ಹೋಳಿ ಹಬ್ಬದ ಅವತಾರ್‌ ಸ್ಟಿಕ್ಕರ್ ಪರಿಚಯಿಸಿದ ಫೇಸ್‌ಬುಕ್‌!

|

ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್‌ಬುಕ್‌ ಹೊಳಿ ಹಬ್ಬದ ಪ್ರಯುಕ್ತ ಬಳಕೆದಾರರಿಗೆ ಹೊಸ ಅವತರ್‌ ಸ್ಟಿಕ್ಕರ್‌ಗಳನ್ನು ಪರಿಚಯಿಸಿದೆ. ಬಣ್ಣದ ಹಬ್ಬ ಹೋಳಿ ಹಬ್ಬವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಇದೇ ಕಾರಣಕ್ಕೆ ಬಣ್ಣಗಳ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಫೇಸ್‌ಬುಕ್ ಹೋಳಿ-ಹಬ್ಬದ ಅವತಾರ್ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಟಿಕ್ಕರ್‌ಗಳು ಫೇಸ್‌ಬುಕ್ ಅಪ್ಲಿಕೇಶನ್ ಮತ್ತು ಫೇಸ್‌ಬುಕ್ ಮೆಸೆಂಜರ್‌ನಲ್ಲೂ ಲೈವ್ ಆಗಿರಲಿವೆ.

ಸೋಶಿಯಲ್ ಮೀಡಿಯಾ

ಹೌದು, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ ಫೇಸ್‌ಬುಕ್‌ ಹೋಳಿ ಹಬ್ಬದ ಸಂಭ್ರಮಕ್ಕಾಗಿ ಹೋಳಿ ಸ್ಟಿಕ್ಕರ್‌ಗಳನ್ನು ಪರಿಚಯಿಸಿದೆ. ಇನ್ನು ಭಾರತದಲ್ಲಿ ನಾಲ್ಕು ಮಿಲಿಯನ್‌ಗೂ ಹೆಚ್ಚು ಜನರು 6.6 ಮಿಲಿಯನ್‌ಗೂ ಹೆಚ್ಚು ಪೋಸ್ಟ್‌ಗಳನ್ನು ಮತ್ತು ಹೋಳಿ ಬಗ್ಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಫೇಸ್‌ಬುಕ್ ಹೇಳಿದೆ. ಈ ಹಬ್ಬದ ಅವಧಿಯಲ್ಲಿ ಜನರಿಗೆ ಭಾವನೆ ವ್ಯಕ್ತಪಡಿಸಲು ಹೆಚ್ಚಿನ ಆಯ್ಕೆಗಳನ್ನು ನೀಡುವ ಉದ್ದೇಶದಿಂದ ಈ ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಲಾಗಿದೆ ಎಂದಿದೆ. ಹಾಗಾದ್ರೆ ಈ ಹೋಳಿ ಸ್ಟಿಕ್ಕರ್‌ಗಳನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೋಳಿ

ಫೇಸ್‌ಬುಕ್‌ ಹೋಳಿ ಹಬ್ಬದ ಸಂಭ್ರಮದಲ್ಲಿ ಜನರ ಭಾವನೆಗಳನ್ನು ಸ್ಟಿಕ್ಕರ್‌ಗಳ ರೂಪದಲ್ಲಿ ವ್ಯಕ್ತ ಪಡಿಸಲು ಅವಕಾಶ ನೀಡಿದೆ. ಇದಕ್ಕಾಗಿ ಹೋಳಿ ಅವತಾರ್‌ ಸ್ಟಿಕ್ಕರ್‌ಗಳನ್ನು ಪರಿಚಯಿಸಿದೆ. ಇನ್ನು ಈ ಹೋಳಿ ಅವತಾರ್‌ ಸ್ಟಿಕ್ಕರ್‌ಗಳು ಇದೇ ಮಾರ್ಚ್ 28 ರ ಭಾನುವಾರದಿಂದ ಪ್ರಾರಂಭವಾಗಿ ಮರುದಿನ ಕೊನೆಗೊಳ್ಳುತ್ತದೆ. ಇನ್ನು ಈ ಹೊಸ ಹೋಲಿ-ವಿಷಯದ ಅವತಾರ್ ಸ್ಟಿಕ್ಕರ್‌ಗಳು ಈಗಾಗಲೇ ಫೇಸ್‌ಬುಕ್ ಮತ್ತು ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಲೈವ್ ಆಗಿವೆ ಎಂದು ಫೇಸ್‌ಬುಕ್‌ ಹೇಳಿದೆ.

ಫೇಸ್‌ಬುಕ್‌ನಲ್ಲಿ

ಫೇಸ್‌ಬುಕ್‌ನಲ್ಲಿ ಸ್ಮೈಲಿ ಬಟನ್ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಈ ಹೊಸ ಅವತಾರ್ ಸ್ಟಿಕ್ಕರ್‌ಗಳನ್ನು ಕಾಮೆಂಟ್ ಸಂಯೋಜಕ ಪೆಟ್ಟಿಗೆಯಲ್ಲಿ ಕಾಣಬಹುದು. ನಿಮಗೆ ಸ್ಟಿಕ್ಕರ್‌ಗಳನ್ನು ನೋಡಲು ಸಾಧ್ಯವಾಗದಿದ್ದರೆ, ಇತ್ತೀಚಿನ ಆವೃತ್ತಿಗೆ ಫೇಸ್‌ಬುಕ್‌ ಅನ್ನು ಅಪ್ಡೇಟ್‌ ಮಾಡಿ. ಈ ಮೂಲಕ ಹೊಸ ವತಾರ್‌ ಸ್ಟಿಕ್ಕರ್‌ಗಳನ್ನು ಬಳಸಬಹುದಾಗಿದೆ. ವಿಭಿನ್ನ ಮಾದರಿಯ ಹೋಳಿ ಅವತಾರ್‌ ಸ್ಟಿಕ್ಕರ್‌ಗಳು ನಿಮ್ಮ ಖಷಿಯನ್ನು ಇನ್ನಷ್ಟು ಇಮ್ಮಡಿಗೊಳಿಸಲಿದೆ.

ಫೇಸ್‌ಬುಕ್‌ನಲ್ಲಿ ಹೋಲಿ-ವಿಷಯದ ಅವತಾರ್ ಸ್ಟಿಕ್ಕರ್‌ಗಳನ್ನು ಬಳಸವುದು ಹೇಗೆ?

ಫೇಸ್‌ಬುಕ್‌ನಲ್ಲಿ ಹೋಲಿ-ವಿಷಯದ ಅವತಾರ್ ಸ್ಟಿಕ್ಕರ್‌ಗಳನ್ನು ಬಳಸವುದು ಹೇಗೆ?

ಫೇಸ್‌ಬುಕ್ ಅಥವಾ ಮೆಸೆಂಜರ್‌ನಲ್ಲಿ ಹೊಸ ಹೋಲಿ-ವಿಷಯದ ಅವತಾರ್ ಸ್ಟಿಕ್ಕರ್‌ಗಳನ್ನು ಬಳಸಲು, ಬಳಕೆದಾರರು ಮೊದಲು ಕಾಮೆಂಟ್ ಸಂಯೋಜಕರಿಗೆ ಹೋಗುವ ಮೂಲಕ ತಮ್ಮ ಹೊಸ ಅವತಾರವನ್ನು ರಚಿಸಬೇಕಾಗುತ್ತದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಕಾಮೆಂಟ್ ಸಂಯೋಜಕದಲ್ಲಿನ ಸ್ಮೈಲಿ ಐಕಾನ್ ಕ್ಲಿಕ್ ಮಾಡಿ
ಹಂತ:2 ಸ್ಟಿಕ್ಕರ್ ಟ್ಯಾಬ್‌ಗೆ ಹೋಗಿ, ರಚಿಸಿ ಯು ಅವತಾರ್ ಕ್ಲಿಕ್ ಮಾಡಿ.
ಹಂತ:3 ನಿಮ್ಮ ಸ್ಕಿನ್‌ ಟೋನ್ ಮತ್ತು ಕೂದಲನ್ನು ಆರಿಸುವ ಮೂಲಕ ನಿಮ್ಮ ಅವತಾರವನ್ನು ರಚಿಸಿ. ಅವತಾರವನ್ನು ಮಾಡಿದ ನಂತರ, ನೀವು ಫೇಸ್‌ಬುಕ್ ಪೋಸ್ಟ್‌ಗಳನ್ನು ಪೋಸ್ಟ್ ಮಾಡುವಾಗ ಅಥವಾ ಕಾಮೆಂಟ್ ಮಾಡುವಾಗ ಅಥವಾ ಮೆಸೆಂಜರ್ ಬಳಸುವಾಗ ಹೊಸ ಹೋಳಿ ಸ್ಟಿಕ್ಕರ್‌ಗಳು ಸ್ಟಿಕ್ಕರ್ ಲೈಬ್ರರಿಯಲ್ಲಿ ಕಾಣಿಸುತ್ತದೆ.

Best Mobiles in India

English summary
Facebook has launched Holi-themed Avatar stickers at the onset of the festival of colours.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X