ಪೇಸ್‌ಬುಕ್‌ ಮೆಸೆಂಜರ್‌ ರೂಮ್‌ಗಳಲ್ಲಿ ಲೈವ್‌ ಟೆಲಿಕಾಸ್ಟ್‌ ಪರಿಚಯಿಸಿದ ಫೇಸ್‌ಬುಕ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಮೆಸೆಂಜರ್ ರೂಮ್‌ಗಳನ್ನ ಪರಿಚಯಿಸಿರೋದು ನಿಮಗೆಲ್ಲಾ ತಿಳಿದಿದೆ. ಸದ್ಯ ಇದೀಗ ಮೆಸೆಂಜರ್‌ ರೂಮ್‌ಗಳಿಂದ ಫೇಸ್‌ಬುಕ್‌ಗೆ ನೇರ ಪ್ರಸಾರ ಮಾಡಲು ಹೊಸ ಡಿವೈಸ್‌ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಫೇಸ್‌ಬುಕ್ ಮತ್ತು ಮೆಸೆಂಜರ್ ವೆಬ್‌ನಲ್ಲಿ ಲಭ್ಯವಾಗುತ್ತಿದ್ದು, ಇದು ಕೆಲವೇ ಕೆಲವು ಆಯ್ದ ದೇಶಗಳಲ್ಲಿ ಮಾತ್ರ ಲಭ್ಯವಾಗಲಿದೆ. ಆದರೆ ಶೀಘ್ರದಲ್ಲೇ ಮೆಸೆಂಜರ್ ರೂಮ್‌ಗಳು ಲಭ್ಯವಿರುವ ಎಲ್ಲಾ ದೇಶಗಳು ಹಾಗೂ ಫೇಸ್‌ಬುಕ್ ಮತ್ತು ಮೆಸೆಂಜರ್ ಮೊಬೈಲ್ ಅಪ್ಲಿಕೇಶನ್ ಮತ್ತು ಮೆಸೆಂಜರ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಲ್ಲೂ ಲಬ್ಯವಾಗಲಿದೆ ಎನ್ನಲಾಗಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಮೆಸೆಂಜರ್ ರೂಮ್‌ಗಳಲ್ಲಿನ ಗ್ರೂಪ್‌ ವೀಡಿಯೊ ಕಾಲ್‌ಗಳನ್ನು 50 ಜನರೊಂದಿಗೆ ಫೇಸ್‌ಬುಕ್ ಲೈವ್ ಆಗಿ ಪರಿವರ್ತಿಸುವ ಅವಕಾಶವನ್ನು ನೀಡಿದೆ. ರೂಮ್‌ ಕ್ರಿಯೆಟರ್‌ ಆಗಿ ನೀವು ನಿಮ್ಮ ರೂಮ್‌ಅನ್ನು, ಪ್ರೊಫೈಲ್, ಪೇಜ್‌ ಅಥವಾ ಗ್ರೂಪ್‌ಗೆ ಪ್ರಸಾರ ಮಾಡಬಹುದು ಮತ್ತು ಟ್ಯೂನ್ ಮಾಡಲು ಜನರನ್ನು ಆಹ್ವಾನಿಸಬಹುದು ಎಂದು ಫೇಸ್ಬುಕ್ ತಿಳಿಸಿದೆ. ಸದ್ಯ ವಾಟ್ಸಾಪ್ ಮತ್ತು ಮೆಸೆಂಜರ್ ನಡುವೆ, ಪ್ರತಿದಿನ 700 ದಶಲಕ್ಷಕ್ಕೂ ಹೆಚ್ಚಿನ ಖಾತೆಗಳು ಕರೆಗಳಲ್ಲಿ ಭಾಗವಹಿಸುತ್ತವೆ ಎಂದು ಹೇಳಲಾಗ್ತಿದೆ.

ಮೆಸೆಂಜರ್

ಇನ್ನು ಈಗಾಗಲೇ ಅನೇಕ ದೇಶಗಳಲ್ಲಿ, ಮೆಸೆಂಜರ್ ಮತ್ತು ವಾಟ್ಸಾಪ್‌ನಲ್ಲಿ ವೀಡಿಯೊ ಕಾಲ್‌ ಬಳಕೆ ಎರಡು ಪಟ್ಟು ಹೆಚ್ಚಾಗಿದೆ. ಅದರಲ್ಲೂ ಕೊರೋನಾ ಹಾವಳಿಯಿಂದ ಇತ್ತೀಚಿನ ದಿನಗಳಲ್ಲಿ ವೀಡಿಯೋ ಗ್ರೂಪ್‌ ಕಾಲಿಂಗ್‌ ಜಾಸ್ತಿ ಆಗುತ್ತಿದೆ. ಇದಕ್ಕಾಗಿ ಹಲವು ವಿಡಿಯೋ ಆಪ್‌ಗಳ ಬಳಕೆಯನ್ನ ಬಳಕೆದಾರರು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ವಿಡಿಯೋ ಕರೆಗಳಿಗಾಗಿ ಮೆಸೆಂಜರ್‌ ರೂಮ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಫೇಸ್‌ಬುಕ್ ಅಥವಾ ಮೆಸೆಂಜರ್ ವೆಬ್‌ನಿಂದಲೇ ನೇರ ಪ್ರಸಾರವಾಗುವಂತಹ ರೂಮ್‌ಗಳನ್ನು ಕ್ರಿಯೆಟ್‌ ಮಾಡುವ ಮೂಲಕ ಫೇಸ್‌ಬುಕ್ ಖಾತೆಯನ್ನು ಹೊಂದಿಲ್ಲದಿದ್ದರೂ ಸಹ ಅವರನ್ನು ಗ್ರೂಪ್‌ಕಾಲಿಂಗ್‌ಗೆ ಸೇರಿಸುವ ಅವಕಾಶವನ್ನು ನೀಡಿದೆ.

ರೂಮ್‌ ಕ್ರಿಯೆಟರ್‌

ಇನ್ನು ರೂಮ್‌ ಕ್ರಿಯೆಟರ್‌ ಲೈವ್ ಪ್ರಸಾರವನ್ನು ಕಂಟ್ರೋಲ್‌ ಮಾಡಲಿದ್ದು, ಇದರಲ್ಲಿ ಫೇಸ್‌ಬುಕ್‌ನಲ್ಲಿ ಕೊಠಡಿ ಎಲ್ಲಿ ಹಂಚಿಕೊಳ್ಳಲಾಗಿದೆ, ಯಾರು ಪ್ರಸಾರವನ್ನು ವೀಕ್ಷಿಸಬಹುದು ಮತ್ತು ಯಾರು ಭಾಗವಹಿಸಲು ಆಹ್ವಾನಿಸಿದ್ದಾರೆ. ಯಾರು ಭಾಗವಹಿಸಬೇಕು, ಅವರಿಗೆಲ್ಲಾ ಇನ್‌ವೈಟ್‌ ನೊಟೀಫೀಕೇಶನ್‌ ಕಳುಹಿಸುವ ಅವಕಾಶ ಇರುತ್ತದೆ. ಅಲ್ಲದೆ ಮೆಸೆಂಜರ್‌ ರೂಮ್‌ ಕ್ರಿಯೆಟರ್‌ ಯಾವುದೇ ಸಮಯದಲ್ಲಿ ಲೈವ್ ಪ್ರಸಾರದಿಂದ ಭಾಗವಹಿಸುವವರನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು ಮತ್ತು ರೂಮ್‌ ಮಿಟೀಂಗ್‌ನಲ್ಲಿ ಭಾಗವಹಿಸುವವರು ಸಹ ಯಾವುದೇ ಸಮಯದಲ್ಲಿ ಲೈವ್ ಪ್ರಸಾರವನ್ನು ಬಿಡಬಹುದು. ಇದಲ್ಲದೆ ಲೈವ್‌ ಟೆಲಿಕಾಸ್ಟ್‌ ಸಮಯದಲ್ಲಿ ರೂಮ್‌ ಕ್ರಿಯೆಟರ್‌ ರೂಮ್‌ ಅನ್ನು ಲಾಕ್ ಮಾಡಬಹುದು ಮತ್ತು ಅನ್ಲಾಕ್ ಮಾಡಬಹುದು ಎಂದು ಫೇಸ್ಬುಕ್ ಹೇಳಿದೆ.

ರೂಮ್‌ ಕ್ರಿಯೆಟರ್

ಅಲ್ಲದೆ ರೂಮ್‌ ಕ್ರಿಯೆಟರ್‌ ಲೈವ್‌ಗೆ ಹೋಗಲು ಆಯ್ಕೆ ಮಾಡಿದಾಗ, ಪ್ರಸಾರವನ್ನು ಫೇಸ್‌ಬುಕ್‌ಗೆ ಹಂಚಿಕೊಳ್ಳಬಹುದಾಗಿದೆ. ಜೊತೆಗೆ ರೂಮ್‌ ಹೊರಗಿನ ಜನರು ಪ್ರೇಕ್ಷಕರ ಆಧಾರದ ಮೇಲೆ ರೂಮ್‌ನಲ್ಲಿ ಏನು ನಡೆಯುತ್ತಿದೆ ಮತ್ತು ಫೇಸ್‌ಬುಕ್‌ನಲ್ಲಿ ರೂಮ್‌ ಅನ್ನು ಎಲ್ಲಿ ಹಂಚಿಕೊಳ್ಳಲಾಗಿದೆ ಎಂಬುದನ್ನು ನೋಡಬಹುದು. ಇತರ ಲೈವ್ ವೀಡಿಯೊಗಳಂತೆ, ಅವರು ಸಮುದಾಯ ಮಾನದಂಡಗಳನ್ನು ಅನುಸರಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು ಪ್ರಸಾರದಿಂದ ಆಡಿಯೋ ಮತ್ತು ವೀಡಿಯೊಗಳನ್ನು ಸಂಗ್ರಹಿಸಬಹುದು ಮತ್ತು ಪರಿಶೀಲಿಸಬಹುದು ಎಂದು ಫೇಸ್‌ಬುಕ್ ಹೇಳಿದೆ.

Best Mobiles in India

English summary
Facebook Messenger Rooms is a video calling platform integrated into the Facebook Messenger app for group video calling.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X