ಫೇಸ್ ಬುಕ್ ಡೆವೆಲಪರ್ ಮೇಳ:ಬೆಂಗಳೂರಿನಲ್ಲಿ

Posted By: Varun
ಫೇಸ್ ಬುಕ್ ಡೆವೆಲಪರ್ ಮೇಳ:ಬೆಂಗಳೂರಿನಲ್ಲಿ

950 ಮಿಲಿಯನ್ ಖಾತೆದಾರರನ್ನು ಹೊಂದಿರುವ ಫೇಸ್ ಬುಕ್ ವಿಶ್ವದಾದ್ಯಂತ ಡೆವಲಪರ್ ಗಳಿಗೆ ಎಂತಲೇ 'ಫೇಸ್ ಬುಕ್ ಡೆವಲಪರ್ ಹ್ಯಾಕ್ 2012 ಅನ್ನು ನಡೆಸಲಿದೆ ಎಂಬ ಸುದ್ದಿ ಬಂದಿದೆ.

ಆಗಸ್ಟ್ ತಿಂಗಳಿಂದ ಸೆಪ್ಟೆಂಬರ್ ತಿಂಗಳ ವರೆಗೆ ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಇದನ್ನು ನಡೆಸಲು ಯೋಜಿಸಿರುವ ಫೇಸ್ ಬುಕ್, ಬೆಂಗಳೂರಿನಲ್ಲಿ ಸೆಪ್ಟಂಬರ್ 17 ಕ್ಕೆ ಇದು ನಡೆಯಲಿದೆ.

ಫೇಸ್ ಬುಕ್ ತಾಣಕ್ಕೆ ಆಪ್ ಗಳನ್ನು ಡೆವೆಲಪ್ ಮಾಡಲು ಇಚ್ಛೆ ಇರುವ ಕೊಡರ್ (coder) ಗಳಿಗೆ ಹಾಗು ಈಗಾಗಲೇ ಫೇಸ್ ಬುಕ್ ಗೋಸ್ಕರ ಆಪ್ ಅನ್ನು ಡೆವೆಲಪ್ ಮಾಡುತ್ತಿರುವ coder ಗಳು ಇದರಲ್ಲಿ ಭಾಗವಹಿಸಬಹುದಿದ್ದು, ಇದರ ಬಗ್ಗೆ ತಾಂತ್ರಿಕ ತರಗತಿಗಳನ್ನು ನಡೆಸಲೂ ಫೇಸ್ ಬುಕ್ ಕೊಡಲಿದೆ.

ಇದಷ್ಟೇ ಅಲ್ಲದೆ ಹ್ಯಾಕ್ ಮಾಡುವ 8 ಗಂಟೆಗಳ ಸ್ಪರ್ಧೆಯೂ ಇದ್ದು, ಹ್ಯಾಕರುಗಳೂ ಇದರಲ್ಲಿ ಭಾಗವಹಿಸುವ ಅವಕಾಶವಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ತಂಡಕ್ಕೆ ಫೇಸ್ ಬುಕ್ ನ ಸ್ಯಾನ್ ಫ್ರಾನ್ಸಿಸ್ಕೋ ಆಫೀಸ್ ನೋಡುವ ಅವಕಾಶವಿದೆ.

ನೀವು ಡೆವಲಪರ್ ಅಥವಾ ಹ್ಯಾಕರ್ ಆಗಿದ್ದರೆ ಮಾರ್ಕ್ ಜುಕರ್ ಬರ್ಗ್ ಅನ್ನು ಭೇಟಿ ಮಾಡುವ ಅವಕಾಶ ಮಿಸ್ ಮಾಡಿಕೊಳ್ಳದಿರಲು ಇಲ್ಲಿ ಕ್ಲಿಕ್ ಮಾಡಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot