ಇಂದಿನಿಂದಲೇ ಫೇಸ್‌ಬುಕ್‌ನಲ್ಲಿ ಈ ನಿಯಮ ಜಾರಿ; ಈ ಎಲ್ಲಾ ವಿಷಯಗಳಿಗೆ ಕಡಿವಾಣ!

|

ಫೇಸ್‌ಬುಕ್‌ ಇಂದು ಬಹುಬಳಕೆಯ ಪ್ಲಾಟ್‌ಫಾರ್ಮ್ ಆಗಿದೆ. ಅದರಲ್ಲೂ ಯಾರೇ ಆದರೂ ದಿನದಲ್ಲಿ ಒಂದು ಬಾರಿಯಾದರೂ ಫೇಸ್‌ಬುಕ್‌ ಅನ್ನು ನೋಡದೆ ಸುಮ್ಮನೆ ಇರಲಾರರು. ಯಾಕೆಂದರೆ ದಿನದ ಎಲ್ಲಾ ರೀತಿಯ ಬೆಳವಣಿಗೆಗಳು ಈ ಪ್ಲಾಟ್‌ಫಾರ್ಮ್‌ನಲ್ಲಿ ಬೇಗನೆ ಕಂಡುಬರುತ್ತವೆ. ಅದರಂತೆ ಮೆಟಾ ಸಹ ಫೇಸ್‌ಬುಕ್‌ನಲ್ಲಿ ಕೆಲವು ಫೀಚರ್ಸ್‌ಗಳನ್ನು ನೀಡುತ್ತಾ ಬರುತ್ತಿದ್ದು, ಈಗ ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಇಂದಿನಿಂದ ಈ ವಿಷಯಗಳಿಗೆ ಕಡಿವಾಣ ಬೀಳಲಿದೆ.

ಫೇಸ್‌ಬುಕ್‌

ಹೌದು, ಇಂದಿನಿಂದ ನೀವೇನಾದರೂ ಫೇಸ್‌ಬುಕ್‌ನಲ್ಲಿ ಈ ವಿಷಯಗಳನ್ನು ಬರೆದುಕೊಂಡರೆ ಫೇಸ್‌ಬುಕ್‌ ಅದನ್ನು ತೆಗೆದುಹಾಕುತ್ತದೆ. ಧಾರ್ಮಿಕ ಮತ್ತು ರಾಜಕೀಯ ವಿಷಯ ಸೇರಿದಂತೆ ಹಲವಾರು ಮಾಹಿತಿ ಕ್ಷೇತ್ರಗಳನ್ನು ಫೇಸ್‌ಬುಕ್ ಪ್ರೊಫೈಲ್‌ಗಳಿಂದ ರಿಮೂವ್‌ ಮಾಡಲಾಗುತ್ತದೆ. ಈ ಹಿಂದೆ ಮೆಟಾ ಈ ಬಗ್ಗೆ ಮಾಹಿತಿ ನೀಡಿ ಏನಾದರೂ ಪ್ರಮುಖ ಮಾಹಿತಿ ಇದ್ದರೆ ಈಗಲೇ ಸೇವ್‌ ಮಾಡಿ ಇಟ್ಟುಕೊಂಡುಬಿಡಿ ಎಂದು ಮುನ್ಸೂಚನೆ ನೀಡಿತ್ತು.

ಯಾವ ವಿಷಯಗಳಿಗೆ ಕಡಿವಾಣ

ಯಾವ ವಿಷಯಗಳಿಗೆ ಕಡಿವಾಣ

ಫೇಸ್‌ಬುಕ್‌ ಇಂದು ಪ್ರತಿಯೊಬ್ಬರ ಮಾಹಿತಿ, ಮನರಂಜನೆಗೆ ಕಾರಣವಾಗಿರುವ ಪ್ಲಾಟ್‌ಫಾರ್ಮ್‌ ಆಗಿದ್ದು, ಇದರಲ್ಲಿ ಕೆಲವು ದ್ವೇಷದ ಹಾಗೂ ಕೆರಳಿಸುವ ವಿಷಯಗಳೂ ಸಹ ಇರುತ್ತಿದ್ದವು. ಇನ್ನು ಈ ಬಗ್ಗೆ ಗಮನಹರಿಸಿರುವ ಫೇಸ್‌ಬುಕ್‌ ಯಾರದೇ ಪ್ರೊಫೈಲ್‌ ನಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ ಮತ್ತು ಲೈಂಗಿಕ ಆಸಕ್ತಿಗಳನ್ನು ಸೂಚಿಸುವ ವಿಷಯ ಇದ್ದರೆ ಅವನ್ನೆಲ್ಲಾ ಸ್ವಯಂಚಾಲಿತವಾಗಿ ತೆಗೆದುಹಾಕಲಾಗುತ್ತದೆ ಎಂದು ತಿಳಿಸಿದೆ.

ಇಂದಿನಿಂದಲೇ ಈ ನಿಯಮ ಜಾರಿ

ಇಂದಿನಿಂದಲೇ ಈ ನಿಯಮ ಜಾರಿ

ಫೇಸ್‌ಬುಕ್‌ ಬಳಕೆದಾರರ ಫೇಸ್‌ಬುಕ್‌ ಪ್ರೊಫೈಲ್‌ನಿಂದ ಈ ವಿಷಯಗಳನ್ನು ರಿಮೂವ್‌ ಮಾಡುವ ಕೆಲಸ ಇಂದಿನಿಂದಲೇ ಆರಂಭವಾಗುತ್ತಿದೆ. ಅದರಂತೆ ನೀವೆನಾದರೂ ನಿಮ್ಮ ಬಗ್ಗೆ ಈ ಕ್ಷೇತ್ರಗಳ ವಿಭಾಗದಲ್ಲಿ ಬರೆದುಕೊಂಡಿದ್ದರೆ ಕಾಣಿಸಿಕೊಳ್ಳುವುದಿಲ್ಲ.

ಫೇಸ್‌ಬುಕ್‌  ಹೇಳಿದ್ದೇನು?

ಫೇಸ್‌ಬುಕ್‌ ಹೇಳಿದ್ದೇನು?

ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಫೇಸ್‌ಬುಕ್‌, ಫೇಸ್‌ಬುಕ್ ಅನ್ನು ನ್ಯಾವಿಗೇಟ್ ಮಾಡಲು ಮತ್ತು ಬಳಸಲು ಸುಲಭಗೊಳಿಸುವ ನಮ್ಮ ಪ್ರಯತ್ನಗಳ ಭಾಗವಾಗಿ, ನಾವು ಕೆಲವು ಪ್ರೊಫೈಲ್‌ನಲ್ಲಿನ ವಿಷಯಗಳನ್ನು ತೆಗೆದುಹಾಕುತ್ತಿದ್ದೇವೆ, ಇದರಲ್ಲಿ ಧಾರ್ಮಿಕ ವೀಕ್ಷಣೆ, ರಾಜಕೀಯ ವೀಕ್ಷಣೆ ಮತ್ತು ವಿಳಾಸ ಕ್ಷೇತ್ರಗಳಿವೆ. ಈ ಕ್ಷೇತ್ರಗಳನ್ನು ಭರ್ತಿ ಮಾಡಿರುವ ಜನರಿಗೆ ನಾವು ನೋಟಿಫಿಕೇಶನ್‌ ಕಳುಹಿಸುತ್ತಿದ್ದೇವೆ. ಈ ಕ್ಷೇತ್ರಗಳನ್ನು ತೆಗೆದುಹಾಕಲಾಗುವುದು ಎಂದು ಅವರಿಗೆ ಈ ಮೂಲಕ ತಿಳಿಸಲಾಗಿದೆ. ಇನ್ನುಳಿದಂತೆ ಫೇಸ್‌ಬುಕ್‌ನಲ್ಲಿ ತಮ್ಮ ಬಗ್ಗೆ ಈ ಮಾಹಿತಿಯನ್ನು ಹಂಚಿಕೊಳ್ಳುವ ಯಾರ ಹಕ್ಕಿನ ಮೇಲೂ ಇದು ಪರಿಣಾಮ ಬೀರುವುದಿಲ್ಲ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಫೀಚರ್ಸ್‌ ಇದ್ದದ್ದು ಫೇಸ್‌ಬುಕ್‌ನಲ್ಲಿ ಮಾತ್ರ

ಈ ಫೀಚರ್ಸ್‌ ಇದ್ದದ್ದು ಫೇಸ್‌ಬುಕ್‌ನಲ್ಲಿ ಮಾತ್ರ

ಹೌದು, ಈ ಎಲ್ಲಾ ಕ್ಷೇತ್ರಗಳು ಈವರೆಗೂ ಫೇಸ್‌ಬುಕ್‌ ಹೊರತುಪಡಿಸಿ ಇತರೆ ಪ್ಲಾಟ್‌ಫಾರ್ಮ್‌ನಲ್ಲಿ ಇಲ್ಲ. ಇನ್‌ಸ್ಟಾಗ್ರಾಮ್‌ ಹಾಗೂ ಇನ್ನಿತರೆ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ಸುಲಭವಾದ ನೋಂದಣಿ ನೀಡಲಿವೆ. ಆದರೆ, ಫೇಸ್‌ಬುಕ್‌ ಮಾತ್ರ ಮೇಲೆ ತಿಳಿಸಿದ ಎಲ್ಲಾ ವಿಷಯಗಳಿಗೂ ಅನುಮತಿ ನೀಡಿತ್ತು. ಅದರಲ್ಲೂ ಫೇಸ್‌ಬುಕ್‌ ಹೊರತು ಪಡಿಸಿ ಇತರೆ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಾಗಿ ರಾಜಕೀಯ, ಧಾರ್ಮಿಕ ವಿಷಯಗಳು ಕಾಣಿಸಿಕೊಳ್ಳುವುದಿಲ್ಲ. ಅಲ್ಲಿ ಮನರಂಜನೆ ಹಾಗೂ ಮಾಹಿತಿಯಷ್ಟೇ ಇರುತ್ತವೆ. ಇದನ್ನು ಫೇಸ್‌ಬುಕ್‌ ಗಮನಿಸಿದ್ದು, ಈ ಬದಲಾವಣೆಗೆ ಕಾರಣವಾಗಿದೆ.

ಗೌಪ್ಯತೆ ಉಲ್ಲಂಘನೆ

ಗೌಪ್ಯತೆ ಉಲ್ಲಂಘನೆ

ಬಳಕೆದಾರರು ತಮ್ಮ ಪ್ರೊಫೈಲ್‌ಗಳನ್ನು ಹೆಚ್ಚುವರಿ ಮಾಹಿತಿಯೊಂದಿಗೆ ಭರ್ತಿ ಮಾಡಲು ಆಸಕ್ತಿ ಇಟ್ಟುಕೊಂಡಿದ್ದಾರಾದರೂ ಗೌಪ್ಯತೆಯ ಉಲ್ಲಂಘನೆಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಈ ಕಾರಣಕ್ಕೆ ಬಳಕೆದಾರರು ಆನ್‌ಲೈನ್‌ನಲ್ಲಿ ತಮ್ಮ ಕುರಿತು ಹೆಚ್ಚುವರಿ ವಿವರಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲವಾದರಿಂದ ಈ ಫೀಚರ್ಸ್‌ಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.

ಮೆಟಾದಿಂದ 11,000 ಉದ್ಯೋಗಿಗಳ ವಜಾ

ಮೆಟಾದಿಂದ 11,000 ಉದ್ಯೋಗಿಗಳ ವಜಾ

ಮೆಟಾ 11,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಒಟ್ಟು ಉದ್ಯೋಗಿಗಳ 13% ಉದ್ಯೋಗಿಗಳು ಈ ವಜಾ ಪ್ರಕ್ರಿಯೆಯ ಭಾಗವಾಗಿದ್ದಾರೆ. ಈ ವಜಾಗೊಳಿಸುವಿಕೆಯು ಫೇಸ್‌ಬುಕ್‌ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎನ್ನಲಾಗಿದೆ.

Best Mobiles in India

English summary
Facebook removing several information fields in profile from today.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X