ಫೇಸ್‌ಬುಕ್ ಆಪ್‌ನಲ್ಲಿ ಬಂದಿದೆ ವಿಶೇಷ ಟ್ಯಾಬ್‌!..ಏನದು ಗೊತ್ತಾ?

|

ಫೇಸ್‌ಬುಕ್ ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಇಂದು ಫೇಸ್‌ಬುಕ್ ನ್ಯೂಸ್ ಎಂಬ ಹೊಸ ಟ್ಯಾಬ್‌ ಒಂದನ್ನು ಸೇರ್ಪಡಿಸಿದೆ. ಫೇಸ್‌ಬುಕ್‌ ಅಪ್ಲಿಕೇಷನ್‌ನಲ್ಲಿ ಇದೀಗ ಪ್ರೊಫೈಲ್, ಮಾರ್ಕೆಟ್ ಪ್ಲೇಸ್ ಮುಂತಾದ ಟ್ಯಾಬ್‌ಗಳ ಜೊತೆಗೆ ಸುದ್ದಿಗಾಗಿಯೇ ಸುದ್ದಿಯದ್ದೊಂದು ಹೊಸ ಟ್ಯಾಬ್‌ ಸೇರ್ಪಡೆಯಾಗಿದ್ದು, ಅಮೆರಿಕಾದಲ್ಲಿ ಮೊದಲು ಆರಂಭವಾಗಿರುವ ಈ ಸೇವೆಯಿಂದ ಫೇಸ್‌ಬುಕ್‌ನಲ್ಲಿ ಹೊಸ ರೂಪದಲ್ಲಿ ಸುದ್ದಿಗಳನ್ನು ಫೇಸ್‌ಬುಕ್ ಬಳಕೆದಾರರು ಪಡೆಯಲಿದ್ದಾರೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

 ಫೇಸ್‌ಬುಕ್‌ನ ಸಿಇಒ

ಹೌದು, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಫೇಸ್‌ಬುಕ್‌ನ ಸಿಇಒ ಝುಕರ್ ಬರ್ಗ್ ಈ ಸುಳಿವು ನೀಡಿದಂತೆಯೇ, ಸುದ್ದಿ ಮತ್ತು ಪತ್ರಿಕೋದ್ಯೋಗಕ್ಕೆ ಸಂಬಂಧಿಸಿದ ದೊಡ್ಡ ಪ್ರಕಟಣೆ ಹೊರಬಿದ್ದಿದೆ. ಉತ್ತಮ ಗುಣಮಟ್ಟದ ಪತ್ರಿಕೋದ್ಯೋಗದಲ್ಲಿ ಸಕ್ರಿಯರಾಗಿರುವ ದೊಡ್ಡ ಸಂಸ್ಥೆಗಳೊಂದಿಗೆ ಫೇಸ್‌ಬುಕ್ ಕೈಜೋಡಿಸಿದೆ.. ಈ ಕುರಿತು ಪ್ರಮುಖ ಮಾಧ್ಯಮವು ವರದಿಯೊಂದನ್ನು ಪ್ರಕಟಿಸಿದ್ದು, ಫೇಸ್‌ಬುಕ್ ಸುದ್ದಿಯ ಟ್ಯಾಬ್‌ಗೆ ಸುದ್ದಿಗಳನ್ನು ಹೆಕ್ಕಿ ತೆಗೆಯುವುದಕ್ಕೆ ಸಣ್ಣ ತಂಡವೊಂದು ಕೆಲಸ ಮಾಡಲಿದೆ ಎಂದು ಹೇಳಿದೆ.

ಫೇಸ್‌ಬುಕ್ ಸುದ್ದಿ

ಫೇಸ್‌ಬುಕ್ ಸುದ್ದಿಗಳನ್ನು ಅಲ್ಲಿನ ಮಾನವ ಸಂಪಾದಕರ ತಂಡವು ಆಪಲ್ ತನ್ನ ಸುದ್ದಿ ಅಪ್ಲಿಕೇಶನ್‌ಗಾಗಿ ತೆಗೆದುಕೊಳ್ಳುವ ಮಾದರಿಯಲ್ಲಿ ಸಂಗ್ರಹಿಸುತ್ತದೆ. ಇದು ಇಂದಿನ ಕಥೆಗಳು ಎಂಬ ವೈಶಿಷ್ಟ್ಯದ ನೇತೃತ್ವದಲ್ಲಿದೆ, ಇದು ದಿನದ ಪ್ರಮುಖ ಘಟನೆಗಳನ್ನು ಒಳಗೊಂಡಿದೆ. ಟ್ಯಾಬ್ ಅನ್ನು ನೀವು ಓದಿದ ಆಧಾರದ ಮೇಲೆ ವೈಯಕ್ತೀಕರಿಸಲಾಗಿದೆ, ಕಂಪನಿಯು ಹೇಳುತ್ತದೆ, ಟ್ಯಾಬ್ ಕಾಲಾನಂತರದಲ್ಲಿ ನಿಮ್ಮ ಆಸಕ್ತಿಗಳ ಉತ್ತಮ ಪ್ರತಿಬಿಂಬವನ್ನು ನೀಡುತ್ತದೆ. ಉಳಿದ ಸುದ್ದಿಗಳನ್ನು ಆಲ್ಗರಿದಮ್ ಮಾಡಲಿದೆ ಎಂದು ಹೇಳಲಾಗಿದೆ.

ಸುದ್ದಿ ಪೂರೈಕೆದಾರ

ಫೇಸ್‌ಬುಕ್‌ಗೆ ಸುದ್ದಿ ಪೂರೈಕೆದಾರರಾಗಿ ಮೊದಲ ಹಂತದಲ್ಲಿ ವಾಪೊ ಇಟ್ಸ್‌ಸೆಲ್ಫ್, ವಾಲ್‌ಸ್ಟ್ರೀಟ್‌ ಜರ್ನಲ್‌, ಬಿಸಿನೆಸ್‌ ಇನ್‌ಸೈಡರ್‌, ಬಝ್‌ಫೀಡ್‌ ನ್ಯೂಸ್‌,ಯುಎಸ್‌ಎ ಟುಡೆ ಮತ್ತು ಸ್ಥಳೀಯ ಸುದ್ದಿ ಮೂಲಗಳನ್ನು ಒಳ್ಳಗೊಳ್ಳಲಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ವಿವರಗಳು ತಿಳಿಸುತ್ತವೆ. ಈ ಸಂಸ್ಥೆಗಳನ್ನು ತನ್ನ ವೇದಿಕೆ ಕರೆತರಲು ವರ್ಷಕ್ಕೆ ಸುಮಾರು 3 ಮಿಲಿಯನ್‌ ಡಾಲರ್‌ಗಳನ್ನು ನೀಡುತ್ತಿದೆ ಎನ್ನಲಾಗಿದೆ. ಪ್ರಸ್ತುತ ಆರು ಭಾಷೆ ಸುದ್ದಿ ಸಂಸ್ಥೆಗಳು ಫೇಸ್‌ಬುಕ್‌ ಮೂಲಕ ಸುದ್ದಿ ಹಂಚಿಕೊಳ್ಳುವ ಅವಕಾಶವಿದೆ.

ಸುದ್ದಿಗಳ ಫೀಡ್‌

ಕಳೆದ ವರ್ಷ ಜನವರಿವರೆಗೆ ಸುದ್ದಿಗಳ ಫೀಡ್‌ ಅನ್ನು ಹೊಂದಿದ್ದ ಫೇಸ್‌ಬುಕ್‌, ಸುದ್ದಿ ವಿತರಣೆಯ ನಿಯಂತ್ರಣ ಮತ್ತು ಸುಳ್ಳು ಸುದ್ದಿಗಳ ಹರಡುವಿಕೆಗಳ ಕಾರಣಕ್ಕೆ ವಿವಾದಕ್ಕೆ ಸಿಲುಕಿತ್ತು. ಇದರಿಂದ ಇದೀಗ ಫೇಸ್‌ಬುಕ್‌ ಕೇವಲ ದೊಡ್ಡ ಸುದ್ದಿ ಸಂಸ್ಥೆಗಳಿಂದ ಮಾತ್ರವೇ ಸುದ್ದಿಗಳನ್ನು ಪ್ರಸಾರ ಮಾಡುತ್ತದೆಯೋ ಅಥವಾ ಎಲ್ಲ ಸಂಸ್ಥೆಗಳಿಗೂ ಅವಕಾಶ ನೀಡಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಸ್ಥಳೀಯ ಸುದ್ದಿ ಮೂಲಗಳಿಗೆ ಯಾವ ರೀತಿಯ ಅನುಕೂಲ ಮತ್ತು ಅನನುಕೂಲವಾಗಲಿದೆ ಎಂಬುದು ಈ ಸೇವೆ ಜಾರಿಗೆ ಬಂದ ಮೇಲೆ ತಿಳಿಯಲಿದೆ.

Best Mobiles in India

English summary
Facebook began testing a new home for news in its mobile app today called Facebook News.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X