ಫೇಸ್ ಬುಕ್ ನಲ್ಲಿಯೇ ವಾಟ್ಸ್ ಆಪ್ ಶೇರಿಂಗ್ ಆಯ್ಕೆ..!

By Lekhaka
|

ಫೇಸ್ ಬುಕ್ ತನ್ನ ಒಡೆತನಕ್ಕೆ ಸೇರಿಕೊಂಡಿರುವ ವಾಟ್ಸ್ ಆಪ್ ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುತ್ತಿದ್ದು, ಫೇಸ್ ಬುಕ್ ಒಳಗೆ ವಾಟ್ಸ್ ಆಪ್ ಅನ್ನು ಸೇರಿಸಿಕೊಳ್ಳಲು ಹಂತ ಹಂತವಾಗಿ ಮುಂದಾಗುತ್ತಿದೆ. ಈ ಹಿನ್ನಲೆಯಲ್ಲಿ ಮೊದಲ ಬಾರಿಗೆ ಫೇಸ್ ಬುಕ್ ನಲ್ಲಿ ವಾಟ್ಸ್ ಆಪ್ ಶೇರಿಂಗ್ ಆಯ್ಕೆಯನ್ನು ನೀಡಲಾಗಿದ್ದು, ಫೇಸ್ ಬುಕ್ ಬಳಕೆದಾರರು ನೇರವಾಗಿ ಅಲ್ಲಿಂದಲೇ ತಮ್ಮ ವಾಟ್ಸ್ ಆಪ್ ಗೆ ವಿಷಯಗಳನ್ನು ಶೇರ್ ಮಾಡಬಹುದಾಗಿದೆ.

ಫೇಸ್ ಬುಕ್ ನಲ್ಲಿಯೇ ವಾಟ್ಸ್ ಆಪ್ ಶೇರಿಂಗ್ ಆಯ್ಕೆ..!


ಫೇಸ್ ಬುಕ್ ನಲ್ಲಿ ಯಾವುದೋ ಫನ್ನಿ ವೀಡಿಯೊ ಇಲ್ಲವೇ ಯಾವುದೇ ವಿಷಯವನ್ನು ನೋಡಿದ ಸಂದರ್ಭದಲ್ಲಿ ಅದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಲು ಬಯಸಿದ ಸಂದರ್ಭದಲ್ಲಿ ಅದನ್ನು ವಾಟ್ಸ್ ಆಪ್ ಮೂಲಕವೇ ತಲುಪಿಸುವ ಅವಕಾಶವನ್ನು ಫೇಸ್ ಬುಕ್ ಮಾಡಿಕೊಟ್ಟಿದೆ. ಇದಕ್ಕಾಗಿಯೇ ಫೇಸ್ ಬುಕ್ ಮೊಬೈಲ್ ಆಪ್ ನಲ್ಲಿ ಸೆಂಡ್ ಇನ್ ವಾಟ್ಸ್ ಆಪ್ ಆಯ್ಕೆಯನ್ನು ನೀಡಲಾಗಿದೆ.

ಫೇಸ್ ಬುಕ್ ಪೋಸ್ಟ್ ಗಳನ್ನು ನೇರವಾಗಿ ವಾಟ್ಸ್ ಆಪ್ ನಲ್ಲಿ ಶೇರ್ ಮಾಡುವ ಸಲುವಾಗಿ ಫೇಸ್ ಬುಕ್ ಆಪ್ ನಲ್ಲಿ ನೀಡಿರುವ ಶೇರ್ ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿದೆ. ಇದರಲ್ಲಿ ಮೂರು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಶೇರ್ ನೌ, ರೈಟ್ ಫೋಸ್ಟ್ ಮತ್ತು ಸೆಂಡ್ ಇನ್ ವಾಟ್ಸ್ ಆಪ್ ಆಯ್ಕೆಗಳನ್ನು ಕಾಣಬಹುದಾಗಿದೆ. ಇದಲ್ಲಿ ಸೆಂಡ್ ಇನ್ ವಾಟ್ಸ್ ಆಪ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ ನಿಮ್ಮ ವಾಟ್ಸ್ ಆಪ್ ಸ್ನೇಹಿತರೊಂದಿಗೆ ಫೇಸ್ ಬುಕ್ ಪೋಸ್ಟ್ ಗಳನ್ನು ಹಂಚಿಕೊಳ್ಳಬಹುದಾಗಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಓದಿರಿ: ಗೂಗಲ್‌ನಲ್ಲಿ ಸುದ್ದು ಮಾಡಿದ Who is Radhika..? ಎಲ್ಲೇಲ್ಲಿ ಟ್ರೆಂಡ್ ಆಗಿದೆ ಗೊತ್ತಾ..?

ಶೇರ್ ಇನ್ ವಾಟ್ಸ್ ಆಪ್ ಆಯ್ಕೆಯೂ ಇಂದಿನ ದಿನದಲ್ಲಿ ಸಾಮಾನ್ಯವಾಗಿದೆ. ಹಲವು ವೆಬ್ ಸೈಟ್ ಗಳು ಈ ಸೇವೆಯನ್ನು ಈಗಾಗಲೇ ಬಳಕೆದಾರರಿಗೆ ನೀಡುತ್ತಿವೆ. ಇದೇ ಮಾದರಿಯಲ್ಲಿ ಫೇಸ್ ಬುಕ್ ಸಹ ತನ್ನ ಬಳಕೆದಾರರಿಗೆ ಈ ಮಾದರಿಯಲ್ಲಿ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಫೇಸ್ ಬುಕ್ ಸಹ ಹೊಸ ಆಯ್ಕೆಯನ್ನು ಬಳಕೆದಾರರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ.

ಈ ಹಿಂದೆಯೂ ವಾಟ್ಸ್ಆಪ್ ಶಾರ್ಟ್ ಕಟ್ ಬಟನ್ ಅನ್ನು ನೀಡಲು ಫೇಸ್ ಬುಕ್ ಮುಂದಾಗಿತ್ತು ಈ ಹೊಸ ಆಯ್ಕೆಗೆ ಬಳಕೆದಾರರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ, ಫೇಸ್ ಬುಕ್ ತನ್ನ ಕ್ರಮದಿಂದ ಹಿಂದೆ ಸರಿದಿತ್ತು. ಆದರೆ ಈಗ ಮತ್ತೇ ವಾಟ್ಸ್ಆಪ್ ಶೇರಿಂಗ್ ಬಟನ್ ನೀಡಲು ಮುಂದಾಗಿದೆ.

Best Mobiles in India

English summary
Facebook likely tests ‘Send in WhatsApp’ sharing button. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X