ಫೇಸ್‌ಬುಕ್‌ ಪೇಜಸ್‌ ರಿ ಡಿಸೈನ್‌! ಲೈಕ್ಸ್‌ ಆಯ್ಕೆಯನ್ನೇ ತೆಗೆದುಹಾಕಿದ ಫೇಸ್‌ಬುಕ್‌!

|

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ತನ್ನ ವಿಶೇಷ ಫೀಚರ್ಸ್‌ಗಳಿಂದ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಭಾರತೀಯರಿಗೆ ಪೇಸ್‌ಬುಕ್‌ ಪೇಜ್‌ ರಿ ಡಿಸೈನ್‌ ಅನ್ನು ಪರಿಚಯಿಸಿದೆ. ಇನ್ನು ಪೇಜ್‌ ರಿ ಡಿಸೈನ್‌ ಮೂಲಕ ಫೇಸ್‌ಬುಕ್‌ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ಪ್ರಮುಖವಾಗಿ ಭಾರತದ ಬಳಕೆದಾರರಗೆ ಲೈಕ್ಸ್‌ಗಳನ್ನು ತೆಗೆದುಹಾಕಿದೆ. ಜೊತೆಗೆ ಫಾಲೋವರ್ಸ್‌ ಮೇಲಿನ ಫೋಕಸ್‌ ಅನ್ನು ಕಡಿಮೆ ಮಾಡಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಹೊಸ ಪೇಜ್‌ ರಿ ಡಿಸೈನ್‌ ಅನ್ನು ಭಾರತೀಯರಿಗೆ ಪರಿಚಯಿಸಿದೆ. ಈ ವರ್ಷದ ಜನವರಿಯಲ್ಲಿ ಫೇಸ್‌ಬುಕ್ ಪೇಜ್‌ ರಿ ಡಿಸೈನ್‌ ಅನ್ನು ಬಿಡುಗಡೆ ಮಾಡಿತ್ತು. ಆದರೆ ಇದೀಗ ಭಾರತದ ಬಳಕೆದಾರರಿಗೆ ಪರಿಚಯಿಸಿದೆ. ಪೇಜ್‌ ರಿ ಡಿಸೈನ್‌ ಸಾಕಷ್ಟು ಸರಳವಾಗಿದ್ದು, ಅರ್ಥಗರ್ಭಿತವಾಗಿದೆ. ಇದರಲ್ಲಿ ಫೇಸ್‌ಬುಕ್ ಪೇಜ್‌ಗಳು ಡೇಡಿಕೇಟೆಡ್‌ ನ್ಯೂಸ್ ಫೀಡ್ ಅನ್ನು ಹೊಂದಿದ್ದು, ಬಳಕೆದಾರರಿಗೆ ಸಂಭಾಷಣೆಯಲ್ಲಿ ಸೇರಲು, ಟ್ರೆಂಡ್‌ಗಳನ್ನು ಅನುಸರಿಸಲು ಅವಕಾಶ ನೀಡಲಿದೆ. ಹಾಗಾದ್ರೆ ಫೇಸ್‌ಬುಕ್‌ನ ಹೊಸ ಪೇಜ್‌ ರಿ ಡಿಸೈನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ನ ಹೊಸ ಪೇಜ್‌ ರಿ ಡಿಸೈನ್‌ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ಬಳಕೆದಾರರು ಹೊಸದಾಗಿ ಟ್ರೆಂಡ್‌ಗಳನ್ನು ಅನುಸರಿಸಲು, ಗೆಳೆಯರೊಂದಿಗೆ ಸಂವಹನ ನಡೆಸಲು ಮತ್ತು ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಸುಲಭ ಅವಕಾಶ ನೀಡಲಿದೆ. ಜೊತೆಗೆ ಡೇಡಿಕೇಟೆಡ್‌ ನ್ಯೂಸ್‌ ಫೀಡ್, ಪಬ್ಲಿಕ್‌ ಫಿಗರ್ಸ್‌, ಪೇಜ್‌ಗಳು, ಗುಂಪುಗಳು ಮತ್ತು ಟ್ರೆಂಡಿಂಗ್ ಕಂಟೆಂಟ್‌ ನಡುವೆ ಹೊಸತನವನ್ನು ಪರಿಚಯಿಸಿದೆ. ಅಲ್ಲದೆ ರಿ ಡಿಸೈನ್‌ ಬಳಕೆದಾರರಿಗೆ ತಮ್ಮ ವೈಯಕ್ತಿಕ ಪ್ರೊಫೈಲ್ ಮತ್ತು ಪೇಜ್‌ಸ್‌ ನಡುವೆ ಸರ್ಚ್‌ ಮತ್ತು ನ್ಯಾವಿಗೇಟ್ ಮಾಡಲು ಸಹಾಯ ಮಾಡಲಿದೆ. ಅಷ್ಟೇ ಅಲ್ಲ ಲೈಕ್ಸ್‌ಗಳನ್ನು ಹೈಡ್‌ ಮಾಡುವ ಆಯ್ಕೆಯನ್ನು ಸಹ ಒಳಗೊಂಡಿದೆ.

ಫೇಸ್‌ಬುಕ್‌

ಫೇಸ್‌ಬುಕ್‌ ತನ್ನ ಬಳಕೆದಾರರ ಸುರಕ್ಷತೆ ಮತ್ತು ಸಮಗ್ರತೆಯನ್ನು ಸುಧಾರಿಸಲು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಲೇ ಬಂದಿದೆ. ಅದರಂತೆ ಇದೀಗ ಫೇಸ್‌ಬುಕ್ ದ್ವೇಷದ ಭಾಷಣ, ಹಿಂಸಾತ್ಮಕ, ಲೈಂಗಿಕ ಅಥವಾ ಸ್ಪ್ಯಾಮ್‌ ವಿಚಾರಗಳಿಗೆ ಅನುಮತಿಸುವುದನ್ನು ತಡೆಗಟ್ಟಿದೆ. ಅಲ್ಲದೆ ಅಧಿಕೃತ ಪೇಜ್‌ಗಳು ಮತ್ತು ಪ್ರೊಫೈಲ್‌ಗಳಿಂದ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ಸುಲಭವಾಗಿ ಗುರುತಿಸಲು ಫೇಸ್‌ಬುಕ್ ಪರಿಶೀಲಿಸಿದ ಬ್ಯಾಡ್ಜ್‌ನ ಗೋಚರತೆಯನ್ನು ಕೂಡ ವಿಸ್ತರಿಸುತ್ತಿದೆ.

ಫೇಸ್‌ಬುಕ್‌

ಇದಲ್ಲದೆ ಫೇಸ್‌ಬುಕ್‌ ಪಬ್ಲಿಕ್‌ ಫಿಗರ್ಸ್‌ ಕಾಮೆಂಟ್‌ಗಳನ್ನು ಕಾಮೆಂಟ್ ವಿಭಾಗದ ಮೇಲೆ ಅನುಮತಿಸುತ್ತದೆ. ಇದಲ್ಲದೆ, ಜನರು ನೇರವಾಗಿ ಕಾಮೆಂಟ್‌ಗಳು ಪೇಜ್‌ಗಳನ್ನು ಫಾಲೋ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಬಳಕೆದಾರರಿಗೆ ಈ ಹೊಸ ಪೇಜ್‌ನಲ್ಲಿ ಲೈಕ್ಸ್‌ಗಳನ್ನು ತೆಗೆದುಹಾಕಲಾಗಿದೆ. ಇದು ಫಾಲೋವರ್ಸ್‌ಗಳ ಮೇಲೆ ಕೇಂದ್ರೀಕರಿಸುತ್ತದೆ. ಜೊತೆಗೆ ಜನರು ತಮ್ಮ ನೆಚ್ಚಿನ ಪೇಜ್‌ಗಳ ಜೊತೆಗೆ ಕಂಟ್ಯಾಕ್ಟ್‌ ಹೊಂದುವುದು ಕೂಡ ಅವಕಾಶವನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಅಂದರೆ ಜನರು ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.

ಫೇಸ್‌ಬುಕ್

ಇನ್ನು ಈ ವರ್ಷದ ಆರಂಭದಲ್ಲಿ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಪೋಸ್ಟ್‌ಗಳಿಂದ ಲೈಕ್ಸ್‌ಗಳನ್ನು ಹೈಡ್‌ ಮಾಡುವ ಸಾಮರ್ಥ್ಯವನ್ನು ಪರಿಚಯಿಸಿತ್ತು. ಇದರಿಂದ ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಎಲ್ಲಾ ಪೋಸ್ಟ್‌ಗಳಿಂದ ಲೈಕ್ಸ್‌ ಹೈಡ್‌ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಇದರಿಮದ ನಿಮ್ಮ ಫಾಲೋವರ್‌ಗಳು ನಿಮಗೆ ಎಷ್ಟು ಲೈಕ್ಸ್‌ ಬಮದಿದೆದ ಅನ್ನೊದನ್ನ ನೋಡುವುದಕ್ಕೆ ಅವಕಾಶ ಸಿಗುವುದಿಲ್ಲ. ಇದರಿಂದ ಸೊಶೀಯಲ್‌ ಮೀಡಿಯಾದಲ್ಲಿ ಲೈಕ್ಸ್‌ಗಳನ್ನು ಎಣಿಸುವ ಬದಲಿಗೆ ಕೇವಲ ಫೋಟೋಗಳನ್ನು ಶೇರ್‌ ಮಾಡುವತ್ತ ಮಾತ್ರ ಗಮನಹರಿಸಬಹುದಾಗಿದೆ.

ಫೇಸ್‌ಬುಕ್‌

ಫೇಸ್‌ಬುಕ್‌ ಪೇಜ್‌ನಲ್ಲಿ ಹೊಸದಾಗಿ ತಂದಿರುವ ಲೈಕ್ಸ್‌ ಹೈಡ್‌ ಆಯ್ಕೆಯು ಕೂಡ ಜನರಿಗೆ ಸಾಕಷ್ಟು ಉಪಯುಕ್ತವಾಗಿರಲಿದೆ. ಫೇಸ್ಬುಕ್ ಪೇಜ್‌ಗಳಲ್ಲಿ ಕಾರ್ಯ-ಆಧಾರಿತ ಮ್ಯಾನೇಜರ್‌ ಕಂಟ್ರೋಲ್‌ ಅನ್ನು ಸಹ ಅಪ್‌ಡೇಟ್‌ ಮಾಡಲಗಿದೆ. ನಿರ್ದಿಷ್ಟ ಕಾರ್ಯಗಳ ಆಧಾರದ ಮೇಲೆ ಅನುಮತಿಗಳನ್ನು ಪ್ರವೇಶಿಸಲು ಮತ್ತು ನಿಯೋಜಿಸಲು ಅನುವು ಮಾಡಿಕೊಡುವಂತೆ ಪೇಜ್‌ ಅನ್ನು ರಿ ಡಿಸೈನ್‌ ಮಾಡಲಾಗಿದೆ. ಇದು ಪೇಜ್‌ ಮ್ಯಾನೇಜ್‌ ಅನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ. ಒಳನೋಟಗಳು, ಜಾಹೀರಾತುಗಳು, ವಿಷಯ ಮತ್ತು ಸಮುದಾಯ ಚಟುವಟಿಕೆ ಮತ್ತು ಸಂದೇಶಗಳು ಸೇರಿದಂತೆ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ಪುಟ ನಿರ್ವಾಹಕರಿಗೆ ಈಗ ಪೂರ್ಣ ಅಥವಾ ವಿವಿಧ ಹಂತದ ಪ್ರವೇಶವನ್ನು ನೀಡಬಹುದಾಗಿದೆ.

Most Read Articles
Best Mobiles in India

English summary
Facebook will also allow comments from public figures on top of the comments section.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X