ರಪ್ತು ಮಾಡುತ್ತದೆ?, ಈ ಮೂಲಕ ಭಾರತದಲ್ಲಿ ಆಗುವ ಸ್ಮಾರ್ಟ್‌ ಗ್ಯಾಜೆಟ್‌ಗಳ ಉತ್ಪಾದನೆ ಎಷ್ಟು ಎಂಬಿತ್ಯಾದಿ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ಸ್ಮಾರ್ಟ್‌ ಗ್ಯಾಜೆಟ್‌ ತಯಾರಿಕಾ ಸಂಸ್ಥೆಗಳಲ್ಲಿ ಪ್ರಮುಖವಾಗಿರುವ ಸ್ಯಾಮ್‌ಸಂಗ್ ಹಾಗೂ ಆಪಲ್‌ ರಪ್ತಿನ ವಿಚಾರದಲ್ಲಿ ಒಂದಕ್ಕೊಂದು ಭಾರೀ ಪೈಪೋಟಿ ಎದುರಿಸುತ್ತಿವೆ. ಇದರ ನಡುವೆ ಆಪಲ್‌ ಈಗ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿದ್ದು, ಭಾರತದಿಂದ ಒಂದು ತಿಂಗಳಲ್ಲಿ 8,100 ಕೋಟಿ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಭಾರತದ ಇತರೆ ರಾಷ್ಟ್ರಗಳಿಗಿಂತ ಮುಂದಿದೆ ಎಂದು ಹೇಳಬಹುದು.

ಸಾವಿರಾರು ಕೋಟಿ ಮೌಲ್ಯದ ಐಫೋನ್‌ ರಫ್ತು ಮಾಡಿದ ಭಾರತ; ಸ್ಯಾಮ್‌ಸಂಗ್‌ಗೆ ಹಿನ್ನಡೆ!

ಈ ಎರಡೂ ದೈತ್ಯರಿಗೂ ಭಾರತವೇ ಶಕ್ತಿ
ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಆಪಲ್ ಮತ್ತು ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಭಾರತದ ಮೂಲಕವೇ ಹೆಚ್ಚಿನ ಸ್ಮಾರ್ಟ್‌ಫೋನ್‌ ರಪ್ತನ್ನು ಮಾಡುತ್ತಿರುವುದು ಗಮನಾರ್ಹ ವಿಷಯ. ಆದರೆ, ಈವರೆಗೂ ರಪ್ತಿನ ವಿಚಾರದಲ್ಲಿ ಸ್ಯಾಮ್‌ಸಂಗ್ ಮೊಬೈಲ್ ಫೋನ್ ಪ್ರಾಬಲ್ಯ ಸಾಧಿಸಿತ್ತು. ಆದರೆ, ಆಪಲ್ ನವೆಂಬರ್‌ನಲ್ಲಿ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕುವ ಮೂಲಕ ದಾಪುಗಾಲಿರಿಸಿದೆ.

ಈ ಸಂಬಂಧ ಭಾರತದ ಅಧಿಕಾರಿಗಳು ಮಾಹಿತಿ ನೀಡಿದ್ದು, ಸ್ಯಾಮ್‌ಸಂಗ್‌ನ ಉತ್ಪಾದನಾ ಘಟಕವು ತನ್ನ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಒಟ್ಟು ರಫ್ತು ಹೆಚ್ಚಾಗುತ್ತಿತ್ತು. ಇದರ ನಡುವೆ ನಿಯಮಿತ ನಿರ್ವಹಣೆಗಾಗಿ ಕಳೆದ ತಿಂಗಳು ಸುಮಾರು 15 ದಿನಗಳ ಕಾಲ ಅದನ್ನು ಮುಚ್ಚಲಾಗಿತ್ತು. ಈ ಎಲ್ಲಾ ಬೆಳವಣಿಗೆ ಸ್ಯಾಮ್‌ಸಂಗ್‌ ಫೋನ್‌ಗಳನ್ನು ಹೆಚ್ಚಿನ ಮಟ್ಟದಲ್ಲಿ ರಪ್ತು ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಸಾವಿರಾರು ಕೋಟಿ ಮೌಲ್ಯದ ಐಫೋನ್‌ ರಫ್ತು ಮಾಡಿದ ಭಾರತ; ಸ್ಯಾಮ್‌ಸಂಗ್‌ಗೆ ಹಿನ್ನಡೆ!

ಸ್ಥಳೀಯ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ
ಈ ಎಲ್ಲಾ ಬೆಳವಣಿಗೆ ನಡುವೆ ಆಪಲ್ 2025 ರ ವೇಳೆಗೆ ಎಲ್ಲಾ ಐಫೋನ್‌ಗಳಲ್ಲಿ ಶೇಕಡಾ 25 ರಷ್ಟು ಉತ್ಪಾದಿಸಲು ಭಾರತದಲ್ಲಿ ತನ್ನ ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಭಾರತದ ಇತರೆ ರಾಷ್ಟ್ರಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲಿದೆ. ಅದರಲ್ಲೂ ಸದ್ಯಕ್ಕೆ ಭಾರತದಲ್ಲಿ ಐಫೋನ್ 14, 12, 13 ಮತ್ತು 14 ಪ್ಲಸ್ ವೇರಿಯಂಟ್‌ಗಳನ್ನು ಅಸ್ಸೆಂಬಲಿಂಗ್ ಮಾಡಲಾಗುತ್ತಿದೆ.

ಮೂರು ಅಸೆಂಬಲಿಂಗ್ ಪಾಲುದಾರರನ್ನು ಹೊಂದಿರುವ ಭಾರತ
ಭಾರತದಲ್ಲಿ ಆಪಲ್‌ ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಜೊತೆ ಅಸೆಂಬಲಿಂಗ್ ವಿಚಾರದಲ್ಲಿ ಪಾಲುದಾರಿಕೆ ಹೊಂದಿದ್ದು, ಈ ಮೂವರು ಸಹ ಸರ್ಕಾರದ ಉತ್ಪನ್ನ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಹಾಗೆಯೇ ಮುಂಬರುವ ವರ್ಷಗಳಲ್ಲಿ ಉತ್ಪಾದನೆಯು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ಇತ್ತೀಚೆಗೆ ಮಾಹಿತಿ ನೀಡಿರುವುದನ್ನು ಗಮನಿಸಬಹುದು.

ಭಾರತದ ಕೊಡುಗೆ ದೊಡ್ಡದು!
CY2021 ರಲ್ಲಿ ಜಾಗತಿಕವಾಗಿ ಐಫೋನ್ ಉತ್ಪಾದನೆಯಲ್ಲಿ ಭಾರತವು 3 ರಿಂದ 4 ಪ್ರತಿಶತದಷ್ಟು ಕೊಡುಗೆ ನೀಡಿರುವುದು ಪ್ರಮುಖ ವಿಷಯ. ಹಾಗೆಯೇ CY2023 ರ ವೇಳೆಗೆ ಅದು ಇನ್ನಷ್ಟು ಹೆಚ್ಚಾಗಲಿದ್ದು, ಈ ಮೂಲಕ 7-8 ಪ್ರತಿಶತವನ್ನು ನೀಡಲಿದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ತಿಳಿಸಿದೆ.

ಸಾವಿರಾರು ಕೋಟಿ ಮೌಲ್ಯದ ಐಫೋನ್‌ ರಫ್ತು ಮಾಡಿದ ಭಾರತ; ಸ್ಯಾಮ್‌ಸಂಗ್‌ಗೆ ಹಿನ್ನಡೆ!

ಐಫೋನ್‌ ಬಳಕೆದಾರರು ಭಾರತದಲ್ಲಿಯೇ ಹೆಚ್ಚಿದ್ದಾರೆ
ಸಾಮಾನ್ಯವಾಗಿ ಐಫೋನ್‌ನ ಡಿವೈಸ್‌ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಿಯೇ ಇದೆ. ಇದರ ನಡುವೆ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಐಫೋನ್‌ಗಳನ್ನು ಅಸೆಂಬಲಿಂಗ್‌ ಮಾಡುವ ಕಾರ್ಯ ಸಹ ಜರುಗುತ್ತಿದ್ದು, ಈ ಎಲ್ಲಾ ಕಾರ್ಯಗಳ ಜೊತೆಗೆ ಐಪ್ಯಾಡ್ ವೇರಿಯಂಟ್‌ ಅನ್ನು ಸಹ ಉತ್ಪಾದನೆ ಮಾಡಲು ಭಾರತ ಮುಂದಾಗಿರುವುದು ಇದರ ಸಾಧನೆಗೆ ಇನ್ನಷ್ಟು ಸಾಕ್ಷ್ಯ ಎಂಬಂತಾಗಿದೆ.

ಇದರ ನಡುವೆ ಆಪಲ್‌ ದೇಶದಲ್ಲಿ ಕೆಲವು ಐಪ್ಯಾಡ್ ತಯಾರಿಕೆಯನ್ನು ಆರಂಭಿಸಲು ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬ ಬಗ್ಗೆ ಕೆಲವು ತಿಂಗಳ ಹಿಂದೆಯಷ್ಟೇ ಮಾಹಿತಿ ತಿಳಿದುಬಂದಿತ್ತು.ಇದೆಲ್ಲದಕ್ಕೂ ಪ್ರಮುಖ ಕಾರಣ ಎಂದರೆ ಯುಎಸ್ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಡುತ್ತಿರುವುದು. ಅದರಲ್ಲೂ ಕೊರೊನಾ ವಿಚಾರದಲ್ಲಿ ಚೀನಾದ ನಿರ್ಧಾರಗಳು ಭಾರತವೂ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗಿದೆ.

Best Mobiles in India

English summary
India exported iPhones worth thousands of crores in a single month, overtaking Samsung. report in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X