ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್‌ಬುಕ್ ಗಿಫ್ಟ್

Written By:

ಫೇಸ್‌ಬುಕ್ ತನ್ನ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್ ಅನ್ನು ಮರುವಿನ್ಯಾಸಗೊಳಿಸಿದೆ. ಗೌಪ್ಯತೆಗೆ ಯಾವುದೇ ಧಕ್ಕೆಯಾಗದೇ ಇನ್ನು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಇಲ್ಲವೇ ಟ್ಯಾಬ್ಲೆಟ್ ಮೂಲಕ ಈ ಮಲ್ಟಿಪಲ್ ಖಾತೆಗಳ ಮೂಲಕ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಬಹುದಾಗಿದೆ.

ಪ್ರಸ್ತುತ ಅಪ್‌ಡೇಟ್ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದ್ದು ಆಪಲ್‌ನ ಐಫೋನ್ ಅಥವಾ ಐಪ್ಯಾಡ್‌ನಲ್ಲಿ ಈ ಬದಲಾವಣೆ ಇನ್ನೂ ಬಂದಿಲ್ಲ. ಹೊಸ ಫೀಚರ್ ಪ್ರಕಾರ ಬಹುಖಾತೆಗಳನ್ನು ಇನ್ನು ಬಳಕೆದಾರರು ಈ ಅಪ್ಲಿಕೇಶನ್‌ನಲ್ಲಿ ಬಳಸಿಕೊಳ್ಳಬಹುದಾಗಿದೆ. ಅಪ್‌ಡೇಟ್ ಕುರಿತ ಇನ್ನಷ್ಟು ಪ್ರಮುಖ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖಾತೆಗಳ ಬದಲಾವಣೆ

ಖಾತೆಗಳ ಬದಲಾವಣೆ

#1

ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಮ್ಮ ಸ್ಮಾರ್ಟ್‌ಫೋನ್ ಇಲ್ಲವೇ ಟ್ಯಾಬ್ಲೆಟ್ ಹಂಚಿಕೊಳ್ಳುವ ಜನರಿಂದ ಕೋರಿಕೆಯನ್ನು ಪಡೆದುಕೊಂಡ ನಂತರ ಅಪ್ಲಿಕೇಶನ್‌ನೊಳಗೆ ಖಾತೆಗಳ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ

800 ಮಿಲಿಯನ್‌

800 ಮಿಲಿಯನ್‌

#2

ಪ್ರಸ್ತುತ 800 ಮಿಲಿಯನ್‌ಗಿಂತಲೂ ಹೆಚ್ಚಿನ ಜನರು ಮೆಸೆಂಜರ್ ಅನ್ನು ಬಳಕೆ ಮಾಡುತ್ತಿದ್ದಾರೆ

ಪಾವತಿ ಜಾಹೀರಾತು

ಪಾವತಿ ಜಾಹೀರಾತು

#3

ತನ್ನ ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ಫೇಸ್‌ಬುಕ್ ಸದ್ಯದಲ್ಲಿಯೇ ಪಾವತಿ ಜಾಹೀರಾತುಗಳನ್ನು ಸೇರಿಸಲಿದೆ. ತನ್ನ ಅಪ್ಲಿಕೇಶನ್ ಬಳಸಿ ನೇರವಾಗಿ ಗ್ರಾಹಕರಿಗೆ ಸಂದೇಶ ರವಾನಿಸುವ ವ್ಯವಸ್ಥೆಯನ್ನು ಫೇಸ್‌ಬುಕ್ ಜಾರಿಮಾಡಲಿದೆ.

ಯುಆರ್‌ಎಲ್ ಶಾರ್ಟ್ ಲಿಂಕ್

ಯುಆರ್‌ಎಲ್ ಶಾರ್ಟ್ ಲಿಂಕ್

#4

ಯುಆರ್‌ಎಲ್ ಶಾರ್ಟ್ ಲಿಂಕ್ fb.com/msg/ ಅನ್ನು ಫೇಸ್‌ಬುಕ್ ಪ್ರಸ್ತುತಪಡಿಸಿದೆ. ಈ ಯುಆರ್‌ಎಲ್‌ನ ಪ್ರಸ್ತುತಿಯನ್ನು ಫೇಸ್‌ಬುಕ್ ದೃಢೀಕರಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ದುರುದ್ದೇಶಿತ ಸಂದೇಶ

ದುರುದ್ದೇಶಿತ ಸಂದೇಶ

#5

ಉತ್ತಮ ಗುಣಮಟ್ಟದ ಬಾಂಧವ್ಯವನ್ನು 800 ಮಿಲಿಯನ್ ಬಳಕೆದಾರರೊಂದಿಗೆ ಇರಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದ್ದು ಯಾವುದೇ ದುರುದ್ದೇಶಿತ ಸಂದೇಶಗಳ ಅನುಭವವನ್ನು ಅವರುಗಳು ಮಾಡಿಕೊಳ್ಳಬಾರದು ಎಂಬುದು ಕಂಪೆನಿಯ ಇರಾದೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook has redesigned its popular Messenger app so several people can use it on the same smartphone or tablet without relinquishing their privacy.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot