ಫೇಸ್‌ಬುಕ್ ಅತಿಬಳಕೆಯಿಂದ ಮನೋರೋಗ

By Ashwath
|

ಫೇಸ್‌ಬುಕ್‌ ಬಳಸುವ ಮಂದಿಗೆ ಒಂದು ಶಾಕಿಂಗ್‌ ನ್ಯೂಸ್‌. ಫೇಸ್‌ಬುಕ್‌ನ್ನು ಅತಿಯಾಗಿ ಬಳಸಬೇಡಿ. ಫೇಸ್‌ಬುಕ್‌ ಸೇರಿದಂತೆ ಸೋಶಿಯಲ್‌ ನೆಟ್‌ವರ್ಕ್‌ಗಳ ಅತಿಯಾದ ಬಳಕೆ ನಿಮ್ಮ ಮನೋರೋಗಕ್ಕೆ ಕಾರಣವಾಗಬಹುದು.

ಜನ ಇಂದು ಸೋಶಿಯಲ್‌ ನೆಟ್‌ವರ್ಕ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದು,ಇದರಿಂದಾಗಿ ಮಾನಸಿಕ ರೋಗಗಳು ಅತಿಯಾಗಿ ಕಾಣಿಸಲಾರಂಭಿಸಿವೆ ಎಂದು ಸಮೀಕ್ಷೆ ನಡೆಸಿದ ಶಲ್ವಾತಾ ಮಾನಸಿಕ ಆರೋಗ್ಯ ಶುಶ್ರೂಷಾ ಕೇಂದ್ರದ ವೈದ್ಯರು ಎಚ್ಚರಿಸಿದ್ದಾರೆ.

ಫೇಸ್‌ಬುಕ್ ಅತಿಬಳಕೆಯಿಂದ ಮನೋರೋಗ

ಸಾಮಾಜಿಕ ತಾಣಗಳ ಅತಿ ಬಳಕೆ ಮಾಡುವವರಿಗೆ ಒಂಟಿತನ, ವ್ಯಾಕುಲತೆ, ಗೊಂದಲಕ್ಕೊಳಗಾಗುವುದು ಅತಿಯಾಗಿ ಕಾಣಿಸಿದೆ. ಸಾಮಾಜಿಕ ಜಾಲತಾಣದ ಬಳಕೆಯೊಂದಿಗೆ ಆಪ್ತರೊಂದಿಗೆ ವಿಪರೀತ ಚಾಟಿಂಗ್‌, ವೀಡಿಯೋ ಕಾಲಿಂಗ್‌ ಮಾಡುವುದು ಹೆಚ್ಚಾಗುತ್ತಿದೆ. ಇದು ಬಹಳ ಅಪಾಯಕಾರಿ ಎಂದು ಸಮೀಕ್ಷೆ ತಿಳಿಸಿದೆ.

ಒಂದು ವೇಳೆ ಆಪ್ತರು ಫೇಸ್‌ಬುಕ್‌ನಲ್ಲಿ ಲಭ್ಯವಿಲ್ಲದೇ ಹೋದಲ್ಲಿ, ಮಾನಸಿಕವಾಗಿ ಜರ್ಝರಿತಗೊಳ್ಳುತ್ತಾರೆ. ಜೊತೆಗೆ ಪ್ರತಿದಿನವು ಏನಾದ್ರೂ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್‌,ಫೋಟೋ ಅಪ್‌ಲೋಡ್‌ ಮಾಡಲೇಬೇಕೆಂಬ ಹಂಬಲ ಜನರಲ್ಲಿ ಕಾಣಿಸಲಾರಂಭಿಸಿದೆ . ಒಂದು ವೇಳೆ ಅಪ್‌ಲೋಡ್‌ ಮಾಡದಿದ್ದಲ್ಲಿ ನಾವು ಏನೋ ಒಂದು ಅಂಶ ಕಳೆದುಕೊಂಡಿದ್ದೇವೆ ಎಂದು ಭಾವಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಸಂಬಂಧ ಕಡಿದುಕಕೊಳ್ಳುವುದು ಇತ್ಯಾದಿಗಳಿಂದ, ಬಳಕೆದಾರರು ಮನೋರೋಗಿಯಾಗಿ ಮಾರ್ಪಡುತ್ತಾರೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಫೇಸ್‌ಬುಕ್‌ ಶಾರ್ಟ್‌ಕಟ್‌ ಕೀಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X