Just In
Don't Miss
- Sports
ಇಂಗ್ಲೆಂಡ್ ವಿರುದ್ಧದ ಸರಣಿಗೆ ನೆಟ್ ಬೌಲರ್ ಆಗಿ ಕರ್ನಾಟಕದ ಕೆ ಗೌತಮ್ ಆಯ್ಕೆ
- News
Jesus Calls ಮಿಷನರಿಯ ದಿನಕರನ್ ಮೇಲೆ ಐಟಿ ದಾಳಿ
- Finance
ಪ್ರಧಾನ ಮಂತ್ರಿ ಜನ್ ಧನ್ ಯೋಜನಾಗೆ 41 ಕೋಟಿಗೂ ಹೆಚ್ಚು ಫಲಾನುಭವಿಗಳು
- Automobiles
ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು
- Lifestyle
ಚಳಿಗಾಲದಲ್ಲಿ ಕೂದಲ ಆರೈಕೆಗೆ ಇಲ್ಲಿವೆ ಸರಳ ಮನೆಮದ್ದುಗಳು
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಾಮಾಜಿಕ ಅಂತರ ಪ್ರೋತ್ಸಾಹಿಸಲು ಹೊಸ ಗೇಮಿಂಗ್ ಫೀಚರ್ಸ್ ಪರಿಚಯಿಸಿದ ಫೇಸ್‌ಬುಕ್!
ಚೀನಾದಲ್ಲಿ ಹುಟ್ಟಿ ಇಂದು ಇಡೀ ಜಗತ್ತಿಗೆ ಕಂಟಕವಾಗಿದೆ ಕೊರೊನಾ ವೈರಸ್, ಕೊರೊನಾ ವೈರಸ್ ಹರಡದಂತೆ ತಡೆಯಲು ಜಗತ್ತಿನ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಅನ್ನು ಘೋಷಣೆ ಮಾಡಿವೆ. ಇದೇ ಸಂಧರ್ಭದಲ್ಲಿ ಸೋಶಿಯಲ್ ಮೀಡಿಯಾ ಆಪ್‌ಗಳು ಕೂಡ ತಮ್ಮ ಬಳಕೆದಾರರಿಗೆ ಕೊರೊನಾ ವೈರಸ್ ಕುರಿತಂತೆ ಜಾಗೃತಿ ಮೂಡಿಸುತ್ತಿವೆ. ಸಂದೇಶಗಳ ಮೂಲಕ, ಕಿರು ವೀಡಿಯೋಗಳ ಮೂಲಕ ಜಾಗೃತಿ ಮೂಡಿಸುತ್ತವೆ. ಅಷ್ಟೇ ಅಲ್ಲ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮನೆಯಲ್ಲಿ ಕಾಲಕಳೆಯುತ್ತಿರುವ ಬಳಕೆದಾರರಿಗೆ ಹೊಸ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿ ಅವರಿಗೆ ಬೋರ್ ಆಗದಂತೆ ಇರುವುದಕ್ಕೆ ಪ್ರಯತ್ನಿಸುತ್ತಿವೆ. ಇಂತಹವುಗಳಲ್ಲಿ ಸೊಶೀಯಲ್ ಮೀಡಿಯಾ ಆಪ್ ಫೇಸ್‌ಬುಕ್ ಕೂಡ ಒಂದಾಗಿದೆ.

ಹೌದು ಜಾಗತಿಕವಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಫೇಸ್‌ಬುಕ್ ಕೊರೊನಾ ವೈರಸ್ ವಿರುದ್ದ ಹೋರಾಡಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ತನ್ನ ಬಳಕೆದಾರರಿಗೆ ಜಾಗೃತಿ ಮೂಡಿಸುತ್ತಿದೆ. ಅಷ್ಟೆ ಅಲ್ಲ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ತನ್ನ ಬಳಕೆದಾರರಿಗಾಗಿ ಹೊಸ ಮಾದರಿಯ ಗೇಮ್ ಒಂದನ್ನ ಪರಿಚಯಿಸಿದೆ. ಇದು ಒಂದು ಮಾದರಿಯ ಅಂತರ ಕಾಪಾಡಿಕೊಳ್ಳುವ ಗೇಮ್ ಆಗಿದ್ದು, ಇದು ಆನ್‌ಲೈನ್‌ನಲ್ಲಿ ಇರುವ ಮತ್ತೊಬ್ಬ ಸ್ನೇಹಿತನ ಜೊತೆ ಆಡುವ ಗೇಮ್ ಆಗಿದೆ. ಅಷ್ಟಕ್ಕೂ ಈ ಗೇಮ್ ಆಡುವುದು ಹೇಗೆ, ಇದರ ವಿಶೇಷತೆ ಏನು? ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಬನ್ನಿರಿ.

ಸದ್ಯ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಗೇಮ್ ಅನ್ನು ಪರಿಚಯಿಸಿದೆ. ಇದಕ್ಕೆ ಟೂರ್ನಮೆಂಟ್ ಎಂದು ಹೆಸರಿಸಲಾಗಿದೆ. ಇನ್ನು ಹೆಸರೇ ಸೂಚಿಸುವಂತೆ ಇದರಲ್ಲಿ ತಮ್ಮದೇ ಆದ ಟೂರ್ನಮೆಂಟ್‌ಗಳನ್ನ ಆಡಬುದಾಗಿದೆ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ಆಟವಾಡಲು ಇದು ಅನುಮತಿಸುತ್ತದೆ. ಈ ಟೂರ್ನ್‌ಮೆಂಟ್‌ನಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬಳಕೆದಾರರು ತಮ್ಮ ಪಂದ್ಯಾವಳಿಗಳಲ್ಲಿ ಇತರ ಜನರನ್ನು ಸೇರಿಸಬಹುದಾಗಿದೆ.

ಟೂರ್ನ್‌ಮೆಂಟ್‌ನಲ್ಲಿ ಭಾಗವಹಿಸುವ ಆಟಗಾರರಿಗಾಗಿ ಗೇಮಿಂಗ್ ಈವೆಂಟ್ ಅನ್ನು ಸಹ ಆಯೋಜಿಸಬಹುದು, ಇದರಲ್ಲಿ ಸಿಂಗಲ್ಸ್ ಅಥವಾ ಟೀಮ್ ರಿಜಿಸ್ಟಾರ್, ಸೀಡಿಂಗ್ ಮತ್ತು ಸ್ಕೋರ್ ಎಂಟ್ರಿ ಇರುತ್ತದೆ. ಸಿಂಗಲ್ ಎಲಿಮಿನೇಷನ್, ಡಬಲ್ ಎಲಿಮಿನೇಷನ್ ಮತ್ತು ರೌಂಡ್ ರಾಬಿನ್ ನಂತಹ ಅನೇಕ ಗೇಮ್‌ಗಳನ್ನ ರಚಿಸಲು ಈ ಫೀಚರ್ಸ್‌ನಲ್ಲಿ ಅವಕಾಶವಿದೆ. ಅಂದರೆ ಈ ಗೇಮ್‌ರ ಫೀಚರ್ಸ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ನಿಮ್ಮದೇ ಆದ ಟೂರ್ನಮೆಂಟ್ ಅನ್ನು ಕ್ರಿಯೆಟ್ ಮಾಡಿಕೊಳ್ಳುವುದು ಅದಕ್ಕೆ ಬೇಕಾದ ಆಟಗಾರರನ್ನ ಆನ್‌ಲೈನ್‌ನಲ್ಲಿ ಆಹ್ವಾನಿಸುವುದು. ಇದು ನಿಮ್ಮ ಸಮಯವನ್ನ ಕಳೆಯಲು ಬಲು ಉಪಯುಕ್ತವಾಗಿದೆ, ಹಾಗೂ ಇದರಲ್ಲಿ ಗೇಮ್ ಅನುಭವವನ್ನ ವಿಶೇಷವಾಗಿ ಆನಂದಿಸಬಹುದಾಗಿದೆ.

ಇನ್ನು ಫೇಸ್‌ಬುಕ್‌ನ ಈ ಟೂರ್ನಮೆಂಟ್ ಫೀಚರ್ಸ್ ಮೂಲಕ ಕಂಪನಿಯು ಇ-ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿಸಲು ಸಹಾಯ ಮಾಡಲು ಉದ್ದೇಶಿಸಿದೆ. ಅನೇಕ ದೇಶಗಳಲ್ಲಿ ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಗೇಮ್ ಆಡುವ ಆಸಕ್ತದಾರರಿಗಾಗಿ ಮತ್ತು ಕ್ಯಾಶುಯಲ್ ಗೇಮಿಂಗ್ ಉತ್ಸಾಹಿಗಳಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವ ಉದ್ದೇಶವನ್ನು ಈ ಫೀಚರ್ಸ್ ಒಳಗೊಂಡಿದೆ ಮತ್ತು ಸಾಮಾಜಿಕ ದೂರವನ್ನು ಉತ್ತೇಜಿಸುತ್ತದೆ ಎಂದು ಕಂಪನಿ ಹೇಳಿದೆ.

ಇದಲ್ಲದೆ ಫೇಸ್‌ಬುಕ್ ಗೇಮಿಂಗ್ ಮೂಲಕ ವಿಶ್ವದ ಗೇಮಿಂಗ್ ಸಮುದಾಯವನ್ನು ನಿರ್ಮಿಸುವುದು ಮತ್ತು ಸ್ಪರ್ಧಾತ್ಮಕ ಮಟ್ಟವನ್ನು ಲೆಕ್ಕಿಸದೆ ಸಂಘಟಿತ ಗೇಮ್‌ಪ್ಲೇ ಅನ್ನು ಹೆಚ್ಚಿಸುವುದು. ಈ ಮೂಲಕ ಸಾಮಾಜಿಕ ಅಂತರದಲ್ಲಿದ್ದರೂ ಗೇಮ್ ಮೂಲಕ ಸಂಪರ್ಕ ಸಾಧಿಸಿ ಇನ್ನಷ್ಟು ಆತ್ಮಿಯರಾಗಿರೋದು ಫೇಸ್‌ಬುಕ್‌ನ ಉದ್ದೇಶವಾಗಿದೆ. ಅಲ್ಲದೆ ಫೇಸ್‌ಬುಕ್‌ನ ಹೊಸ ಫೀಚರ್ಸ್ ಗೇಮಿಂಗ್ ಮತ್ತು ಸಾಮಾಜಿಕ ದೂರವನ್ನು ಉತ್ತೇಜಿಸುವ ವಿಶ್ವ ಆರೋಗ್ಯ ಸಂಸ್ಥೆಯ ಉಪಕ್ರಮದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190