Subscribe to Gizbot

ಫೇಸ್‌ಬುಕ್‌ ಖಾತೆಯನ್ನೇ ರದ್ದು ಮಾಡಿಬಿಡಿ ಎನ್ನುತ್ತಿದ್ದಾರೆ ಈ ಸಂಶೋಧಕರು!!..ಏಕೆ ಗೊತ್ತಾ?

Written By:

ಒಂದು ದಿನದಲ್ಲಿ ನೀವು ಎಷ್ಟು ಬಾರಿ ಫೇಸ್‌ಬುಕ್ ಅನ್ನು ತೆರೆದು ನೊಡುತ್ತೀರಾ ಎಂದು ಎಂದಾದರೂ ಆಲೋಚಿಸಿದ್ದೀರಾ?. ಆ ರೀತಿಯಲ್ಲಿ ನೀವು ಆಲೋಚನೆ ಮಾಡದಿದ್ದರೆ ಇಂದಿನಿಂದ ಆಲೋಚಿಸಲು ಶುರು ಮಾಡಿ. ಮೊಬೈಲ್‌ನಲ್ಲಿ ಫೇಸ್‌ಬುಕ್‌ ಮೊರೆಹೋಗುವುದನ್ನು ಒಂದೆರೆಡು ದಿನಗಳಾದರೂ ತಪ್ಪಿಸಲು ಪ್ರಯತ್ನಿಸಿ ನೋಡಿ.!

ಹೌದು, ಹೀಗೇಕೆ ಹೇಳುತ್ತಿದ್ದೇವೆ ಎಂದರೆ, ಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಯುನಿವರ್ಸಿಟಿಯ ಸಂಶೋಧಕರು ಫೇಸ್‌ಬುಕ್‌ ಖಾತೆಯನ್ನೇ ರದ್ದು ಮಾಡಿಬಿಡಿ, ನೆಮ್ಮದಿಯಾಗಿರಿ, ಒತ್ತಡಗಳಿಂದ ಹೊರಬನ್ನಿ ಎಂಬುದು ಅವರ ಸಲಹೆ ನಿಡಿದ್ದಾರೆ.! ಫೇಸ್‌ಬುಕ್‌ ನಿಜಕ್ಕೂ ನಮ್ಮ ಒತ್ತಡವನ್ನು ನಿವಾರಿಸುತ್ತಿಲ್ಲ. ಬದಲಾಗಿ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಫೇಸ್‌ಬುಕ್‌ ಖಾತೆಯನ್ನೇ ರದ್ದು ಮಾಡಿಬಿಡಿ ಎನ್ನುತ್ತಿದ್ದಾರೆ ಈ ಸಂಶೋಧಕರು!!

ಫೇಸ್‌ಬುಕ್‌ ಎಂಬ ಮಾಯೆ ಮೊಬೈಲಿಗರನ್ನು ಆವರಿಸಿಕೊಂಡ ಬಗೆಯೇ ಹಾಗಿದ್ದು, ಬೇಜಾರಾದಾಗ, ಮಾಡಲು ಕೆಲಸವಿಲ್ಲದಿದ್ದಾಗ, ಕೆಲಸದ ಮಧ್ಯೆ ಒಂದು ಸಣ್ಣ ಬ್ರೇಕ್‌ ಬೇಕು ಎಂದಾಗ ಮೊಬೈಲ್‌ನಲ್ಲಿ ಫೇಸ್‌ಬುಕ್‌ ಮೊರೆಹೋಗುವುದು ಸಾಮಾನ್ಯವಾಗಿದೆ. ಆದರೆ, ಫೇಸ್‌ಬುಕ್‌ ನಿಜಕ್ಕೂ ನಮ್ಮ ಒತ್ತಡವನ್ನು ನಿವಾರಿಸುತ್ತಿಲ್ಲ ಎಂದು ಸಂಶೋಧನಾ ವರದಿಯಲ್ಲಿ ಹೇಳಿದೆ.

ನಾವು ಕೆಲವರನ್ನು ಐದು ದಿನ ಫೇಸ್‌ಬುಕ್‌ನಿಂದ ದೂರವಿರುವಂತೆ ಮನವಿ ಮಾಡಿದ್ದೆವು. ಈ ಅವಧಿಯಲ್ಲಿ ಅವರಲ್ಲಿ ಒತ್ತಡಕ್ಕೆ ಕಾರಣವಾಗುವ ಹಾರ್ಮೋನುಗಳ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡುಬಂತು ಎಂದು ಕ್ವೀನ್ಸ್‌ಲ್ಯಾಂಡ್‌ ಯುನಿವರ್ಸಿಟಿಯ ಸಂಶೋಧನಾ ತಂಡದ ಮುಖ್ಯಸ್ಥ ಎರಿಕ್ ಎನ್ಮನ್ ಹೇಳಿದ್ದಾರೆ.

ಫೇಸ್‌ಬುಕ್‌ ಖಾತೆಯನ್ನೇ ರದ್ದು ಮಾಡಿಬಿಡಿ ಎನ್ನುತ್ತಿದ್ದಾರೆ ಈ ಸಂಶೋಧಕರು!!

'ಅಧ್ಯಯನಕ್ಕೆ ಒಳಪಡಿಸಿದ ವ್ಯಕ್ತಿಗಳಲ್ಲಿ ಎರಡು ಗುಂಪುಗಳನ್ನು ಮಾಡಲಾಗಿತ್ತು. ಒಂದು ತಂಡ ಫೇಸ್‌ಬುಕ್‌ನಿಂದ ಸಂಪೂರ್ಣವಾಗಿ ದೂರವಿದ್ದರೆ, ಮತ್ತೊಂದು ತಂಡ ಎಂದಿನಂತೆ ಫೇಸ್‌ಬುಕ್‌ ಬಳಸುತ್ತಿತ್ತು. ಆದರೆ ದೂರವುಳಿದ ತಂಡದ ಸದಸ್ಯರಿಗೆ ಫೇಸ್‌ಬುಕ್‌ ಇಲ್ಲದೆ ಅತೃಪ್ತಿ ಕಾಡುತ್ತಿದ್ದುದು ಕಂಡುಬಂತು ಎಂದು ಎರಿಕ್ ಎನ್ಮನ್ ಅವರು ತಿಳಿಸಿದ್ದಾರೆ.

How to view all photos, pages, comments and posts you liked on Facebook (KANNADA)

ಓದಿರಿ: ಭಾರತದಲ್ಲಿ ಇಂದಿನಿಂದ 'ನೋಕಿಯಾ 7 ಪ್ಲಸ್' ಮಾರಾಟ ಆರಂಭ!..ಬೆಲೆ ಮತ್ತು ವಿಶೇಷತೆಗಳು!!

English summary
Facebook may cause stress, study says. The more friends you have on Facebook. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot