Subscribe to Gizbot

ಇನ್ನು ಭಾರತದಲ್ಲಿ ಮಿಸ್ಡ್ ಕಾಲ್ ಜಾಹೀರಾತುಗಳು

Written By:

ಫೇಸ್‌ಬುಕ್ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ಪ್ರಸ್ತುತ ಭಾರತದಲ್ಲಿದ್ದಾರೆ, ಆಕೆಯ ಈ ಭೇಟಿ ಕೆಲವೊಂದು ಬದಲಾವಣೆಗಳಿಗೆ ಕಾರಣವಾಗುವುದು ಖಂಡಿತ ಎಂಬ ಆಶಾಭಾವನೆಯೊಂದಿಗೆ ಹಲವಾರು ಟೆಕ್ ಸಂಸ್ಥೆಗಳು ಕಾದುಕೊಂಡಿವೆ.

ಮಾರ್ಚ್ 31, 2013 ವರ್ಷದಲ್ಲಿ, ಫೇಸ್‌ಬುಕ್‌ನ ಜಾಗತಿಕ ಆದಾಯದಲ್ಲಿ ಭಾರತದ ಪಾಲು 1% ದಷ್ಟಿದೆ. ಇಲ್ಲಿ ಫೇಸ್‌ಬುಕ್‌ಗೆ ಉತ್ತಮ ಭವಿಷ್ಯವಿದ್ದು ಉತ್ತಮ ಪ್ರಗತಿ ಸಾಧ್ಯವಿದೆ ಎಂಬುದು ಫೇಸ್‌ಬುಕ್ ಮುಖ್ಯ ಅಧಿಕಾರಿಗಳ ಅಭಿಪ್ರಾಯವಾಗಿದೆ. ಫೇಸ್‌ಬುಕ್‌ಗೆ ಭಾರತವು ಎರಡನೆಯ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂಬುದು ಕೂಡ ಶೆರಿಲ್ ಉವಾಚವಾಗಿದೆ.

ಫೇಸ್‌ಬುಕ್‌ನ ಇಂಜಿನಿಯರ್‌ಗಳು ಕೆಲವೊಂದು ಪ್ರಯತ್ನಗಳನ್ನು ಮಾಡುತ್ತಿದ್ದು ಇದರಿಂದ ಕೆಲವೊಂದು ಒಪ್ಪಂದಗಳು ಇನ್ನೂ ಸುಲಭವಾಗಲಿದೆ. ಇದು ಹೊಸ "ಮಿಸ್ಡ್ ಕಾಲ್" ಮತ್ತು ಸೌಲಭ್ಯವಾಗಿದೆ.

ಮಿಸ್ಡ್ ಕಾಲ್ ಹೊಸ ಆವಿಷ್ಕಾರಕ್ಕೆ ಫೇಸ್‌ಬುಕ್ ಸಜ್ಜು

ಕ್ವಾರ್ಟ್ಜ್ ಇಂಡಿಯಾ ಪ್ರಕಾರ, ಮಿಸ್ಡ್ ಕಾಲ್ ಎಂಬ ಅಂಶದ ಬೆಳವಣಿಗೆಯು ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಷ್ಟೊಂದು ಅಗತ್ಯವಾಗಿಲ್ಲ. ಆದರೆ ಪೂರ್ವದಲ್ಲಿ, ಈ ಪರಿಕಲ್ಪನೆ ಜೂನ್‌ನಲ್ಲಿ ಪ್ರಕಟವಾಗುತ್ತಿದೆ. ನೀವು ಯಾರಿಗಾದರೂ ಕರೆ ಮಾಡಿದಲ್ಲಿ ಅದು ರಿಂಗ್ ಆಗುತ್ತಿದ್ದಂತೆ ಹ್ಯಾಂಗ್ ಆಗುವ ಹೊಸ ಪರಿಕಲ್ಪನೆ ಇದಾಗಿದೆ. ಈ ವಿಚಾರವನ್ನು ಸರಳವಾಗಿ, ಪೂರ್ವ ಅಂಗೀಕೃತವಾಗಿ, ಕರೆಗೆ ಪಾವತಿಸದ ಸಂದೇಶವಾಗಿ ಪ್ರಸ್ತುಪಡಿಸಲಾಗಿದೆ ಎಂದು ಹೇಳಲಾಗಿದೆ.

ಮಿಸ್ಡ್ ಕಾಲ್ ಹೇಗೆ ಕಾರ್ಯನಿರ್ವಹಿಸುತ್ತದೆ
ಫೇಸ್‌ಬುಕ್‌ನಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಜಾಹೀರಾತನ್ನು ನೋಡಿದರೆ, ತಮ್ಮ ಮೊಬೈಲ್ ಡಿವೈಸ್‌ನಿಂದ ಜಾಹೀರಾತನ್ನು ಕ್ಲಿಕ್ ಮಾಡುವ ಮೂಲಕ "ಮಿಸ್ಡ್ ಕಾಲ್" ಅನ್ನು ಇರಿಸಬಹುದಾಗಿದೆ. ಇನ್ನು ಪ್ರತ್ಯುತ್ತರ ಕರೆಯಲ್ಲಿ, ವ್ಯಕ್ತಿಯು ಮೌಲ್ಯಯುತವಾದ ವಿಷಯವನ್ನು ಸ್ವೀಕರಿಸಬಹುದು ಅಂದರೆ ಸಂಗೀತ, ಕ್ರಿಕೆಟ್ ಸ್ಕೋರ್‌ಗಳು ಅಥವಾ ಸೆಲೆಬ್ರಿಟಿ ಸಂದೇಶಗಳು, ಮತ್ತು ಇದರೊಂದಿಗೆ ಜಾಹೀರಾತುದಾರರಿಂದ ಬ್ರ್ಯಾಂಡ್ ಸಂದೇಶವನ್ನು ಪಡೆಯಬಹುದು.

ಭಾರತದಲ್ಲಿ ಕೂಡ ಪ್ರಚಾರಕ್ಕಾಗಿ ಈ ಹಿಂದೆ ಈ ಕ್ರಮವನ್ನು ಅನುಸರಿಸಲಾಗಿದ್ದು, ಸ್ಪರ್ಧೆಗಳಿಗೆ ಮತ ಚಲಾಯಿಸಲು ಜನರನ್ನು ಅನುಮತಿಸುವುದು ಮುಂತಾದ ಅನುಕೂಲತೆಗಳನ್ನು ಇದು ಒದಗಿಸಿತ್ತು.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot