ತನ್ನ ಬಳಕೆದಾರರಿಗೆ ಸಿಹಿಸುದ್ದಿ ನೀಡಿದ ಫೇಸ್‌ಬುಕ್‌!

|

ಸೋಶೀಯಲ್‌ ಮೀಡಿಯಾ ಜಗತ್ತಿನಲ್ಲಿ ಜನಪ್ರಿಯ ಸೋಶಿಯಲ್‌ ಮೀಡಿಯಾ ಅಂತಾ ಗುರ್ತಿಸಿಕೊಂಡಿರೋ ಫೆಸ್‌ಬುಕ್‌ ಇದೀಗ ತನ್ನ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನ ಕಲ್ಪಿಸಲು ಮುಂದಾಗಿದೆ. ಫೇಸ್‌ಬುಕ್‌ ಇದೀಗ ಹೊಸ ಫೋಟೋ-ಹಂಚಿಕೆ ಸಾಧನವನ್ನು ಪ್ರಾರಂಭಿಸಿದ್ದು, ಬಳಕೆದಾರರು ತಮ್ಮ ಫೇಸ್‌ಬುಕ್ ಫೋಟೋಗಳನ್ನು ನೇರವಾಗಿ ಇತರ ವೆಬ್-ಆಧಾರಿತ ಸೇವೆಗಳಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುವಂತಹ ಆಯ್ಕೆಯನ್ನ ನೀಡೋಕೆ ಫೇಸ್‌ಬುಕ್‌ ಮುಂದಾಗಿದೆ.

ಫೇಸ್‌ಬುಕ್‌

ಹೌದು ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಫೇಸ್‌ಬುಕ್‌ ಫೋಟೋಗಳನ್ನ ಇತರೆ ವೆಬ್‌ಸೇವೆಗಳಿಗೂ ಆಪ್‌ಲೋಡ್‌ ಮಾಡಲು ಅವಕಾಶ ನೀಡಿದೆ. ಈ ಮೂಲಕ ಒಂದೇ ಚಿತ್ರವನ್ನು ವಿವಿಧ ಸೇವೆಗಳಿಗೆ ಪ್ರತ್ಯೇಕವಾಗಿ ಅಪ್‌ಲೋಡ್ ಮಾಡುವ ತೊಂದರೆಯಿಂದ ಬಳಕೆದಾರರನ್ನು ತಪ್ಪಿಸಲು ಹೊಸ ಹೆಜ್ಜೆಯನ್ನ ಇಟ್ಟಿದೆ. ಸದಾ ಬಳಕೆದಾರರ ಹಿತಕ್ಕೆ ಮೊದಲ ಆಧ್ಯತೆ ನೀಡುವ ಫೇಸ್‌ಬುಕ್‌ ಪ್ರಾಯೋಗಿಕವಾಗಿ ಐರ್ಲೆಂಡ್‌ನಲ್ಲಿ ಇಂತಹದೊಂದು ಪ್ರಯತ್ನವನ್ನ ನಡೆಸಿದೆ.

ಇನ್‌ಸ್ಟಾಗ್ರಾಂ

ಈ ಹೊಸ ಆಯ್ಕೆಯಿಂದ ಒಂದೇ ಬಾರಿಗೆ ಫೇಸ್‌ಬುಕ್‌ಗೆ ಆಪ್‌ಲೋಡ್‌ ಮಾಡಿದ ಫೋಟೋವನ್ನ ಇತರೆ ವೆಬ್‌ ಸೇವೆಗಳಾದ ಗೂಗಲ್‌, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌,ಇತರೆ ಸೇವೆಗಳಿಗೂ ಅದೇ ಪೋಟೋವನ್ನ ಒಮ್ಮೆಲೆ ಅಪ್‌ಲೋಡ್‌ ಮಾಡಬಹುದಾಗಿದೆ. ಫೇಸ್‌ಬುಕ್‌ ತನ್ನ ಹೊಸ ಸಾಧನವನ್ನು ಐರ್ಲೆಂಡ್‌ನಲ್ಲಿ ಪ್ರಾಯೋಗಿಕವಾಗಿ ನಡೆಸಿದ ಪರೀಕ್ಷೆಯ ಮೊದಲ ಹಂತದಲ್ಲಿ ಬಳಕೆದಾರರು ತಮ್ಮ ಫೇಸ್‌ಬುಕ್ ಫೋಟೋಗಳು ಮತ್ತು ವೀಡಿಯೊಗಳನ್ನು ನೇರವಾಗಿ ಗೂಗಲ್ ಫೋಟೋಗಳಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಐರ್ಲೆಂಡ್‌

ಐರ್ಲೆಂಡ್‌ ನಲ್ಲಿ ಫೇಸ್‌ಬುಕ್‌ ಬಳಕೆದಾರರಿಗೆ ಈ ಅವಕಾಶ ಸಿಗುತ್ತಿದ್ದು ಮುಂದಿನ ದಿನಗಳಲ್ಲಿ ಅಂದರೆ 2020 ರ ಮೊದಲಾರ್ಧದಲ್ಲಿ ಈ ಹೊಸ ಆಯ್ಕೆಯನ್ನ ಜಗತ್ತಿನಾದ್ಯಂತ ತನ್ನ ಬಳಕೆದಾರರಿಗೆ ತಲುಪಿಸಲು ಫೇಸ್‌ಬುಕ್‌ ಪ್ಲ್ಯಾನ್‌ ಮಾಡಿಕೊಂಡಿದೆ. ಈಗಾಗಲೇ ಈ ಹೊಸ ಆಯ್ಕೆಯ ಜಾರಿಯ ಬಗ್ಗೆ ಚರ್ಚೆಗಳಾಗ್ತಿದ್ದು, ಬಳಕೆದಾರರಿಗೆ ಹೇಗೆ ಈ ಹೊಸ ಆಯ್ಕೆಯ ಸೇವೆಯನ್ನ ನಿಡಬೇಕು. ಇದರಿಂದ ಏನೆಲ್ಲಾ ಅವಕಾಶಗಳು ಸೃಷ್ಟಿಯಾಗಲಿವೆ ಅನ್ನೊದರ ಬಗ್ಗೆ ಪ್ರಾಯೋಗಿಕ ಸಂಶೋಧನೆಗೆ ಫೇಸ್‌ಬುಕ್‌ ಮುಂದಾಗಿದೆ.

 ಡೌನ್‌ಲೋಡ್

ಸಧ್ಯ ನೀವು ಐರ್ಲೆಂಡ್‌ನಲ್ಲಿ ವಾಸಿಸುವ ಫೇಸ್‌ಬುಕ್ ಬಳಕೆದಾರರಾಗಿದ್ದರೆ ಫೇಸ್‌ಬುಕ್ ಮಾಹಿತಿಯೊಳಗಿನ ಫೇಸ್‌ಬುಕ್ ಸೆಟ್ಟಿಂಗ್‌ಗಳಲ್ಲಿ ಈ ಹೊಸ ಆಯ್ಕೆಯನ್ನ ನೀವು ಗಮನಿಸಬಹುದಾಗಿದೆ. ಅಲ್ಲದೆ ನಿಮ್ಮ ಮಾಹಿತಿಯನ್ನು ಫೇಸ್‌ಬುಕ್ ಅಪ್ಲಿಕೇಶನ್‌ನ ಅದೇ ವಿಭಾಗದಿಂದ ಡೌನ್‌ಲೋಡ್ ಮಾಡಬಹುದು. ಐರ್ಲೆಂಡ್‌ ಬಿಟ್ಟು ಇನ್ನುಳಿದ ರಾಷ್ಟ್ರಗಳ ಬಳಕೆದಾರರು ಈ ಆಯ್ಕೆಯನ್ನ ಉಪಯೋಗಿಸಲು ಇನ್ನು ಕೆಲವು ದಿನಗಳವರೆಗೂ ಕಾಯಲೇಬೇಕಾಗುತ್ತದೆ

ಇಂಗ್ಲೆಂಡ್‌

ಇನ್ನು ಮಾಹಿತಿ ಸೋರಿಕೆಯಾಗದಂತೆ ತಡೆಯಲು ಈಗಾಗ್ಲೆ ಜರ್ಮನಿ, ಇಂಗ್ಲೆಂಡ್‌ ಸೇರಿದಂತೆ ಇತರೆ ರಾಷ್ಟ್ರಗಳ ವಕೀಲರ ಜೊತೆಗೂ ನಾವು ಚರ್ಚಿಸಿದ್ದೇವೆ ಅಂತಾ ಫೇಸ್‌ಬುಕ್‌ ಹೇಳಿಕೊಂಡಿದೆ. ಹೊಸ ಟೂಲ್‌ ಮೆಟಿರಿಯಲ್‌ ನಿಂದ ಮುಂದಿನ ದಿನಗಳಲ್ಲಿ ಮತ್ತೊಂದು ವೆಬ್‌ ಆಧಾರಿತ ಸೇವೆಗೆ ಫೇಸ್‌ಬುಕ್‌ ಫೋಟೋ ಆಪ್‌ಲೋಡ್‌ ಮಾಡುವಾಗ ಓಪನ್-ಸೋರ್ಸ್ ಡೇಟಾ ವರ್ಗಾವಣೆಯನ್ನ ಗೌಪ್ಯವಾಗಿಡಲು ಕೋಡ್ ಅನ್ನು ರೂಪಿಸಲಾಗಿದೆ ಅಂತಾ ಫೇಸ್‌ಬುಕ್‌ ಹೇಳಿದೆ. ಆದ್ರೆ ಬಳಕೆದಾರರ ಮಾಹಿತಿಯನ್ನ ಗೌಪ್ಯವಾಗಿಡಲು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಅನ್ನೋದು ಮುಂದಿನ ದಿನಗಳಲಷ್ಟೇ ಗೊತ್ತಾಗಬೇಕಿದೆ.

Most Read Articles
Best Mobiles in India

Read more about:
English summary
Facebook has launched a new photo-sharing tool that is aimed to help users to share their photos from Facebook on to other services. The service has been launched in Ireland and Facebook will introduce it across the world in 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X