ಮೆಸೆಂಜರ್‌ನಲ್ಲಿ ಹೊಸ ಕಾಲ್ಸ್‌ ಟ್ಯಾಬ್‌ ಪರಿಚಯಿಸಿದ ಮೆಟಾ ಕಂಪೆನಿ!

|

ಮೆಟಾ ಕಂಪೆನಿ ತನ್ನ ಜನಪ್ರಿಯ ಮೆಸೆಂಜರ್‌ ಅಪ್ಲಿಕೇಶನ್‌ನಲ್ಲಿ ಹೊಸ ಅಪ್ಡೇಟ್‌ ಬಿಡುಗಡೆ ಮಾಡಿದೆ. ಈ ಹೊಸ ಅಪ್ಡೇಟ್‌ ಮೂಲಕ ಮೆಸೆಂಜರ್‌ನಲ್ಲಿ ಕಾಲ್ಸ್‌ ಟ್ಯಾಬ್‌ ಅನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ಮೆಸೆಂಜರ್‌ನಲ್ಲಿ ಕಾಲ್‌ ಮಾಡುವುದು ಇನ್ನಷ್ಟು ಸುಲಭವಾಗಲಿದೆ. ನೇರವಾಗಿ ಕಾಲ್ಸ್‌ ಟ್ಯಾಬ್‌ ಅನ್ನು ಟ್ಯಾಪ್‌ ಮಾಡುವ ಮೂಲಕ ಮೆಸೆಂಜರ್‌ನಲ್ಲಿ ನಿಮ್ಮ ಸ್ನೇಹಿತರಿಗೆ ನೀವು ಕರೆ ಮಾಡಬಹುದಾಗಿದೆ.

ಮೆಟಾ

ಹೌದು, ಮೆಟಾ ಮೆಸೆಂಜರ್‌ನಲ್ಲಿ ಹೊಸ ಅಪ್ಡೇಟ್‌ ಪರಿಚಯಿಸಿದೆ. ಇದರಲ್ಲಿ ಹೊಸದಾಗಿ ಕಾಲ್ಸ್‌ ಟ್ಯಾಬ್‌ ಅನ್ನು ಪರಿಚಯಿಸಲಾಗಿದೆ. ಸಂಪರ್ಕದ ಬಲಭಾಗದಲ್ಲಿರುವ ಆಡಿಯೋ ಅಥವಾ ವೀಡಿಯೊ ಕರೆ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಮೆಸೆಂಜರ್ ಬಳಕೆದಾರರು ಕರೆ ಮಾಡಬಹುದಾಗಿದೆ. ಹಾಗಾದ್ರೆ ಮೆಸೆಂಜರ್‌ನ ಹೊಸ ಕಾಲ್‌ ಟ್ಯಾಬ್‌ ಮೂಲಕ ಕರೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೆಸೆಂಜರ್‌ನ ಹೊಸ ಕಾಲ್ಸ್‌ ಟ್ಯಾಬ್ ಬಳಸಿಕೊಂಡು ಕಾಲ್‌ ಮಾಡುವುದು ಹೇಗೆ?

ಮೆಸೆಂಜರ್‌ನ ಹೊಸ ಕಾಲ್ಸ್‌ ಟ್ಯಾಬ್ ಬಳಸಿಕೊಂಡು ಕಾಲ್‌ ಮಾಡುವುದು ಹೇಗೆ?

ಮೆಸೆಂಜರ್ ಬಳಕೆದಾರರು ಎರಡು ವಿಭಿನ್ನ ವಿಧಾನಗಳನ್ನು ಬಳಸಿಕೊಂಡು ಹೊಸ ಕಾಲ್ಸ್‌ ಟ್ಯಾಬ್ ಬಳಸಿ ಕರೆಗಳನ್ನು ಮಾಡಬಹುದು. ಇದರಲ್ಲಿ ಮೊದಲ ವಿಧಾನ ಸೂಚಿಸಿದ ಸಂಪರ್ಕವಾಗಿದೆ. ಎರಡನೇಯದು ಸೂಚಿಸಲಾಗದ ಸಂಪರ್ಕಗಳಿಗೆ ಕರೆ ಮಾಡುವುದಾಗಿದೆ. ಮೊದಲೆಯದಾಗು ಸೂಚಿಸಿದ ಸಂಪರ್ಕಗಳಿಗೆ ಕರೆ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.
ಹಂತ:1 ನಿಮ್ಮ ಆಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ಮೆಸೆಂಜರ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಕಾಲ್ಸ್‌ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ನೀವು ಕಾಲ್‌ ಮಾಡಲು ಬಯಸುವ ಕಂಟ್ಯಾಕ್ಟ್‌ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:4 ಕೊನೆಯದಾಗಿ, ನೀವು ಕರೆ ಮಾಡಲು ಬಯಸುವ ಸಂಪರ್ಕದ ಮುಂದೆ ಆಡಿಯೋ ಕರೆ ಅಥವಾ ವೀಡಿಯೊ ಕರೆ ಆಯ್ಕೆಯನ್ನು ಟ್ಯಾಪ್ ಮಾಡಿ.

ಐಫೋನ್‌

ಸೂಚಿಸಲಾದ ಸಂಪರ್ಕಗಳ ಪಟ್ಟಿಯಲ್ಲಿ ನೀವು ಹುಡುಕುತ್ತಿರುವ ಸಂಪರ್ಕವು ಗೋಚರಿಸದಿದ್ದರೆ, ಸಂಪರ್ಕವನ್ನು ಹುಡುಕಲು ಮತ್ತು ಕರೆ ಮಾಡಲು ನೀವು ವ್ಯಾಪಕ ಸರ್ಚ್‌ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ನಿಮ್ಮ ಆಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ಮೆಸೆಂಜರ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಕಾಲ್ಸ್‌ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿರುವ ಪ್ಲಸ್ ಐಕಾನ್ ಅನ್ನು ಟ್ಯಾಬ್ ಮಾಡಿ.
ಹಂತ:4 ಸರ್ಚ್‌ ಲಿಸ್ಟ್‌ನಲ್ಲಿ ನೀವು ಹುಡುಕುತ್ತಿರುವ ಸಂಪರ್ಕದ ಹೆಸರನ್ನು ಟೈಪ್ ಮಾಡಿ.
ಹಂತ:5 ಇದೀಗ ಕರೆ ಮಾಡಲು ಸಂಪರ್ಕದ ಬಲಭಾಗದಲ್ಲಿ ಗೋಚರಿಸುವ ಆಡಿಯೊ ಕರೆ ಅಥವಾ ವೀಡಿಯೊ ಕರೆ ಆಯ್ಕೆಯನ್ನು ಟ್ಯಾಪ್ ಮಾಡಿ.

ಮೆಟಾ

ಇದಲ್ಲದೆ ಮೆಟಾ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಇದೇ ಮೊದಲ ಬಾರಿಗೆ ತ್ರಿಡಿ ಅವತಾರಗಳನ್ನು ಪರಿಚಯಿಸಿದೆ. ಇದರಿಂದ ನೀವು ಕೂಡ ಇನ್ಮುಂದೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಮೆಸೆಂಜರ್‌ನಲ್ಲಿ ತ್ರಿಡಿ ಅವತಾರಗಳನ್ನು ಕ್ರಿಯೆಟ್‌ ಮಾಡಬಹುದಾಗಿದೆ. ಈ ತ್ರಿಡಿ ಅವತಾರಗಳನ್ನು ನೀವು ಫೇಸ್‌ಬುಕ್, ಮೆಸೆಂಜರ್ ಅಪ್ಲಿಕೇಶನ್, ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ ಮತ್ತು ಡಿಎಂಗಳಲ್ಲಿ ಗಳು ಮತ್ತು ಮೆಟಾ ಕ್ವೆಸ್ಟ್ ಹೆಡ್‌ಸೆಟ್‌ನಲ್ಲಿ ಬಳಸಬಹುದಾಗಿದೆ.

ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ತ್ರೀಡಿ ಅವತಾರ್‌ಗಳನ್ನು ಶೇರ್‌ ಮಾಡುವುದು ಹೇಗೆ?

ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ತ್ರೀಡಿ ಅವತಾರ್‌ಗಳನ್ನು ಶೇರ್‌ ಮಾಡುವುದು ಹೇಗೆ?

ಮೆಸೆಂಜರ್ ಚಾಟ್‌ಗಳಲ್ಲಿ ನಿಮ್ಮ ಅವತಾರ್‌ನ ಸ್ಟಿಕ್ಕರ್‌ಗಳನ್ನು ನೀವು ಹೇಗೆ ಕಳುಹಿಸಬಹುದು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
* ಮೊದಲಿಗೆ ನೀವು ಮೆಸೆಂಜರ್ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್‌ ಮೇಲೆ ಟ್ಯಾಪ್ ಮಾಡಿ
* ನೀವು ನಿಮ್ಮ ಅವತಾರ್ ಸ್ಟಿಕ್ಕರ್ ಪ್ಯಾಕ್ ವೀಕ್ಷಿಸಲು ಸ್ಟಿಕ್ಕರ್‌ಗಳ ಮೇಲೆ ಟ್ಯಾಪ್ ಮಾಡಿ
* ನಂತರ ನೀವು ಕಳುಹಿಸಲು ಬಯಸುವ ಸ್ಟಿಕ್ಕರ್ ಅನ್ನು ಆರಿಸಿ ಮತ್ತು ಸೆಂಡ್‌ ಮಾಡಲು ಅದರ ಮೇಲೆ ಟ್ಯಾಪ್ ಮಾಡಿ.

Best Mobiles in India

Read more about:
English summary
Facebook Messenger makes it easy to call using new calls tab

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X