ಫೇಸ್‌ಬುಕ್‌ನಿಂದ ಟಿಕ್‌ಟಾಕ್‌ ಶೈಲಿಯ ಬಾರ್ಸ್‌ ಅಪ್ಲಿಕೇಶನ್‌ ಲಾಂಚ್‌!

|

ಫೇಸ್‌ಬುಕ್‌ ಸಾಮಾಜಿಕ ಜಾಲತಾಣಗಳ ದೈತ್ಯ ಅಂತಾನೇ ಪ್ರಸಿದ್ಧಿ ಪಡೆದುಕೊಂಡಿದೆ. ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಹೊಸ ಹೊಸ ಅನುಭವವನ್ನು ನೀಡುತ್ತಿದೆ. ಸದ್ಯ ಇದೀಗ ಫೇಸ್‌ಬುಕ್ ಟಿಕ್‌ಟಾಕ್‌ ಮಾದರಿಯ ಬಾರ್ಸ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಥೇಟ್‌ ಟಿಕ್‌ಟಾಕ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಇನ್ನು ಫೇಸ್‌ಬುಕ್‌ ಈ ಬಾರಿ ಬಡ್ಡಿಂಗ್ ರಾಪ್ಪರ್‌ಗಳನ್ನು ಗುರಿಯಾಗಿಸಿಕೊಂಡು ಈ ಆಪ್‌ ಅನ್ನು ಕ್ರಿಯೆಟ್‌ ಮಾಡಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಟಿಕ್‌ಟಾಕ್‌ ಶೈಲಿಯ ಬಾರ್ಸ್‌ ಅಪ್ಲಿಕೇಶನ್‌ ಅನ್ನು ಲಾಂಚ್‌ ಮಾಡಿದೆ. ಇದನ್ನು ಫೇಸ್‌ಬುಕ್‌ನ ಹೊಸ ಉತ್ಪನ್ನ ಪ್ರಯೋಗ (NPE) R & D ತಂಡವು ಅಭಿವೃದ್ಧಿಪಡಿಸಿದ್ದು, ಸದ್ಯ ಈ ಹೊಸ ಅಪ್ಲಿಕೇಶನ್ ಕ್ಲೋಸ್‌ ಬೀಟಾ ಪರೀಕ್ಷೆಯಡಿಯಲ್ಲಿ ಲಭ್ಯವಿದೆ. ಇಂಟರ್‌ಬಿಲ್ಟ್‌ ಟೂಲ್ಸ್‌ಗಳನ್ನು ಬಳಸಿಕೊಂಡು ರಾಪ್‌ಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಬಾರ್ಸ್ ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇನ್ನುಳಿದಂತೆ BARS ಅಪ್ಲಿಕೇಶನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ಪರಿಚಯಿಸಿರುವ ಟಿಕ್‌ಟಾಕ್‌ ಶೈಲಿಯ ಬಾರ್ಸ್‌ ಅಪ್ಲಿಕೇಶನ್‌ ಇಂಟರ್‌ಬಿಲ್ಟ್‌ ಟೂಲ್ಸ್‌ ಬಳಸಿ ವಿಷಯವನ್ನು ರಚಿಸಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಇದಕ್ಕಾಗಿ ಯಾವುದೇ formal ರಾಪ್ ಅನುಭವದ ಅಗತ್ಯವಿಲ್ಲ ಎಂದು NPE ತಂಡ ಹೇಳಿದೆ. ಸಾಂಪ್ರದಾಯಿಕ ಶಾರ್ಟ್‌-ವೀಡಿಯೊ ಶೇರಿಂಗ್‌ ಅಪ್ಲಿಕೇಶನ್‌ಗಳಂತಲ್ಲದೆ, ಫೇಸ್‌ಬುಕ್‌ನ BARS ಅನ್ನು ರಾಪಿಂಗ್ ಶೈಲಿಯಲ್ಲಿ ವಿಷಯವನ್ನು ರಚಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ನಿಮ್ಮ ಪದಗಳನ್ನು ವೃತ್ತಿಪರ ಶೈಲಿಯ ರಾಪ್‌ಗಳಾಗಿ ಪರಿವರ್ತಿಸಲು ಇದು ಮೊದಲೇ ರೆಕಾರ್ಡ್ ಮಾಡಿದ ಬೀಟ್‌ಗಳನ್ನು ಒಳಗೊಂಡಿದೆ.

ಅಪ್ಲಿಕೇಶನ್‌

ಈ ಅಪ್ಲಿಕೇಶನ್‌ ಅಲ್ಲಿ ರಾಪಿಂಗ್‌ ಶೈಲಿಯ ವಿಷಯಗಳನ್ನು ಕ್ರಿಯೆಟ್‌ ಮಾಡಬಹುದಾಗಿದೆ. ಇದಲ್ಲದೆ ನಿಮ್ಮ ಹರಿವನ್ನು ಮುಂದುವರಿಸಲು ಪ್ರಾಸಬದ್ಧ ನಿಘಂಟನ್ನು ಬಳಸುವ ಪ್ರಾಸಗಳನ್ನು ಸಹ ಅಪ್ಲಿಕೇಶನ್ ಸೂಚಿಸುತ್ತದೆ. ಜೊತೆಗೆ ಇದರಲ್ಲಿ ಚಾಲೆಂಜ್ ಮೋಡ್ ಇದೆ, ಇದರಿಂದ ನೀವು ಸ್ವಯಂ-ಸೂಚಿಸಿದ ಪದ ಸೂಚನೆಗಳೊಂದಿಗೆ ಫ್ರೀಸ್ಟೈಲ್ ಮಾಡುವ ಸಾಮರ್ಥ್ಯವನ್ನು ಪಡೆಯಬಹುದಾಗಿದೆ. ಇನ್ನು ನಿಮ್ಮ ಸಾಹಿತ್ಯ ಮತ್ತು ಹರಿವನ್ನು ನೀವು ಪೂರೈಸಿದ ನಂತರ, ನಿಮ್ಮ ರಾಪ್ ವಿಷಯವನ್ನು ಹೆಚ್ಚಿಸಲು ಫೇಸ್‌ಬುಕ್ ಬಾರ್ಸ್ ಅಪ್ಲಿಕೇಶನ್ ನಿಮಗೆ ವಿವಿಧ ಆಡಿಯೋ ಮತ್ತು ವಿಶುಯಲ್ ಫಿಲ್ಟರ್‌ಗಳನ್ನು ಒದಗಿಸುತ್ತದೆ.

ಅಪ್ಲಿಕೇಶನ್

ಇದಲ್ಲದೆ ವೀಡಿಯೊಗಳಲ್ಲಿ ನಿಮ್ಮ ವೋಕಲ್‌ ಔಟ್‌ಪುಟ್‌ ಬದಲಾಯಿಸಲು ನೀವು ಕ್ಲೀನ್, ಆಟೋಟೂನ್, ಇಮ್ಯಾಜಿನರಿ ಫ್ರೆಂಡ್ಸ್ ಮತ್ತು ಎಎಮ್ ರೇಡಿಯೊದಂತಹ ಪೂರ್ವ ಲೋಡ್ ಮಾಡಿದ ಟೂಲ್ಸ್‌ಗಳನ್ನು ಪಡೆಯಬಹುದಾಗಿದೆ. ನಿಮ್ಮ ರಾಪ್ ವೀಡಿಯೊಗಳನ್ನು ರಫ್ತು ಮಾಡಲು ಮತ್ತು ನೀವು ಸಂಸ್ಕರಣೆಯನ್ನು ಮುಗಿಸಿದ ನಂತರ ಅವುಗಳನ್ನು ನಿಮ್ಮ ಕ್ಯಾಮೆರಾ ರೋಲ್‌ಗೆ ಉಳಿಸಲು BARS ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ನಿಮ್ಮ ವಿಷಯವನ್ನು ನೀವು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಸದ್ಯ BARS ಅಪ್ಲಿಕೇಶನ್ ಆಪಲ್‌ನ ಯುಎಸ್ ಆಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಲು ಲಭ್ಯವಿದೆ ಮತ್ತು ಆರಂಭದಲ್ಲಿ ಕಡಿಮೆ ಸಂಖ್ಯೆಯ ಐಒಎಸ್ ಬಳಕೆದಾರರಿಗೆ ಮಾತ್ರ ಪ್ರವೇಶಿಸಬಹುದು. ಅಪ್ಲಿಕೇಶನ್‌ನಲ್ಲಿನ ವೇಟ್‌ಲಿಸ್ಟ್‌ಗಾಗಿ ನೀವು ಸೈನ್ ಅಪ್ ಮಾಡಬಹುದು.

Best Mobiles in India

English summary
Facebook BARS app comes with several tools such as pre-recorded beats and rhyming dictionary to let anyone create raps.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X