Just In
Don't Miss
- Movies
ಪುನೀತ್ ರಾಜ್ಕುಮಾರ್ಗೆ ಆ ಒಂದು ಮಾತು ಹೇಳಲೇ ಬೇಕಿತ್ತಂತೆ ಸಾಯಿ ಪಲ್ಲವಿ!
- News
ನೂಪುರ್ ವಿರುದ್ಧದ ಸುಪ್ರೀಂ ಹೇಳಿಕೆಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ಆಕ್ಷೇಪ
- Sports
ಈತನ ಹುಚ್ಚುತನದಿಂದ ನಾಲ್ಕನೇ ದಿನ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮಂಕಾಯಿತು ಎಂದ ಪೀಟರ್ಸನ್!
- Education
SSC CGL Tier 1 2022 Result : ಎಸ್ಎಸ್ಸಿ ಸಿಜಿಎಲ್ ಟಯರ್ 1 ಫಲಿತಾಂಶ ವೀಕ್ಷಿಸುವುದು ಹೇಗೆ ?
- Lifestyle
ನೀವು ಯಾವ ಭಂಗಿಯಲ್ಲಿ ಮಲಗುತ್ತೀರಾ ಅದೇ ಹೇಳುತ್ತೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತಾ!
- Automobiles
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಫೇಸ್‌ಬುಕ್‌ನಲ್ಲಿ ಮತ್ತೆ ಹೊಸ ಆಯ್ಕೆ!.ಯಾರಾದ್ರು ಸ್ಕ್ರೀನ್‌ಶಾಟ್ ತೆಗೆದರೆ ನಿಮಗೆ ತಿಳಿಯುತ್ತೆ!
ಮೆಟಾ ಮಾಲೀಕತ್ವದ ಫೇಸ್‌ಬುಕ್ ಮೆಸೆಂಜರ್ ಪ್ರಮುಖ ಸಾಮಾಜಿಕ ಜಾಲತಾಣ ಆಗಿ ಗುರುತಿಸಿಕೊಂಡಿದೆ. ಫೇಸ್‌ಬುಕ್ ಈಗಾಗಲೇ ಹಲವಾರು ಉಪಯುಕ್ತ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಬಳಕೆದಾರರ ಮೆಚ್ಚುಗೆ ಗಳಿಸಿದೆ. ಹಾಗೆಯೇ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಕ್ರಮ ತೆಗೆದುಕೊಂಡಿದೆ. ಅದೇ ರೀತಿ ಇದೀಗ ಮತ್ತೊಂದು ಸುರಕ್ಷತಾ ಆಯ್ಕೆಯನ್ನು ಅಳವಡಿಸಿ ಬಳಕೆದಾರರಿಗೆ ಖುಷಿ ನೀಡಿದೆ.

ಹೌದು, ಫೇಸ್‌ಬುಕ್ ಹೊಸದಾಗಿ ಸ್ಕ್ರೀನ್‌ಶಾಟ್ ನೋಟಿಫಿಕೇಶನ್ ಆಯ್ಕೆಯನ್ನು ಪರಿಚಯಿಸಿದೆ. ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಚಾಟ್‌ಗಳಲ್ಲಿ ಕಣ್ಮರೆಯಾಗುವ ಮೆಸೆಜ್‌ಗಳ ಸ್ಕ್ರೀನ್‌ಶಾಟ್ ಅನ್ನು ಯಾರಾದರೂ ತೆಗೆದುಕೊಂಡಾಗ ನಿಮಗೆ ತಿಳಿಸುತ್ತದೆ. ಹೀಗಾಗಿ ಈ ಆಯ್ಕೆಯು ಮಾಹಿತಿ ಸುರಕ್ಷತೆಯ ದೃಷ್ಠಿಯಿಂದ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಎನಿಸುತ್ತದೆ. ಅಂದಹಾಗೇ ಈ ಫೀಚರ್ ಈಗಾಗಲೇ ಮೆಸೆಂಜರ್‌ನ ವ್ಯಾನಿಶ್ ಮೋಡ್‌ನಲ್ಲಿ ಲಭ್ಯವಿದೆ.

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳ ಆಯ್ಕೆ ಡೀಫಾಲ್ಟ್ ಆಗಿದೆ. ಈಗ ಬಳಕೆದಾರರು ಭದ್ರತೆ ಮತ್ತು ಗೌಪ್ಯತೆಯೊಂದಿಗೆ ಮೋಜಿನ ಸಂಭಾಷಣೆಗಳನ್ನು ಹೊಂದಲು ಈಗ GIF ಗಳು ಮತ್ತು ಸ್ಟಿಕ್ಕರ್‌ಗಳನ್ನು ಒಳಗೊಂಡಿರುತ್ತದೆ. ಇದು ಫೇಸ್‌ಬುಕ್ ಪೋಸ್ಟ್‌ಗಳು ಮತ್ತು ಇನ್‌ಸ್ಟಾಗ್ರಾಮ್ ಮೆಸೆಜ್‌ಗಳಲ್ಲಿಯೂ ಲಭ್ಯವಿದೆ. ಎನ್‌ಕ್ರಿಪ್ಶನ್ ಚಾಟ್‌ಗಳಲ್ಲಿ ಮೆಸೆಜ್ ಅನ್ನು ದೀರ್ಘವಾಗಿ ಒತ್ತಿ ಅಥವಾ ಪ್ರತ್ಯುತ್ತರಿಸಲು ಸ್ವೈಪ್ ಮಾಡುವ ಮೂಲಕ ನೇರವಾಗಿ ಪ್ರತಿಕ್ರಿಯೆ ನೀಡಬಹುದಾಗಿದೆ. ಇದು ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಡಿಎಮ್ (DM) ಗಳಲ್ಲಿ ಲಭ್ಯವಿರುವ ಮತ್ತೊಂದು ಫೀಚರ್ ಆಗಿದೆ.

ಮೆಸೆಜ್‌ಗಳನ್ನು ದೀರ್ಘವಾಗಿ ಒತ್ತುವ ಮೂಲಕ ಮತ್ತು ಗುಂಪು ಅಥವಾ ವೈಯಕ್ತಿಕ ಫೇಸ್‌ಬುಕ್ ಮೆಸೆಂಜರ್ ಚಾಟ್‌ಗಳಿಗೆ ಕಳುಹಿಸುವ ಮೂಲಕ ಸಂದೇಶಗಳನ್ನು ಫಾರ್ವರ್ಡ್ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಇನ್ನೊಬ್ಬ ವ್ಯಕ್ತಿಯು ಟೈಪ್ ಮಾಡುತ್ತಿದ್ದಾನೆಯೇ ಎಂದು ತಿಳಿಯಲು ಟೈಪಿಂಗ್ ಸೂಚಕಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ (E2EE) ಚಾಟ್‌ಗಳಲ್ಲಿಯೂ ಲಭ್ಯವಿರುತ್ತವೆ.

ಫೇಸ್‌ಬುಕ್ ಮೆಸೆಂಜರ್‌ನಲ್ಲಿರುವ ಕೆಲವು ಆಕರ್ಷಕ ಫೀಚರ್ಸ್‌ಗಳು:
ಪೇಮೆಂಟ್ ಫೀಚರ್
ಫೇಸ್‌ಬುಕ್ ಮೆಸೆಂಜರ್ ಆಪ್‌ನಲ್ಲಿ ಪೇಮೆಂಟ್ ಕಳುಹಿಸಬಹುದಾಗ ಆಯ್ಕೆ ಸಹ ನೀಡಲಾಗಿದೆ. ಮೆಸೆಂಜರ್ ಪೇಮೆಂಟ್ ಆಯ್ಕೆಯು ಪೇ ಪಲ್ ಪೇಮೆಂಟ್ ಸಿಸ್ಟಮ್ ತರಹವೆ ಇದ್ದು, ನಿಮ್ಮ ಫೇಸ್‌ಬುಕ್ ಖಾತೆಯಲ್ಲಿರುವ ಗೆಳೆಯರಿಗೆ ಹಣ ಸೇಂಡ್ ಮಾಡಬಹುದಾಗಿದೆ. ಪೇಮೆಂಟ್ ಫೀಚರ್ ಅನ್ನು ಮೈ ಪ್ರೊಫೈಲ್ ಅಕೌಂಟ್ ಐಕಾನ್ ಕೆಳಗಿನ ಆಯ್ಕೆಗಳಲ್ಲಿ ಕಾಣಬಹುದಾಗಿದೆ.

ಚಾಟ್ ಮ್ಯೂಟ್ ನೋಟಿಫಿಕೇಶನ್
ಮೆಸೆಂಜರ್‌ನಲ್ಲಿ ಕೆಲವು ಸ್ನೇಹಿತರು ಅಥವಾ ಗ್ರೂಪ್‌ಗಳ ಮೆಸೆಜ್‌ಗಳಿಂದ ನಿಮಗೆ ಕಿರಿ ಕಿರಿ ಅನಿಸುತ್ತಿದ್ದರೇ, ಆ ಮೆಸೆಜ್‌ಗಳನ್ನು ಮ್ಯೂಟ್ ಮೋಡ್‌ಗೆ ಹಾಕಬಹುದಾದ ಆಯ್ಕೆ ಇದೆ. ಮ್ಯೂಟ್ ಮಾಡುವ ಸ್ನೇಹಿತರ ಚಾಟ್ ತೆರೆದು ಬಲಭಾಗದ ಮೆನು ಕ್ಲಿಕ್ ಮಾಡಿ, ಮ್ಯೂಟ್ ಬಟನ್ ಒತ್ತಿರಿ. ಆಗ ಕೆಲವು ಮ್ಯೂಟ್ ಆಯ್ಕೆಗಳು ಕಾಣಿಸುತ್ತವೆ ಅವುಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿರಿ.

ಶೇರ್ ಲೊಕೇಶನ್
ಮೆಸೆಂಜರ್‌ನಲ್ಲಿ ಇನ್ನೊಂದು ಬೆಸ್ಟ್ ಫೀಚರ್ ಎಂದರೇ ಅದು ಲೊಕೇಶನ್ ಶೇರ್ ಮಾಡುವ ಆಯ್ಕೆ ಆಗಿದೆ. ಒಂದು ಗಂಟೆಯವರೆಗೂ ಲೊಕೇಶನ್ ಶೇರ್ ಮಾಡುವ ಆಯ್ಕೆಯು ಇದ್ದು, ಅದಕ್ಕಾಗಿ ಚಾಟ್ ಕನ್ವರ್ಸೆಶನ್ ತೆರೆದು ಶೇರ್ ಲೊಕೇಶನ್ ಆಯ್ಕೆ ಕ್ಲಿಕ್ ಮಾಡಿರಿ. ಹಾಗೂ ಶೇರ್ ಮಾಡುವುದು ಬೇಡವಾದಾಗ ಮತ್ತೆ ಅದೇ ಆಯ್ಕೆ ತೆರೆದು ಸ್ಟಾಪ್ ಲೊಕೇಶನ್ ಶೇರ್ ಕ್ಲಿಕ್ ಮಾಡಿರಿ.

ಬಲೂನ್ ಸೆಂಡ್ ಮಾಡುವ ಆಯ್ಕೆ
ನಿಮ್ಮ ಫೇಸ್‌ಬುಕ್ ಮೆಸೆಂಜರ್‌ನಲ್ಲಿರುವ ಗೆಳೆಯರ ಹುಟ್ಟಹಬ್ಬ ಇದ್ದರೇ, ಅಥವಾ ಪರಿಚಯಸ್ಥರ ಆನಿವರ್ಸರಿ ಇದ್ದರೇ, ಅಥವಾ ಇತರೆ ಶುಭ ಸಂದರ್ಭಗಳಲ್ಲಿ ಅವರಿಗೆ ನೀವು ಅನಿಮೇಶನ್ ಬಲೂನ್ ಕಳುಹಿಸಬಹುದು. ಯಾರಿಗೆ ಶುಭ ಕೋರ ಬೇಕಿರುತ್ತದೊ ಅವರ ಚಾಟ್ ಕನ್ವರ್ಸೆಶನ್ ತೆರೆದು ಬಲೂನ್ ಐಕಾನ್ ಕ್ಲಿಕ್ ಮಾಡಿರಿ. ಅವರು ಮೆಸೆಜ್ ತೆರೆದಾಗ ಬಲೂನ್‌ಗಳ ಮೂಮೆಂಟ್ ಕಾಣಿಸುತ್ತವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086