ಫೇಸ್‌ಬುಕ್‌ನಲ್ಲಿನ್ನು ದ್ವೇಷ ಬಿತ್ತುವ ಪೋಸ್ಟ್‌ ಮಾಡಿದರೆ ನಿಷೇಧ!!

|

ಫೇಸ್‌ಬುಕ್‌ ಮೂಲಕ ಪ್ರಚೋದನಕಾರಿ, ದ್ವೇಷ ಬಿತ್ತುವ, ಅಸಂಬದ್ಧ ಹಾಗೂ ಅವಹೇಳನಕಾರಿ ವಿಷಯಗಳನ್ನು ಪೋಸ್ಟ್‌ ಮಾಡುವ ಫೇಸ್‌ಬುಕ್‌ ಬಳಕೆದಾರರಿಗೆ ಕಡಿವಾಣ ಹಾಕಲು ಫೇಸ್‌ಬುಕ್ ಸಂಸ್ಥೆ ಮುಂದಾಗಿದೆ. ಬಳಕೆದಾರರು ಪೋಸ್ಟ್‌ ಮಾಡುವ ವಿಷಯ ಪರಿಶೀಲನೆಗಾಗಿ ಸ್ವತಂತ್ರ ಘಟಕವೊಂದನ್ನು ರಚಿಸುವುದಾಗಿ ಫೇಸ್‌ಬುಕ್ ಕಂಪೆನಿ ಘೋಷಿಸಿದೆ.

ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ, ದ್ವೇಷ ಬಿತ್ತುವ, ಅಸಂಬದ್ಧ ಹಾಗೂ ಅವಹೇಳನಕಾರಿ ವಿಷಯಗಳನ್ನು ಪೋಸ್ಟ್‌ ಮಾಡುತ್ತಿರುವ ಬಗ್ಗೆ ಹಲವಾರು ರಾಷ್ಟ್ರಗಳಿಂದ ದೂರುಗಳು ಕೇಳಿ ಬಂದಿದ್ದವು. ಹಾಗಾಗಿ, ಇಂತಹ ವಿಷಯಗಳನ್ನು ಪೋಸ್ಟ್‌ ಮಾಡುವುದರ ಮೇಲೆ ನಿಷೇಧ ಹೇರಬೇಕು ಎಂಬ ಒತ್ತಡ ಹೆಚ್ಚಿದ ಕಾರಣ, ಫೇಸ್‌ಬುಕ್‌ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ.

ಫೇಸ್‌ಬುಕ್‌ನಲ್ಲಿನ್ನು ದ್ವೇಷ ಬಿತ್ತುವ ಪೋಸ್ಟ್‌ ಮಾಡಿದರೆ ನಿಷೇಧ!!

ಬಳಕೆದಾರರ ಪೋಸ್ಟ್‌ ಪರಿಶೀಲನೆಗೆ ಸ್ವತಂತ್ರ ಘಟಕ ರಚಿಸುವ ಸುದ್ದಿ ಹೊರಬಿದ್ದ ತಕ್ಷಣವೇ ಮಾರ್ಕ್‌ ಝುಕರ್‌ಬರ್ಗ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. 'ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸುರಕ್ಷಿತತೆ ಬಗ್ಗೆ ನಾವು ನಮ್ಮಷ್ಟಕ್ಕೇ ತರಹೇವಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ನಂಬಿಕೆ ನನ್ನದು' ಎಂದು ಅವರು ಹೇಳಿದ್ದಾರೆ.

ಜನರ ಧ್ವನಿಯಾಗುವುದು ಹಾಗೂ ಅವರ ಸುರಕ್ಷತೆ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ ಎಂದು ಮಾರ್ಕ್‌ ಝುಕರ್‌ಬರ್ಗ್ ಹೇಳಿರುವುದರಿಂದ, ಫೇಸ್‌ಬುಕ್ ಪ್ರತಿಯೋರ್ವರ ಪೋಸ್ಟ್‌ಗಳನ್ನು ಸಹ ಪರಿಶೀಲನೆಗೆ ಒಳಪಡಿಸಲಿದೆ ಎಂದು ತಿಳಿದುಬಂದಿದೆ. ಇದ್ಕಕಾಗಿ ಕೃತಕಬಿದ್ದಿಮತ್ತೆ ತಂತ್ರಜ್ಞಾನದ ಸಹಾಯವನ್ನು ಸಹ ಫೇಸ್‌ಬುಕ್ ಪಡೆಯಲಿದೆ.

ಫೇಸ್‌ಬುಕ್‌ನಲ್ಲಿನ್ನು ದ್ವೇಷ ಬಿತ್ತುವ ಪೋಸ್ಟ್‌ ಮಾಡಿದರೆ ನಿಷೇಧ!!

ಬಳಕೆದಾರರು ಪೋಸ್ಟ್‌ ಮಾಡುವ ವಿಷಯ ಪರಿಶೀಲನೆಗಾಗಿ ಸ್ವತಂತ್ರ ಘಟಕ ರಚಿಸಲು ಫೇಸ್‌ಬುಕ್ ಮತ್ತಷ್ಟು ಬಂಡವಾಳವನ್ನು ಹೋಡಬೇಕಾದ ಪರಿಸ್ಥಿತಿ ಎದುರಾದರೂ, ಇದರಿಂದ ಉದ್ಯೋಗ ಸೃಷ್ಟಿಯಾಗುತ್ತಿರುವುದು ಮತ್ತೊಂದು ಸಿಹಿ ಸುದ್ದಿ ಎನ್ನಬಹುದು. ಏಕೆಂದರೆ, ಸ್ವತಂತ್ರ ಘಟಕಕ್ಕಾಗಿ ಕನಿಷ್ಟವೆಂದರೂ 500 ಉದ್ಯೋಗಗಳು ಹುಟ್ಟುವ ಅಂದಾಜಿದೆ.

Best Mobiles in India

English summary
Facebook spent much of Thursday attempting to quell the fire caused by the New York Times' report about executive inaction and politicking on Facebook's many crises over the past three years. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X