ಫೇಸ್‌ಬುಕ್ ರುವಾರಿಗೆ ಜನ್ಮದಿನದ ಶುಭಾಶಯ

By Shwetha
|

ಫೇಸ್‌ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝೂಕರ್‌ಬರ್ಗ್ ಇಂದು ಮೂವತ್ತನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಆದರೆ ಅವರ ಧೀಮಂತಿಕೆ ಫೇಸ್‌ಬುಕ್ ಎಂಬ ಭವ್ಯ ಸಾಮಾಜಿಕ ತಾಣವನ್ನು ಅವರು ಈ ಸಣ್ಣ ವಯಸ್ಸಿನಲ್ಲೇ ಕಟ್ಟಿ ಬೆಳೆಸಿದ ರೀತಿ ನಿಜಕ್ಕೂ ಅದ್ಭುತವಾದದ್ದು.

ಕಂಪೆನಿಯ 29% ಭಾಗವನ್ನು ಹೊಂದಿರುವ ಫೇಸ್‌ಬುಕ್ ಒಳ್ಳೆಯ ಪುರೋಗತಿಯನ್ನು ಹಂತ ಹಂತವಾಗಿ ಪಡೆಯುತ್ತಾ ಮುನ್ನಡೆದಿದೆ. ಇಂದು ಇದನ್ನು ಬಳಸುವ ಬಳಕೆದಾರರ ಸಂಖ್ಯೆ ನೂರು ಮಿಲಿಯನ್‌ಗಿಂತಲೂ ಅಧಿಕವಾಗಿದ್ದು ಅದರ ಖ್ಯಾತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ.

ಅಂತರ್ಜಾಲ ಬಳಕೆಯೊಂದಿಗೆ ಸಾಮಾಜಿಕವಾಗಿ ಜನರು ಬೆಸೆದುಕೊಳ್ಳಬೇಕೆಂಬ ತುಡಿತ ಝೂಕರ್ ಬರ್ಗ್‌ನದಾಗಿತ್ತು. ಕೇವಲ ಮಾತು, ಹರಟೆಗಳಿಗೆ ಫೇಸ್‌ಬುಕ್ ಅನ್ನು ಸಿಮಿತಗೊಳಿಸದೆ ಬಾಂಧವ್ಯವನ್ನು ಬೆಸೆಯುವ ಕಾರ್ಯವನ್ನು ಕೂಡ ಈ ಸಾಮಾಜಿಕ ಜಾಲತಾಣ ಮಾಡಿದೆ. ಅದಕ್ಕೆ ಮಾರ್ಕ್ ಅಷ್ಟು ಕಷ್ಟಪಟ್ಟಿದ್ದಾರೆ. ಫೇಸ್‌ಬುಕ್ ಅಭಿವೃದ್ಧಿಗಾಗಿ ಅವಿರತ ಶ್ರಮ ವಹಿಸಿದ ಮಾರ್ಕ್ ಅದನ್ನು ಒಂದು ಉತ್ತಮ ನೆಲೆಗಟ್ಟಿಗೆ ತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಬರಿಯ ಫೇಸ್‌ಬುಕ್ ಕಂಪೆನಿಯನ್ನು ಮಾತ್ರ ನಿರ್ವಹಿಸದೇ ಅದರೊಂದಿಗೆ ವಾಟ್ಸಾಪ್ ಮತ್ತಿತರ ಜಾಲ ತಾಣ ಕಂಪೆನಿಗಳ ಮುತುವರ್ಜಿಯನ್ನು ಕೂಡ ಝೂಕರ್ ಬರ್ಗ್ ಹೊಂದಿದ್ದಾರೆ. ಸಮಯ ನಿಷ್ಟತೆ, ಪರಿಶ್ರಮ, ಸಿಬ್ಬಂದಿಯೊಂದಿಗಿನ ಉತ್ತಮ ಒಡನಾಟವೇ ಈ ಕಂಪೆನಿಯನ್ನು ಕಟ್ಟಲು ಝೂಕರ್ ಬರ್ಗ್‌ಗೆ ಒತ್ತಾಸೆಯಾಗಿದೆ. ಇನ್ನಷ್ಟು ಉತ್ತಮ ವೈಶಿಷ್ಟ್ಯಗಳನ್ನು ಝೂಕರ್‌ಬರ್ಗ್ ಹೊರತರುವ ನಿಟ್ಟಿನಲ್ಲಿದ್ದು ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಅಂತೂ ಫೇಸ್‌ಬುಕ್ ಸ್ಥಾಪಿಸಿ ಅದನ್ನು ಇಷ್ಟು ಎತ್ತರಕ್ಕೆ ಕಟ್ಟಿ ಬೆಳೆಸಿದ ರೀತಿ ನಿಜಕ್ಕೂ ಅಮೋಘವಾದುದು. ಇಂದು ತನ್ನ ಮೂವತ್ತನೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮಾರ್ಕ್ ಝೂಕರ್ ಬರ್ಗ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸೋಣ.

#1

#1

ಎಷ್ಟೇ ಬಿಝಿ ವ್ಯಕ್ತಿಯಾಗಿದ್ದರೂ ತನ್ನ ಗೆಳೆಯರೊಂದಿಗೆ ಕಳೆಯುವ ಕಾಲವನ್ನು ಝೂಕರ್ ಬರ್ಗ್ ತ್ಯಜಿಸುವುದಿಲ್ಲ.

#2

#2

1984 ಮೇ 14 ಕ್ಕೆ ಝೂಕರ್ ಬರ್ಗ್ ಜನ್ಮ ತಾಳಿದರು.

#3

#3

ತನ್ನ ಹನ್ನೆರಡನೇ ವಯಸ್ಸಿನಲ್ಲಿ ಪ್ರೊಗ್ರಾಮಿಂಗ್ ಬಗ್ಗೆ ಕಲಿತರು.

#4

#4

ಹೈಸ್ಕೂಲ್ ನಲ್ಲಿರುವಾಗ ಮೊದಲ ಮ್ಯೂಸಿಕ್ ಸಾಫ್ಟ್‌ವೇರ್‌ ಪಂಡೋರಾವನ್ನು ಅಭಿವೃದ್ಧಿಪಡಿಸಿದರು.

#5

#5

2002 ಕ್ಕೆ ಹಾರ್ವರ್ಡ್ ವಿಶ್ವವಿದ್ಯಾನಿಲಯವನ್ನು ಅವರು ಸೇರ್ಪಡೆಗೊಂಡರು.

#6

#6

ತನ್ನ ಗೆಳೆಯರೊಂದಿಗೆ ಸೇರಿಕೊಂಡು ಹಾರ್ವರ್ಡ್ ಕನೆಕ್ಷನ್ ಸಾಮಾಜಿಕ ತಾಣವನ್ನು ಆರಂಭಿಸಿದರು.

#7

#7

ನಂತರ ಪರಿಶ್ರಮ ಮತ್ತು ನಿಯಮಿತ ಅಭಿವೃದ್ಧಿಯೊಂದಿಗೆ ಫೇಸ್ ಬುಕ್ ಸ್ಥಾಪಿಸಿದರು.

#8

#8

ಝೂಕರ್ ಬರ್ಗ್ ತನ್ನ ಪತ್ನಿಯೊಂದಿಗೆ ಕಾಲಕಳೆಯುತ್ತಿರುವುದು

#9

#9

ಹಾರ್ವರ್ಡ್ ಅನ್ನು ತೊರೆದು ಪೂರ್ಣವಾಗಿ ಫೇಸ್ ಬುಕ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.

#10

#10

ಎಲ್ಲಾ ಎಡರು ತೊಡರುಗಳನ್ನು ನಿವಾರಿಸಿ ಯಶಸ್ಸಿನತ್ತ ದಾಪುಗಾಲಿಟ್ಟ ಒಬ್ಬ ಯಶಸ್ವಿ ಪುರುಷ ಮಾರ್ಕ್ ಝೂಕರ್ ಬರ್ಗ್.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X