Subscribe to Gizbot

ಮಾರ್ಕ್ ಜುಕರ್‌ಬರ್ಗ್: ಕಿರಿಯ ವಯಸ್ಸಿನ ವಿಶ್ವದ ಆಗರ್ಭ ಶ್ರೀಮಂತ

Posted By:

ಫೇಸ್‌ಬುಕ್ ಸಹಸ್ಥಾಪಕರು ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ 35 ರ ಹರೆಯದಲ್ಲೇ ಅತಿ ಹೆಚ್ಚು ಶ್ರೀಮಂತ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ವೆಲ್ತ್ ಎಕ್ಸ್ ರಿಪೋರ್ಟ್ ಈ ಸುದ್ದಿಯನ್ನು ಬಹಿರಂಗಪಡಿಸಿದ್ದು ವೈಯಕ್ತಿಕ ಗಳಿಕೆ $41.6 ಬಿಲಿಯನ್ ಜುಕರ್‌ಬರ್ಗ್ ಬೊಕ್ಕಸದಲ್ಲಿದೆ.

ಓದಿರಿ: ಮೃತ ವ್ಯಕ್ತಿಗಳೊಂದಿಗೆ ಸೆಲ್ಫಿ ತೆಗೆದುಕೊಂಡವರಿಗೆ ಬಹುಮಾನ

ಇನ್ನು ಫೇಸ್‌ಬುಕ್ ಸಹಸ್ಥಾಪಕರಾದ ಜುಕರ್‌ಬರ್ಗ್ ಗೆಳೆಯ ಡಸ್ಟಿನ್ ಮೋಸ್ಕೊವಿಜ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದು ಆದಾಯ $9.3 ಬಿಲಿಯನ್ ಆಗಿದೆ ಮತ್ತು ಎಡ್ಯುರ್ಡೊ ಸೇವರಿನ್ $5.3 ಬಿಲಿಯನ್ ಗಳಿಕೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಂಬರ್‌ ಒನ್‌ ಸ್ಥಾನ

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಮಾರ್ಕ್‌ ಜುಕರ್‌ಬರ್ಗ್‌ ಅನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದರೆ ವಾಸ್ತವದಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ವಿಶ್ವದ ಅದರಲ್ಲಿಯೂ ತಾಂತ್ರಿಕ ಲೋಕದ ಯುವ ಕೋಟ್ಯಾಧಿಪತಿಗಳ ಸಾಲಿನಲ್ಲಿ ಮಾತ್ರವಷ್ಟೇ ಅಗ್ರಪಟ್ಟಿಯಲ್ಲಿ ಕಾಣಸಿಗುತ್ತಾರೆ.

ವಾಸ್ತವದಲ್ಲಿ ಸೌಮ್ಯ ಸ್ವಭಾವ

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಮಾರ್ಕ್ ಜುಕರ್‌ಬರ್ಗ್‌ ಕುರಿತಾಗಿ ಹಬ್ಬಿರುವ ಮತ್ತೊಂದು ವದಂತಿ ಆತ ಮಾಹಾನ್‌ ದುರಹಂಕಾರಿ ಹಾಗೂ ಹಟವಾದಿ.ಆದರೆ ವಾಸ್ತವದಲ್ಲಿ ಜುಕರ್‌ಬರ್ಗ್‌ ಈ ಸ್ವಭಾವ ಹೊಂದಿಲ್ಲ. ಕಾಲೇಜು ಸಹಪಾಟಿಗಳ ಪ್ರಕಾರ ಜುಕರ್‌ಬರ್ಗ್‌ ತೀರಾ ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಹೆಸರುವಾಸಿಯಾಗಿದ್ದಾರೆ.

ವಿದ್ಯಾರ್ಥಿ

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಮಾರ್ಕ್‌ ಜುಕರ್‌ಬರ್ಗ್‌ ಮೊದಲಿನಿಂದಲೂ ಓರ್ವ ಉದ್ಯಮಿ ಯಾಗಿದ್ದರು ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಜುಕರ್‌ಬರ್ಗ್‌ ಓರ್ವ ಸಾಮಾನ್ಯ ವಿದ್ಯಾರ್ಥಿ ಆಗಿದ್ದರು ಫೇಸ್‌ಬುಕ್‌ ಸಂಸ್ಥೆಯ ಯಶಸ್ಸಿನ ಬಳಿಕವಷ್ಟೇ ಅವರು ಶ್ರೀಮಂತ ಉದ್ಯಮಿಯಾಗಿ ಪ್ರಸಿದ್ದರಾಗಿದ್ದಾರೆ.

ಕೀಟಲೆ ವ್ಯಕ್ತಿ

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಜುಕರ್‌ಬರ್ಗ್‌ ಸಾಮಾನ್ಯವಾಗಿ ಯಾರೊಂದಿಗೂ ಹೆಚ್ಚಿನ ಬಾಂಧವ್ಯ ಇಟ್ಟು ಕೊಳ್ಳದ ವ್ಯಕ್ತಿ ಎನ್ನುವ ಮಾತಿದೆ. ಆದರೆ ಇದು ಶುದ್ಧ ಸುಳ್ಳು. ಜುಕರ್‌ಬರ್ಗ್‌ ತಮ್ಮ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ದೊಡ್ಡ ಪ್ರಮಾಣದ ಗೆಳೆಯರನ್ನು ಹೊಂದಿದ್ದರು ಹಾಗೂ ತರಲೇ ಸ್ವಭಾವದ ವ್ಯಕ್ಯಿಯಾಗಿದ್ದರು.

ಹೆಚ್ಚು ಆದಾಯ

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಹಾವಾರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವಾಗಲೇ ಅರ್ಧದಲ್ಲಿ ಗುಡ್‌ಬೈ. ಕಾಲೇಜ್‌ ಬಿಟ್ಟ ನಂತರ ಸ್ನೇಹಿತ ಡಸ್ಟಿನ್‌ ಜೊತೆ ಸೇರಿ ಫೇಸ್‌ಬುಕ್‌ ಸ್ಥಾಪನೆ. ಕಳೆದ ವರ್ಷದ ಜುಕರ್‌ಬರ್ಗ್ ಆದಾಯ 13.3 ಬಿಲಿಯನ್‌ ಡಾಲರ್‌

ಅಮೇರಿಕದ ಜನತೆಗೆ ಮಾತ್ರ ಅವಕಾಶ

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ನೀವು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ ಬರ್ಗ್‌ಗೆ ಸಂದೇಶ ಕಳುಹಿಸಬಹುದು. ನೂರು ಡಾಲರ್‌ ಖರ್ಚು ಮಾಡಿ ಜುಕರ್‌ಬರ್ಗ್‌ ಇನ್‌ಬಾಕ್ಸ್‌ಗೆ ಸಂದೇಶ ಕಳುಹಿಸಬಹುದು. ಅಮೆರಿಕದ ಜನತೆಗೆ ಮಾತ್ರ ಈ ಅವಕಾಶ ಲಭ್ಯವಿದೆ.

ಅತ್ಯುತ್ತಮ ಬಾಸ್‌

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಉದ್ಯೋಗ ಮತ್ತು ಉದ್ಯೋಗ ಸ್ಥಳಗಳನ್ನು ಅಧ್ಯಯನ ಮಾಡುವ ಆನ್‌ಲೈನ್‌ ತಾಣ ಗ್ಲಾಸ್‌ಡೂರ್‌ ಅತ್ಯುತ್ತಮ ಬಾಸ್‌ ಪಟ್ಟ ಮಾರ್ಕ್ ಜುಕರ್‌ರ್ಗ್‌ಗೆ ಒಲಿದಿದೆ. ಫೇಸ್‌ಬುಕ್‌ನ ಶೇ.99 ರಷ್ಟು ಉದ್ಯೋಗಿಗಳು ಜ್ಯುಕರ್‌ಬರ್ಗ್ ಬಾಸ್‌ ಸ್ಥಾನಕ್ಕೆ ಸರಿಯಾದ ವ್ಯಕ್ತಿ ಎಂದು ಹೇಳಿದ್ದಾರೆ.

ಅಭಿಪ್ರಾಯ ಮಂಡನೆ

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಪ್ರತೀ ಶುಕ್ರವಾರ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಉದ್ಯೋಗಿಗಳ ಜೊತೆ ಸಂವಾದ ನಡೆಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಉದ್ಯೋಗಿಗಳು ತಮ್ಮ ಅಭಿಪ್ರಾಯವನ್ನು ಜುಕರ್‌ಬರ್ಗ್ ಜೊತೆ ಹೇಳುತ್ತಾರೆ.

ಫಾಲೋವರ್ಸ್

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಫೇಸ್‌ಬುಕ್‌ನಲ್ಲಿರುವ ಮಾರ್ಕ್‌ ಜುಕರ್‌ಬರ್ಗ್ ಅಧಿಕೃತ ಖಾತೆಯನ್ನು 17,930,812 ಮಂದಿ ಫಾಲೋ ಮಾಡುತ್ತಿದ್ದಾರೆ.

ಜುಕರ್‌ಬರ್ಗ್ ವಿವಾಹ ಮಾರ್ಕ್

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಜುಕರ್‌ಬರ್ಗ್ ಮದುವೆಯ ವಿಚಾರ ಯಾರಿಗೂ ತಿಳಿಸಿದೇ ಕೊನೆ ಕ್ಷಣದಲ್ಲಿ ಪಾರ್ಟಿಯಲ್ಲಿ ಕಾಲೇಜ್‌ ಗೆಳತಿ ಪ್ರಿಸಿಲ್ಲಾ ಚಾನ್ಳನ್ನು ವಿವಾಹವಾಗಿದ್ದರು. ಪ್ರೈವೆಸಿ ಸೆಟ್ಟಿಂಗ್ಸನಲ್ಲಿ ಬದಲಾವಣೆ ಮಾಡಿಕೊಂಡು ಜುಕರ್‌ಬರ್ಗ್ ಮದುವೆಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಡೇಟ್‌ ಮಾಡಿದ್ದರು. ಈ ರೀತಿ ಯಾರಿಗೂ ತಿಳಿಸದೇ ಜುಕರ್‌ಬರ್ಗ್ ಮದುವೆಯಾಗಿದ್ದು ವಿಶ್ವದಲ್ಲಿ ಚರ್ಚೆಯಾಗಿತ್ತು.

ಫೇಸ್‌ಬುಕ್‌ಗೆ ಹ್ಯಾಕರ್ ಸಂದೇಶ

35 ಕ್ಕೆ ವಿಶ್ವದ ಆಗರ್ಭ ಶ್ರೀಮಂತ

ಪ್ಯಾಲೆಸ್ಟೈನ್‌ ಖಾಲಿ ಶ್ರೀಥ್‌(Khalil Shreateh) ಎನ್ನುವ ಹ್ಯಾಕರ್‌ ಫೇಸ್‌ಬುಕ್‌ನಲ್ಲಿ ಬಳಕೆದಾರರ ಅಕೌಂಟ್‌ ಹ್ಯಾಕ್‌ ಮಾಡಿ ಅವರ ವಾಲ್‌ನಲ್ಲಿ ಬೇರೊಬ್ಬರು ಮಾಹಿತಿಯನ್ನು ಪೋಸ್ಟ್‌ ಮಾಡಬಹುದು ಎಂದು ಫೇಸ್‌ಬುಕ್‌ಗೆ ತಿಳಿಸಿದ್ದ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook co-founder and CEO Mark Zuckerberg is the wealthiest individual under the age of 35, with a personal fortune of $41.6 billion, says a Wealth-X report.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot