ಫೇಸ್‌ಬುಕ್‌ ಮೆಸೆಂಜರ್‌ನಿಂದ ಹೊಸ ಲೋಗೋ ಅನಾವರಣ!

|

ಇತ್ತೀಚಿಗಷ್ಟೇ ಫೇಸ್‌ಬುಕ್ ಒಡೆತನದ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ ಡೈರೆಕ್ಟ್‌ ಮೆಸೇಜ್‌ ವಿಲೀನಗೊಂಡಿತ್ತು. ಈ ಮೂಲಕ ಇನ್‌ಸ್ಟಾಗ್ರಾಮ್‌ ಖಾತೆ ಇಲ್ಲದೆ ಹೋದರು ಮೆಸೆಂಜರ್ ಮೂಲಕವೇ ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಸಮದೇಶ ಕಳುಹಿಸುವ ಅವಕಾಶ ನೀಡಲಾಗಿತ್ತು. ಅಷ್ಟೇ ಅಲ್ಲ ಮೆಸೆಂಜರ್‌ ಖಾತೆ ಇಲ್ಲದೆ ಇದ್ದರೂ ಇನ್‌ಸ್ಟಾಗ್ರಾಮ್‌ ಮೂಲಕವೇ ಸಂದೇಶ ಕಳುಹಿಸುವ ಅವಕಾಶವಿದೆ. ಇದೀಗ ಮೆಸೇಂಜರ್ ತನ್ನ ಹೊಸ ಲೋಗೊವನ್ನು ಪರಿಚಯಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಒಡೆತನದ ಮೆಸೆಂಜರ್‌ ಇನ್‌ಸ್ಟಾಗ್ರಾಮ್ ನೊಮದಿಗೆ ವಿಲೀನ ಗೊಂಡಿರುವುದರಿಂದ ಇದೀಗ ಹೊಸ ಲೋಗೋವನ್ನು ಪರಿಚಯಿಸಿದೆ. ಇದು ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಥೇಟ್‌ ಇನ್‌ಸ್ಟಾಗ್ರಾಮ್‌ನಂತೆ ಕಾಣುತ್ತದೆ. ಇನ್ನು ಈ ಲೋಗೋದ ಮರುವಿನ್ಯಾಸವು ಕ್ರಾಸ್-ಅಪ್ಲಿಕೇಶನ್ ಸಂವಹನಕ್ಕಾಗಿ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ವಿಲೀನದ ಭಾಗವಾಗಿದೆ. ಇನ್ನುಳಿದಂತೆ ಈ ಹೊಸ ಲೋಗೋದ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೆಸೆಂಜರ್

ಫೇಸ್‌ಬುಕ್‌ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ವಿಲೀನದ ಭಾಗವಾಗಿ ಹೊಸ ಲೋಗೋವನ್ನು ಅನಾವರಣಗೊಳಿಸಲಾಗಿದೆ. ಇದು ಇನ್‌ಸ್ಟಾಗ್ರಾಮ್‌ ಮಾದರಿಯ ಲೋಗೋ ಶೈಲಿಯನ್ನೇ ಹೊಂದಿದೆ. ಜೊತೆಗೆ ಮೆಸೆಂಜರ್ ಹೊಸ ಚಾಟ್ ಥೀಮ್‌ಗಳು, ಸೆಲ್ಫಿ ಸ್ಟಿಕ್ಕರ್‌ಗಳು ಮತ್ತು ವ್ಯಾನಿಶ್ ಮೋಡ್ ಅನ್ನು ಸಹ ಪಡೆದುಕೊಂಡಿದೆ. ಇನ್ನು ಇಷ್ಟು ದಿನ ಫೇಸ್‌ಬುಕ್‌ ಮೆಸೆಂಜರ್‌ ಲೋಗೋ ನೀಲಿ ಬಣ್ಣವನ್ನು ಒಳಗೊಂಡಿತ್ತು. ಆದರೆ ಇನ್ನುಮುಂದೆ ನೀಲಿ ಬಣ್ಣ ಇರುವುದಿಲ್ಲ, ಬದಲಿಗೆ ನೀಲಿ ಮತ್ತು ಗುಲಾಬಿ ಮಿಶ್ರಣವನ್ನು ಹೊಂದಿರುವ ಗ್ರೇಡಿಯಂಟ್ ವರ್ಣವನ್ನು ಹೊಂದಿದ್ದು ಇದು ಇನ್‌ಸ್ಟಾಗ್ರಾಮ್‌ನಂತೆ ಕಾಣುತ್ತದೆ.

ಲೋಗೋ

ಇನ್ನು ನಮ್ಮ ಹೊಸ ಲೋಗೋ ನವು ಸಂದೇಶ ಕಳುಹಿಸುವಿಕೆಯ ಭವಿಷ್ಯದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ, ನೀವು ಹತ್ತಿರವಿರುವ ಜನರೊಂದಿಗೆ ಸಂಪರ್ಕದಲ್ಲಿರಲು ಹೆಚ್ಚು ಕ್ರಿಯಾತ್ಮಕ, ವಿನೋದ ಮತ್ತು ಸಂಯೋಜಿತ ಮಾರ್ಗವಾಗಿದೆ. ಎಮದು ಮೆಸೆಂಜರ್‌ ಹೇಳಿಕೊಂಡಿದೆ. ಇದಲ್ಲದೆ ಹೊಸ ಲೋಗೊ ಜೊತೆಗೆ, ಮೆಸೆಂಜರ್ ಹೊಸ ಚಾಟ್ ಥೀಮ್‌ಗಳಾದ ಲವ್ ಮತ್ತು ಟೈ-ಡೈ ಅನ್ನು ಸಹ ನೀಡಲಾಗಿದೆ. ಫೇಸ್‌ಬುಕ್ ಸಹ ಕಸ್ಟಮ್ ರಿಪ್ಲೇ, ಸೆಲ್ಫಿ ಸ್ಟಿಕ್ಕರ್‌ಗಳು ಮತ್ತು ಮೆಸೆಂಜರ್‌ಗೆ ಮಾಯವಾಗುತ್ತಿದೆ.

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್ ವ್ಯಾನಿಶ್ ಮೋಡ್ ಮತ್ತು ಕಸ್ಟಮ್ ರಿಪ್ಲೇಗಳು ಸೇರಿದಂತೆ 10 ಹೊಸ ಮೇಸೆಜ್‌ ಫೀಚರ್ಸ್‌ಗಳನ್ನು ಪರಿಚಯಸಿದೆ. ಜೊತೆಗೆ ಇನ್‌ಸ್ಟಾಗ್ರಾಮ್ ಮೆಸೆಂಜರ್ ಫೀಚರ್ಸ್‌ ‘View together phone, chat colors, ಫಾರ್ವರ್ಡ್ ಮಾಡುವುದು, ಪ್ರತ್ಯುತ್ತರಗಳು ಮತ್ತು ಅನಿಮೇಟೆಡ್ ಮೆಸೇಜ್‌ ಎಫೆಕ್ಟ್‌ ಅನ್ನು ಸಹ ಪಡೆದುಕೊಂಡಿದೆ. ಸದ್ಯ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿ ಮೆಸೆಂಜರ್ ಅನ್ನು ಸಂಯೋಜಿಸದಿರಲು ಬಯಸಿದರೆ ಅದಕ್ಕೂ ಸಹ ಆಯ್ಕೆಯನ್ನು ನೀಡಲಾಗಿದೆ.

Most Read Articles
Best Mobiles in India

English summary
Facebook Messager Gets Updated Logo To Match Instagram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X