ಫೇಸ್‌ಬುಕ್‌ ಹೊಸ ಬದಲಾವಣೆಯಿಂದ ಬಳಕೆದಾರರಿಗೆ ಲಾಭ

By Shwetha
|

ಫೇಸ್‌ಬುಕ್‌ನಲ್ಲಿರುವ ನಿಮ್ಮ ನ್ಯೂಸ್ ಫೀಡ್ ಸಂಪೂರ್ಣವಾಗಿ ಬದಲಾಗಲಿದೆ. ನಿಮ್ಮ ಹತ್ತಿರದ ಸ್ನೇಹಿತರಿಂದ ಹೆಚ್ಚು ವಿಷಯಗಳನ್ನು ನೀವು ಕಾಣಲಿದ್ದು ಪುಟಗಳು ಅಂತೆಯೇ ಪ್ರಕಟಣೆಗಳಿಂದ ಕಡಿಮೆ ಸುದ್ದಿಗಳು ನಿಮ್ಮನ್ನು ಸಮೀಪಿಸಲಿದೆ ಎಂದು ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ತಿಳಿಸಿದೆ.

ಓದಿರಿ: ಫೇಸ್‌ಬುಕ್ ಸಂಸ್ಥೆಯ ಹೊಸ ಕಟ್ಟಡ ಹೇಗಿದೆ ಗೊತ್ತೇ?

ಫೇಸ್‌ಬುಕ್‌ ಹೊಸ ಬದಲಾವಣೆಯಿಂದ ಬಳಕೆದಾರರಿಗೆ ಲಾಭ

ಸ್ನೇಹಿತರು ಅಂತೆಯೇ ಪುಟಗಳಿಂದ ಸುದ್ದಿಗಳ ಪ್ರಕಟಣೆಯಲ್ಲಿ ಇದು ಸಮಾನ ನೀತಿಗಳನ್ನು ಇನ್ನು ಅಳವಡಿಸಿಕೊಳ್ಳಲಿದೆ ಎಂದು ಘೋಷಿಸಿದೆ. ನ್ಯೂಸ್ ಫೀಡ್‌ನ ಕೊನೆಯನ್ನು ತಲುಪಲು ಮೊದಲು ಬಳಕೆದಾರರಿಗೆ ಸಾಧ್ಯವಾಗುತ್ತಿರಲಿಲ್ಲ ಏಕೆಂದರೆ ಇದು ಒಂದೇ ಪ್ರಕಟಣೆದಾರರ ಹೆಚ್ಚಿನ ವಿಷಯಗಳನ್ನು ತೋರಿಸುತ್ತಿತ್ತು. [11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?]

ಫೇಸ್‌ಬುಕ್‌ ಹೊಸ ಬದಲಾವಣೆಯಿಂದ ಬಳಕೆದಾರರಿಗೆ ಲಾಭ

ಇನ್ನು ಎರಡನೆಯ ಬದಲಾವಣೆಯೆಂದರೆ ತಮ್ಮ ಸ್ನೇಹಿತರಿಂದ ಹೆಚ್ಚಿನ ಸುದ್ದಿಗಳನ್ನು ತಿಳಿಯಬಯಸುವವರಿಗೆ ಇದು ವರದಾಯಕವಾಗಲಿದೆ. ಪ್ರಕಟಣೆದಾರರಿಗಿಂತಲೂ ನಿಕಟ ಸ್ನೇಹಿತರ ಹೆಚ್ಚಿನ ಸುದ್ದಿಗಳು ಇನ್ನು ನಿಮ್ಮನ್ನು ಸಮೀಪಿಸಲಿವೆ. ಇನ್ನು ನಿಮ್ಮ ಸ್ನೇಹಿತರು ಬ್ರ್ಯಾಂಡ್ ಅಥವಾ ಪ್ರಕಟಣೆ ಪುಟದಿಂದ ಪೋಸ್ಟ್ ಮೂಲಕ ನಿಮ್ಮನ್ನು ಸಂಪರ್ಕಿಸಿದರೆ ನಿಮ್ಮ ಸುದ್ದಿ ಫೀಡ್‌ನಲ್ಲಿ ಕಡಿಮೆ ಪ್ರದರ್ಶನಗೊಳ್ಳುತ್ತದೆ. ಎಂದು ವರ್ಜ್ ತಿಳಿಸಿದೆ. [ಅದ್ಭುತ ಎಂದೆನಿಸುವ ವಿಶುವಲ್ ಕೈಚಳಕ]

ಫೇಸ್‌ಬುಕ್‌ ಹೊಸ ಬದಲಾವಣೆಯಿಂದ ಬಳಕೆದಾರರಿಗೆ ಲಾಭ

ನಿಮ್ಮ ಸ್ನೇಹಿತರಿಂದ ಹೆಚ್ಚು ಅಂತೆಯೇ ಪುಟಗಳಿಂದ ಕಡಿಮೆ ಸುದ್ದಿಗಳು ನಿಮ್ಮನ್ನು ಸಂಪರ್ಕಿಸಲಿವೆ. ಬ್ರ್ಯಾಂಡ್ ಅಥವಾ ಪ್ರಕಟಣೆದಾರರ ಸುದ್ದಿ ಫೀಡ್‌ಗಳು ಇನ್ನು ಕಡಿಮೆ ಸಂಖ್ಯೆಯಲ್ಲಿ ನಿಮ್ಮ ಪುಟವನ್ನು ಸಂಪರ್ಕಿಸಲಿವೆ.

Best Mobiles in India

English summary
The composition of your News Feed on your Facebook page is about to change. From now, you will see more content from your close friends and less from Pages and publishers, the social networking giant has announced...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X