ಫೇಸ್‌ಬುಕ್‌ಗೆ ಬಂತು ಹ್ಯಾಶ್‌ ಟ್ಯಾಗ್

By Ashwath
|

ಫೇಸ್‌ಬುಕ್‌ನಲ್ಲಿ ಇದುವರೆಗೂ ಟ್ರೆಂಡಿಂಗ್ ವಿಚಾರದ ಪೋಸ್ಟ್‌ನ್ನು ಪತ್ತೆ ಮಾಡವುದು ಕಷ್ಟವಾಗುತಿತ್ತು. ಆದರೆ ಇನ್ನೂ ಮುಂದೆ ನೀವು ಸುಲಭವಾಗಿ ಟ್ರೆಂಡಿಂಗ್‌ ಪೋಸ್ಟ್‌ಗಳನ್ನು ಪತ್ತೆ ಮಾಡಬಹುದು.ಈ ಸಂಬಂಧ ಟ್ವೀಟರ್‌ನಲ್ಲಿ ಇರುವಂತೆ '#' ಟ್ಯಾಗ್‌ನ್ನು ಅಳವಡಿಸಿರುವುದಾಗಿ ಫೇಸ್‌ಬುಕ್‌ ಹೇಳಿದೆ .

ಬಳಕೆದಾರರು ನಿರ್ದಿಷ್ಟ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಾಲ್‌ನಲ್ಲಿ ಅಭಿಪ್ರಾಯವನ್ನು ಬರೆದು ಕೊನೆಗೆ # ಟ್ಯಾಗಿನೊಂದಿಗೆ ಅದು ಯಾವ ವಿಚಾರಕ್ಕೆ ಸಂಬಂಧಿಸಿದ್ದು ಎನ್ನುವುದನ್ನು ಟೈಪ್‌ ಮಾಡಿ ಪೋಸ್ಟ್‌ ಮಾಡಿದ ಅಭಿಪ್ರಾಯವನ್ನು ಉಳಿದವರು ನೋಡಬಹುದು. ಜೂನ್‌ 13, ರಿಂದ ಫೇಸ್‌ಬುಕ್‌ ಈ ಸೇವೆಯನ್ನು ಆರಂಭಿಸಿದ್ದು ' #' ಟ್ಯಾಗ್‌ ಸೇವೆ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಮತ್ತಷ್ಟು ವಿಶೇಷತೆಗಳನ್ನು ಸೇರಿಸಲಾಗುವುದು ಎಂದು ಫೇಸ್‌ಬುಕ್ ತನ್ನ ನ್ಯೂಸ್‌ರೂಮ್‌ನಲ್ಲಿ ಪ್ರಕಟಿಸಿದೆ.

ಫೇಸ್‌ಬುಕ್‌ಗೆ ಬಂತು ಹ್ಯಾಶ್‌ ಟ್ಯಾಗ್

ಫೇಸ್‌ಬುಕ್‌ನಲ್ಲಿ # ಟ್ಯಾಗನ್ನು ಹೀಗೆ ಬಳಸಿ:

ಉದಾಹರಣೆಗೆ ಐಪಿಎಲ್‌ ಸ್ಪಾಟ್ ಫಿಕ್ಸಿಂಗ್‌ ಅಭಿಪ್ರಾಯ ಎಲ್ಲರಿಗೂ ತಿಳಿಯಬೇಕು ಎಂದು ಭಾವಿಸಿದ್ದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯ ಬರೆದು ಕೊನೆಗೆ "# ಐಪಿಎಲ್‌ ಸ್ಪಾಟ್ ಫಿಕ್ಸಿಂಗ್‌" ಎಂದು ಟೈಪ್‌ ಮಾಡಿ ಪೋಸ್ಟ್‌ ಮಾಡಿದರಾಯಿತು. ಈ ವಿಚಾರ ಫೇಸ್‌ಬುಕ್‌ನಲ್ಲಿರುವ ಉಳಿದವರು ನೋಡಬೇಕು ಎಂದು ಅನಿಸಿದ್ದಲ್ಲಿ ಅವರು " # ಐಪಿಎಲ್‌ ಸ್ಪಾಟ್ ಫಿಕ್ಸಿಂಗ್‌" ಹ್ಯಾಶ್‌ ಟ್ಯಾಗ್‌ನ ಮೇಲೆ ಕ್ಲಿಕ್‌ ಮಾಡಿದಾರಾಯಿತು. ಆಗ ಇದುವರೆಗೂ "# ಐಪಿಎಲ್‌ ಸ್ಪಾಟ್ ಫಿಕ್ಸಿಂಗ್‌" ಎನ್ನುವ ಹೆಸರಿನಲ್ಲಿ ಯಾರೆಲ್ಲ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್‌ ಮಾಡಿದ್ದಾರೋ ಅವರ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ಕಾಣುತ್ತವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X