ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗಾಗಿ ಹೊಸ ಪ್ರೋಗ್ರಾಮ್‌ ಪರಿಚಯಿಸಿದ ಫೇಸ್‌ಬುಕ್‌!

|

ಕೊರೋನಾದಂತಹ ಸಾಂಕ್ರಾಮಿಕ ರೊಗ ಇಡೀ ವಿಶ್ವವನ್ನೇ ಭಾದಿಸುತ್ತಿದೆ. ಕೊರೋನಾ ಹೊಡೆತದಿಂದಾಗಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿವೆ. ಹಲವು ಉದ್ಯಮಗಳು ಬಾಗಿಲು ಮುಚ್ಚಿವೆ. ಇಂತಹ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಅನುಕೂಲಕರವಾಗುವ ಪ್ರೋಗ್ರಾಂ ಒಂದನ್ನ ಫೇಸ್‌ಬುಕ್‌ ಪ್ರಾರಂಭಿಸಿದೆ. ಈ ಮೂಲಕ ಫೇಸ್‌ಬುಕ್‌ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳು ಹೇಗೆ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ತಮ್ಮ ವ್ಯವಹಾರಗಳನ್ನ ನಡೆಸಬೇಕು ಎನ್ನುವ ಮಾರ್ಗಸೂಚಿಯನ್ನು ಸಿದ್ದ ಪಡಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಸಣ್ಣ ಮತ್ತು ಮದ್ಯಮ ವರ್ಗದ ವ್ಯಾಪಾರಿಗಳಿಗಾಗಿ ಕಾರ್ಯಕ್ರಮ ಒಂದನ್ನು ರೂಪಿಸಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ತಮ್ಮ ವ್ಯವಹಾರವನ್ನು ಹೇಗೆ ಡಿಜಿಟಲೀಕರಣ ಮಾಡುವುದು? ಆನ್‌ಲೈನ್‌ನಲ್ಲಿ ಸಂಭಾವ್ಯ ಗ್ರಾಹಕರನ್ನು ತಲುಪುವುದು ಹೇಗೆ ಎಂಬುದರ ಕುರಿತು ಹಂತ-ಹಂತದ ನಿರ್ದೇಶನವನ್ನು ಒದಗಿಸಲು ಹೊಸ ಮಾರ್ಗದರ್ಶಿಯನ್ನು ವಿನ್ಯಾಸಗೊಳಿಸಿದೆ. ಇದಕ್ಕಾಗಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮತ್ತು ಆನ್‌ಲೈನ್ ಅನ್ನು ಬಳಸಿಕೊಳ್ಳುವುದು ಹೇಗೆ, ಸೃಜನಶೀಲ ಮತ್ತು ಕಾರ್ಯಕ್ಷಮತೆ ತಂತ್ರಗಳಂತಹ ಪ್ರಮುಖ ವಿಷಯಗಳನ್ನು ಈ ಪ್ರೋಗ್ರಾಂ ಒಳಗೊಂಡಿದೆ. ಹಾಗಾದ್ರೆ ಈ ಪ್ರೋಗ್ರಾಂನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ SMB ಅಂದರೆ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳು ಇವರಿಗೆ ಸಿದ್ದ ಪಡಿಸಿರುವ ಪ್ರೋಗ್ರಾಂ ಗೈಡ್‌ಗೆ ಆಫ್‌ಲೈನ್ ಉಚಿತವಾಗಿದೆ. ವಿಭಿನ್ನ ಭೌಗೋಳಿಕ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ವ್ಯವಹಾರಗಳನ್ನು ಬೆಂಬಲಿಸುವ ಸಲುವಾಗಿ ಇದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಿದೆ. ಸದ್ಯ ಫೇಸ್‌ಬುಕ್ ದೇಶಾದ್ಯಂತ 9 ಮಿಲಿಯನ್ SMBಗಳನ್ನು ತಲುಪುತ್ತಿದೆ. ಜೊತೆಗೆ ಯುವ ಉದ್ಯಮಗಳನ್ನು ಅಳೆಯುವ ಕಂಪನಿಯ ಪ್ರಮುಖ ಕೌಶಲ್ಯ ಮತ್ತು ಕಲಿಕೆಯ ಕಾರ್ಯಕ್ರಮವಾಗಿ ಇದನ್ನು ರೂಪಿಸುವುದಕ್ಕೆ ಫೇಸ್‌ಬುಕ್‌ ಮುಂದಾಗಿದೆ.

ಫೇಸ್‌ಬುಕ್

ಸದ್ಯ ಫೇಸ್‌ಬುಕ್ ಸೀಸನ್ ಆಫ್ ಸಪೋರ್ಟ್ ಅನ್ನು ಪ್ರಾರಂಭಿಸಿದೆ, ಇದು ಈ ಸಮಯದಲ್ಲಿ ವ್ಯವಹಾರವನ್ನು ಹೆಚ್ಚಿಸಲು ಮತ್ತು ಸಣ್ಣ ವ್ಯವಹಾರಗಳಿಗೆ ಮಾರಾಟವನ್ನು ಹೆಚ್ಚಿಸಲು ಮೀಸಲಾದ ಮಾರ್ಗದರ್ಶಿಯನ್ನು ನೀಡಲಿದೆ. ಈ ಮಾರ್ಗದರ್ಶನವೂ ಸಣ್ಣ ವ್ಯವಹಾರಗಳಿಗೆ ಫೇಸ್‌ಬುಕ್‌ನ ತಜ್ಞರ ತಂಡದಿಂದ ಬೆಂಬಲವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಅವರ ಅಪೇಕ್ಷಿತ ಗುರಿಗಳನ್ನು ತಲುಪಲು ಸಹಾಯ ಮಾಡಲು ವೈಯಕ್ತಿಕಗೊಳಿಸಿದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ ಎಂದು ಕಂಪನಿ ಹೇಳುತ್ತದೆ.

ಕಾರ್ಯಕ್ರಮ

ಇನ್ನು ಈ ಕಾರ್ಯಕ್ರಮದ ಭಾಗವಾಗಿ, ಕಂಪನಿಯು ಹತ್ತು ನಿಮಿಷಗಳಲ್ಲಿ ಸಣ್ಣ ಕೋರ್ಸ್‌ಗಳನ್ನು ನೀಡುತ್ತಿದೆ. ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸುವುದು, ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವುದು, ಮತ್ತು ಹೆಚ್ಚುತ್ತಿರುವ ಮಾರಾಟಗಳು ಲಭ್ಯವಾಗುವಂತೆ ಮಾಡುವುದು, ಇದಕ್ಕಾಗಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮತ್ತು ಆನ್‌ಲೈನ್ ಅನ್ನು ಬಳಸಿಕೊಳ್ಳುವುದು ಸಾಧ್ಯವಾಗಲಿದೆ. ಫೇಸ್‌ಬುಕ್‌ ವಾಟ್ಸಾಪ್‌ ಸೇವೆಗಳನ್ನೇ ಬಲಸಿಕೊಮಡು ವ್ಯಾಪಾರಗಳನ್ನ ಇನ್ನಷ್ಟು ಪ್ರಚಾರಗೊಳಿಸುವ ಸೃಜನಶೀಲ ಮತ್ತು ಕಾರ್ಯಕ್ಷಮತೆ ತಂತ್ರಗಳಂತಹ ಪ್ರಮುಖ ವಿಷಯಗಳನ್ನು ಈ ಪ್ರೋಗ್ರಾಂ ಒಳಗೊಂಡಿದೆ.

Best Mobiles in India

Read more about:
English summary
Facebook today rolled out a dedicated offline to online SMB Guide to help SMBs in their journey from going offline to online.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X