Subscribe to Gizbot

ಪ್ರಸ್ತುತ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ? ಅಬ್ಬಾ!!

Written By:

ಇಡೀ ಪ್ರಪಂಚವೇ ಫೇಸ್‌ಬುಕ್ ತೆಕ್ಕೆಗೆ ಬೀಳುತ್ತದೆಯೇ? ಹೀಗೊಂದು ಪ್ರಶ್ನೆ ಮೂಡಲು ಫೇಸ್‌ಬುಕ್ ಬಳಕೆದಾರರು ಕಾರಣವಾಗಿದ್ದಾರೆ.! ಹೌದು, ಪ್ರಪಂಚದ ಕಾಲುಭಾಗಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಆವರಿಸಿಕೊಂಡು ಫೇಸ್‌ಬುಕ್ ಮುಂದುವರೆದಿದೆ. 2012 ರಲ್ಲಿ 100 ಕೋಟಿ ದಾಟಿದ್ದ ಫೇಸ್‌ಬುಕ್, ಕೇವಲ ನಾಲ್ಕೇ ವರ್ಷದಲ್ಲಿ 200 ಕೋಟಿಗೆ ದಾಟಿದೆ.!!

ಫೇಸ್‌ಬುಕ್ ಪ್ರಧಾನ ಕಾರ್ಯದರ್ಶಿ ಮತ್ತು ನಿರ್ಮತೃ ಮಾರ್ಕ್ ಜುಕರ್‌ಬರ್ಗ್ ಈ ಬಗ್ಗೆ ಟ್ವಿಟ್ ಮಾಡಿದ್ದು, 200 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದುವ ಮೂಲಕ ಪ್ರಪಂಚದ ಬಹುದೊಡ್ಡ ಸೋಶಿಯಲ್ ಮಿಡಿಯಾ ಎಂಬ ತನ್ನ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.!

ಪ್ರಸ್ತುತ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ? ಅಬ್ಬಾ!!

ಮಾರ್ಚ್ 31ರ ವೇಳಗೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 195 ಕೋಟಿ ಇದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.17ರಷ್ಟು ಏರಿಕೆ ಆಗಿದೆ.! ಕಳೆದ 30 ದಿವಸಗಳಲ್ಲಿ ಮೊಬೈಲ್, ಡೆಸ್ಕ್‌ಟಾಪ್‌ ಮೂಲಕ ಫೆಸ್‌ಬುಕ್ ಬಳಸುವವರ ಸಂಖ್ಯೆಯ ಮೂಲಕ ಈ ವರದಿ ನೀಡಿದ್ದು, 200 ಕೋಟಿ ಹೆಚ್ಚು ಬಳಕೆದಾರರು ದಾಖಲಾಗಿದ್ದಾರೆ.!!

ಪ್ರಸ್ತುತ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ? ಅಬ್ಬಾ!!

ಪ್ರಪಂಚದ ಯಾವುದೇ ದೇಶದ ಜನಸಂಖ್ಯೆಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೊದಲ ಕಂಪೆನಿಯಾಗಿ ಫೇಸ್‌ಬುಕ್ ಮೂಡಿಬಂದಿದೆ. ಇನ್ನು ಫೇಸ್‌ಬುಕ್ ನಕಲಿ ಅಕೌಂಟ್‌ಗಳ ಬಗ್ಗೆಯೂ ಸಹ ಮಾಹಿತಿ ನೀಡಿದ್ದು, ಶೇ 6 ಫೇಸ್‌ಬುಕ್ ಖಾತೆಗಳು ನಕಲಿಯಾಗಿವೆ ಎಂದು ಅಂದಾಜಿಸಲಾಗಿದೆ.!!

ಓದಿರಿ: ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಕೂಡಲೆ ಲಿಂಕ್ ಮಾಡಿ!!..ಇಲ್ಲದಿದ್ದರೆ?

English summary
It's an honor to be on this journey with you," to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot